`ಯಕ್ಷಗಾನ ನಾಟ್ಯ ತರಗತಿ’ ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿ ಸದಸ್ಯ ದಿವಾಕರ್ ಹೆಗಡೆ ಸಲಹೆ ಮೈಸೂರು,ಡಿ.27(ವೈಡಿಎಸ್)-ಯಕ್ಷಗಾನ ಕೇವಲ ಪ್ರದರ್ಶನಕ್ಕೆ ಸೀಮಿತವಾಗದೇ ಅದ ರಲ್ಲಿರುವ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ಯಕ್ಷಗಾನ ಅಕಾ ಡೆಮಿ ಸದಸ್ಯ ದಿವಾಕರ್ ಹೆಗಡೆ ಹೇಳಿದರು. ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಕರಾವಳಿ ಯಕ್ಷಗಾನ ಕೇಂದ್ರ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಯಕ್ಷಗಾನ ನಾಟ್ಯ ತರಗತಿ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಯಕ್ಷ ಗಾನದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕೆಲಸವನ್ನು ಮೈಸೂರಿನ ಕರಾವಳಿ ಯಕ್ಷಗಾನ ಕೇಂದ್ರ ಮಾಡಿಕೊಂಡು…
ಬ್ರಿಟಿಷರಿಗೆ ಸಹಕರಿಸಿದವರೇ ದೇಶದ ಇತಿಹಾಸದಲ್ಲಿ ಹೀರೋಗಳಾಗಿದ್ದಾರೆ
December 27, 2020ಮೈಸೂರು, ಡಿ.26(ಎಸ್‍ಬಿಡಿ)- ತಮಿಳು ನಾಡು ಇತಿಹಾಸದಲ್ಲಿ ಬ್ರಿಟಿಷರಿಗೆ ಸಹಕರಿಸಿ ದವರನ್ನೇ ನಾಯಕರಂತೆ ಬಿಂಬಿಸಲಾಗಿದೆ. ಆದರೆ ಮೈಸೂರಿನ ವಕೀಲರಾದ ಓ.ಶಾಮ ಭಟ್ ಅವರು `ಬೆಂಕಿಯ ಚೆಂಡು ಕುಯಿಲಿ’ ಪುಸ್ತಕದ ಮೂಲಕ ನೈಜ ಇತಿಹಾಸವನ್ನು ದೇಶಕ್ಕೆ ಅರ್ಪಿಸುವ ಕೆಲಸ ಮಾಡಿ ದ್ದಾರೆಂದು ನಿವೃತ್ತ ಐಪಿಎಸ್ ಅಧಿಕಾರಿ, ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಬಣ್ಣಿಸಿದರು. ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಶ್ರೀ ಚಾಮುಂಡೇಶ್ವರಿ ಗೆಳೆಯರ ಪ್ರಗತಿಪರ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗ ರದ ಶಾರದಾವಿಲಾಸ ಕಾಲೇಜು ಶತಮಾ ನೋತ್ಸವ ಭವನದಲ್ಲಿ…
ಬ್ರಿಟನ್‍ನಿಂದ ಬಂದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ರೂಪಾಂತರ ಸೋಂಕು ಪತ್ತೆಗಾಗಿ ನಿಮ್ಹಾನ್ಸ್ ಲ್ಯಾಬ್‍ಗೆ ಸ್ಯಾಂಪಲ್
December 27, 2020ಸೋಮವಾರದ ವೇಳೆಗೆ ಈ ವರದಿ ಬರುವ ಸಾಧ್ಯತೆ ಇದೆ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ಮೈಸೂರು, ಡಿ.26(ಪಿಎಂ)- ಬ್ರಿಟನ್‍ನಿಂದ ಮೈಸೂರಿಗೆ ಬಂದವರ ಪೈಕಿ ಒಬ್ಬರಲ್ಲಿ ಕೋವಿಡ್ ಪತ್ತೆಯಾಗಿದೆ. ಇವರಲ್ಲಿ ರೂಪಾಂತರ ವೈರಾಣು ಇದೆಯೇ? ಅಥವಾ ಇಲ್ಲವೋ ಎಂದು ಪತ್ತೆಹಚ್ಚಲು ಮಾದರಿ ಯನ್ನು ಜೀನೋಮಿಕ್ ಸೀಕ್ವೆನ್ಸಿಕ್ ಪರೀಕ್ಷೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿರುವ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ವೈರಾಲಜಿ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಮೈಸೂರು ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಪರಿಶೀಲನೆ ಹಿನ್ನೆಲೆಯಲ್ಲಿ…
ಸೊಸೆಯನ್ನು ಮಗಳಂತೆ ಕಾಣಿ: ಅತ್ತೆ-ಮಾವಂದರಿಗೆ ಡಿಸಿಪಿ ಕಿವಿಮಾತು
