ಸಚಿವ ಕೆ.ಎಸ್.ಈಶ್ವರಪ್ಪ ಕಿಡಿನುಡಿ ಮೈಸೂರು, ಡಿ.29(ಎಂಟಿವೈ)- ಕುರುಬ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ದಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸುವ ತೆವಲು ನನಗಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಮೈಸೂರಲ್ಲಿ ಮಂಗಳ ವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯದ ಎಸ್‍ಟಿ ಮೀಸಲಾತಿ ಹೋರಾಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳದಿರುವ ಸಂಬಂಧ ಪ್ರತಿಕ್ರಿಯಿ ಸಿದ ಅವರು, ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ ಅವರನ್ನೇನೂ ಮನವೊಲಿಸಬೇಕಾದ ಅಗತ್ಯವಿಲ್ಲ. ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ…
ಗಾವಡಗೆರೆ ಸ್ವಾಮೀಜಿ ಶಾಂತಿ-ಸೌಹಾರ್ದ-ಸದ್ಭಾವನಾ ಪಾದಯಾತ್ರೆ
December 30, 2020ಮೈಸೂರು, ಡಿ.29(ಎಂಕೆ)- ನೂರಾರು ಭಕ್ತರೊಂದಿಗೆ ಹುಣಸೂರು ತಾಲೂಕಿನ ಗಾವಡ ಗೆರೆ ಶ್ರೀ ಗುರುಲಿಂಗ ಜಂಗಮ ದೇವರ ಮಠ ದಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಶಾಂತಿ-ಸೌಹಾರ್ದ-ಸದ್ಭಾವನಾ ಪಾದಯಾತ್ರೆ ಹಮ್ಮಿ ಕೊಂಡಿರುವ ಶ್ರೀ ನಟರಾಜ ಮಹಾಸ್ವಾಮೀಜಿ ಅವರನ್ನು ಮೈಸೂರು ವೀರವನಿತೆ ರಾಣಿ ಚೆನ್ನಮ್ಮ ಸ್ವಯಂಸೇವಾ ಸಂಘದ ಸದಸ್ಯರು ಭಕ್ತಿಯಿಂದ ಸ್ವಾಗತಿಸಿ ಗೌರವ ಸಮರ್ಪಿಸಿದರು. ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಸಿಐಟಿಬಿ ಛತ್ರಕ್ಕೆ ಮಂಗಳವಾರ ಸಂಜೆ ಆಗಮಿಸಿದ ಶ್ರೀ ನಟರಾಜ ಮಹಾಸ್ವಾಮೀಜಿ ಮತ್ತು ಭಕ್ತ ಸಮೂಹಕ್ಕೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ವಂದಿಸಿ, ಕಾಣಿಕೆ…
ಜನವರಿ 1ರಿಂದ ಶಾಲೆ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಒಂದೇ ದಿನ 653 ಮಂದಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆ
December 30, 2020ಮೈಸೂರು,ಡಿ.29(ಆರ್‍ಕೆ)-2021ರ ಜನವರಿ 1ರಿಂದ 6ರಿಂದ 9ನೇ ತರಗತಿಗೆ ವಿದ್ಯಾಗಮ ಹಾಗೂ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ತರಗತಿ ಆರಂಭವಾಗುವ ಹಿನ್ನೆಲೆಯಲ್ಲಿ ಮೈಸೂರಿನ ಜೆಕೆ ಮೈದಾನದಲ್ಲಿ ಏರ್ಪಡಿಸಿದ್ದ ಉಚಿತ ಕೊರೊನಾ ಟೆಸ್ಟ್ ಶಿಬಿರದಲ್ಲಿ 653 ಮಂದಿ ಆರ್‍ಟಿ-ಪಿಸಿಆರ್ ಪರೀಕ್ಷೆಗೊಳಗಾದರು. ಜಿಲ್ಲಾ ಲಯನ್ಸ್ ಸರ್ವಿಸ್ ಫೌಂಡೇಷನ್ 317ಎ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉಚಿತವಾಗಿ ಆರ್‍ಟಿ-ಪಿಸಿಆರ್ ಪರೀಕ್ಷೆ ನಡೆಸಿದರು. ಮೊದಲ ದಿನವಾದ ಇಂದು 653 ಮಂದಿಗೆ ಸ್ವ್ಯಾಬ್ ತೆಗೆದು ಪರೀಕ್ಷೆ…
ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಸಂಸ್ಕೃತಿ-2020’ ಕೈಮಗ್ಗ ಮೇಳ
