ಮೈಸೂರು,ಡಿ.28(ಎಂಟಿವೈ)- ಅಧಿಕಾರದ ಚುಕ್ಕಾಣಿ ಹಿಡಿದು ಆರು ವರ್ಷವಾದರೂ ಒಂದೇ ಒಂದು ಸುದ್ದಿ ಗೋಷ್ಠಿ ನಡೆಸದ ಪ್ರಧಾನಿ ನರೇಂದ್ರ ಮೋದಿ, 36 ದಿನ ಗಳಿಂದ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹಿತ ಕಾಯದೆ ಕಾರ್ಪೋರೇಟ್ ಕಂಪನಿಗಳ ಹಿಡಿತ ದಲ್ಲಿದ್ದಾರೆ ಎಂದು ಹಿರಿಯ ಸಮಾಜವಾದಿ ಪ.ಮಲ್ಲೇಶ್ ಕಿಡಿಕಾರಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಕಾಯಿದೆ ಗಳನ್ನು ವಾಪಸ್ ಪಡೆಯುವಂತೆ ಆಗ್ರ ಹಿಸಿ ಹೊಸ ದಿಲ್ಲಿಯಲ್ಲಿ ನಡೆಸುತ್ತಿರುವ ಹೋರಾಟ ಈಗಾಗಲೇ 36…
ಪತ್ನಿಯನ್ನು ಕೊಲ್ಲಲು ಯತ್ನಿಸಿದ ಪತಿಗೆ ಐದು ವರ್ಷ ಜೈಲು ಶಿಕ್ಷೆ
December 29, 2020ಮೈಸೂರು,ಡಿ.28-ಪತ್ನಿಯನ್ನು ಕೊಲ್ಲಲು ಯತ್ನಿ ಸಿದ ಪತಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 11 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ದೊಡ್ಡೇಗೌಡ ತೀರ್ಪು ನೀಡಿದ್ದಾರೆ. ತಿ.ನರಸೀಪುರ ತಾಲೂಕು ಬನ್ನೂರು ಠಾಣೆ ವ್ಯಾಪ್ತಿಗೊಳಪಟ್ಟ ಹಿಟ್ಟುವಳ್ಳಿ ಗ್ರಾಮದ ನಾಗ ರಾಜು ಶಿಕ್ಷೆಗೊಳಗಾದವನಾಗಿದ್ದು, ಈತ ತನ್ನ ಪತ್ನಿ ಚೆನ್ನಮ್ಮ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದ. ವಿವರ: ನಾಗರಾಜು ಮತ್ತು ಚೆನ್ನಮ್ಮ ಅವರಿಗೆ 2007ರಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಮೂವರು ಮಕ್ಕಳಿದ್ದು, ಮೂರನೇ…
ಹೊಸ ವರ್ಷಾಚರಣೆ ಡಿ.31ರ ರಾತ್ರಿ 11.30 ಗಂಟೆಗೆ ಬಾರ್, ಹೋಟೆಲ್, ರೆಸ್ಟೋರೆಂಟ್ ಬಂದ್ ಮಾಡಿ ಹೋಟೆಲ್ ಮಾಲೀಕರಿಗೆ ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ಸೂಚನೆ
December 29, 2020ಮೈಸೂರು,ಡಿ.28(ಆರ್‍ಕೆ)-ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ರಾತ್ರಿ 11.30 ಗಂಟೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಬಾರ್‍ಗಳನ್ನು ಬಂದ್ ಮಾಡಬೇಕೆಂದು ಮೈಸೂರು ನಗರ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ ಖಡಕ್ ಸೂಚನೆ ನೀಡಿದ್ದಾರೆ. ಈ ಕುರಿತಂತೆ ನಜರ್‍ಬಾದ್‍ನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹೋಟೆಲ್, ಬಾರ್, ರೆಸ್ಟೋರೆಂಟ್ ಮಾಲೀಕರ ಸಭೆ ನಡೆಸಿದ ಅವರು, ಕೋವಿಡ್ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಸರ್ಕಾರ ಮಾರ್ಗಸೂಚಿಗಳನ್ನು ನೀಡಿದ್ದು, ಅದನ್ನು ಕಟ್ಟುನಿಟ್ಟಾಗಿ…
ಆರ್‍ಎಸ್‍ಎಸ್ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ
December 29, 2020ಮೈಸೂರು,ಡಿ.28(ಎಂಟಿವೈ)- ಪ್ರಸ್ತುತ ಸಂದರ್ಭ ದಲ್ಲಿ ದೇಶಭಕ್ತರೆಂದು ಬಿಂಬಿಸಿಕೊಳ್ಳುತ್ತಿರುವ ಆರ್‍ಎಸ್‍ಎಸ್ ನಾಯಕರು ಸ್ವಾತಂತ್ರ್ಯ ಹೋರಾಟ ದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಬೆಳಗ್ಗೆ ನಗರ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ 136ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾ ಪನಾ ದಿನದ ಅಂಗವಾಗಿ ನಡೆದ ‘ಸಮರ್ಪಣಾ ದಿವಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆರ್‍ಎಸ್‍ಎಸ್ ನಾಯಕರು ಮತ್ತು ಕಾರ್ಯಕರ್ತರು ನಾವೇ ನಿಜ ವಾದ ಭಾರತೀಯ ಮಕ್ಕಳು…
ಹನುಮಂತನ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮೂಲಕ ಟೀಕೆ
December 29, 2020ಮೈಸೂರು, ಡಿ.28(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದ ರಾಮಯ್ಯ ಅವರು ಸಿದ್ದ ರಾಮನಹುಂಡಿಯಲ್ಲಿ ಮತ ಚಲಾಯಿಸಿದ ಬಳಿಕ ಸ್ನೇಹಿ ತನ ಮನೆಯಲ್ಲಿ ಬಾಡೂಟ ಸೇವಿಸುವ ವೇಳೆ ಬೆಂಬಲಿಗ ನೊಬ್ಬನೊಂದಿಗೆ ಭಗ ವಾನ್ ಹನುಮನ ಬಗ್ಗೆ ಆಡಿದ ಮಾತಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್ ಟ್ವೀಟ್ ಮೂಲಕ ಟೀಕಿಸಿದ್ದಾರೆ ಸಿದ್ದರಾಮಯ್ಯನವರೇ, ಹನುಮ ಜಯಂತಿ ಯನ್ನು ತಾರೀಖು ನೋಡಿ ಮಾಡುವು ದಲ್ಲ. ತಿಥಿ ನಕ್ಷತ್ರದ ಪ್ರಕಾರ ಮಾಡಲಾಗು ತ್ತದೆ. ನಮ್ಮ ಧರ್ಮದಲ್ಲಿ ಹನುಮಂತ ಶೂರ ಹಾಗೂ ಬಲಾಢ್ಯ….
ಅಹವಾಲು ಸಲ್ಲಿಕೆಗೆ ಸಿಎಂ ಕಚೇರಿಯಲ್ಲಿ ಒಂದೇ ಇ-ಮೇಲ್ ಐಡಿ
December 29, 2020ಬೆಂಗಳೂರು, ಡಿ.28(ಕೆಎಂಶಿ)-ಮುಖ್ಯಮಂತ್ರಿ ಕಚೇರಿಗೆ ಅಹವಾಲು ಸಲ್ಲಿಕೆ ಹಾಗೂ ಸಂವಹನಕ್ಕಾಗಿ 2021ರ ಜನವರಿ ಒಂದನೇ ದಿನಾಂಕದಿಂದ ಛಿm.ಞಚಿಡಿ@ಟಿiಛಿ.iಟಿ ಇ- ಮೇಲ್ ಐಡಿಯನ್ನು ಮಾತ್ರ ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಚಿವಾ ಲಯದ ಪ್ರಕಟಣೆ ತಿಳಿಸಿದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ 2020ರ ಆಗಸ್ಟ್ ತಿಂಗಳಿನಿಂದ ಇ-ಮೇಲ್ ಮೂಲಕ ಸ್ವೀಕೃತವಾಗುವ ಅಹವಾಲುಗಳನ್ನು ಇ-ಆಫೀಸ್‍ನಲ್ಲಿಯೇ ನಿರ್ವಹಿಸಲಾಗುತ್ತಿದೆ. ಪ್ರಸ್ತುತ ಮುಖ್ಯಮಂತ್ರಿಗಳ ಸಚಿವಾಲಯವು 3 ಸಕ್ರಿಯ ಇ-ಮೇಲ್ ವಿಳಾಸಗಳನ್ನು ಹೊಂದಿದ್ದು, ಇದರಿಂದ ಅಹವಾಲು ಪುನರಾವರ್ತನೆಯಾಗು ತ್ತಿದೆ ಹಾಗೂ ಅನಗತ್ಯ ಗೊಂದಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಹವಾಲು ಸಲ್ಲಿಕೆ…
ಚಾಮುಂಡಿಬೆಟ್ಟದಲ್ಲಿ ಬೆಂಕಿ: ಅರ್ಧ ಎಕರೆ ಅರಣ್ಯ ಬೆಂಕಿಗಾಹುತಿ ಬೆಂಕಿ ಶಮನಗೊಳಿಸಿದ ಅಗ್ನಿಶಾಮಕ ದಳ
December 29, 2020ಮೈಸೂರು, ಡಿ.28(ಎಂಕೆ)- ಚಾಮುಂಡಿಬೆಟ್ಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಮಾರು ಅರ್ಧ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದೆ. ಉತ್ತನಹಳ್ಳಿ ಜ್ವಾಲಾಮುಖಿ ಅಮ್ಮ ನವರ ದೇವಸ್ಥಾನ ಕಡೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಂಜೆ 4.45 ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಲೇ ಹೊತ್ತಿ ಉರಿಯಲಾರಂಭಿಸಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಸರಸ್ವತಿಪುರಂ ಮತ್ತು ಬನ್ನಿಮಂಟಪ ಅಗ್ನಿಶಾಮಕ ಠಾಣಾ ಸಿಬ್ಬಂದಿ 2 ಲಾರಿಗಳ ಮೂಲಕ ಒಂದು…
