ಮೈಸೂರು, ಫೆ.27(ಎಂಟಿವೈ)- ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾ ಯತ್ ಅಭಿವೃದ್ಧಿ ಅಧಿಕಾರಿಗಳು(ಪಿಡಿಒ) ಸಮನ್ವಯದಿಂದ ಗ್ರಾಮಗಳ ಸಮಗ್ರ ಅಭಿ ವೃದ್ಧಿಗೆ ಶ್ರಮಿಸಬೇಕು. ಶಾಲೆ, ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ರೂಪಿಸಿ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮೈಸೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್ ಸೂಚಿಸಿದ್ದಾರೆ. ಅಬ್ದುಲ್ ನಜೀರ್‍ಸಾಬ್ ರಾಜ್ಯ ಗ್ರಾಮೀ ಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮೈಸೂರು ತಾಪಂ ಆಡಳಿತವು ಚಾಮುಂಡಿ ಬೆಟ್ಟ, ವರಕೋಡು, ಸಿದ್ದಲಿಂಗಪುರ ಗ್ರಾಪಂ ಗಳ ನೂತನ ಸದಸ್ಯರಿಗೆ ಆಯೋಜಿಸಿದ್ದ ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಾ ಗಾರದಲ್ಲಿ ಕೃಷ್ಣಕುಮಾರ್…
`ಕಲೆ-ಸಾಹಿತ್ಯದಿಂದ ಮೌಲ್ಯಯುತ ಸಮಾಜ ನಿರ್ಮಾಣ’
February 28, 2021ಮೈಸೂರು, ಫೆ.27(ಎಸ್‍ಪಿಎನ್)- ಶಾಂತಿ ಮತ್ತು ಮೌಲ್ಯಯುತ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರನ್ನೂ ಒಳಗೊಳ್ಳುವ ಕಲೆ-ಸಾಹಿತ್ಯವನ್ನು ಹೆಚ್ಚು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ ಎಂದು ಪ.ಮಲ್ಲೇಶ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ಕಲಾಮಂದಿರ ಆವ ರಣದ ಚಿಂತಕರ ಚಾವಡಿಯಲ್ಲಿ `ಅಪ ರ್ಯಾಪ್ತ’ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ `ಮೆಹಫಿಲ್-ಎ-ಸೋಫಿಯಾನಾ’ ರಸಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೂಪಿ-ಸಂತರ ಇತಿಹಾಸಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶಾಂತಿ ಸಂದೇಶ ಸಾರುವ ಸಮೂಹ ಗೀತೆಗಳನ್ನು ಇಲ್ಲಿನ ಯುವ ತಂಡ ಎಲ್ಲರನ್ನೂ ಆಕರ್ಷಿ ಸುವಂತೆ…
ದೇಶದಲ್ಲಿ ಪ್ರಸ್ತುತ ಸರ್ವಾಧಿಕಾರ ಜಾರಿಯಾಗುವ ಸ್ಥಿತಿ ನಿರ್ಮಾಣ
February 28, 2021ಮೈಸೂರು, ಫೆ.27(ಆರ್‍ಕೆಬಿ)- ಪ್ರಸ್ತುತ ದೇಶದ ಪರಿಸ್ಥಿತಿ ನೋಡಿದರೆ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದ್ದು, ಸರ್ವಾಧಿಕಾರ ಜಾರಿಗೆ ಬರುವ ಸ್ಥಿತಿ ಎದುರಾಗುವಂತಿದೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಕನ್ನಡ ಅಧ್ಯ ಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಎನ್.ರಾಚಯ್ಯ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ `ದಲಿತ ಚಳವಳಿ ಮತ್ತು ರೈತ ಚಳವಳಿ – ಒಂದು ಮುಖಾಮುಖಿ’ ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ, ಮಾತನಾಡಿದರು. ಇಂದಿನ ಪರಿಸ್ಥಿತಿ…
ಎಸ್.ಎಲ್.ಭೈರಪ್ಪ ಅವರ ‘ಪರ್ವ’ ರಂಗ ಪ್ರದರ್ಶನ
