ಮೈಸೂರು

ಬಿ.ಶರತ್ ವರ್ಗಾವಣೆ ಹಿಂದೆ ಭಾರೀ ಲಾಬಿ
ಮೈಸೂರು

ಬಿ.ಶರತ್ ವರ್ಗಾವಣೆ ಹಿಂದೆ ಭಾರೀ ಲಾಬಿ

September 30, 2020

ಮೈಸೂರು, ಸೆ.29(ಆರ್‍ಕೆಬಿ)- ಜಿಲ್ಲಾ ಧಿಕಾರಿ ಬಿ.ಶರತ್ ಅವರನ್ನು ಅಧಿಕಾರ ವಹಿಸಿಕೊಂಡ ಕೇವಲ 29 ದಿನಗಳಲ್ಲಿ ವರ್ಗಾಯಿಸಿ ಪರಿಶಿಷ್ಟ ಜಾತಿಯ ಜಿಲ್ಲಾ ಧಿಕಾರಿಗೆ ರಾಜ್ಯ ಸರ್ಕಾರ ಅವಮಾನ ಮಾಡಿದೆ ಎಂದು ಕೆ.ಆರ್. ನಗರ ಶಾಸಕ ಸಾ.ರಾ.ಮಹೇಶ್ ಆಕ್ಷೇಪಿಸಿದರು. ಮೈಸೂರಿನ ರಮಾವಿಲಾಸ ರಸ್ತೆಯಲ್ಲಿ ರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ಆಂಧ್ರಪ್ರದೇಶ ಮೂಲದÀ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲಾಧಿ ಕಾರಿಯಾಗಿ ಇಲ್ಲಿಗೆ ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಕನ್ನಡದ ಐಎಎಸ್ ಅಧಿಕಾರಿಯನ್ನು ಕಡೆಗಣಿಸಿದೆ. ಆ ಮೂಲಕ ಕನ್ನಡಿಗರಿಗೆ,…

ಕೊರೊನಾ ಸೋಂಕು ನಿಯಂತ್ರಣದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರ
ಮೈಸೂರು

ಕೊರೊನಾ ಸೋಂಕು ನಿಯಂತ್ರಣದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರ

September 30, 2020

ಮೈಸೂರು, ಸೆ.29(ಪಿಎಂ)- ಇಡೀ ಪ್ರಪಂಚವನ್ನೇ ಕಾಡುತ್ತಿರುವ ಕೊರೊನಾ ಸೋಂಕು ತೊಡೆಯುವಲ್ಲಿ ವೈದ್ಯಕೀಯ ಕ್ಷೇತ್ರದೊಂದಿಗೆ ಆಶಾ ಹಾಗೂ ಅಂಗನ ವಾಡಿ ಕಾರ್ಯಕರ್ತೆಯರು ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಮೈಸೂರಿನ ವಿಜಯನಗರದ 2ನೇ ಹಂತ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿ ಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ನಿಯಂತ್ರಣ ದಲ್ಲಿ ಮುಂಚೂಣಿಯಲ್ಲಿ ದುಡಿಯುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ…