ಸೈನಿಕ ತರಬೇತಿ ಪಡೆದವರಿಗೆ ಉಚಿತ ಸಮವಸ್ತ್ರ ವಿತರಣೆ
December 29, 2020ಮೈಸೂರು,ಡಿ.28(ಎಂಕೆ)-ಸೈನಿಕ ರಾಜ್ಯ ಅಕಾಡೆಮಿ, ಹೊಯ್ಸಳ ಕರ್ನಾಟಕ ಸಂಘದ ಸಹಯೋಗದಲ್ಲಿ 30 ದಿನಗಳ ಉಚಿತ ಸೈನಿಕ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಉಚಿತ ಸಮವಸ್ತ್ರ(ಟ್ರ್ಯಾಕ್‍ಸೂಟ್), ಅಭಿನಂದನಾ ಪದಕ ನೀಡಿ ಗೌರವಿಸಲಾಯಿತು. ನಗರದ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆದ ಶಿಬಿರಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಾಯು ಸೇನೆಯ ನಿವೃತ್ತ ಯೋಧ ಶಂಕರನಾರಾಯಣ, ಶಿಬಿರಾರ್ಥಿಗಳಿಗೆ ಉಚಿತ ಟ್ರ್ಯಾಕ್ ಸೂಟ್ ಹಾಗೂ ಅಭಿನಂದನಾ ಪದಕಗಳನ್ನು ನೀಡಿದರು. ಈ ವೇಳೆ ಸೈನಿಕ ರಾಜ್ಯ ಅಕಾಡೆಮಿಯ ಯೋಧ ಆರ್.ರವಿ ಮಾತನಾಡಿ, ಕೆಲಸದಿಂದ ರಜೆ ಮೇಲೆ ಬಂದಾಗ ಯುವಕರಿಗೆ…
ಇಂದು, ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ
December 29, 2020ಮೈಸೂರು,ಡಿ.28-ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬೆಳಗೊಳ ಯಂತ್ರಾಗಾರದಲ್ಲಿ ವಿದ್ಯುತ್ ವ್ಯತ್ಯಯದಿಂದ ನೀರನ್ನು ಪಂಪ್ ಮಾಡಲು ಸಾಧ್ಯವಾಗದ ಕಾರಣ ಡಿ.29 ಮತ್ತು 30ರಂದು ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವಗಿರಿ, ಬನ್ನಿ ಮಂಟಪ ಎ.ಬಿ.ಸಿ. ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀ ಶ್ವರನಗರ, ತಿಲಕ್‍ನಗರ, ಬಡೇಮಕಾನ್, ಹಲೀಂನಗರ, ದೇವ ರಾಜ ಮೊಹಲ್ಲಾ ಭಾಗಶಃ, ನಜರ್‍ಬಾದ್ ಮೊಹಲ್ಲಾ, ವಿದ್ಯಾರಣ್ಯ ಪುರಂ, ವಿಶ್ವೇಶ್ವರನಗರ, ಚಾಮುಂಡಿಪುರಂ, ದೇವರಾಜ ಮೊಹಲ್ಲಾ, ಲೂರ್ದ್‍ನಗರ, ಮೀನಾ ಬಜಾರ್, ವಾರ್ಡ್ ಸಂಖ್ಯೆ: 8, 17, 18, 19,…
ಮೈಸೂರಲ್ಲಿ ಸೋಮವಾರ 63 ಮಂದಿಗೆ ಕೊರೊನಾ ಸೋಂಕು
December 29, 2020ಮೈಸೂರು, ಡಿ.28(ಎಂಕೆ)- ಜಿಲ್ಲೆಯಲ್ಲಿ ಸೋಮವಾರ 63 ಮಂದಿಗೆ ಕೊರೊನಾ ಸೋಂಕು ತಗುಲಿದೆ. 88 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 52,289ಕ್ಕೆ ಏರಿಕೆ ಯಾದರೆ, ಸೋಮವಾರದ 88 ಮಂದಿ ಸೇರಿ ಒಟ್ಟು 50,776 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ 1,010 ಮಂದಿ ಮೃತಪಟ್ಟಿದ್ದು, 507 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ರಾಜ್ಯದ ವಿವರ: ರಾಜ್ಯದಲ್ಲಿ ಸೋಮವಾರ 653 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,16,909ಕ್ಕೇರಿದೆ. ಇಂದು…










