ಮೈಸೂರು, ಅ. 3(ಆರ್‍ಕೆ)- ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚೆಚ್ಚು ಅಭ್ಯರ್ಥಿ ಗಳನ್ನು ಗೆಲ್ಲಿಸಲು ಸರ್ವಪ್ರಯತ್ನ ಮಾಡಬೇಕೆಂದು ಮೈಸೂರು ನಗರ ಬಿಜೆಪಿ ಘಟಕದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ವಿಕೆ ಫಂಕ್ಷನ್ ಹಾಲ್‍ನಲ್ಲಿ ಶನಿವಾರ ನಡೆದ ನಗರ ಬಿಜೆಪಿ ಪ್ರಥಮ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂ ಡಿದ್ದ ಬಹುತೇಕ ಪ್ರಮುಖರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭ್ಯರ್ಥಿ ಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ…
ಮೈಸೂರು, ಮಂಡ್ಯ, ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ಉದ್ಘಾಟನೆ
October 4, 2020ಮೈಸೂರು,ಅ.3(ಪಿಎಂ)- ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿಯಮಿತ ಶನಿವಾರ ಉದ್ಘಾಟನೆಗೊಂಡಿತು. ಮೈಸೂರಿನ ದಿವಾನ್ಸ್ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಹಾಗೂ ಸಹಕಾರ ಭಾರತಿಯ ಸಂಘಟನಾ ಕಾರ್ಯದರ್ಶಿ ಬಿ.ಹೆಚ್.ಕೃಷ್ಣಾರೆಡ್ಡಿ ನೂತನ ಒಕ್ಕೂಟವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಒಕ್ಕೂಟದ ಆರಂಭ ಶ್ಲಾಘನೀಯ. ಒಕ್ಕೂಟದಡಿ ಸಾವಿರ ಸೌಹಾರ್ದ ಸಹಕಾರ ಸಂಘಗಳು ಸ್ಥಾಪನೆ ಯಾಗಲು ಶ್ರಮಿಸುವಂತೆ ಸಲಹೆ ನೀಡಿದರು. ಇದೇ ವೇಳೆ ಕರ್ನಾಟಕ ರಾಜ್ಯ ಸೌಹಾರ್ದ…
ಮೈಸೂರಲ್ಲಿ ಅಭಿಮನ್ಯು ಗಜಪಡೆ
October 2, 2020ಮೈಸೂರು,ಅ.1(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಗುರುವಾರ ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಿದೆ. ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಯೋಜಿಸಿದ್ದ ಗಜಪಡೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅಂಬಾರಿ ಆನೆ ಅಭಿಮನ್ಯು ಸೇರಿದಂತೆ 5 ಆನೆಗಳಿಗೂ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು. ದಸರಾ ಗಜಪಡೆಗೆ ಕಳೆದ 21 ವರ್ಷದಿಂದ ಪೂಜೆ ಸಲ್ಲಿಸುವ ಸಂಪ್ರದಾಯ ಹೊಂದಿರುವ ಪುರೋಹಿತ…
ಸದ್ಯಕ್ಕೆ ಶಾಲಾ-ಕಾಲೇಜು ಪುನರಾರಂಭ ಬೇಡ
October 2, 2020ಬೆಂಗಳೂರು, ಅ.1(ಕೆಎಂಶಿ)- ಸದ್ಯಕ್ಕೆ ಶಾಲಾ-ಕಾಲೇಜುಗಳನ್ನು ಪುನರಾರಂಭಿಸದಿರಲು ಇಂದಿಲ್ಲಿ ಸೇರಿದ್ದ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲಾ- ಕಾಲೇಜುಗಳನ್ನು ಪ್ರಾರಂಭಿಸುವುದು ಬೇಡ ಎಂದು ಬಿಎಸ್ ಯಡಿಯೂರಪ್ಪ ಮತ್ತು ಅವರ ಸಂಪುಟದ ಸಚಿವರು, ಶಿಕ್ಷಣ ಇಲಾಖೆ ಹೊಣೆ ಹೊತ್ತ ಮಂತ್ರಿಗಳಿಗೆ ಸಲಹೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಅವುಗಳ ಸಾಧಕ-ಬಾಧಕಗಳನ್ನು ನೋಡಿ ಕೊಂಡೇ ತರಗತಿಗಳನ್ನು ಆರಂಭಿಸಿ ಎಂದು ಮುಖ್ಯಮಂತ್ರಿಯವರು…
