ಮೈಸೂರು

ಚಾಮುಂಡೇಶ್ವರಿ ದರ್ಶನ ಮಾಡಿದ ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ
ಮೈಸೂರು

ಚಾಮುಂಡೇಶ್ವರಿ ದರ್ಶನ ಮಾಡಿದ ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ

September 30, 2020

ಮೈಸೂರು, ಸೆ.29(ಎಸ್‍ಬಿಡಿ)- ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ ಮಂಗಳವಾರ ಮೈಸೂರಿಗೆ ಆಗಮಿಸಿ, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಉಪಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನನಗೆ ಕೊರೊನಾ ಪಾಸಿಟಿವ್ ಆಗಿತ್ತು. ನಿನ್ನೆ ಮತ್ತೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿದೆ. ಹಾಗಾಗಿ ಇಂದು ದೇವರ ದರ್ಶನಕ್ಕೆ ಬಂದಿದ್ದೇನೆ ಎಂದರು. ರಾಜರಾಜೇಶ್ವರಿನಗರ ಅಭಿವೃದ್ಧಿಯಾಗು ತ್ತಿರುವ ಕ್ಷೇತ್ರ. ನಮ್ಮ ಸರ್ಕಾರ ಇದೆ, ನಮ್ಮ ನಾಯಕರಿದ್ದಾರೆ. ನಮ್ಮ…

ಮೈಸೂರು ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಪ್ರವೇಶ   ಇನ್ನು `ಬಲು ಭಾರ’; ಟಿಕೆಟ್ ದರ 50 ರೂ.ಗೆ ಏರಿಕೆ!
ಮೈಸೂರು

ಮೈಸೂರು ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಪ್ರವೇಶ  ಇನ್ನು `ಬಲು ಭಾರ’; ಟಿಕೆಟ್ ದರ 50 ರೂ.ಗೆ ಏರಿಕೆ!

September 30, 2020

ಮೈಸೂರು, ಸೆ.29(ಆರ್‍ಕೆಬಿ)- ಮೈಸೂರು ರೈಲು ನಿಲ್ದಾ ಣದ ಪ್ಲಾಟ್‍ಫಾರ್ಮ್ ಪ್ರವೇಶ `ಬಲು ಭಾರ’ವಾಗಲಿದೆ. ಪ್ಲಾಟ್‍ಫಾರ್ಮ್ ಟಿಕೆಟ್ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ 50 ರೂ. ಹೆಚ್ಚಿಸಲಾಗಿದೆ. ಇದು ಈ ವರ್ಷಾಂತ್ಯದವರೆಗೂ ಮುಂದುವರಿಯಲಿದೆ. ಕೋವಿಡ್-19 ಹೆಚ್ಚು ವೇಗವಾಗಿ ಹರಡುತ್ತಿರುವು ದರಿಂದ ಪ್ಲಾಟ್‍ಫಾರ್ಮ್‍ನಲ್ಲಿ ಜನದಟ್ಟಣೆ ತಪ್ಪಿಸಬೇಕಿದೆ. ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಂಡೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು ನಿಲ್ದಾಣದಿಂದ ವಿಶೇಷ ರೈಲುಗಳ ಸಂಚರಿ ಸಲಿವೆ. ಕೆಎಸ್‍ಆರ್ ಬೆಂಗಳೂರು-ಮೈಸೂರು-ಕೆಎಸ್‍ಆರ್ ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್‍ಪ್ರೆಸ್ (ಸಂಖ್ಯೆ 06503…