December 27, 2020ಮೈಸೂರು, ಡಿ.26(ಎಸ್‍ಪಿಎನ್)- `ಸೊಸೆ’ಯನ್ನು ಮನೆಯ ಮಗಳಂತೆ ನೋಡುವ ಗುಣವನ್ನು ಎಲ್ಲಾ ಪೋಷಕರು ಬೆಳೆಸಿ ಕೊಳ್ಳಬೇಕು ಎಂದು ನಗರದ ಡಿಸಿಪಿ ಸಿ.ಎನ್.ಪ್ರಕಾಶ್‍ಗೌಡ ಸಲಹೆ ನೀಡಿದರು. ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ದೇವ ರಾಜ ಉಪ ವಿಭಾಗದ ವತಿಯಿಂದ `ಅಪ ರಾಧ ತಡೆ ಮಾಸಾಚರಣೆ’ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ `ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಮತ್ತು ಸಬಲೀ ಕರಣ’ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇದನ್ನು…
ಯುವ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಉತ್ತೇಜಿಸಿದ ಎಂಕೆಎಸ್
December 27, 2020ಮೈಸೂರು, ಡಿ.26(ಎಂಕೆ)- ಕಾಂಗ್ರೆಸ್ 60 ವರ್ಷದಲ್ಲಿ ಮಾಡಿರುವ ಸಾಧನೆಗಳು ಎಂದೆಂದಿಗೂ ಅಜರಾಮರ. ಅಳಿಸಲಾ ಗದ ಶಾಯಿಯ ರೀತಿ ಜನರ ಮನದಲ್ಲಿ ಶಾಶ್ವತವಾಗಿ ಉಳಿದಿವೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು. ಮೈಸೂರಿನ ಕುವೆಂಪು ನಗರದಲ್ಲಿರುವ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಯುವ ಕಾಂಗ್ರೆಸ್‍ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯುವ ಕಾಂಗ್ರೆಸ್ ಘಟಕವು ಪಕ್ಷದ ಭವಿಷ್ಯದ ಆಸ್ತಿ. ಪಕ್ಷವೂ ಯುವ ಕಾಂಗ್ರೆಸ್‍ಗೆ ವಿಶೇಷ ಆದ್ಯತೆ ಮತ್ತು ಗೌರವ ನೀಡುತ್ತಿದೆ ಎಂದರು. ಯುವಕರಿಗೆ ಸಾಧನೆ ಮಾಡುವ ಶಕ್ತಿ…
ನ್ಯಾಯಾಲಯದ ತೀರ್ಪುಗಳು ಸಮಾಜದಲ್ಲಿ ಚಿಂತನೆ ಹುಟ್ಟು ಹಾಕಬೇಕು
December 27, 2020ಮೈಸೂರು,ಡಿ.26(ಪಿಎಂ)-ನ್ಯಾಯಾ ಲಯದ ತೀರ್ಪುಗಳು ಕೇವಲ ಕಾಗದ ದಲ್ಲಿ ಉಳಿಯದೇ ಜನಸಾಮಾನ್ಯರಲ್ಲಿ ಚಿಂತನೆ ಹುಟ್ಟು ಹಾಕುವಂತಿರಬೇಕು. ಜೊತೆಗೆ ಅಧ್ಯಯನಶೀಲರಾಗಿ ಜ್ಞಾನ ಸಂಪಾದಿಸದ ಹೊರತು ವಕೀಲ ವೃತ್ತಿಯಲ್ಲಿ ಸಮರ್ಥ ವಾದ ಮಂಡಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅಭಿಪ್ರಾಯಪಟ್ಟರು. ಮೈಸೂರಿನ ನ್ಯಾಯಾಲಯದ ಆವರಣ ದಲ್ಲಿರುವ ಮೈಸೂರು ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ಸಂಘ ಮತ್ತು ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಜಂಟಿ ಆಶ್ರಯದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ 2021ನೇ ಸಾಲಿನ ಡೈರಿ ಬಿಡುಗಡೆ ಸಮಾರಂಭ…
ಗ್ರಾಮ ಸಮರದಲ್ಲಿ ವಾಮಾಚಾರದ ಮೊರೆ ಹೋದ ಅಭ್ಯರ್ಥಿಗಳು!!
December 27, 2020ಮೈಸೂರು, ಡಿ.26-ಪ್ರತಿಷ್ಠೆಯ ಕಣವಾಗಿ ಮಾರ್ಪ ಟ್ಟಿರುವ ಎರಡನೇ ಹಂತದ ಚುನಾವಣೆಗೆ ತೆರೆಮರೆ ಯಲ್ಲಿನ ಓಲೈಕೆಯ ಕಸರತ್ತು ನಡೆದಿದೆ. ಶತಾ ಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕೆಲ ಅಭ್ಯರ್ಥಿಗಳು ವಾಮಾಚಾರದ ಮೊರೆ ಹೋಗಿ, ಕಣ್ಕಪ್ಪಿನ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಲೋಕಸಭೆ, ವಿಧಾನಸಭೆಗೆ ನಡೆಯುವ ಚುನಾ ವಣೆಯನ್ನೂ ಗ್ರಾಮ ಪಂಚಾಯಿತಿ ಚುನಾವಣೆ ಮೀರಿಸಿದೆ. ರಾಜಕೀಯ ಪಕ್ಷಗಳ ನೇರ ಪಾಲ್ಗೊಳ್ಳು ವಿಕೆ ಇಲ್ಲದೇ ಇದ್ದರೂ, ಗ್ರಾಮ ಸಮರಕ್ಕೆ ಮಿತಿ ಮೀರಿದ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳ ಭಾಗ ವಹಿಸುವಿಕೆ ಇದ್ದಂತಿದೆ….