ನಕಲಿ ಪ್ರಶಸ್ತಿಗಳಿಗೆ ಕಡಿವಾಣ ಅಗತ್ಯ
ಮೈಸೂರು

ನಕಲಿ ಪ್ರಶಸ್ತಿಗಳಿಗೆ ಕಡಿವಾಣ ಅಗತ್ಯ

September 30, 2020

ಮೈಸೂರು, ಸೆ.29(ಆರ್‍ಕೆಬಿ)- ಇಂದು ಲಾಬಿ ಮಾಡಿದವರಿಗೆಲ್ಲ ಸಾಹಿತ್ಯ ಪ್ರಶಸ್ತಿ ಎಂಬಂತಾಗಿದೆ. ಪ್ರಶಸ್ತಿ ಕೊಡುವವರು, ತೆಗೆದುಕೊಳ್ಳುವವರ ಹಿನ್ನೆಲೆ ನೋಡಿದರೆ ನಾಚಿಕೆಯಾಗುತ್ತದೆ. ಸರ್ಕಾರ ಇಂಥ ನಕಲಿ ಪ್ರಶಸ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಸಾಹಿತಿ ಬನ್ನೂರು ಕೆ.ರಾಜು ಒತ್ತಾಯಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳವಾರ ಡಿ.ಪಿ.ಚಿಕ್ಕಣ್ಣ ಅವರ `ಕವ ಲೊಡೆದ ಕರುಳಬಳ್ಳಿ’ ಮತ್ತು `ಓದೊಂದು ಒಲವಿನ ಸ್ಫೂರ್ತಿ’ ಕಾದಂಬರಿ ಬಿಡುಗಡೆ ಮಾಡಿದ ಅವರು, ಸಾಹಿತ್ಯ ಮತ್ತು ಪುಸ್ತಕೋದ್ಯಮ ಪೂರ್ಣ ಕಲುಷಿತ ಗೊಂಡಿದೆ. ಚಿಕ್ಕಣ್ಣ ಕಾದಂಬರಿ ಮೂಲಕ ಸಮಾಜದ ಶುದ್ಧೀಕರಣಕ್ಕೆ ಯತ್ನಿಸಿದ್ದಾರೆ. ಇಂತಹ…

ಮಾನವನಲ್ಲಿರುವ ಚೈತನ್ಯವೇ ದೇವರು
ಮೈಸೂರು

ಮಾನವನಲ್ಲಿರುವ ಚೈತನ್ಯವೇ ದೇವರು

September 30, 2020

ಮೈಸೂರು,ಸೆ.29-ಮಾನವನಲ್ಲಿರುವ ಚೈತನ್ಯವೇ ದೇವರು ಎಂದು ಹಾಸ್ಯ ಸಾಹಿತಿ ಇಂದುಮತಿ ಸಾಲಿಮಠ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತ ರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ 18ನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ದೇವರೆಲ್ಲಿ ದ್ದಾನೆ? ವಿಷಯ ಕುರಿತು ಪ್ರವಚನ ನೀಡಿದ ಅವರು ಶರಣರ ವಚನದಲ್ಲಿ ಬರುವ ತನ್ನ ತಾನರಿತು ತಾನಾರೆಂದು ತಿಳಿದರೆ ತಾನೇ ದೇವರು ಎಂಬ ಸಾಲು ಅಕ್ಷರಶಃ ಸತ್ಯ. ಹಾಲಿನಲ್ಲಿ ತುಪ್ಪ ಇರುವಂತೆ, ಗಾಳಿಯಲ್ಲಿ ಗಂಧ ಇರುವಂತೆ, ಹೂವಿನಲ್ಲಿ ಮಕರಂದ ಇರುವಂತೆ ಪ್ರತಿಯೊಬ್ಬರ ಆತ್ಮದಲ್ಲಿಯೂ ದೇವನು ಇರುವನು. ಅಳುವ ಮಗುವಿನ…

