ಮೈಸೂರು,ಸೆ.30(ಆರ್‍ಕೆ)-ರೈಸ್ ಪುಲ್ಲಿಂಗ್ ಮೂಲಕ ಲಕ್ಷಾಂತರ ರೂ. ವಸೂಲಿ ಮಾಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಾಲ್ವರನ್ನು ಮೈಸೂರಿನ ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನ್ನೈ ನಗರದ ಎಂ.ಜಿ.ಚಂದ್ರ ಮೋಹನ್ (57), ಕೇರಳದ ಮಲಪುರಂ ನಿವಾಸಿ ಟಿ.ವಿ.ಇಬ್ರಾಹಿಂ (50), ಬೆಂಗಳೂರಿನ ಕೆ.ಆರ್. ಗಿರಿನಾದನ್ (49) ಹಾಗೂ ಎಂ.ಗೋಪಿ(40) ಬಂಧಿತ ಆರೋಪಿಗಳಾಗಿದ್ದು, ಅವರಿಂದ ರೈಸ್‍ಪುಲ್ಲಿಂಗ್‍ಗೆ ಬಳಸುತ್ತಿದ್ದ ಪರಿಕರಗಳನ್ನು ಪೊಲೀಸರು ವಶಪಡಿ ಸಿಕೊಂಡಿದ್ದಾರೆ. ಬಾತ್ಮಿದಾರರು ನೀಡಿದ ಖಚಿತ ಮಾಹಿತಿಯನ್ನು ಆದರಿಸಿ ಬೆನ್ನತ್ತಿದ ಇನ್ಸ್‍ಸ್ಪೆಕ್ಟರ್ ಪ್ರಸನ್ನ ಹಾಗೂ ಸಿಬ್ಬಂದಿ, ಸೆಪ್ಟೆಂಬರ್ 26ರಂದು ಧನ್ವಂತರಿ ರಸ್ತೆಯ…
ಶಾಲಾ-ಕಾಲೇಜು ಆರಂಭ ಇನ್ನೂ ನಿರ್ಧರಿಸಿಲ್ಲ
September 30, 2020ಬೆಂಗಳೂರು, ಸೆ.29(ಕೆಎಂಶಿ)- ಶಾಲಾ ಕಾಲೇಜುಗಳ ಪುನರಾರಂಭ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಾಲಾ ಕಾಲೇಜು ಆರಂಭ ಗೊಂದಲಕ್ಕೆ ಟ್ವೀಟ್ ಮಾಡಿ, ತೆರೆ ಎಳೆದಿರುವ ಅವರು, ಸದ್ಯಕ್ಕೆ ಶಾಲಾ ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ. ಶಾಲಾ ಕಾಲೇಜುಗಳನ್ನು ಸೆ.22ರಿಂದ ತೆರೆಯಲು ಕೇಂದ್ರ ಅನುಮತಿ ನೀಡಿತ್ತು. ನಾವು ಶಾಲಾ ಕಾಲೇಜು ಪುನ ರಾರಂಭಿಸಿದ್ದೇವೆ. ಆದರೆ ತರಗತಿಗಳನ್ನು ಪ್ರಾರಂಭಿಸಿಲ್ಲ. ಶಾಲೆಗಳಲ್ಲಿ ಪಾಠ ಪ್ರವಚನ ಪ್ರಾರಂಭಿಸುವ…
ಅ.2ರಂದು ಮುಖ್ಯಮಂತ್ರಿ ಮಹತ್ವದ ದೆಹಲಿ ಭೇಟಿ
September 30, 2020ಬೆಂಗಳೂರು, ಸೆ.29 (ಕೆಎಂಶಿ)- ಬಿಜೆಪಿ ವರಿಷ್ಠರ ಕರೆಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅ.2ರಂದು ದೆಹಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ರಾಜ್ಯದ ರಾಜ ಕೀಯ, ಆಡಳಿತ ಹಾಗೂ ಕೊರೊನಾ ಸೋಂಕು ನಿಯಂತ್ರಣ ಮತ್ತು ಸರ್ಕಾ ರದ ವಿರುದ್ಧ ಕೇಳಿ ಬಂದಿರುವ ಆರೋಪ ಗಳಿಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಯವರಿಂದ ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ನಿನ್ನೆ ಮುಖ್ಯಮಂತ್ರಿಯವ ರನ್ನು ಸಂಪರ್ಕಿಸಿ, ದೆಹಲಿಗೆ ಬರುವಂತೆ ಆಹ್ವಾನ…
ರಾಜರಾಜೇಶ್ವರಿನಗರ, ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನ.3ರಂದು ಉಪಚುನಾವಣೆ
