ಮೈಸೂರು, ಮಾ.1(ಎಸ್‍ಪಿಎನ್)- ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ `ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್’ನ 21ನೇ ವಾರ್ಷಿಕೋತ್ಸವ ಅಂಗವಾಗಿ ಹಿರಿಯ ಸಾಹಿತಿ ಎಂ.ಮುತ್ತು ಸ್ವಾಮಿ ಅವರಿಗೆ ಈ ಸಾಲಿನ ಡಿವಿಜಿ ಮುಕ್ತಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನಾದಬ್ರಹ್ಮ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ಅವರು, ಡಿವಿಜಿಯವರು 945 ಕಗ್ಗಗಳನ್ನು ಹಗ್ಗದಂತೆ ಹೊಸೆದಿದ್ದಾರೆ. ಡಿವಿಜಿ ಅವರು ಸಿಕ್ಕ ಸಿಕ್ಕ ಕಡೆ, ಸಣ್ಣಪುಟ್ಟ ಚೀಟಿಗಳಲ್ಲಿ ಕಗ್ಗಗಳನ್ನು ಬರೆದಿಡುತ್ತಿದ್ದರು. ಅವರು ರಚಿಸಿದ ಎಲ್ಲಾ ಕಗ್ಗಗಳು…
ಅಪ್ರಾಪ್ತ ವಾಹನ ಚಾಲಕರ ವಿರುದ್ಧ ಮೈಸೂರಲ್ಲಿ 81 ಪ್ರಕರಣ ದಾಖಲು
March 2, 2021ಆತಂಕ ಮೂಡಿಸಿರುವ ಪೋಷಕರ ಬೇಜವಾಬ್ದಾರಿ ವರ್ತನೆ ಮೈಸೂರು, ಮಾ.1(ಆರ್‍ಕೆ)- ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿ ರುವ ಮೈಸೂರು ಪೊಲೀಸರು, ಅಪ್ರಾಪ್ತ ವಾಹನ ಚಾಲಕರ ವಿರುದ್ಧ ಕಳೆದ 20 ದಿನಗಳಲ್ಲಿ ಒಟ್ಟು 81 ಪ್ರಕರಣ ದಾಖಲಿಸಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸಾರಿಗೆ ಇಲಾಖೆಯು ವಾಹನ ಚಾಲನಾ ಪರವಾನಗಿ(ಆಡಿiviಟಿg ಟiಛಿeಟಿಛಿe) ನೀಡುತ್ತಿದೆಯಾದರೂ, ಅಪ್ರಾಪ್ತರೂ ದ್ವಿಚಕ್ರವಾಹನ, ಕಾರುಗಳನ್ನು ಚಾಲನೆ ಮಾಡಿ ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಅಪ್ರಾಪ್ತ…
ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿ ಅಣಕು
March 2, 2021ಮೈಸೂರು,ಮಾ.1(ಪಿಎಂ)- ಪೆಟ್ರೋಲ್ -ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ಹಿಂದು ಳಿದ ವರ್ಗಗಳ ಜಾಗೃತ ವೇದಿಕೆ ವತಿ ಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನದ ಆವರಣ ದಲ್ಲಿ ಗ್ಯಾಸ್ ಸಿಲಿಂಡರ್‍ಗಳಿಗೆ `ಮೂರು ನಾಮ’ ಹಾಕಿ ಪ್ರದರ್ಶಿಸಿ, ಸೌದೆ ಒಲೆ ಯಲ್ಲಿ ಅಡುಗೆ ತಯಾರಿಸಿ, ಊಟ ಮಾಡುವ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಮತ್ತೆ ಹಿಂದಿನಂತೆ ಸೌದೆ ಒಲೆಯಲ್ಲಿ ಜನತೆ ಅಡುಗೆ ತಯಾರಿಸುವ ಪರಿಸ್ಥಿತಿ ಬರಲಿದೆ ಎಂದು ಅಣಕಿಸಿ, ಆಕ್ರೋಶ…
ಪ್ರಜಾ ಪಾರ್ಟಿ ವತಿಯಿಂದ ಪ್ರತಿಭಟನೆ
