ಮೈಸೂರು,ಮಾ.2(ಆರ್‍ಕೆ)-ಕೊರೊನಾ ವಿರುದ್ಧ ಲಸಿಕೆ ಪಡೆಯಲು 2ನೇ ದಿನವೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ತೊಂದರೆ ಇರುವ 45ರಿಂದ 60 ವರ್ಷದೊಳಗಿನ ನಾಗ ರಿಕರಿಗೆ 3ನೇ ಹಂತದ ಲಸಿಕೆ ಅಭಿಯಾನ ಮಾರ್ಚ್1ರಿಂದ ಆರಂಭವಾಗಿದ್ದು, ಮೊದಲ ದಿನ ಮೈಸೂರು ನಗರ ಸೇರಿದಂತೆ ಜಿಲ್ಲೆಯಾ ದ್ಯಂತ 290 ಮಂದಿ ಕೋವಿಡ್ ಲಸಿಕೆ ಪಡೆದಿದ್ದರು. ಎರಡನೇ ದಿನವಾದ ಇಂದು ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಅಭಿ ಯಾನದಲ್ಲಿ ಮಧ್ಯಾಹ್ನ 3 ಗಂಟೆವರೆಗೆ 300 ಮಂದಿ ಲಸಿಕೆ ಪಡೆದಿದ್ದರು ಎಂದು…
ಇಂದು `ವೀರೇಂದ್ರ ಪಾಟೀಲ್- ಒಂದು ನೆನಪು’ ಕಾರ್ಯಕ್ರಮ
March 3, 2021ಮೈಸೂರು,ಮಾ.2(ಆರ್‍ಕೆಬಿ)- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ (ಮಾ.3) ಸಂಜೆ 4.30ಕ್ಕೆ ವಿಜಯನಗರ ಒಂದನೇ ಹಂತದ ಸಾಹಿತ್ಯ ಭವನದಲ್ಲಿ ಮರೆಯಲಾಗದ ಮಹನೀಯರು ಮಾಲಿಕೆ ಅಡಿಯಲ್ಲಿ ರಾಜ್ಯದ ಹಿರಿಯ ಮುತ್ಸದ್ದಿ ವೀರೇಂದ್ರ ಪಾಟೀಲ್ ಅವರನ್ನು ಕುರಿತ ಒಂದು ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಂಗಳವಾರ ಮೈಸೂರು ಪತ್ರಕರ್ತರ ಭವನದಲ್ಲಿ ಈ ವಿಷಯ ತಿಳಿಸಿದರು. ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಉದ್ಘಾಟನೆ ನೆರವೇರಿಸಲಿದ್ದಾರೆ. ಲೀಲಾದೇವಿ ಆರ್.ಪ್ರಸಾದ್ ದಿಕ್ಸೂಚಿ ಭಾಷಣ ಮಾಡುವರು. ಮಾಜಿ ಸಚಿವ…
ಕೊರೊನಾ ವೈರಸ್‍ನಿಂದ ಪಾಠ ಕಲಿತಿದ್ದರೂ ಪರಿಸರ ಉಳಿಸಿಕೊಳ್ಳದಿದ್ದರೆ ಮುಂದೆ ಯಾರಿಗೂ ಉಳಿಗಾಲವಿಲ್ಲ
March 2, 2021ಮೈಸೂರು,ಮಾ.1(ಆರ್‍ಕೆಬಿ)- ಕೊರೊನಾ ವೈರಸ್ ನಮಗೆ ಪಾಠ ಕಲಿಸಿದ್ದು, ಪರಿ ಸರದ ಬಗ್ಗೆ ಒಮ್ಮೆ ಯೋಚಿಸುವಂತೆ ಮಾಡಿದೆ. ಇಷ್ಟಾಗಿಯೂ ನಾವು ಪಾಠ ಕಲಿಯ ದಿದ್ದರೆ, ಪರಿಸರ ಉಳಿಸಿಕೊಳ್ಳಲು ಮುಂದಾ ಗದೇ ಹೋದರೆ ಮುಂದೆ ಯಾರಿಗೂ ಉಳಿಗಾಲವಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಇಂದಿಲ್ಲಿ ಎಚ್ಚರಿಕೆ ನೀಡಿದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ವಿಜ್ಞಾನ ವಿಭಾಗ ಆಯೋಜಿಸಿದ್ದ `ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂಗಾಲ…
ಶೂಟಿಂಗ್ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ಅವಘಡ: ನಟ ರಿಷಬ್ ಶೆಟ್ಟಿ ಬೆನ್ನು, ತಲೆಗೆ ಗಾಯ
March 2, 2021ಹಾಸನ: ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ರಿಷಬ್ ಶೆಟ್ಟಿ ಹಾಗೂ ನಟಿ ಗಾನವಿ ಸಾಹಸ ದೃಶ್ಯ ಚಿತ್ರೀಕರಣವೊಂದಕ್ಕೆ ಪೆಟ್ರೋಲ್ ಬಾಂಬ್ ಬಳಸಲಾಗಿತ್ತು. ಮೊದಲ ಬಾಂಬ್ ಸಿಡಿ ದರೂ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ, 2ನೇ ಬಾಂಬ್ ಸ್ಫೋಟಗೊಂಡಾಗ ರಿಷಬ್ ಕೊಂಚ ಯಾಮಾರಿದ್ರೆ ದೊಡ್ಡ ಅಪಾಯ ಕಾದಿತ್ತು. ಇದರಿಂದ ರಿಷಬ್…
ಹಂಪಿ, ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಆರು ಡಬಲ್ ಡೆಕ್ಕರ್ ತೆರೆದ ಬಸ್‍ಗಳ ವ್ಯವಸ್ಥೆ
March 2, 2021ಮೈಸೂರು,ಮಾ.1-ಮುಖ್ಯಮಂತ್ರಿಗಳು 2019-20ನೇ ಸಾಲಿನ ಆಯವ್ಯಯದ ಭಾಷಣದಲ್ಲಿ ವಿಶ್ವವಿಖ್ಯಾತ ಹಂಪಿ ಮತ್ತು ಮೈಸೂ ರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್ ಬಿಗ್‍ಬಸ್ ಮಾದರಿಯ 6 ಡಬಲ್ ಡೆಕ್ಕರ್ ತೆರೆದ ಬಸ್‍ಗಳನ್ನು ಕೆ.ಎಸ್.ಟಿ.ಡಿ.ಸಿ ವತಿಯಿಂದ ಕಾರ್ಯಾಚರಣೆಗೊಳಿಸಲು ರೂ. 5 ಕೋಟಿಗಳ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಸರ್ಕಾರದ ಈ ಆಶಯದಂತೆ ಲಂಡನ್ ಬಿಗ್‍ಬಸ್ ಮಾದರಿಯ ಡಬಲ್ ಡೆಕ್ಕರ್ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲು ನಿಗಮವು ಡಬಲ್ ಡೆಕ್ಕರ್ ಬಸ್ಸುಗಳನ್ನು ನುರಿತ ಸಂಸ್ಥೆಗಳಿಂದ ಹೊರ ಮೈ ವಿನ್ಯಾಸಗೊಳಿಸಿ ಸಜ್ಜುಗೊಳಿಸಿದ್ದು, ಪ್ರವಾಸ ವೀಕ್ಷಣೆಗೆ ತಯಾರಾಗಿ ರುತ್ತದೆ….
