ಮೈಸೂರು, ಡಿ.30- ಮೈಸೂರು ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಈ ಸಾಲಿನಲ್ಲಿ 5,76,80,441 ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಆರ್.ಆನಂದ್ ತಿಳಿಸಿದ್ದಾರೆ. ಇತ್ತೀಚೆಗೆ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ವರ್ಚು ಯಲ್ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ 10,88,34,377 ರೂ. ಲಾಭ ಬಂದಿದ್ದು, ಅದರಲ್ಲಿ 5,11,53,936 ರೂ. ಆದಾಯ ತೆರಿಗೆ ಪಾವತಿಸಲಾಗಿದೆ. 2020ರ ಮಾರ್ಚ್ 31ರ ಅಂತ್ಯಕ್ಕೆ ಬ್ಯಾಂಕ್ 387.14 ಕೋಟಿ ರೂ. ಠೇವಣಿ ಹೊಂದಿದ್ದು, 289.53…
ಸ್ಥಳೀಯರ ಅಭಿಪ್ರಾಯ ಆಲಿಸಿ ಕೆಸರೆಯಲ್ಲಿ ಕಸಾಯಿ ಖಾನೆ ನಿರ್ಮಾಣ
December 30, 2020ಮೈಸೂರು, ಡಿ. 29(ಆರ್‍ಕೆ)- ಸ್ಥಳೀಯ ನಿವಾಸಿಗಳ ಅಭಿಪ್ರಾಯ ಪಡೆದು ಮೈಸೂರಿನ ಕೆಸರೆಯಲ್ಲಿ ಕಸಾಯಿ ಖಾನೆ (ಸ್ಲಾಟರ್ ಹೌಸ್) ಸ್ಥಾಪಿಸಲು ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ನಿರ್ಧರಿಸಿದೆ. ಮೇಯರ್ ತಸ್ನೀಂ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಮೈಸೂರು ನಗರದ ಸ್ವಚ್ಛತೆ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಸುವ್ಯವಸ್ಥಿತ ಕಸಾಯಿ ಖಾನೆ ಅಗತ್ಯವಿದ್ದು, ಈ ಹಿಂದೆ ನಿಗದಿಯಾಗಿರುವಂತೆ ಮೈಸೂರಿನ ಕೆಸರೆಯಲ್ಲಿ ವೈಜ್ಞಾನಿಕವಾಗಿ ಕುರಿ-ಮೇಕೆ ಕೊಯ್ದು ಮಾಂಸ ಮಾರಾಟ ಮಾಡಲು ಪ್ರತ್ಯೇಕ ವ್ಯವಸ್ಥೆ ಯಾಗಬೇಕು ಎಂದು ಮಾಜಿ ಮೇಯರ್‍ಗಳಾದ…
ಸೂಯೇಜ್ ಫಾರಂ ಕಸದ ರಾಶಿ ತೆರವಿಗೆ ಪ್ರಯತ್ನಿಸಿ
December 30, 2020ಮೈಸೂರು,ಡಿ.29(ಆರ್‍ಕೆ)- ಸೂಯೇಜ್ ಫಾರಂನಲ್ಲಿ ಬೆಟ್ಟದಂತಿರುವ ಕಸದ ರಾಶಿ ತೆರವುಗೊಳಿಸಲು ಪ್ರಯತ್ನಿಸಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಪಾಲಿಕೆ ಸದಸ್ಯರಿಗೆ ಸಲಹೆ ನೀಡಿದ್ದಾರೆ. ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಾತನಾ ಡಿದ ಅವರು, ಈ ಹಿಂದೆ ಜಿಲ್ಲಾ ಉಸ್ತು ವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರ ಸಲಹೆಯಂತೆ ಕಸದ ರಾಶಿ ತೆರವುಗೊಳಿ ಸುವ ಸಲುವಾಗಿ ಡಿಸಿ ನೇತೃತ್ವದ ಅಧಿಕಾರಿ ಗಳ ತಂಡವು ಉತ್ತರ ಪ್ರದೇಶದ ಪ್ಲಾಂಟ್‍ಗೆ ಭೇಟಿ ನೀಡಿ ಮಾಹಿತಿ ಪಡೆದು ಬಂದಿತ್ತು. ತದನಂತರ ಆ ಬಗ್ಗೆ ಯಾವುದೇ ಪ್ರಕ್ರಿಯೆ…
ಕಾಮಗಾರಿಯೊಂದರ ವಿಚಾರದಲ್ಲಿ ಕಾಲಹರಣ ಚರ್ಚೆ!
