ಮೈಸೂರು,ಫೆ.28(ಆರ್‍ಕೆಬಿ)-ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1114 ಸಹಾಯಕ/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾನುವಾರ ಮೈಸೂರಿನ 49 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಿರಾತಂಕವಾಗಿ ನಡೆಯಿತು. ಬೆಳಗ್ಗೆ 10ರಿಂದ 11.30ವರೆಗೆ ಮೊದಲ ಪತ್ರಿಕೆ, ಮಧ್ಯಾಹ್ನ 2ರಿಂದ 3.30ರವರೆಗೆ 2ನೇ ಪತ್ರಿಕೆ ನಡೆಯಿತು. ಒಟ್ಟಾರೆ ಮೈಸೂರಿನಲ್ಲಿ ಜಿಲ್ಲೆಯ 20,322 ಮಂದಿ ಹೆಸರು ದಾಖಲಿಸಿ ಕೊಂಡಿದ್ದರು. ಈ ಪೈಕಿ ಬೆಳಗಿನ ಮೊದಲ ಪತ್ರಿಕೆಯಲ್ಲಿ 13,720 ಅಭ್ಯರ್ಥಿಗಳು…
ಜೆ.ಪಿ.ನಗರದ ಅಕ್ಕಮಹಾದೇವಿ ಪ್ರತಿಮೆ ನೋಡಿ ಸಂತಸ ವ್ಯಕ್ತಪಡಿಸಿದ ತೇಜಸ್ವಿನಿ ಅನಂತಕುಮಾರ್
March 1, 2021ಮೈಸೂರು,ಫೆ.28(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರ ಶರಣ ವೇದಿಕೆ ವತಿಯಿಂದ ನಿರ್ಮಿಸಿರುವ ಅತೀ ಎತ್ತ ರದ ಅಕ್ಕಮಹಾದೇವಿ ಪ್ರತಿಮೆಯನ್ನು ಅದಮ್ಯ ಚೇತನ ಟ್ರಸ್ಟ್‍ನ ಅಧ್ಯಕ್ಷರೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು. ಈ ವೇಳೆ ಹಾಜರಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಕ್ಕ ಮಹಾದೇವಿ ಪ್ರತಿಮೆ ನಿರ್ಮಾಣದ ಕುರಿತು ಅವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರಪಾಲಿಕೆ ಸದಸ್ಯ ರಾದ ಶಾಂತಮ್ಮ ವಡಿವೇಲು, ಶಾರ ದಮ್ಮ ಈಶ್ವರ್, ಪ್ರತಿಮೆಯ ಶಿಲ್ಪಿ ವೆಂಕ…
ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ
March 1, 2021ಮೈಸೂರು,ಫೆ.28-ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಹಲವರು ಪ್ರಾಣಿ-ಪಕ್ಷಿಗಳನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಬೆಂಗಳೂರಿನ ಸಿ.ಪುಟ್ಟಯ್ಯ ರೂ. 15,000 ಪಾವತಿಸಿ ತವ್ನಿ ಈಗಲ್, ಹಾಸನದ ಗೋಪಿ ಹೆಚ್.ಕೆ ರೂ. 5000 ಪಾವತಿಸಿ ಹಿಮಾಲಯನ್ ಗೋರಲ್, ಮೈಸೂರಿನ ಅನೂಪ್ ಹೆಚ್. ರೂ. 2000 ಪಾವತಿಸಿ ನಾಗರಹಾವು, ಮೈಸೂರಿನ ಶರಣ್ಯ ಜೆ. 1,000 ರೂ. ಪಾವತಿಸಿ ಕಾಕಟೈಲ್ ಹಾಗೂ ಹಾಸನದ ಸೀಮಾ ಎಸ್.ಕೆ. ರೂ.5,000 ಪಾವತಿಸಿ ನಾಲ್ಕು ಕೊಂಬಿನ ಜಿಂಕೆಯನ್ನು ದತ್ತು ಪಡೆದಿದ್ದಾರೆ.