February 28, 2021ಮೈಸೂರು, ಫೆ.27- ರಂಗಾಯಣ ಮೈಸೂರಿನ ಮಹತ್ವಾಕಾಂಕ್ಷೆಯ ರಂಗಭೂಮಿ ಯೋಜನೆಯಾದ ಪದ್ಮಶ್ರೀ ಡಾ. ಎಸ್.ಎಲ್.ಭೈರಪ್ಪ ಅವರ ಮೇರು ಕೃತಿ, ಮಹಾನ್ ಕಾದಂಬರಿ ‘ಪರ್ವ’ದ ರಂಗರೂಪ ಮತ್ತು ಪ್ರದ ರ್ಶನ ಮಾರ್ಚ್ 12, 13 ಮತ್ತು 14ರಂದು ಬೆಳಗ್ಗೆ 10 ಗಂಟೆಗೆ ಕಲಾಮಂದಿರದಲ್ಲಿ ಆಯೋಜಿಸ ಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದ್ದಾರೆ. ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಈ ನಾಟಕ ನಿರ್ದೇಶಿಸಿದ್ದಾರೆ. ಒಟ್ಟು ಆಸನಗಳಲ್ಲಿ 130 ಆಸನಗಳನ್ನು 1000 ರೂ. ನಂತೆ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯ…
ನ್ಯಾಯಾಲಯ ಕಲಾಪಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಜಾಗೃತಿ ಸಮಿತಿ ಮನವಿ
February 28, 2021ಮೈಸೂರು,ಫೆ.27(ಎಸ್‍ಪಿಎನ್)-ಮೈಸೂರು ಜಿಲ್ಲಾ ನ್ಯಾಯಾಲಯಗಳ ಕಾರ್ಯಕಲಾಪ ಗಳಲ್ಲಿ ಕನ್ನಡ ಅನುಷ್ಠಾನಗೊಳಿಸಲು ಸಹಕರಿಸುವಂತೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ಜಿಲ್ಲಾ ವಕೀಲರ ಸಂಘದ ಕಾರ್ಯಾಲಯಕ್ಕೆ ತೆರಳಿ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2020-21ನೇ ಸಾಲಿನಲ್ಲಿ ಕನ್ನಡ ಕಾಯಕ ವರ್ಷಾ ಚರಣೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಮೈಸೂರು ನ್ಯಾಯಾಲಯದ ಆವರಣದಲ್ಲಿ ವಕೀಲರ ಸಹಯೋಗದೊಂದಿಗೆ ಜಾಗೃತಿ ಮೂಡಿಸಿದ್ದಾರೆ. ಭಾರತ ಸಂವಿಧಾನ…
ಇಂದಿನಿಂದ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರೋತ್ಸವ
February 28, 2021ಮೈಸೂರು, ಫೆ.27-ಮೈಸೂರು ತಾಲೂಕು ಸರ್ಕಾರಿ ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಫೆ.28ರಿಂದ ಮಾ.2ರವರೆಗೆ ನಡೆಯಲಿದೆ. ಫೆ.28ರಂದು ಬೆಳಗ್ಗೆ ತ್ರಿಪುರ ಸುಂದರಿ ಅಮ್ಮನವರಿಗೆ ಏಕಾದಶವಾರ ರುದ್ರಾಭಿಷೇಕ, ಸುವರ್ಣಾಲಂಕಾರ, ಸಹಸ್ರ ನಾಮಾರ್ಚನೆ, ನಿವೇದನೆ, ಮಹಾ ಮಂಗಳಾರತಿ, ರಾಜೋಪಚಾರ, ರಾಷ್ಟ್ರಾಶೀರ್ವಾದ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿನಿಯೋಗ, ಪ್ರದೋಷ ಕಾಲದ ಪೂಜೆ, ತ್ರಿಶತಿ ನಾಮಾರ್ಚನೆ, ಮಹಾ ಮಂಗಳಾರತಿ, ರಾತ್ರಿ 8.30ಕ್ಕೆ ಕನ್ಯಾಕನ್ನಡಿ ಅಮ್ಮನವರ ಉತ್ಸವ, ಪುಣ್ಯಾಹ, ಮಂಟಪೋತ್ಸವ ನಡೆಯಲಿದೆ. ಮಾ.1ರಂದು ಬೆಳಗ್ಗೆ ದ್ವಿತೀಯ…
ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 10 ದಿನ `ಕ್ರಾಫ್ಟ್ಸ್ ಬಜಾರ್’
February 28, 2021ಮೈಸೂರು, ಫೆ.27(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ `ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ 10 ದಿನಗಳ `ಕ್ರಾಫ್ಟ್ಸ್ ಬಜಾರ್’ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಜೆಎಸ್‍ಎಸ್ ಅರ್ಬನ್ ಹಾತ್, ನವದೆಹಲಿಯ ಜವಳಿ ಮಂತ್ರಾ ಲಯದ ಸಹಯೋಗದಲ್ಲಿ ಮಾ.7 ರವರೆಗೆ ಆಯೋಜಿಸಿರುವ ಈ ಮೇಳದಲ್ಲಿ ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದು, ತಮ್ಮ ರಾಜ್ಯದ ಕರಕುಶಲ ವಸ್ತುಗಳನ್ನು…