ತಾಲೂಕು ಪತ್ರಕರ್ತರ ಸಂಘಗಳಿಗೆ ಬಿಸಿ ನೀರು ಯಂತ್ರದ ಕೊಡುಗೆ
December 27, 2020ಮೈಸೂರು, ಡಿ.26(ಎಂಟಿವೈ)- ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳ ಪತ್ರಕರ್ತರ ಸಂಘಗಳಿಗೆ ಬಿಸಿ ನೀರು ಯಂತ್ರವನ್ನು ಬನ್ನೂರಿನ ಸಮಾಜ ಸೇವಕ ಮಹೇಂದ್ರಸಿಂಗ್ ಕಾಳಪ್ಪ ಕೊಡುಗೆಯಾಗಿ ನೀಡಿದರು. ಮಹೇಂದ್ರ ಸಿಂಗ್ ಕಾಳಪ್ಪ ಅವರು ಒದಗಿ ಸಿದ ಬಿಸಿ ನೀರು, ತಣ್ಣೀರು ಒದ ಗಿಸುವ ಹಾಗೂ ರೆಫ್ರಿಜರೇಟರ್ ಸೌಲಭ್ಯವುಳ್ಳ 6 ಉಪಕರಣಗಳನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅವರು ಸ್ವೀಕರಿಸಿದರು. ಬಳಿಕ ಜಿಲ್ಲೆಯ 6 ತಾಲೂಕುಗಳ ಪತ್ರಕರ್ತರ ಸಂಘಗಳ ಪದಾ ಧಿಕಾರಿಗಳಿಗೆ ಹಸ್ತಾಂತರಿಸಿದರು….
ಮೈಸೂರು ಜಿಲ್ಲೆ; 62 ಮಂದಿಗೆ ಸೋಂಕು, 53 ಮಂದಿ ಗುಣಮುಖ
December 27, 2020ಮೈಸೂರು, ಡಿ.26(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಶನಿವಾರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 62 ಮಂದಿಗೆ ಸೋಂಕು ತಗುಲಿದ್ದು, 53 ಮಂದಿಗೆ ಗುಣವಾಗಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲ. ಈವರೆಗೆ 52,186 ಮಂದಿಗೆ ಸೋಂಕು ತಗುಲಿದಂತಾಗಿದ್ದು, ಒಟ್ಟು 50,630 ಮಂದಿ ಗುಣ ಕಂಡಿದ್ದಾರೆ. ಈವರೆಗೆ 1,008 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 548 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ರಾಜ್ಯದಲ್ಲಿ ಶನಿವಾರ ಹೊಸದಾಗಿ 857 ಮಂದಿಗೆ ಸೋಂಕು ದೃಢಪಟ್ಟಿದೆ. 946 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ. ಸೋಂಕಿತರ ಸಂಖ್ಯೆ 9,15,345ಕ್ಕೆ ಏರಿದೆ. 8,89,881…
ಮೈಸೂರಿನ ಯುವಜನೋತ್ಸವದಲ್ಲಿ ಸಾಂಸ್ಕøತಿಕ ಕಲರವ
December 25, 2020ಮೈಸೂರು,ಡಿ.24(ಎಂಟಿವೈ)- ಕೊರೊನಾ ಹಿನ್ನೆಲೆ ಎಲ್ಲಾ ಚಟುವಟಿಕೆಗಳನ್ನು ಸ್ತಬ್ಧ ಗೊಳಿಸಿ ಮಂಕಾಗಿದ್ದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಯುವಜನೋತ್ಸವದಲ್ಲಿ ವಿವಿಧ ಪ್ರಕಾರ ಗಳ ಕಲಾವೈಭವ ಕ್ರೀಡಾಂಗಣವನ್ನು ಕಳೆ ಗಟ್ಟಿಸಿತ್ತು. ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಯುವ ಕಲಾವಿದರು ತಮ್ಮ ಪ್ರತಿಭೆ ಅನಾ ವರಣಗೊಳಿಸಿ ಗಮನ ಸೆಳೆದರು. ಸ್ವಾಮಿ ವಿವೇಕಾನಂದರ ಜನ್ಮದಿನ ಹಿನ್ನೆಲೆ ಯಲ್ಲಿ ದೆಹಲಿಯಲ್ಲಿ 2021ರ ಜ.12ರಿಂದ 18ರವರೆಗೆ ನಡೆಯಲಿರುವ `ರಾಷ್ಟ್ರೀಯ ಯುವ ಜನ ಸಪ್ತಾಹ’ ಕಾರ್ಯಕ್ರಮದಲ್ಲಿ ರಾಜ್ಯ ವನ್ನು ಪ್ರತಿನಿಧಿಸಬೇಕಾದ ಯುವ…