March 2, 2021ಮೈಸೂರು,ಮಾ.1(ಪಿಎಂ)- ಪೆಟ್ರೋಲ್ -ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರಜಾ ಪಾರ್ಟಿ (ರೈತಪರ್ವ) ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಗಾಂಧಿಚೌಕದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಕೋವಿಡ್-19 ಮಾರಕ ರೋಗದಿಂದ ದೇಶ ಲಾಕ್ ಡೌನ್ ಆಗಿದ್ದ ಹಿನ್ನೆಲೆಯಲ್ಲಿ ಜನಸಾಮಾ ನ್ಯರು ಜೀವನ ನಿರ್ವಹಣೆಗೆ ಇಂದಿಗೂ ಹೆಣಗಾಡುತ್ತಿದ್ದಾರೆ. ಇಂತಹ ಸಂದರ್ಭ ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್-ಡೀಸೆಲ್ ಹಾಗೂ ಅಡುಗೆ ಅನಿಲದ ಸಿಲಿಂಡರ್ ಬೆಲೆ ಏರಿಕೆ ಮಾಡಿ ರುವುದು ಗಾಯದ ಮೇಲೆ ಬರೆ…
ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ 2ನೇ ಹಂತದ ಹೋರಾಟ
March 2, 2021ಮೈಸೂರು,ಮಾ.1(ಪಿಎಂ)- ಸಾರ್ವ ಜನಿಕ ಉದ್ದಿಮೆಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್‍ನ ಮೈಸೂರು ಉತ್ಪಾ ದನಾ ಘಟಕದ ಕಾರ್ಮಿಕರು ಸೋಮವಾರ 2ನೇ ಹಂತದ ಹೋರಾಟ ಆರಂಭಿಸಿದ್ದಾರೆ. ಭಾರತ್ ಅರ್ಥ್ ಮೂವರ್ಸ್ ಎಂಪ್ಲಾ ಯಿಸ್ ಅಸೋಸಿಯೇಷನ್ ಆಶ್ರಯದಲ್ಲಿ ಇಂದಿನಿಂದ ವಾರ ಕಾಲ ಪ್ರತಿದಿನ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಅಸೋಸಿ ಯೇಷನ್‍ನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಸೋಷಿಯೇಷನ್‍ನ ಉಪಸಮಿತಿ ಪದಾ ಧಿಕಾರಿಗಳು…
ಸಂದೇಶ್ ನಾಗರಾಜ್ ವಿರುದ್ಧದ ಆರೋಪ ಸಮಂಜಸವಲ್ಲ
March 2, 2021ಮೈಸೂರು,ಮಾ.1(ಎಂಟಿವೈ)- ಮೈಸೂರು ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜು ಅವರ ಬಗ್ಗೆ ಜೆಡಿಎಸ್ ಮುಖಂಡರು ಹಗುರವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದು ಸಂದೇಶ್ ನಾಗರಾಜ್ ಅಭಿಮಾನಿ ಬಳಗದವರು ಆಗ್ರಹಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಂದೇಶ್ ನಾಗರಾಜ್ ಅವರಿಗೆ ಟಿಕೆಟ್ ಕೊಟ್ಟು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದರು. ಆ ವೇಳೆ ಪಕ್ಷದ ಹಾಲಿ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ ತಮ್ಮ…
ನಾಳೆ ವಿವಿಧೆಡೆ ವಿದ್ಯುತ್ ನಿಲುಗಡೆ
March 2, 2021ಮೈಸೂರು,ಮಾ.1-ವಿ.ವಿಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ಬೋಗಾದಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾ.3ರಂದು 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜನತಾನಗರ, ಬೋಗಾದಿ 2ನೇ ಹಂತ ಓoಡಿಣh & Souಣh, ಗಂಗೋತ್ರಿ ಕ್ಯಾಂಪಸ್, ಗಂಗೋತ್ರಿ ಕ್ವಾಟ್ರಸ್, ದಾಸನಕೊಪ್ಪಲು, ಮರಟಿಕ್ಯಾತನ ಹಳ್ಳಿ, ರೂಪನಗರ, ದೀಪಾನಗರ, ಬೋಗಾದಿ, ಪ್ರೀತಿ ಲೇಔಟ್, ಆರ್‍ಎಂಪಿ ಲೇಔಟ್, ವಿಜಯನಗರ 3ನೇ ಹಂತ, ಹಿನಕಲ್, ವಿಜಯ ನಗರ 4ನೇ ಹಂತ, ವಿಜಯಶ್ರೀಪುರ, ಸುಧಾ ಲೇಔಟ್, ರೈಲ್ವೆ ಲೇಔಟ್, ಎಸ್.ಬಿ.ಎಂ ಲೇಔಟ್, ವಾಗ್ದೇವಿನಗರ, ಸಿಎಫ್‍ಟಿಆರ್‍ಐ…