December 30, 2020ಮೈಸೂರು, ಡಿ.29(ಎಂಟಿವೈ)- ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಡಿ.30ರಿಂದ ಜ.12ರವರೆಗೆ ‘ಸಂಸ್ಕೃತಿ-2020’ ಶೀರ್ಷಿಕೆಯಡಿ ಕೈಮಗ್ಗದ ಉತ್ಪನ್ನಗಳ ವಿಶೇಷ ಪ್ರದರ್ಶನ-ಮಾರಾಟ ಮೇಳ ನಡೆಯಲಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಹೆಚ್.ಆರ್.ಮಹದೇವಸ್ವಾಮಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಿ.30ರ ಸಂಜೆ 4ಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೇಳಕ್ಕೆ ಚಾಲನೆ ನೀಡುವರು. ಶಾಸಕ ಜಿ.ಟಿ.ದೇವೇಗೌಡ, ಜಿಪಂ ಅಧ್ಯಕ್ಷೆ ಬಿ.ಸಿ. ಪರಿಮಳಾ ಶ್ಯಾಂ, ಮೇಯರ್ ತಸ್ನೀಂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಈ…
ಲಯನ್ಸ್ ಕ್ಲಬ್ ಸಂಸ್ಥಾಪಕರ ದಿನಾಚರಣೆ
December 30, 2020ಮೈಸೂರು,ಡಿ.29-ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಜಿಲ್ಲೆ 317 ಎ, ಮೈಸೂರಿನ ತಿಲಕ್‍ನಗರದಲ್ಲಿರುವ ಲಯನ್ಸ್ ಕ್ಲಬ್ ಮೈಸೂರಿನ 63ನೇ ಸಂಸ್ಥಾಪಕರ ದಿನಾಚರಣೆ ಹಾಗೂ 2021ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಸಮಾರಂಭ ತಿಲಕ್‍ನಗರದಲ್ಲಿರುವ ಲಯನ್ಸ್ ಭವನದಲ್ಲಿ ನೆರವೇರಿತು. ರಾಜ್ಯಪಾಲರಾದ ಲಯನ್ ಡಾ.ಜಿ.ಎ.ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ ಪ್ರತಿಮಾ ರಮೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಶ್ರೀನಾಥ್, ಜಿಲ್ಲಾ ಸಂಪುಟ ಖಜಾಂಚಿ ಲಯನ್ ನಿತ್ಯಾನಂದ, ಪ್ರಾಂತೀಯ ಅಧ್ಯಕ್ಷ ಲಯನ್ ಜೆ.ಲೋಕೇಶ್, ವಲಯ ಅಧ್ಯಕ್ಷ ಲಯನ್ ಪ್ರತಿಮಾ ರಮೇಶ್, ಕ್ಲಬ್ ಅಧ್ಯಕ್ಷ ಲಯನ್ ಎಂ.ಎಸ್….
ಇನ್ಫೋಸಿಸ್ ಫೌಂಡೇಷನ್‍ನಿಂದ 30 ಕೋಟಿ ವೆಚ್ಚದಲ್ಲಿ ಹೆಬ್ಬಾಳು ಕೆರೆ ಆಗಿದೆ ಸುಂದರ ತಾಣ
December 29, 2020ಮೈಸೂರು, ಡಿ.28(ಪಿಎಂ)- ಹಕ್ಕಿಗಳ ಕಲರವ, ಪ್ರಶಾಂತಮಯ ವಾತಾವರಣ ಈಗ ಹೆಬ್ಬಾಳು ಕೆರೆಯಲ್ಲಿ ಮತ್ತೆ ಮೂಡಿದೆ. ಜೊತೆಗೆ ವಾಕಿಂಗ್ ಹಾಗೂ ಜಾಗಿಂಗ್ ಪಾತ್ ಸೇರಿ ಹಲವು ಆಕರ್ಷಣೆಗಳೊಂ ದಿಗೆ ಅಭಿವೃದ್ಧಿಗೊಂಡು ಜನಾಕರ್ಷ ಣೆಯ ತಾಣವಾಗಿ ಮಾರ್ಪಟ್ಟಿದೆ. ಇನ್ಫೋಸಿಸ್ ಫೌಂಡೇಷನ್ ತನ್ನ ಸಿಎಸ್‍ಆರ್ ನಿಧಿಯ 30 ಕೋಟಿ ರೂ. ವೆಚ್ಚ ದಲ್ಲಿ ಹೆಬ್ಬಾಳು ಕೆರೆಗೆ ಉತ್ತಮ ರೀತಿ ಕಾಯ ಕಲ್ಪ ನೀಡಿದೆ. ಸುಮಾರು 48 ಎಕರೆ ಪ್ರದೇಶ ದಲ್ಲಿರುವ ಹೆಬ್ಬಾಳು ಕೆರೆ ಈಗ ಆಕರ್ಷಕ ವಾಗಿ ವಿನ್ಯಾಸಗೊಂಡಿದೆ. ಕೆರೆ ಏರಿ…
ಅಂತಾರಾಜ್ಯ ಖದೀಮನ ಸೆರೆ; 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
December 29, 2020ಮೈಸೂರು,ಡಿ.28(ಎಸ್‍ಬಿಡಿ)-ಮೈಸೂರಿನ ಸಿಸಿಬಿ ಪೊಲೀಸರು, ಅಂತಾರಾಜ್ಯ ಕಳ್ಳನನ್ನು ಭಾನುವಾರ ಬಂಧಿಸಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ಚೆನ್ನೈನ ಆಲಪಾಕ್ಕಂನ ರಾಜೀವ್‍ಗಾಂಧಿ ನಗರದ ನಿವಾಸಿ ಪ್ರೇಂ ಕುಮಾರ್(29) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸುಮಾರು 9 ಲಕ್ಷ ರೂ. ಮೌಲ್ಯದ 176 ಗ್ರಾಂ ಚಿನ್ನಾಭರಣ, 454 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 25,840 ರೂ, ಯುಎಸ್‍ಎ ರಾಷ್ಟ್ರದ 5 ಡಾಲರ್ಸ್ ಹಾಗೂ ಕಳ್ಳತನದ ಹಣ ದಿಂದ ಖರೀದಿಸಿದ್ದ ಒಂದು ಮೊಬೈಲ್ ಅನ್ನು ಆರೋಪಿಯಿಂದ ವಶಪಡಿಸಿ ಕೊಳ್ಳಲಾಗಿದೆ….