September 30, 2020ಬೆಂಗಳೂರು, ಸೆ.29(ಕೆಎಂಶಿ)-ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನ.3ರಂದು ಉಪಚುನಾವಣೆ ನಡೆಯಲಿದೆ. ಕೇಂದ್ರ ಚುನಾ ವಣಾ ಆಯೋಗ ಇಡೀ ರಾಷ್ಟ್ರ ದಲ್ಲಿ ತೆರವುಗೊಂಡಿರುವ ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮಸ್ಕಿ ಚುನಾವಣಾ ತಕರಾರು ನಿನ್ನೆಯಷ್ಟೇ ನ್ಯಾಯಾಲಯ ದಲ್ಲಿ ಇತ್ಯರ್ಥವಾಗಿದೆ. ಇನ್ನು ಬಸವಕಲ್ಯಾಣದ ಹಾಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಕಳೆದ ವಾg Àವಷ್ಟೇ ನಿಧನರಾದರು. ಈ ಕ್ಷೇತ್ರಗಳಿಗೆ ಮುಂದಿನ…
ಮೈಸೂರು ಡಿಡಿಪಿಐ, ಕಚೇರಿ 4 ಸಿಬ್ಬಂದಿ, 25 ಶಿಕ್ಷಕರಿಗೂ ಸೋಂಕು
September 30, 2020ಮೈಸೂರು, ಸೆ.29(ಎಸ್‍ಪಿಎನ್)- ಮೈಸೂರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ) ಮತ್ತು ಕಚೇರಿಯ ನಾಲ್ವರು ಗುಮಾಸ್ತರು ಹಾಗೂ 25ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಶಿಕ್ಷಕ ಸಮೂಹದಲ್ಲಿ ತೀವ್ರ ಆತಂಕಕ್ಕೆ ಕಾರಣ ವಾಗಿದೆ. ಮೈಸೂರು ನಗರದ ಉತ್ತರ, ದಕ್ಷಿಣ ಹಾಗೂ ತಾಲೂಕಿನ 500ಕ್ಕೂ ಹೆಚ್ಚು ಶಿಕ್ಷಕರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, 25 ಶಿಕ್ಷಕರಿಗೆ ಸೋಂಕು ಇರುವುದು ಕಂಡುಬಂದಿದೆ ಎಂದು ಮೈಸೂರು ಜಿಲ್ಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯ…
ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ
September 30, 2020ದಸರಾ ಆಚರಣೆ ಈಗ ನಮ್ಮ ಮುಂದಿರುವ ಸವಾಲು ಮೈಸೂರು,ಸೆ.29(ಆರ್‍ಕೆ)-ಮೈಸೂರಿನ ನೂತನ ಜಿಲ್ಲಾಧಿಕಾರಿ ಯಾಗಿ ರೋಹಿಣಿ ಸಿಂಧೂರಿ ದಾಸರಿ ಮಂಗಳವಾರ ಬೆಳಗ್ಗೆ ಅಧಿಕಾರ ವಹಿಸಿಕೊಂಡರು. ಸೋಮವಾರ ಸಂಜೆಯಷ್ಟೇ ಸರ್ಕಾರ ಧಾರ್ಮಿಕ ಮತ್ತು ಚಾರಿಟೆಬಲ್ ಎಂಡೋಮೆಂಟ್ಸ್ ಆಯುಕ್ತರಾಗಿದ್ದ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿತ್ತು. ಅವರು ಮೈಸೂರು ಡಿಸಿ ಕಚೇರಿಯಲ್ಲಿ ದಾಖಲಾತಿಗಳಿಗೆ ಸಹಿ ಮಾಡುವ ಮೂಲಕ ಅಧಿಕಾರ ವಹಿಸಿಕೊಂಡರು. ಬೆಳಗ್ಗೆ 11.15 ಗಂಟೆಗೆ ಆಗಮಿಸಿದ ರೋಹಿಣಿ ಸಿಂಧೂರಿ ಅವ ರನ್ನು ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಉಪವಿಭಾಗಾ ಧಿಕಾರಿ ವೆಂಕಟರಾಜು,…
ಗುರುತಿನ ಪುರಾವೆ ಕೇಳದೆ ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ಪೂರೈಸಿ ರಾಜ್ಯಗಳಿಗೆ ‘ಸುಪ್ರೀಂ’ ನಿರ್ದೇಶನ