`ಸ್ಫೂರ್ತಿ’ ಪುಸ್ತಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
March 2, 2021ಮೈಸೂರು, ಮಾ.1(ವೈಡಿಎಸ್)- ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಸ್ವಾಮಿ ಸುರೇಶಾನಂದಜಿ ಅವರ ಸ್ಮರಣಾರ್ಥ `ಹಚ್ಚಹಸಿರ ಮೈಸೂರು-ವಿವೇಕ ಪ್ರಭೆಯ ಮೈಸೂರು’ ಶೀರ್ಷಿಕೆ ಯಡಿ ಆಶ್ರಮದಲ್ಲಿ ಆಯೋಜಿಸಿದ್ದ ಉಚಿತ ಸಸಿ ವಿತರಣಾ ಕಾರ್ಯಕ್ರಮ ಸಮಾರೋಪದಲ್ಲಿ `ಸ್ಫೂರ್ತಿ’ ಪುಸ್ತಕ ಕುರಿತ ಸ್ಪರ್ಧೆ ವಿಜೇತರಿಗೆ ಬಹು ಮಾನ ವಿತರಿಸಲಾಯಿತು. ಕನಕದಾಸನಗರದ ಎ.ಸವಿತಾ (ಪ್ರ), ಹೆಬ್ಬಾಳ್‍ನ ಬಿ.ಎಸ್.ಸಚಿನ್ ಬಾಳಿಗ(ದ್ವಿ), ಮಂಡಿಮೊಹಲ್ಲಾದ ಬಿ.ಎ.ಪೂಜಾ (ತೃ) ಬಹುಮಾನ ಪಡೆದುಕೊಂಡರು. ಉಳಿದಂತೆ ಬನ್ನಿಮಂಟಪದ ಎಂ.ಎ.ನಿಖಿತ, ಎಂ.ಎನ್. ಸೋಮೇಶ್, ಬಂಬೂಬಜಾರ್‍ನ ಕೆ.ಬೀನಾ ಕುಮಾರಿ, ಜನತಾನಗರದ ಹೆಚ್.ಜಿ.ರಾಜಶ್ರೀ, ವಿಜಯ ನಗರದ…
ಕನ್ನಡಕ್ಕೂ ಕೋಡು ಮೂಡಿಸಿದ ಸರ್ ಸಿ.ವಿ.ರಾಮನ್ ಮೈಸೂರಲ್ಲಿ ಸಾಧಕರಿಗೆ ಸಲಾಂ
March 2, 2021ಮೈಸೂರು: ಭಾರತದಲ್ಲಷ್ಟೇ ಅಲ್ಲದೆ ಇಡೀ ಏಷ್ಯಾದಲ್ಲಿ ಮೊಟ್ಟಮೊದಲಿಗೆ ಭೌತ ವಿಜ್ಞಾನದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದು, ಭಾರತದ ಕೀರ್ತಿಪತಾಕೆಯನ್ನು ಜಗತ್ತಿನ ಉದ್ದಗಲಕ್ಕೂ ಬೆಳಗಿದ ವಿಜ್ಞಾನ ಲೋಕದ ದೈತ್ಯಪ್ರತಿಭೆ ಸರ್ ಸಿ.ವಿ. ರಾಮನ್, ಜಾಗತಿಕವಾಗಿ ಕನ್ನಡ ನಾಡು ಹಾಗೂ ಕನ್ನಡಕ್ಕೂ ಒಂದು ಕೋಡು ಮೂಡಿಸಿದವರು ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ನಗರದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಸ್ಥೆಗಳು ಸಂಯುಕ್ತವಾಗಿ ಅಗ್ರ ಹಾರದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀಕೃಷ್ಣ ಲಲಿತಾ…
ಇಂದಿನಿಂದ 3ನೇ ಹಂತದ ಕೋವಿಡ್ ಲಸಿಕೆ
March 1, 2021ಮೈಸೂರು, ಫೆ.28(ಎಸ್‍ಬಿಡಿ)- ದೇಶಾದ್ಯಂತ ಸೋಮ ವಾರ(ಮಾ.1)ದಿಂದ ಮೂರನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ಆರಂಭವಾಗಲಿದ್ದು, ಮೈಸೂರಿನ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ನಿಗದಿತ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಮೈಸೂರು ವೈದ್ಯಕೀಯ ಮಹಾವಿದ್ಯಾಲಯ(ಟ್ರಾಮಾ ಸೆಂಟರ್), ಜಿಲ್ಲಾ ಆಸ್ಪತ್ರೆಗಳು, ತಾಲೂಕು ಸಾರ್ವಜನಿಕ ಆಸ್ಪತ್ರೆಗಳು, ಖಾಸಗಿ ಸ್ವಾಮ್ಯದ ಜೆಎಸ್‍ಎಸ್ ಆಸ್ಪತ್ರೆ ಹಾಗೂ ಅಪೊಲೋ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಶಿಬಿರ ನಡೆಯಲಿದೆ. ಮಾ.1ರಿಂದ 6ರವರೆಗೆ ಆನ್‍ಲೈನ್ ಮೂಲಕ ನೋಂದಾವಣಿಯಾಗಿರುವ ಹಾಗೂ ಲಸಿಕಾ ಶಿಬಿರದಲ್ಲಿ ನೋಂದಾಯಿಸಿಕೊಂಡಿರುವ ಫಲಾನು ಭವಿಗಳಿಗೆ ಲಸಿಕೆ ನೀಡಲು ಯೋಜನೆ…