ಆತ್ಮವಿಶ್ವಾಸ, ಸ್ವಪ್ರಯತ್ನ ಯಶಸ್ಸಿನ ಗುಟ್ಟು ನಿವೃತ್ತ ಬ್ಯಾಂಕ್ ಅಧಿಕಾರಿ ಪ್ರದ್ಯುಮ್ನ ಕಿವಿಮಾತು
March 1, 2021ಮೈಸೂರು, ಫೆ.28- ಆತ್ಮವಿಶ್ವಾಸ ಹಾಗೂ ಸ್ವ-ಪ್ರಯತ್ನ ಯಶಸ್ಸಿನ ಗುಟ್ಟು ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‍ನ ನಿವೃತ್ತ ಮುಖ್ಯ ವ್ಯವಸ್ಥಾಪಕ, ವ್ಯಕ್ತಿತ್ವ ವಿಕಸನ ತರಬೇತುದಾರ ಕೆ.ಪಿ.ಪ್ರದ್ಯುಮ್ನ, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೈಸೂರಿನ ಶಾರದಾವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ `ಭಯ ಬಿಡಿ ಪರೀಕ್ಷೆ ಎನ್ನುವುದು ಹಬ್ಬವಾಗಲಿ’ ವಿಶೇಷ ಉಪನ್ಯಾಸ ಕಾರ್ಯಗಾರದಲ್ಲಿ ಮಾತ ನಾಡಿದ ಅವರು, ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸುವುದಷ್ಟೇ ಗುರಿಯಾಗಿರಬಾರದು. ಜ್ಞಾನವೃದ್ಧಿ ಹಾಗೂ ಮನಃ ಸಂತೋಷಕ್ಕಾಗಿ ವಿದ್ಯಾರ್ಜನೆ ಮಾಡಬೇಕು ಎಂದರು. ನಮ್ಮ ಬಗ್ಗೆ ನಮಗೇ ಕೀಳಿರಿಮೆ ಇರಬಾರದು….
ನಾಳೆ ನಮ್ಮ ಸಮಾಜದ ಮಕ್ಕಳು ಅವಮಾನ ಸಹಿಸಿಕೊಂಡಿರಬೇಕೇ?
March 1, 2021ಮೈಸೂರು, ಫೆ.28(ಆರ್‍ಕೆಬಿ)- ನಮ್ಮ ಮುಂದೆ ಅನೇಕ ಸಮಸ್ಯೆಗಳಿವೆ. ನಮ್ಮ ಬಗ್ಗೆ ನಮಗೇ ಗೌರವ, ಅಭಿಮಾನ ಇಲ್ಲದಿದ್ದರೆ ಮುಂದೆ ಭಾರೀ ಬೆಲೆ ತೆರ ಬೇಕಾಗುತ್ತದೆ. ನಾಳೆ ನಮ್ಮ ಸಮಾಜದ ಮಕ್ಕಳು ನಮ್ಮ ಕಣ್ಮುಂದೆಯೇ ಅವಮಾನ ಸಹಿಸಿಕೊಂಡಿರಬೇಕೇ? ಎಂದು ಪೇಜಾವರ ಮಠದ ಶ್ರೀ ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ವಿಶ್ವೇಶ್ವರನಗರದ ಸಿಂಧೂರ ಕನ್ವೆನ್ಷನ್ ಹಾಲ್‍ನಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಿದ್ದ `ವಿಪ್ರ ಸಮ್ಮೇಳನ’ ಬ್ರಾಹ್ಮಣರ ಸಮನ್ವಯ-ಸಮಸ್ಯೆಗಳಿಗೆ ವಿದಾಯ ಕಾರ್ಯ ಕ್ರಮಕ್ಕೆ…
ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ
March 1, 2021ಮೈಸೂರು, ಫೆ.28-ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ದಕ್ಷಿಣ ಭಾರತದಲ್ಲಿ ಕೇಸರಿ ಬಾವುಟ ಹಾರಿ ಸಲು ಮುನ್ನುಡಿ ಬರೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ ಎಂದು ಕರ್ನಾಟಕ ವಸ್ತುಪ್ರದ ರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ ತಿಳಿಸಿದರು. ಬಿ.ಎಸ್.ಯಡಿಯೂರಪ್ಪರವರ 79ನೇ ಜನ್ಮ ದಿನಾಚರಣೆ ಅಂಗ ವಾಗಿ 101 ಗಣಪತಿ ದೇವಸ್ಥಾನ ಮುಂಭಾಗ 79 ಕೆ.ಜಿ. ತೂಕದ ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ಅವರ ಜನ್ಮ ದಿನಾಚರಣೆ ಆಚರಿಸಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಕೇವಲ 2…
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲ ಮರುಪಾವತಿ ಜಾಗೃತಿ ಅಭಿಯಾನ