ಇಬ್ಬರು ಖದೀಮರ ಬಂಧನ; 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
December 29, 2020ಮೈಸೂರು,ಡಿ.28(ಎಸ್‍ಬಿಡಿ)- ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಲ್ಲದೆ, ಕಳ್ಳತನ ಮುಂದುವರೆಸಿದ್ದ ಖದೀಮ ಸೇರಿ ಇಬ್ಬರನ್ನು ಮೈಸೂರಿನ ಮಂಡಿ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಹಳೆಯ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷ ದಿಂದ ತಲೆಮರೆಸಿಕೊಂಡಿದ್ದ ಮೈಸೂರಿನ ಅಜೀಜ್‍ಸೇಠ್‍ನಗರದ ಮುಜ್ಜು ಅಹಮ್ಮದ್(35) ಹಾಗೂ ಆತನ ಸಹಚರ ಮುಜಾಮಿಲ್ ಅಹಮ್ಮದ್(40) ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರ ಬಂಧನದೊಂದಿಗೆ ಡಿ.18ರಂದು ಲಷ್ಕರ್ ಮೊಹಲ್ಲಾದ ಮನೆಯೊಂದರ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಪ್ರಕರಣವನ್ನು ಬೇಧಿಸಿದಂತಾಗಿದೆ. ಕಳ್ಳತನ ಪ್ರಕರಣದ ತನಿಖೆ ಸಂದರ್ಭದಲ್ಲಿ…
ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಿ
December 29, 2020ಮೈಸೂರು,ಡಿ.28(ಆರ್‍ಕೆಬಿ)-ರಾಜ್ಯ ದಲ್ಲಿ ಹರಿದು ಹಂಚಿಹೋಗಿರುವ 36 ಕ್ಷತ್ರಿಯ ಪಂಗಡಗಳನ್ನು ಒಂದೇ ವೇದಿಕೆ ಯಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿದೆ. ಈಗ ಕ್ಷತ್ರಿಯರು ನಾವೆಲ್ಲರೂ ಒಂದು ಎಂಬ ಕೂಗೆದ್ದಿದೆ. ಮುಖ್ಯಮಂತ್ರಿ ವೀರಶೈವ ಅಭಿವೃದ್ಧಿ ನಿಗಮ ರಚಿಸಿದ ರೀತಿಯಲ್ಲಿಯೇ ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾ ಧ್ಯಕ್ಷ ಉದಯ್‍ಸಿಂಗ್ ಆಗ್ರಹಿಸಿದರು. ಮೈಸೂರಿನ ಪಾಂಡುರಂಗ ವಿಠಲ ದೇವ ಸ್ಥಾನದ ರಾಮಮಂದಿರದಲ್ಲಿ ಭಾನುವಾರ ಕ್ಷತ್ರಿಯ ಸಮುದಾಯದ ಕೊರೊನಾ ವಾರಿ ಯರ್ಸ್‍ಗಳಿಗೆ ಸನ್ಮಾನ…
ರಂಗಾಯಣದಲ್ಲಿ ಡಿ.31ರಂದು `ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಬಿಡುಗಡೆ
December 29, 2020ಮೈಸೂರು,ಡಿ.28(ಆರ್‍ಕೆಬಿ)- ರಂಗಾ ಯಣ ನಿರ್ದೇಶಕರಾಗಿ ಒಂದು ವರ್ಷ ಪೂರೈಸಿದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ಒಂದು ವರ್ಷದ ಅವಧಿ ಯಲ್ಲಿ ಕೋವಿಡ್-19 ಲಾಕ್‍ಡೌನ್ ಆದಾ ಗಿನಿಂದಲೂ ಕಠಿಣ ಸನ್ನಿವೇಶಗಳ ನಡು ವೆಯೂ ರಂಗಾಯಣವನ್ನು ಚಟುವಟಿಕೆಯ ಕೇಂದ್ರವಾಗಿ ಪರಿವರ್ತಿಸಿದ ಕುರಿತಂತೆ `ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಡಿ.31ರಂದು ಬಿಡುಗಡೆಯಾಗಲಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸೋಮವಾರ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ರಂಗಭೂಮಿ ಕಲಾವಿದರು, ಕಲಾತಂಡ ಗಳು ಆತಂಕಗೊಂಡು ಕುಳಿತಿದ್ದಾಗ…