September 30, 2020ನವದೆಹಲಿ, ಸೆ.29-ರಾಷ್ಟ್ರೀಯ ಏಯ್ಡ್ಸ್ ನಿಯಂತ್ರಣ ಸಂಸ್ಥೆ ಮತ್ತು ಕಾನೂನು ಸೇವಾ ಪ್ರಾಧಿಕಾರಿಗಳಿಂದ ಗುರುತಿಸಲ್ಪಟ್ಟ ಲೈಂಗಿಕ ಕಾರ್ಯಕರ್ತೆಯ ರಿಗೆ ಗುರುತಿನ ಪುರಾವೆಗೆ ಒತ್ತಾಯಿಸದೆ ಒಣ ಪಡಿತರವನ್ನು ಪೂರೈಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿ ಸಿದೆ. ಈ ಅವಧಿಯಲ್ಲಿ ಒಣ ಪಡಿತರವನ್ನು ವಿತರಿಸಿದ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆಯ ವಿವರದ ಬಗ್ಗೆ ಅನುಸರಣಾ ವರದಿಯೊಂದನ್ನು ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಲೈಂಗಿಕ ಕಾರ್ಯ ಕರ್ತೆಯರಿಗೆ ಹಣಕಾಸಿನ ನೆರವು ನೀಡಬಹುದೇ ಎಂಬ ಅಂಶದ ಬಗ್ಗೆ…
15 ದಿನದೊಳಗೆ ಶಿರಾ ಉಪ ಚುನಾವಣಾ ಅಭ್ಯರ್ಥಿ ಘೋಷಣೆ
September 30, 2020ಬೆಳಗಾವಿ, ಸೆ. 29- ಹತ್ತರಿಂದ ಹದಿನೈದು ದಿನಗಳಲ್ಲಿ ಶಿರಾ ಉಪ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣಾ ಕೆಲಸ ಈಗಾಗಲೇ ಆರಂಭವಾಗಿದೆ. ಪಕ್ಷ ಹಾಗೂ ಚುನಾವಣಾ ಸಂಘಟನಾತ್ಮಕ ದೃಷ್ಟಿ ಯಿಂದ ಸಾಕಷ್ಟು ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಶಿರಾದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ವಾತಾವರಣ ಕಂಡು ಬರುತ್ತಿದ್ದು, ಮುಂದಿನ…
ಮುನಿರತ್ನಗೆ ಬಿಜೆಪಿ ಟಿಕೆಟ್
September 30, 2020ಬೆಂಗಳೂರು, ಸೆ.29- ಪಕ್ಷದ ಭರವಸೆಯಂತೆ ಮುನಿರತ್ನ ಅವರಿಗೇ ಟಿಕೆಟ್ ಸಿಗುವ ವಿಶ್ವಾಸವಿದ್ದು, ಯಾವುದೇ ಪ್ರತಿರೋಧ ವಿಲ್ಲದೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿ ದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾ ಕರ್ ಹೇಳಿದರು. ಅಧಿಕೃತ ನಿವಾಸದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರು ಶಾಸಕ ಸ್ಥಾನ ತ್ಯಜಿಸಿ ಸರಕಾರ ರಚನೆಗಾಗಿ ಕೊಡುಗೆ ನೀಡಿದ್ದಾರೆ. ಆ ವೇಳೆ ನೀಡಿದ ಭರವಸೆಯಂತೆ ಹಿರಿಯ ನಾಯಕರು ಖಂಡಿತ ನ್ಯಾಯಯುತವಾದ ತೀರ್ಮಾನ ಕೊq ತ್ತಾರೆ ಎಂಬ ವಿಶ್ವಾಸವಿದೆ. ಉಪಚುನಾವಣೆಯಲ್ಲಿ ಗೆದ್ದ ನಮ್ಮೆಲ್ಲರಿಗೂ ಭರವಸೆಯಂತೆ…
56 ವಿಧಾನಸಭಾ, 1 ಲೋಕಸಭಾ ಕ್ಷೇತ್ರಗಳಿಗೆ ನವಂಬರ್ 3, 7ರಂದು ಉಪಚುನಾವಣೆ: ಚುನಾವಣಾ ಆಯೋಗ
September 30, 2020ನವದೆಹಲಿ, ಸೆ. 29- ಕರ್ನಾಟಕ, ತೆಲಂಗಾಣವೂ ಸೇರಿದಂತೆ 11 ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಬಿಹಾರ ಲೋಕಸಭಾ ಕ್ಷೇತ್ರ ಹಾಗೂ ಮಣಿಪುರದ 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನ.7 ಕ್ಕೆ ನಿಗದಿಯಾಗಿದ್ದರೆ. ಉಳಿದ ಉಪಚುನಾವಣೆಗಳು ನ. 3ಕ್ಕೆ ನಡೆಯಲಿವೆ. ಮತ ಎಣಿಕೆ ಪ್ರಕ್ರಿಯೆ ನ. 10ಕ್ಕೆ ನಡೆಯಲಿವೆ. ಚತ್ತೀಸ್‍ಗಢ, ಗುಜರಾತ್, ಜಾರ್ಖಂಡ್, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ನಾಗಲ್ಯಾಂಡ್, ಒಡಿಶಾ, ತೆಲಂಗಾಣ ಹಾಗೂ…