March 1, 2021ಮೈಸೂರು, ಫೆ.28(ಎಂಟಿವೈ)-ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ದಿಂದ ಸಾಲ ಪಡೆದು ಮರು ಪಾವತಿ ಸದೇ ಇರುವ 24 ಸಾವಿರ ಮಂದಿ ಫಲಾನು ಭವಿಗಳಿಗೆ ಶೀಘ್ರದಲ್ಲೇ ಪತ್ರ ಬರೆದು ಸಾಲ ಮರುಪಾವತಿಗೆ ಮನ ಪರಿವರ್ತಿ ಸುವ ಅಭಿಯಾನವನ್ನು ಆರಂಭಿಸುತ್ತಿರುವು ದಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು…
ಇಬ್ಬರು ಮನೆಗಳ್ಳರ ಬಂಧನ: 31 ಲಕ್ಷ ಮೌಲ್ಯದ ಚಿನ್ನಾಭರಣ ವಶ ಚಿನ್ನ ಅಡವಿಟ್ಟುಕೊಂಡವನೂ ಸೆರೆ
March 1, 2021ಮೈಸೂರು,ಫೆ.28(ವೈಡಿಎಸ್)- ಇಬ್ಬರು ಮನೆಗಳ್ಳರು ಹಾಗೂ ಕದ್ದ ಮಾಲನ್ನು ಅಡವಿಟ್ಟುಕೊಂಡಿದ್ದ ಚಿನ್ನದ ವ್ಯಾಪಾರಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ, 31 ಲಕ್ಷ ರೂ.ಮೌಲ್ಯದ 611 ಗ್ರಾಂ ಚಿನ್ನಾ ಭರಣ, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿ ಕೊಂಡಿದ್ದಾರೆ. ಮೈಸೂರು ರಾಜೀವ್‍ನಗರ 2ನೇ ಹಂತದ ನಿವಾಸಿ ಫಯಾಜ್ ಅಹಮ್ಮದ್(54), 1ನೇ ಹಂತದ ನಿವಾಸಿ ಇಮ್ತಿಯಾಜ್ ಅಹಮದ್(43) ಬಂಧಿತ ಮನೆಗಳ್ಳರಾಗಿದ್ದು, ಇವರೊಂದಿಗೆ ಕದ್ದ ಚಿನ್ನಾಭರಣಗಳನ್ನು ಅಡವಿಟ್ಟುಕೊಂಡಿದ್ದ ಮಂಡಿ ಮೊಹಲ್ಲಾ ನಿವಾಸಿ, ಮರಿಯಮ್ ಜ್ಯುವೆಲ್ಲರ್ಸ್‍ನ ಮಹಮ್ಮದ್ ಪರ್ವೀಜ್(41) ಬಂಧಿತರು. ಮೈಸೂರು ನಗರದಲ್ಲಿ ವರದಿಯಾಗಿರುವ…
ಅಂಗಡಿ ಲೈಸೆನ್ಸ್ ಜೊತೆಗೆ ಗೋಡೌನ್ ಅನ್ನು ಸೇರಿಸಿ
February 28, 2021ಮೈಸೂರು, ಫೆ.27(ಆರ್‍ಕೆಬಿ)- ಗೋಡೌನ್‍ಗೆ ಪ್ರತ್ಯೇಕ ಲೈಸೆನ್ಸ್ ಬದಲು ಅಂಗಡಿ ಲೈಸೆನ್ಸ್ ಜೊತೆಗೇ ಗೋಡೌನ್ ಅನ್ನು ಸೇರ್ಪಡೆ ಮಾಡಿ, ಪೆಸ್ಟಿಸೈಡ್ ಮ್ಯಾನೇಜ್‍ಮೆಂಟ್ ಬಿಲ್‍ನ ದಂಡ ವ್ಯಾಪ್ತಿಯಿಂದ ನಮ್ಮನ್ನು ಹೊರತುಪಡಿಸಿ ಎಂದು ಶನಿವಾರ ಮೈಸೂರಿನ ಬಲ್ಲಾಳ್ ವೃತ್ತದ ಬಳಿಯ ನಿತ್ಯೋತ್ಸವ ಸಭಾಂಗಣದಲ್ಲಿ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ರಸ ಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟಗಾರರ ಸಂಘದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು. ಸಂಘದ ಅಧ್ಯಕ್ಷ ಆರ್.ಯೋಗರಾಜ ಅಧ್ಯಕ್ಷತೆ ಯಲ್ಲಿ ನಡೆದ ಸಮಾವೇಶದಲ್ಲಿ ತಮಗಾಗುತ್ತಿರುವ…
ಉತ್ಪಾದಿತ ಪರ್ಯಾಯ ಮರಳಿನ ಅರಿವು ಮೂಡಿಸಲು ಡಿಸಿ ಸೂಚನೆ
February 28, 2021ಮೈಸೂರು,ಫೆ.27-ಪಟ್ಟಾ ಜಮೀನಿನಲ್ಲಿ ನೈಸರ್ಗಿಕ ಮರಳಿನ ಲಭ್ಯತೆ ಕಡಿಮೆ ಇರುವ ಕಾರಣ ಅದಕ್ಕೆ ಪರ್ಯಾಯವಾಗಿ ಉತ್ಪಾದಿತ (ಎಂ ಸ್ಯಾಂಡ್-ಪ್ಲಾಸ್ಟರಿಂಗ್ ಸ್ಯಾಂಡ್ ಮತ್ತು ಕಾಂಕ್ರೀಟ್ ಸ್ಯಾಂಡ್) ಮರಳಿನ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 20 ಕ್ರಷರ್ ಘಟಕಗಳಿಗೆ ಅನುಮತಿ ನೀಡ ಲಾಗಿದ್ದು, ಅವುಗಳಲ್ಲಿ 16 ಕ್ರಷರ್ ಘಟಕಗಳಲ್ಲಿ ಎಂ-ಸ್ಯಾಂಡ್ ಮರಳು ಉತ್ಪಾದಿಸ…