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇಂದು ಮಹತ್ವದ ತೀರ್ಪು
ಮೈಸೂರು

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇಂದು ಮಹತ್ವದ ತೀರ್ಪು

September 30, 2020

ಲಖನೌ, ಸೆ.29- ಶತಮಾನಗಳಷ್ಟು ಹಳೆಯದಾದ ಶ್ರೀ ರಾಮಮಂದಿರದ ದಾವೆ ಇತ್ಯರ್ಥವಾಗಿ ಕೆಲ ತಿಂಗಳು ಕಳೆದಿವೆ. ಈಗ ಬಾಬ್ರಿ ಮಸೀದಿ ಕೇಸ್ ಅಂತಿಮಘಟ್ಟ ತಲುಪಿದ್ದು, ತೀರ್ಪು ನಾಳೆ (ಬುಧವಾರ) ಪ್ರಕಟವಾಗಲಿದೆ. ಇಡೀ ದೇಶದ ಕಣ್ಣು ಲಖನೌ ದತ್ತ ನೆಟ್ಟಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಇದಾಗಲೇ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶ ಸೇರಿದಂತೆ ಎಲ್ಲೆಡೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ ಎನ್ನಲಾಗಿದೆ. 27 ವರ್ಷ ಗಳಷ್ಟು ಹಳೆಯದಾದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇದಾಗಿದ್ದು, ಉತ್ತರ ಪ್ರದೇಶದ ಲಖನೌನ ಸಿಬಿಐ ವಿಶೇಷ…

ಮೈಸೂರು ಕುಂಬಾರಕೊಪ್ಪಲು ಮುಖ್ಯ ರಸ್ತೆಗೆ ಅಭಿವೃದ್ಧಿ ಭಾಗ್ಯ
ಮೈಸೂರು

ಮೈಸೂರು ಕುಂಬಾರಕೊಪ್ಪಲು ಮುಖ್ಯ ರಸ್ತೆಗೆ ಅಭಿವೃದ್ಧಿ ಭಾಗ್ಯ

September 30, 2020

ಮೈಸೂರು, ಸೆ.29(ಎಸ್‍ಬಿಡಿ)- ಮೈಸೂರಿನ ಕುಂಬಾರಕೊಪ್ಪಲು ಮುಖ್ಯರಸ್ತೆಗೆ ಅಂತೂ ಅಭಿವೃದ್ಧಿ ಭಾಗ್ಯ ಕಲ್ಪಿತವಾಗಿದೆ. ಹಲವು ವರ್ಷಗಳಿಂದ ದುರ್ಗಮ ಹಾದಿ ಯಂತಿದ್ದ ಈ ರಸ್ತೆಯನ್ನು 3.10 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸೂರ್ಯಬೇಕರಿ ಬಳಿಯಿಂದ ಕೆಆರ್‍ಎಸ್ ಮುಖ್ಯರಸ್ತೆವರೆಗೆ ಡಾಂಬರೀಕರಣ ಮಾಡಲಾಗು ತ್ತಿದೆ. ಕುಂಬಾರಕೊಪ್ಪಲು ಮುಖ್ಯರಸ್ತೆ ಕಿರಿದಾಗಿರುವ ಕಾರಣ ಇಕ್ಕೆಲಗಳಲ್ಲಿ ಮನೆಗಳ ಮುಂದಿರುವ ಜಗುಲಿಗಳನ್ನು ನಿವಾಸಿಗಳ ಅನುಮತಿಯೊಂದಿಗೆ ತೆರವುಗೊಳಿಸಿ, ಆ ಸ್ಥಳದಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಇದರಿಂದ ರಸ್ತೆಯನ್ನೂ ಸ್ವಲ್ಪ ವಿಸ್ತರಿಸಬಹುದಾಗಿದೆ. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಂಗಳವಾರ ಕುಂಬಾರಕೊಪ್ಪಲು ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ…