ರಾಮಮಂದಿರ ನಿರ್ಮಾಣಕ್ಕೆ ಸದ್ಯ 2,100 ಕೋಟಿ ಸಂಗ್ರಹ: ಈಗ ವಿದೇಶಗಳಲ್ಲಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಿಂತನೆ
March 2, 2021ಲಖನೌ,ಮಾ.1-ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾ ಣಕ್ಕೆ ದೇಶಾದ್ಯಂತ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಅಭಿಯಾನ ಶನಿವಾರ ಅಂತ್ಯಗೊಂಡಿದ್ದು, ನಿರೀಕ್ಷೆಗೂ ಮೀರಿ ಬರೋಬ್ಬರಿ 2100 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈಗ ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ಈಗ ಜಾಗತಿಕವಾಗಿಯೂ ನಿಧಿ ಸಮ ರ್ಪಣಾ ಅಭಿಯಾನಕ್ಕೆ ಚಾಲನೆ ನೀಡುವ ಚಿಂತನೆ ನಡೆಸಿದೆ. ಜಾಗತಿಕವಾಗಿಯೂ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡುವಂತೆ ವಿದೇಶಗಳಲ್ಲಿ ವಾಸಿಸುತ್ತಿರುವ ರಾಮ್ ಭಕ್ತರಿಂದ ಸಾಕಷ್ಟು ಮನವಿಗಳು ಬರುತ್ತಿವೆ. ರಾಮಮಂದಿರ ಟ್ರಸ್ಟ್‍ನ ಖಜಾಂಚಿ ಮಹಂತ್ ಗೋವಿಂದ್ ದೇವ್‍ಗಿರಿ ಹೇಳಿದ್ದಾರೆ. ಶೀಘ್ರದಲ್ಲೇ ಟ್ರಸ್ಟಿಗಳ ಸಭೆಯಲ್ಲಿ…
ಭಾರತದ ಕೋವಿಡ್ ಲಸಿಕೆ ತಯಾರಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿದ ಚೀನಾ ಹ್ಯಾಕರ್‍ಗಳು
March 2, 2021ನವದೆಹಲಿ,ಮಾ.1-ದೇಶದಲ್ಲಿನ ಎರಡು ಕೋವಿಡ್-19 ಲಸಿಕೆ ತಯಾರಕ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಹಾಳು ಮಾಡಲು ಚೀನಾದ ಸರ್ಕಾರಿ ಬೆಂಬಲಿತ ಹ್ಯಾಕರ್‍ಗಳ ತಂಡ ಯತ್ನಿಸಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಫರ್ಮಾ ತಿಳಿಸಿದೆ. ಭಾರತ ಹಾಗೂ ಚೀನಾ ಎರಡೂ ದೇಶಗಳು ಕೋವಿಡ್ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ಮಾರಾಟ ಹಾಗೂ ಕೊಡುಗೆಯಾಗಿ ನೀಡುತ್ತಿವೆ. ವಿಶ್ವದಾದ್ಯಂತ ಮಾರಾಟ ವಾಗುತ್ತಿರುವ ಎಲ್ಲ ಲಸಿಕೆಗಳಲ್ಲಿ ಶೇ.60ಕ್ಕಿಂತಲೂ ಹೆಚ್ಚು ಭಾರತದ ಪಾಲಿದೆ. ಚೀನಾದ `ಎಪಿಟಿ10′ ಎಂಬ ಹ್ಯಾಕರ್‍ಗಳ ತಂಡ ಹ್ಯಾಕ್ ಮಾಡಲು ಯತ್ನಿಸಿದೆ. ಭಾರತ್ ಬಯೋಟೆಕ್…
ತಂದೆ-ತಾಯಿಗಳ ಸೇವೆಯಲ್ಲಿ ಕಾಶಿ ರಾಮೇಶ್ವರ ಕಾಣಬೇಕು