ಮಗನ ಸಾವಿಗೆ ಅವನ ಸ್ನೇಹಿತನ ವಂಚನೆ ಕಾರಣ ಪೊಲೀಸರಿಗೆ ತಂದೆ ದೂರು
February 28, 2021ಮೈಸೂರು,ಫೆ.27-ಆರು ತಿಂಗಳ ಹಿಂದೆ ಹೃದಯಾಘಾತ ದಿಂದ ಮೃತಪಟ್ಟ ತಮ್ಮ ಪುತ್ರನ ಸಾವಿಗೆ ಆತನ ಸ್ನೇಹಿತನೇ ಕಾರಣ ಎಂದು ಮೈಸೂರಿನ ಗೋಕುಲಂ ನಿವಾಸಿಯೊಬ್ಬರು ವಿವಿಪುರಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅಲ್ಲಿನ ನಿವಾಸಿ ಸಿದ್ದಪ್ಪ ಎಂಬುವರೇ ದೂರು ನೀಡಿದವ ರಾಗಿದ್ದು, ತಮ್ಮ ಪುತ್ರ ಜಯಂತ್‍ಕುಮಾರ್ ದುಬೈನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮಗಳ ಹುಟ್ಟುಹಬ್ಬಕ್ಕಾಗಿ 2020ರ ಮಾರ್ಚ್‍ನಲ್ಲಿ ಮೈಸೂರಿಗೆ ಬಂದ ವರು ಕೊರೊನಾ ಕಾರಣದಿಂದ ದುಬೈಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಮೈಸೂರಿನಲ್ಲಿದ್ದಾಗ…
ಕರಾಮುವಿಯಿಂದ ಮಾ.15ರಿಂದ `ವರ್ಚುಯಲ್ ಉದ್ಯೋಗ ಮೇಳ’
February 26, 2021ಮೈಸೂರು, ಫೆ.25(ಎಂಟಿವೈ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕರಾಮುವಿ), ಜಾಬ್ ಕಾರ್ಟ್ ಸಂಸ್ಥೆ ಸಹಭಾಗಿತ್ವದಲ್ಲಿ ಮಾ.15ರಿಂದ 23ರವರೆಗೆ 8 ದಿನಗಳ `ವರ್ಚುಯಲ್ ಉದ್ಯೋಗ ಮೇಳ’ ಆಯೋಜಿಸಿದೆ ಎಂದು ಮುಕ್ತ ವಿವಿ ಕುಲ ಪತಿ ಪೆÇ್ರ.ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ. ಮುಕ್ತ ವಿವಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕರಾಮುವಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಷ್ಟೇ ಅಲ್ಲದೆ ಉದ್ಯೋಗಾವಕಾಶ ಕಲ್ಪಿಸಿದೆ. ಅಗತ್ಯವಿದ್ದವರಿಗೆ ಕೌಶಲ ನೀಡಲು ಕ್ರಮ ಕೈಗೊಂಡಿದೆ. ಹಿಂದೆಯೂ ಬೃಹತ್ ಉದ್ಯೋಗ ಮೇಳ ಆಯೋಜಿಸಿ 10 ಸಾವಿರ ಮಂದಿಗೆ ಉದ್ಯೋಗಾವಕಾಶ…
ಮೈಸೂರಲ್ಲಿ `ಲಯನ್ಸ್ ಪ್ಲೇಟ್ ಬ್ಯಾಂಕ್’ ನಾಳೆ ಆರಂಭ
February 26, 2021ಮೈಸೂರು,ಫೆ.25(ಎಂಟಿವೈ)-ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ತಟ್ಟೆ, ಲೋಟ ಬಳಕೆ ತಗ್ಗಿಸುವ ಆಲೋಚನೆಯೊಂದಿಗೆ ಸಮಾರಂಭಗಳಿಗೆ ಉಚಿತವಾಗಿ ತಟ್ಟೆ-ಲೋಟ ಒದಗಿಸಲು ಮೈಸೂರಲ್ಲಿ `ಲಯನ್ಸ್ ಪ್ಲೇಟ್ ಬ್ಯಾಂಕ್’ ಆರಂಭಿಸುತ್ತಿದ್ದು, ಫೆ.27ರ ಸಂಜೆ 4.30ಕ್ಕೆ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಬ್ಯಾಂಕ್ ಉದ್ಘಾಟಿಸಲಿದ್ದಾರೆ ಎಂದು ಲಯನ್ಸ್ ಪ್ರಾಂತ್ಯ4ರ ಅಧ್ಯಕ್ಷ ಎಸ್.ಮೂರ್ತಿ ಮೈಸೂ ರಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶಾಸಕ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯೆ ಶಾರದಮ್ಮ, ಮಾಜಿ ಮೇಯರ್ ಭೈರಪ್ಪ, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್, ಲಯನ್ಸ್ ಕ್ಲಬ್‍ನ ಡಾ.ನಾಗರಾಜ್ ವಿ.ಭೈರಿ ಪಾಲ್ಗೊಳ್ಳÀಲಿದ್ದಾರೆ…