ಸೆರೆಯಾದ ಪುಂಡಾನೆ ಒಂದೇ ತಿಂಗಳಲ್ಲಿ  ಪಳಗಿಸುವುದು ನಮ್ಮ ಗುರಿ: ಮಾವುತ ಡೋಬಿ
ಮೈಸೂರು

ಸೆರೆಯಾದ ಪುಂಡಾನೆ ಒಂದೇ ತಿಂಗಳಲ್ಲಿ  ಪಳಗಿಸುವುದು ನಮ್ಮ ಗುರಿ: ಮಾವುತ ಡೋಬಿ

September 30, 2020

ಮೈಸೂರು, ಸೆ.29(ವೈಡಿಎಸ್)- ಕಾಡಂಚಿನ ಗ್ರಾಮಗಳಲ್ಲಿ ಜನರ ಮೇಲೆ ದಾಳಿ ನಡೆಸುವ, ಬೆಳೆನಾಶ ಮಾಡುವ  ಪುಂಡ ಆನೆಗಳನ್ನು ಸೆರೆ ಹಿಡಿದು ಒಂದೇ ತಿಂಗಳಲ್ಲಿ ಪಳಗಿಸುವುದೇ ಮಾವುತರ ಗುರಿ ಎಂದು ದಸರಾ ಮಹೋತ್ಸವದ ಕುಮ್ಕಿ ಆನೆ ಕಾವೇರಿಯ ಮಾವುತ ಡೋಬಿ ಅಭಿಪ್ರಾಯಪಟ್ಟಿದ್ದಾರೆ. ವನ್ಯಜೀವಿ ಸಪ್ತಾಹ ಹಿನ್ನೆಲೆಯಲ್ಲಿ ಕರ್ನಾ ಟಕ ಅರಣ್ಯ ಇಲಾಖೆ ವನ್ಯಜೀವಿ ವಿಭಾ ಗವು ಏಷ್ಯನ್ ಎಲಿಫೆಂಟ್ ಸಪೋರ್ಟ್ ಸಂಸ್ಥೆ ಸಹಯೋಗದಲ್ಲಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಆನೆಗಳ ಪಾತ್ರ ವಿವರಿ ಸುವ `ಮೈಸೂರು ದಸರಾ ಆನೆಗಳು’ ಸರಣಿ ವೆಬಿನಾರ್‍ನ…

ಅತಿಥಿ ಉಪನ್ಯಾಸಕರಿಂದ 12ನೇ ವಾರದ ಪ್ರತಿಭಟನೆ ಸೇವಾ ಭದ್ರತೆ, ಲಾಕ್‍ಡೌನ್ ಅವಧಿ ವೇತನಕ್ಕೆ ಒತ್ತಾಯ
ಮೈಸೂರು

ಅತಿಥಿ ಉಪನ್ಯಾಸಕರಿಂದ 12ನೇ ವಾರದ ಪ್ರತಿಭಟನೆ ಸೇವಾ ಭದ್ರತೆ, ಲಾಕ್‍ಡೌನ್ ಅವಧಿ ವೇತನಕ್ಕೆ ಒತ್ತಾಯ

September 30, 2020

ಮೈಸೂರು, ಸೆ.29(ಆರ್‍ಕೆಬಿ)- ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿ ಸಬೇಕು. ಲಾಕ್‍ಡೌನ್ ಅವಧಿಯ ಗೌರವಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಘಟಕ ಮಂಗಳವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಇದು 12ನೇ ವಾರದ ಪ್ರತಿಭಟನೆಯಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿ ಸದೇ ಸರ್ಕಾರ ನಿರ್ಲಕ್ಷಿಸಿದೆ ಎಂದು ಅತಿಥಿ ಉಪನ್ಯಾಸಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಸಕ್ತ ಶೈಕ್ಷಣಿಕ ಸಾಲಿಗೂ ಅತಿಥಿ ಉಪನ್ಯಾಸಕರ ಸೇವೆ ಮುಂದು…