December 30, 2020ಮೈಸೂರು,ಡಿ.29(ಎಸ್‍ಬಿಡಿ)- ಕಾಮ ಗಾರಿಯೊಂದರ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ ಮೈಸೂರು ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು. ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಸಲಹಾ ಸಮಿತಿ ಅನು ಮೋದಿಸಿದ್ದು, ಕೌನ್ಸಿಲ್ ರೀಡ್ ಅಂಡ್ ರೆಕಾರ್ಡ್‍ಗಾಗಿ ಇಂದಿನ ಸಭೆಯಲ್ಲಿ ಕಾರ್ಯ ಸೂಚಿ ಪ್ರಸ್ತಾಪಿಸಲಾಗಿತ್ತು. ಅದರಲ್ಲಿ 1.80 ಕೋಟಿ ರೂ. ಅನುದಾನದಲ್ಲಿ ಸಿವೇಜ್ ಫಾರ್ಮ್‍ಗೆ ಕಾಂಪೌಂಡ್ ನಿರ್ಮಾಣ ಉದ್ದೇ ಶಿತ ಕಾಮಗಾರಿ ಸುದೀರ್ಘ ಚರ್ಚೆ ಹಾಗೂ ಗದ್ದಲಕ್ಕೆ ಕಾರಣವಾಯಿತು….
ಕುವೆಂಪುಗೆ `ಭಾರತ ರತ್ನ’ಕ್ಕೆ ಆಗ್ರಹ
December 30, 2020ಮೈಸೂರು, ಡಿ.29- ರಾಷ್ಟ್ರಕವಿ ಕುವೆಂಪು ಅವರಿಗೆ `ಭಾರತ ರತ್ನ’ ಪುರಸ್ಕಾರ ಸಲ್ಲಬೇಕೆಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಶಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ, ಶೈಕ್ಷಣಿಕ ಸೇವೆ ಅಗಾಧ ವಾದದ್ದು. ನಾಡು, ದೇಶದಲ್ಲಷ್ಟೇ ಅಲ್ಲ ವಿಶ್ವದೆಲ್ಲೆಡೆ ಕುವೆಂಪು ಅವರ ಸಾಧನೆ ಪಸರಿಸಿದೆ. `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಮೂಲಕ ಪರಂಪರೆಯ ಕೀರ್ತಿ ಹೆಚ್ಚಿಸಿದ್ದಾರೆ. `ಮಲೆಗಳಲ್ಲಿ ಮದುಮಗಳು’ ಇನ್ನಿತರ ಕಾದಂಬರಿಗಳ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ಸಾರಿದ್ದಾರೆ. ಕುವೆಂಪು ಅವರ `ಜೈ ಭಾರತ ಜನನಿಯ ತನುಜಾತೆ…’ ಗೀತೆಯನ್ನು ನಾಡಗೀತೆ…
ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ
December 30, 2020ಬೆಂಗಳೂರು,ಡಿ.29(ಕೆಎಂಶಿ)-ರಾಜ್ಯಕ್ಕೆ ಹೆಚ್ಚು ವೈದ್ಯರು ಅಗತ್ಯವಿರುವುದರಿಂದ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಆರಂ ಭಿಸಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಸಹ ಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿ ಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ವೈದ್ಯ ಕೀಯ ಮಹಾವಿದ್ಯಾಲಯ ಮತ್ತು ಸಂಶೋ ಧನಾ ಸಂಸ್ಥೆಯ ನೂತನ ಕಟ್ಟಡ ಉದ್ಘಾ ಟನೆಯಲ್ಲಿ ಮಾತನಾಡಿದ ಅವರು, ಒಂದು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 600 -700 ಕೋಟಿ ರೂ. ಬೇಕಾಗುತ್ತದೆ. ಖಾಸಗಿ -ಸರ್ಕಾರಿ ಸಹಭಾಗಿತ್ವದಲ್ಲಿ…
ಜಗತ್ತಿನ ಮಹಾನ್ ಕವಿಗಳಿಗಿಂತ ಒಂದು ಗುಲಗಂಜಿಯಷ್ಟು ಹೆಚ್ಚು ತೂಗುವ ಕುವೆಂಪು