ಕೊರೊನಾ ಸಂದರ್ಭ ಹೃದ್ರೋಗ ಸಮಸ್ಯೆ ಪರಿಹಾರಕ್ಕೆ ಮಾಹಿತಿ ಮೂಲಕ 
ಮೈಸೂರು

ಕೊರೊನಾ ಸಂದರ್ಭ ಹೃದ್ರೋಗ ಸಮಸ್ಯೆ ಪರಿಹಾರಕ್ಕೆ ಮಾಹಿತಿ ಮೂಲಕ 

September 30, 2020

ಜೆಎಸ್‍ಎಸ್ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ   ಮೈಸೂರು, ಸೆ.29(ಪಿಎಂ)- ಸಾರ್ವಜನಿಕರಿಗೆ ಹೃದ್ರೋಗ ಮತ್ತು ಕೊರೊನಾ ಸಂದೇಹ ಸಂಬಂಧ ಮಾಹಿತಿ ನೀಡುವ ಮೂಲಕ ಮೈಸೂ ರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ ಆಚರಿಸಲಾಯಿತು. `ಯೂಸ್ ಹಾರ್ಟ್ ಟು ಟ್ರೀಟ್ ಹಾರ್ಟ್ ಡಿಸೀಸ್’ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆಯನ್ನು ಜೆಎಸ್‍ಎಸ್ ಆಸ್ಪತ್ರೆ ನಿರ್ದೇಶಕ ಡಾ.(ಕರ್ನಲ್) ಎಂ.ದಯಾನಂದ ಉದ್ಘಾಟಿಸಿದರು. ಆಸ್ಪತ್ರೆಯ ಹೃದಯ ತಜ್ಞ ಡಾ.ವಿನಯ್‍ಕುಮಾರ್, ಡಾ. ಮಂಜಪ್ಪ ಅವರು ಕೋವಿಡ್-19 ಸಂದರ್ಭದಲ್ಲಿ ಹೃದ್ರೋಗ ಸಮಸ್ಯೆಯ ಪರಿಹಾರಗಳ ಬಗ್ಗೆ ಸಾರ್ವಜನಿಕರ…

ವಿದ್ವಾಂಸ ಡಾ.ಜಿ.ಎಸ್.ಆಮೂರ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ
ಮೈಸೂರು

ವಿದ್ವಾಂಸ ಡಾ.ಜಿ.ಎಸ್.ಆಮೂರ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ

September 30, 2020

ಮೈಸೂರು, ಸೆ. 29- ಕನ್ನಡದ ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸರಾದ ಡಾ.ಜಿ.ಎಸ್.ಆಮೂರ ಅವರ ಅಗಲುವಿಕೆ ನಾಡು, ನುಡಿ ಹಾಗೂ ಸಾಂಸ್ಕøತಿಕ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದಿದ್ದಾರೆ. ಆಮೂರರು ಬಹಳಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ರಾಗಿ ಕಾರ್ಯನಿರ್ವಹಿಸಿದರು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ತೀಕ್ಷ್ಣ ವಿಮರ್ಶಕರಾಗಿ ಬೆಳೆದರು. ಕನ್ನಡದ ಮುಖ್ಯ ಕವಿಗಳಾದ ಬೇಂದ್ರೆ ಮತ್ತು ಕುವೆಂಪುರವರ ಬಗ್ಗೆ ಇವರು ಬರೆದ ವಿಮರ್ಶೆಗಳು ಗಮನಾರ್ಹವಾಗಿವೆ. ವಿಮರ್ಶೆಯಲ್ಲಿ…

ಅ.5, ರಘುರಾಮ ವಾಜಪೇಯಿ ಅವರಿಗೆ ‘ಗಾಂಧಿಸ್ಮøತಿ’ ಪ್ರಶಸ್ತಿ ಪ್ರದಾನ
ಮೈಸೂರು

ಅ.5, ರಘುರಾಮ ವಾಜಪೇಯಿ ಅವರಿಗೆ ‘ಗಾಂಧಿಸ್ಮøತಿ’ ಪ್ರಶಸ್ತಿ ಪ್ರದಾನ

September 30, 2020

ಮೈಸೂರು, ಸೆ. 29- ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಸಮಾ ರೋಪದ ಸಂದರ್ಭದಲ್ಲಿ ಮೈಸೂರಿನ ಗಾಂಧಿವಾದಿ ಡಾ. ಕೆ. ರಘುರಾಮ ವಾಜ ಪೇಯಿರವರಿಗೆ ಬೆಂಗಳೂರಿನ ಅಮರ ಬಾಪು ಚಿಂತನ ಪತ್ರಿಕೆಯ ವತಿಯಿಂದ ಇದೇ ಅಕ್ಟೋಬರ್ 5ರ ಸೋಮವಾರ ಬೆಳಗ್ಗೆ 10.30ಕ್ಕೆ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗಾಂಧಿ ಸ್ಮøತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಗಾಂಧಿ ತತ್ವ ಚಿಂತನೆಗಳ ಪ್ರಸರಣಕ್ಕಾಗಿ ಕಳೆದ 8 ವರ್ಷ ಗಳಿಂದ ದ್ವಿಭಾಷಾ -ದ್ವೈಮಾಸಿಕವಾಗಿ ಹೊರಬರುತ್ತಿರುವ ಅಮರ…