March 2, 2021ಸುತ್ತೂರು: ತಂದೆ ತಾಯಿಯ ಸೇವೆ ಯಲ್ಲಿ ಕಾಶಿ ರಾಮೇಶ್ವರರ ಕಾಣಬೇಕು. ಅವರೇ ನಿಜವಾದ ದೇವರು ಎಂದು ಇಚಲ ಕರಂಜಿಯ ಭಕ್ತಿಯೋಗಾಶ್ರಮದ ಶ್ರೀ ಮಹೇಶಾನಂದ ಸ್ವಾಮಿಗಳವರು ಸುತ್ತೂರಲ್ಲಿ ಏರ್ಪಡಿಸಿದ್ದ ಪ್ರವಚನದಲ್ಲಿ ತಿಳಿಸಿದರು. ಜನ್ಮ ನೀಡಿ, ಪ್ರೀತಿಯಿಂದ ಕೈ ಹಿಡಿದು ಬದುಕನ್ನು ಕಲಿಸಿ ಜಗತ್ತನ್ನು ತೋರಿಸಿದ ತಾಯಿಯೇ ನಿಜವಾದ ದೇವರು. ಮಂದಿರ ದಲ್ಲಿರುವ ದೇವರು ಬೇಡಿದ ವರ ಕೊಡ ಬಹುದು. ಆದರೆ ತಾಯಿ ನಮ್ಮ ಬದುಕಿಗೆ ಬದುಕಾಗಿ ನೀಡಿ ತನ್ನ ಮಕ್ಕಳಿಗೆ ಸದಾ ಒಳಿತನ್ನು ಬಯಸುವ ಕಣ್ಣಿಗೆ ಕಾಣುವ ದೇವರು…
ವಿಜಯನಗರ ಪೊಲೀಸರಿಂದ ಮೂವರು ಖದೀಮರ ಸೆರೆ
March 2, 2021ಮೈಸೂರು, ಮಾ. 1(ಆರ್‍ಕೆ)- ಮೂವರು ಖದೀಮರನ್ನು ಬಂಧಿಸಿರುವ ಮೈಸೂರಿನ ವಿಜಯನಗರ ಠಾಣೆ ಪೊಲೀಸರು, 7,50,000 ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ತಾಲೂಕು, ಮೈದನಹಳ್ಳಿ ಗ್ರಾಮದ ಲೇಟ್ ನಾರಾಯಣಗೌಡರ ಮಗ ಶಿವರಾಜು ಅಲಿ ಯಾಸ್ ಶ್ರೀನಿವಾಸ(34), ಜಯಪುರ ಹೋಬಳಿ ಬೀರಿಹುಂಡಿ ಗ್ರಾಮದ ಕೆಂಪೇಗೌಡರ ಮಗ ಶೇಖರ ಅಲಿಯಾಸ್ ಪಂಗು(20) ಹಾಗೂ ಇಲವಾಲ ಹೋಬಳಿ ಶೆಟ್ಟಿನಾಯಕನಹಳ್ಳಿ ಗ್ರಾಮದ ಗೋಪಯ್ಯ ಅವರ ಮಗ ಚಂದ್ರ ಅಲಿಯಾಸ್ ಚಂದ್ರಕುಮಾರ್(39) ಬಂಧಿತ ಆರೋಪಿಗಳು. ಫೆಬ್ರವರಿ 27ರಂದು ಸಂಜೆ 7…
ಸರ್ಕಾರಿ ಕಚೇರಿ ದಾಖಲೆಗಳ ನಿರ್ವಹಣೆ ಬಹುಮುಖ್ಯ
March 2, 2021ಮೈಸೂರು,ಮಾ.1(ಪಿಎಂ)- ಮಾಹಿತಿ ಹಕ್ಕು ಕಾಯ್ದೆ (ಆರ್‍ಟಿಐ) ಹಾಗೂ ಸಕಾಲ ಅಧಿನಿಯಮ ಜಾರಿಯಲ್ಲಿರುವ ಹಿನ್ನೆಲೆ ಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ದಾಖಲೆ ಗಳ ನಿರ್ವಹಣೆ ಬಹುಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಉಪ ನಿರ್ದೇಶಕ ಡಾ.ಗವಿಸಿದ್ದಯ್ಯ ಹೇಳಿದರು. ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ವತಿಯಿಂದ ಸಾರ್ವಜನಿಕ ದಾಖಲೆಗಳ ಅಧಿನಿಯಮ ಮತ್ತು ದಾಖಲೆಗಳ ನಿರ್ವ ಹಣೆ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರಕ್ಕೆ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ದಾಖಲೆಗಳ ಸಮರ್ಪಕ…