ದಿಢೀರ್ ಏರಿಕೆ ಕಂಡಿದ್ದ ಅಡುಗೆ ಎಣ್ಣೆ ಬೆಲೆ 4 ದಿನದಿಂದ ತುಸು ಇಳಿಕೆ
ಮೈಸೂರು

ದಿಢೀರ್ ಏರಿಕೆ ಕಂಡಿದ್ದ ಅಡುಗೆ ಎಣ್ಣೆ ಬೆಲೆ 4 ದಿನದಿಂದ ತುಸು ಇಳಿಕೆ

September 30, 2020

ಮೈಸೂರು, ಸೆ.29(ಪಿಎಂ)-ಅಡುಗೆ ಎಣ್ಣೆ ದರದಲ್ಲಿ 15 ದಿನಗಳ ಹಿಂದೆ ದಿಢೀರ್ ಏರಿಕೆಯಾಗಿತ್ತು. ಈಗ 4 ದಿನಗಳಿಂದ ದರದಲ್ಲಿ ಕೊಂಚ ಇಳಿಕೆಯಾಗಿದ್ದು, ಗ್ರಾಹಕರು ತುಸು ನಿಟ್ಟುಸಿರು ಬಿಡು ವಂತಾಗಿದೆ. 1 ಲೀ. ಸನ್‍ಪ್ಯೂರ್ ಅಡುಗೆ ಎಣ್ಣೆ 4 ದಿನ ಗಳಿಂದ 117 ರೂ.ಗೆ ಇಳಿಕೆಯಾಗಿದೆ. 15 ದಿನಗಳ ಹಿಂದೆ 1 ಲೀ. ಸನ್‍ಪ್ಯೂರ್ ರಿಫೈಂಡ್ ಆಯಿಲ್ ದರ 102 ರೂ.ನಿಂದ 130 ರೂ.ಗೆ ಜಿಗಿದಿತ್ತು. ಗೋಲ್ಡ್ ವಿನ್ನರ್ 103 ರೂ.ನಿಂದ 120 ರೂ.ಗೆ ಹಾಗೂ ಇಮಾಮಿ ಸನ್‍ಫ್ಲವರ್ 103…

ಕೊರೊನಾ ಪರೀಕ್ಷೆಗೆ 25 ಹೆಚ್ಚುವರಿ ತಂಡ ನಿಯೋಜನೆ
ಮೈಸೂರು

ಕೊರೊನಾ ಪರೀಕ್ಷೆಗೆ 25 ಹೆಚ್ಚುವರಿ ತಂಡ ನಿಯೋಜನೆ

September 30, 2020

ಮೈಸೂರು, ಸೆ.29(ಆರ್‍ಕೆ)- ತ್ವರಿತಗತಿ ಯಲ್ಲಿ ಕೋವಿಡ್-19 ಪರೀಕ್ಷೆ ನಡೆಸಲು ಇನ್ನೂ 25 ಸ್ಕ್ವಾಡ್ ಟೀಂ ನಿಯೋಜಿಸಿಕೊಳ್ಳುವಂತೆ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದು ಕಚೇರಿ ಸಭಾಂಗಣದಲ್ಲಿ ಪ್ರಥಮ ಸಭೆ ನಡೆಸಿದ ಅವರು, ಮೈಸೂರು ನಗರ ಮತ್ತು ಜಿಲ್ಲೆ ಯಾದ್ಯಂತ ಕೋವಿಡ್ ಸೋಂಕಿನ ಸಂಖ್ಯೆ, ಚಿಕಿತ್ಸೆಗೆ ಲಭ್ಯವಿರುವ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‍ಗಳು, ಚಿಕಿತ್ಸೆಗೆ ಬೇಕಾಗುವ ಸೌಲಭ್ಯ, ವೈದ್ಯರು, ಸಿಬ್ಬಂದಿ, ಆಂಬುಲೆನ್ಸ್ ವ್ಯವಸ್ಥೆ ಹಾಗೂ ನಿರ್ವಹಣಾ ಸ್ಥಿತಿಗತಿ…

ನೇರ ವೇತನ ಪಾವತಿ, ಉಪಾಹಾರ ಭತ್ಯೆಗೆ ಆಗ್ರಹಿಸಿ : ಪಾಲಿಕೆ ಸ್ವಚ್ಛತಾ ವಾಹನಗಳ ಹೊರಗುತ್ತಿಗೆ ಚಾಲಕರ ಪ್ರತಿಭಟನೆ
ಮೈಸೂರು