December 30, 2020ಮೈಸೂರು, ಡಿ.29(ಆರ್‍ಕೆಬಿ)- ಕುವೆಂಪು ಕನ್ನಡದ ಟಾಲ್‍ಸ್ಟಾಯ್, ರಸೆಲ್, ಷೇಕ್ಸ್‍ಪಿಯರ್, ವಡ್ರ್ಸ್ ವರ್ತ್, ಕುವೆಂಪು ಅವರ ಕಾವ್ಯ, ಕೃತಿಗಳನ್ನು ವ್ಯಾಖ್ಯಾನಿ ಸಿದರೆ ಈ ಮಹಾನ್ ಕವಿಗಳಿಗಿಂತ ಕುವೆಂಪು ಒಂದು ಗುಲಗಂಜಿಯಾದರೂ ಹೆಚ್ಚು ತೂಗುತ್ತಾರೆ ಎಂದು ವಿದ್ವಾಂಸ ಪೆÇ್ರ.ಎನ್.ಬೋರಲಿಂಗಯ್ಯ ತಿಳಿಸಿದರು. ಮೈಸೂರು ವಿವಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಂಗಳವಾರ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇಂದ್ರೆ, ಮಾಸ್ತಿ, ಡಿವಿಜಿ, ಕಾರಂ ತರು, ತೀನಂಶ್ರೀ ಸೇರಿದಂತೆ ಮಹಾನ್ ಚೇತನಗಳಿಗಿಂತ ಕುವೆಂಪು ಭಿನ್ನ. ಏಕೆಂದರೆ ಕುವೆಂಪು…
ಜಗತ್ತಿಗೆ ಕನ್ನಡದ ಹಿರಿಮೆ ಸಾರಿದ ಮಹಾನ್ ಚೇತನ
December 30, 2020ಕನ್ನಡದ ಹಿರಿಮೆಯನ್ನು ಇಡೀ ಜಗತ್ತಿಗೆ ಸಾರಿದ ಮಹಾನ್ ಚೇತನ ಕುವೆಂಪು. ತಮ್ಮ ವೈಚಾರಿಕತೆ ಮೂಲಕ ಎಲ್ಲಾ ಕಾಲಕ್ಕೂ ಸಲ್ಲುವವರು, ವೈಚಾರಿಕ ಚಿಂತನೆಗಳಿಂದಲೇ ಸಾಹಿತ್ಯ ಲೋಕದಲ್ಲಿ ಸದಾ ಜನರ ಮನದಲ್ಲಿ ಸದಾ ಉಳಿದಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು. ಮೈಸೂರಿನ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾನವನದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಮಾಜವನ್ನು ಸರಿದಾರಿಯಲ್ಲಿ ಕೊಂಡೊ ಯ್ಯುವ ನಿಟ್ಟಿನಲ್ಲಿ ಅವರು ನೀಡಿರುವ ಚಿಂತನೆಗಳನ್ನು ಸರಿಯಾಗಿ ಅನುಷ್ಟಾನಗೊಳಿಸಿದರೆ ದೇಶದ ಬಹುಪಾಲು ಸಮಸ್ಯೆಗಳು ಇತ್ಯರ್ಥವಾಗುತ್ತವೆ. ಹುಟ್ಟುವ ಮಗು…
ಕುವೆಂಪು ಕನ್ನಡಿಗರ ದಿಕ್ಸೂಚಿ
December 30, 2020ಮೈಸೂರು ಮಹಾನಗರಪಾಲಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾನವನದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಸಾಹಿತ್ಯಕ್ಕಷ್ಟೇ ಸೀಮಿತವಾಗದೆ ಕನ್ನಡಿಗರ ಬದುಕು ಹಸನಾಗಿಸಲು ಮೌಲಿಕ ಸಂದೇಶ ಮತ್ತು ಚಿಂತನೆಗಳನ್ನು ನೀಡಿದವರು ಕುವೆಂಪು. ಅವರ ಸಾಹಿತ್ಯದ ಮೂಲಕ ಜಾತ್ಯತೀತ ನಿಲುವುಗಳನ್ನು ಸರ್ವರಿಗೂ ಸಮಪಾಲು ಎಂಬ ಆಶಯಗಳನ್ನು ಉದ್ದಕ್ಕೂ ಸಾದರಪಡಿಸಿದವರು. ಕನ್ನಡ ಆಡಳಿತ ಭಾಷೆಯಾದರೆ ಸಾಲದು, ಜನಮಾನಸ ಭಾಷೆಯಾಗಬೇಕು. ಪ್ರತೀ ಹಂತದಲ್ಲೂ…
ಕರಾಮುವಿಯಲ್ಲಿ ಕುವೆಂಪು ನೆನಪು
December 30, 2020ಮೈಸೂರು: ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ಅಲ್ಪ ಮಾನವನಾಗಿ ಮಕ್ಕಳಲ್ಲಿ ಕೊಳೆ ತುಂಬಿ ಅವರನ್ನು ಅಲ್ಪ ಮಾನವರ ನ್ನಾಗಿ ಮಾಡುತ್ತಿದ್ದೇವೆ. ಅಲ್ಪ ಶಿಕ್ಷಣದ ಮೂಲಕ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸಬೇಕು ಎಂದು ಕುವೆಂಪು ಹೇಳಿ ದ್ದಾರೆ ಎಂದು ಮೈಸೂರಿನ ವಿಜಯನಗ ರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಪಿ. ಬೆಟ್ಟೇಗೌಡ ತಿಳಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದಲ್ಲಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ `ಕುವೆಂಪು ಸಾಹಿತ್ಯದಲ್ಲಿ ಅನಿಕೇತನ ಪ್ರಜ್ಞೆ’ ವಿಷಯ ಕುರಿತು ಮಾತ ನಾಡಿದರು….