ಕರ್ನಾಟಕ ಬಂದ್ ವೇಳೆ ರಾಜ್ಯದೆಲ್ಲೆಡೆ ರೈತರ ಆಕ್ರೋಶ
ಮೈಸೂರು

ಕರ್ನಾಟಕ ಬಂದ್ ವೇಳೆ ರಾಜ್ಯದೆಲ್ಲೆಡೆ ರೈತರ ಆಕ್ರೋಶ

September 29, 2020

ಬೆಂಗಳೂರು: ರೈತ, ಕಾರ್ಮಿಕ ವಿರೋಧಿ ವಿಧೇಯಕಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತಪರ, ಕಾರ್ಮಿಕ, ದಲಿತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಸಾವಿರಾರು ಮಂದಿ ವಿವಿಧ ಕಡೆಗಳಿಂದ ಮೆರ ವಣಿಗೆ ಮೂಲಕ ಟೌನ್‍ಹಾಲ್ ಬಳಿ ಜಮಾವಣೆಗೊಂಡು ಪ್ರತಿ ಭಟನೆ ನಡೆಸಿದರು. ವಿವಿಧ ಕಲಾವಿದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರು. ರೈತರಿಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೂಡ…

ರೈತ ಕುಟುಂಬದಿಂದ ಬಂದ ನಾನು ಸದಾಕಾಲ ರೈತರ ಪರವಾಗಿಯೇ ಇರುತ್ತೇನೆ
ಮೈಸೂರು

ರೈತ ಕುಟುಂಬದಿಂದ ಬಂದ ನಾನು ಸದಾಕಾಲ ರೈತರ ಪರವಾಗಿಯೇ ಇರುತ್ತೇನೆ

September 29, 2020

ಎಪಿಎಂಸಿಯನ್ನು ಮುಚ್ಚಲ್ಲ:ಸಿಎಂ ಯಡಿಯೂರಪ್ಪ ಭರವಸೆ ಬೆಂಗಳೂರು: ನಾನು ರೈತನ ಪುತ್ರನಾಗಿದ್ದು, ಸದಾಕಾಲ ರೈತರ ಪರವಾಗಿಯೇ ಇರುತ್ತೇನೆ. ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕ ಬಂದ್ ವಿಚಾರ ಸಂಬಂಧ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘಟನೆಗಳು, ಕಾಂಗ್ರೆಸ್‍ನವರ ಪಿತೂರಿಯಿಂದ ಧರಣಿ ನಡೆಯುತ್ತಿದೆ. ರೈತ ಮುಖಂಡರನ್ನು ಕರೆಸಿ ಮಾತಾಡುವ ಪ್ರಯತ್ನ ಮಾಡಿದ್ದೆ. ಈ ಕಾಯ್ದೆಗಳಿಂದ ಆಗುವ ಅನುಕೂಲದ ಬಗ್ಗೆ ವಿವರಿಸಿದ್ದೇನೆ. ಆದರೆ, ಅವರು ಪ್ರತಿಭಟನೆ ಮಾಡುವ…

ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ
ಮೈಸೂರು

ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ

September 29, 2020

ಮೈಸೂರು, ಸೆ.28(ಎಂಟಿವೈ)- ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸುಗ್ರಿ ವಾಜ್ಞೆ ಮೂಲಕ ಜಾರಿಗೊಳಿಸಿರುವ ಕ್ರಮ ಖಂಡಿಸಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ರೈತ, ದಲಿತ, ಕಾರ್ಮಿಕ ಹಾಗೂ ಜನ ವಿರೋಧಿ ನೀತಿ ಅನುಸರಿಸು ತ್ತಿವೆ ಎಂದು ಆರೋಪಿಸಿ ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ `ಕರ್ನಾಟಕ ಬಂದ್’ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. `ಕರ್ನಾಟಕ ಬಂದ್’ಗೆ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐ(ಎಂ), ಸಮತಾ ಸೈನಿಕ ದಳ ಸೇರಿದಂತೆ 30ಕ್ಕೂ…

1 417 418 419 420 421 1,611
Translate »