ನೇರ ವೇತನ ಪಾವತಿ, ಉಪಾಹಾರ ಭತ್ಯೆಗೆ ಆಗ್ರಹಿಸಿ : ಪಾಲಿಕೆ ಸ್ವಚ್ಛತಾ ವಾಹನಗಳ ಹೊರಗುತ್ತಿಗೆ ಚಾಲಕರ ಪ್ರತಿಭಟನೆ

September 30, 2020

ಮೈಸೂರು, ಸೆ.29(ಆರ್‍ಕೆಬಿ)- ಪೌರಕಾರ್ಮಿಕರಿಗೆ ನೇರ ವೇತನ ಹಾಗೂ ಬೆಳಗಿನ ಉಪಾಹಾರದ ಭತ್ಯೆ ನೀಡುತ್ತಿರುವ ರೀತಿಯಲ್ಲೇ ನಮಗೂ ನೇರ ವೇತನ, ಭತ್ಯೆ ನೀಡಬೇಕೆಂದು ಆಗ್ರಹಿಸಿ ಮೈಸೂರು ಜಿಲ್ಲೆಯ ಪಾಲಿಕೆ, ನಗರಸಭೆ, ಪುರಸಭೆಗಳ ಹಾಗೂ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಹೊರಗುತ್ತಿಗೆ ಸ್ವಚ್ಛತೆ ವಾಹನ ಚಾಲಕರು ಮೈಸೂರು ಮಹಾನಗರ ಪಾಲಿಕೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಬಳಿಕ ಪಾಲಿಕೆ ಉಪ ಆಯುಕ್ತ ಬಿಳಿಗಿರಿರಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿ ಕರ ಸಂಘದ…

ಮಹಿಷ ದಸರಾಗೆ ಬಿಜೆಪಿ ಎಸ್‍ಸಿ ಮೋರ್ಚಾ ತೀವ್ರ ವಿರೋಧ
ಮೈಸೂರು

ಮಹಿಷ ದಸರಾಗೆ ಬಿಜೆಪಿ ಎಸ್‍ಸಿ ಮೋರ್ಚಾ ತೀವ್ರ ವಿರೋಧ

September 30, 2020

ಮೈಸೂರು, ಸೆ.29(ಆರ್‍ಕೆಬಿ)- ಮೈಸೂರು ದಸರಾ ಮಹೋತ್ಸವ ಸಂದರ್ಭ ಕೆಲವು ಸಂಘಟನೆಗಳು ಮಹಿಷ ದಸರಾ ಆಚರಣೆಗೆ ಮುಂದಾಗಿರುವುದನ್ನು ಬಿಜೆಪಿ ಎಸ್‍ಸಿ ಮೋರ್ಚಾ ನಗರ ಘಟಕ ಖಂಡಿಸಿದೆ. ವಿಶ್ವಕ್ಕೆ ಧಾರ್ಮಿಕ ಗರಿಮೆ ಸಾರುವ ದಸರಾ ಮಹೋತ್ಸವ ಸಂದರ್ಭ ದೈವೀಶಕ್ತಿಯನ್ನು ಪೂಜಿಸುವುದು ಸಂಪ್ರದಾಯ. ಆದರೆ ಕೆಲ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಹಿಂಸೆಯ ಪ್ರತಿರೂಪವಾದ ರಾಕ್ಷಸಗಣವನ್ನು ಪೂಜಿ ಸುವ ಕೆಲಸಕ್ಕೆ ಕೈಹಾಕಿವೆ. ಆ ಮೂಲಕ ಎಸ್‍ಸಿ ಸಮುದಾಯವನ್ನು ದಾರಿ ತಪ್ಪಿ ಸಲು ಮುಂದಾಗಿವೆ ಎಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್ ಸುದ್ದಿಗೋಷ್ಠಿಯಲ್ಲಿ…

1 416 417 418 419 420 1,611
Translate »