ಅ.15ರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳ ಮಾಲೀಕರ ನಿರುತ್ಸಾಹ
October 2, 2020ಮೈಸೂರು, ಅ. 1(ಆರ್‍ಕೆ)- ಕೇಂದ್ರ ಸರ್ಕಾರದ ಕೋವಿಡ್-19ರ 5.0 ಅನ್‍ಲಾಕ್ ಮಾರ್ಗಸೂಚಿ ಯಂತೆ ಅ.15ರಿಂದ ಸಿನಿಮಾ ಪ್ರದರ್ಶಿಸಲು ಚಿತ್ರಮಂದಿರ ಗಳ ಮಾಲೀಕರು ನಿರುತ್ಸಾಹ ತೋರಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಇಂದಿನಿಂದ ಜಾರಿಗೆ ಬರುವಂತೆ ಅನ್‍ಲಾಕ್ 5.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದರನ್ವಯ ಅಕ್ಟೋಬರ್ 15ರಿಂದ ಸಿನಿಮಾ ಮಂದಿರ, ಮಲ್ಪಿಪ್ಲೆಕ್ಸ್ ಥಿಯೇಟರ್‍ಗಳನ್ನು ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಕಾರ್ಯಾ ರಂಭ ಮಾಡಲು ಅನುಮತಿ ನೀಡಲಾಗಿದೆ. ಕೋವಿಡ್ ಲಾಕ್‍ಡೌನ್ ನಿರ್ಬಂಧದಿಂದಾಗಿ ಕಳೆದ 7 ತಿಂಗಳಿಂದ ಪ್ರದರ್ಶನ ಬಂದ್ ಮಾಡಿದ್ದ ಚಿತ್ರ ಮಂದಿರಗಳ…
ದಸರಾ ಅನುದಾನದ ವಿಚಾರದಲ್ಲಿ ಸರ್ಕಾರ ಚಾಕೊಲೇಟ್ ನೀಡಿದೆ
October 2, 2020ಮೈಸೂರು ಮೇಯರ್ ತಸ್ನೀಂ ವ್ಯಂಗ್ಯ ಮೈಸೂರು, ಅ.1(ಆರ್‍ಕೆ)- ದಸರಾ ಮಹೋತ್ಸವದ ಅನುದಾನದ ವಿಚಾರದಲ್ಲಿ ಸರ್ಕಾರ ಚಾಕೊಲೇಟ್ ಕೊಟ್ಟಿದೆ ಎಂದು ಮೈಸೂರು ಮೇಯರ್ ತಸ್ನಿಂ ವ್ಯಂಗ್ಯವಾಡಿದ್ದಾರೆ. ದಸರಾ ಸಿದ್ಧತೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ದಸರಾ ಅನು ದಾನ ನೀಡುವ ಸಂಬಂಧ ಸರ್ಕಾರವು ಮೈಸೂರು ಮಹಾನಗರ ಪಾಲಿಕೆಗೆ ಚಾಕೊಲೇಟ್ ನೀಡಿದೆ. ದಸರೆಗೆ 10 ಕೋಟಿ ರೂ. ಅನುದಾನ ಘೋಷಿಸಿದೆಯಾದರೂ, ಹಣ ಹಂಚಿಕೆ ಬಗ್ಗೆ ಯಾವುದೇ ರೂಪರೇಷೆ ನೀಡಿಲ್ಲ. ಅದರಲ್ಲಿ ಪಾಲಿಕೆಯ ಪಾತ್ರದ ಬಗ್ಗೆಯೂ ತಿಳಿಸಿಲ್ಲ. ಅನುದಾನವನ್ನು…
ಇಂದು ಗಾಂಧಿಯೊಳಗಿನ ಪತ್ರಕರ್ತ ಕೃತಿ ಬಿಡುಗಡೆ
October 2, 2020ಮೈಸೂರು ಅ.1- ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿಯವರ 36ನೇ ಕೃತಿ ‘ಗಾಂಧಿಯೊಳಗಿನ ಪತ್ರಕರ್ತ: ಮರು ವೀಕ್ಷಣೆ’- ಅ.2ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ‘ಗಾಂಧಿ ಸ್ಮಾರಕ ನಿಧಿ, ಕರ್ನಾಟಕ’ ಈ ಪುಸ್ತಕ ವನ್ನು ಹೊರತಂದಿದೆ. ಗಾಂಧೀಜಿಯವರ 150ನೇ ಜನ್ಮ ದಿನದ ವರ್ಷಾಚರಣೆಯ ಸಂದರ್ಭದಲ್ಲಿ ಹೊರಬರುತ್ತಿರುವ ಈ ಕೃತಿ ಪತ್ರಕರ್ತರಾಗಿ ಗಾಂಧಿ ಕುರಿತು ಹೊಸ ಚಿಂತನೆಯ 30 ಚಿಂತನಗಳನ್ನು ಒಳಗೊಂಡಿದೆ. ಗಾಂಧೀಜಿ ಎಂಥಾ ಪತ್ರಕರ್ತರಾಗಿದ್ದರು ಎಂಬುದು ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಹಾಗೂ ಪತ್ರಿಕಾ…
ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ
October 2, 2020ಮೈಸೂರು,ಅ.1-ಮೈಸೂರಿನ ರಾಜ ಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ಥಾನದ ಆವ ರಣದಲ್ಲಿ ನರಸಿಂಹರಾಜ ಕ್ಷೇತ್ರದ ನೂತನ ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ವಿತರಿಸಿದರು. ನರಸಿಂಹರಾಜ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಚಂದ್ರಶೇಖರ್, ಉಪಾ ಧ್ಯಕ್ಷರಾದ ವನಜಾಕ್ಷಿ, ಕಸ್ತೂರಿ ಚಂದ್ರ ಶೇಖರ್, ದಿವ್ಯ ದಿವಾಕರ್, ಮಂಜುಳಾ, ಪ್ರಧಾನ ಕಾರ್ಯದರ್ಶಿಗಳಾದ ಅನಿತಾ, ರೀನಾ ಚಂಗಪ್ಪ, ಕಾರ್ಯದರ್ಶಿಗಳಾದ ಶಾಲಿನಿ, ಸುಬ್ಬಲಕ್ಷ್ಮಿ, ಸುಮಿತ್ರ, ಜೀಜಾಬಾಯಿ, ತುಳಸಿ, ಭಾಗ್ಯ, ಉಮಾಶ್ರೀ, ಉಮಾ ಅವರಿಗೆ…
ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಕೇವಲ ಶೇ.40ರಷ್ಟು ಆಸನಗಳು ಭರ್ತಿ
October 2, 2020ಮೈಸೂರು, ಅ.1(ಆರ್‍ಕೆ)- ಕೊರೊನಾ ಅಟ್ಟಹಾಸ ಮುಂದುವರೆದಿರುವುದರಿಂದ ಸಾರ್ವಜನಿಕ ಸಾರಿಗೆ ಬಳಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ)ಯು ಕೋವಿಡ್-19 ಲಾಕ್ ಡೌನ್ ನಿರ್ಬಂಧ ತೆರವುಗೊಂಡ ನಂತ ರವೂ ಕೇವಲ ಶೇ.60ರಷ್ಟು ಬಸ್ಸುಗಳನ್ನು ಓಡಿಸುತ್ತಿದೆಯಾದರೂ ಅವುಗಳಲ್ಲೂ ಪೂರ್ಣ ಪ್ರಮಾಣದ ಆಸನಗಳ ಬಳ ಸಲು ಅವಕಾಶವಿದೆಯಾದರೂ, ಒಂದು ಬಸ್ಸಿನಲ್ಲಿ ಕೇವಲ 20ರಿಂದ 25 ಮಂದಿ ಮಾತ್ರ ಪ್ರಯಾಣಿಸುತ್ತಿದ್ದಾರೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ 30 ಮಂದಿ ಪ್ರಯಾಣಿಕರಿಗೆ ಅವಕಾಶವಿದ್ದಾಗಲೂ ಕೇವಲ…
ಇಂದು ಮೈಸೂರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
October 2, 2020ಮೈಸೂರು,ಅ.1(ಆರ್‍ಕೆ)-ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ನಾಳೆ (ಅ.2) ಮೈಸೂರಿಗೆ ಆಗಮಿಸುವರು. ಶುಕ್ರ ವಾರ ಬೆಳಿಗ್ಗೆ 8 ಗಂಟೆಗೆ ಗಾಂಧಿಚೌಕದಲ್ಲಿ ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಬೆಳಿಗ್ಗೆ 9.30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಸಂಬಂಧ ವಿಭಾ ಗೀಯ ಮಟ್ಟದ ಆರ್ಥಿಕ ಸ್ಪಂದನ ಕಾರ್ಯ ಕ್ರಮದಲ್ಲಿ ಸಚಿವರು ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆ ಯನ್ನು ಬರಮಾಡಿಕೊಳ್ಳುವ…










