ಬೆಂಗಳೂರು: ಮಾರಕ ಕೊರೊನಾ ವೈರಸ್ ಸೋಂಕು ಪ್ರಸರಣದ ನಡುವೆಯೇ ಬೆಂಗಳೂರಿಗರಿಗೆ ಇದ್ದ ಸೀಲ್‍ಡೌನ್ ತಲೆನೋವು ಇನ್ನು ಮುಂದೆ ಇರುವುದಿಲ್ಲ. ನಗರದಲ್ಲಿ ನಾಳೆಯಿಂದಲೇ ಸೀಲ್‍ಡೌನ್ ಪದ್ಧತಿ ರದ್ದುಪಡಿಸಲಾಗಿದ್ದು, ಇನ್ನು ಮುಂದೆ ಸೋಂಕಿತರ ಮನೆ ಸುತ್ತ ಬ್ಯಾರಿಕೇಡ್ ಹಾಕುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಕೊರೊನಾ ವೈರಸ್ ಬೆಂಗಳೂರಿನಲ್ಲಿ ಗರಿಷ್ಟ ಮಟ್ಟದಲ್ಲಿದ್ದರೂ ಬಿಬಿಎಂಪಿ ಸೀಲ್‍ಡೌನ್ ಮತ್ತು ಕಂಟೇನ್ಮೆಂಟ್ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಬೆಂಗ ಳೂರಿನಲ್ಲಿ ಸೀಲ್‍ಡೌನ್ ಬೇಕಾ ಅಥವಾ ಬೇಡವಾ ಎಂದು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ…
ಬಿ.ವೈ.ವಿಜಯೇಂದ್ರರಿಗೆ ಅದ್ಧೂರಿ ಸ್ವಾಗತ
August 18, 2020ಮೈಸೂರು, ಆ.17(ಆರ್‍ಕೆಬಿ)- ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿ ಸಿದ ಮುಖ್ಯಮಂತ್ರಿಗಳ ಪುತ್ರರೂ ಆದ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಸೋಮವಾರ ಮೈಸೂರಿನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಮೈಸೂರಿನ ಬೆಂಗಳೂರು ರಸ್ತೆ ರಿಂಗ್ ರಸ್ತೆ ಬಳಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ವಿಜಯೇಂದ್ರ ಅವರನ್ನು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಇನ್ನಿತರರು ಪುಷ್ಪಗುಚ್ಛ ನೀಡಿ ಬರಮಾಡಿ ಕೊಂಡರು. ಕಾರ್ಯಕರ್ತರು ವಿಜಯೇಂದ್ರ ಮತ್ತು ಯಡಿಯೂರಪ್ಪ ಹಾಗೂ ಪಕ್ಷದ ಪರ ಘೋಷಣೆಗಳನ್ನು ಕೂಗಿದರು….
ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ ರೈತಸಂಘ ಪ್ರತಿಭಟನೆ
August 18, 2020ಮೈಸೂರು, ಆ.17(ಆರ್‍ಕೆಬಿ)- ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವು ಗಳನ್ನು ಖಂಡಿಸಿ ಸಾಮೂಹಿಕ ನಾಯಕತ್ವ ದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ನ್ಯಾಯಾಲಯ ಸಮೀಪದ ಮಹಾತ್ಮ ಗಾಂಧಿ ಪುತ್ತಳಿ ಬಳಿ ಪ್ರತಿಭಟನೆ ನಡೆಸಿದರು. ಸಂಘಟನೆಯ ರಾಜ್ಯ ವರಿಷ್ಠರಾದ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಜಮಾ ವಣೆಗೊಂಡ ರೈತರು ಕಬ್ಬಿನ ಜಲ್ಲೆಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಚುಕ್ಕಿ ನಂಜುಂಡಸ್ವಾಮಿ, ರೈತ ಸಮು ದಾಯದ ಸಾಮೂಹಿಕ ಮಾರಣಹೋಮಕ್ಕೆ ಕೇಂದ್ರ, ರಾಜ್ಯ…
ಮೈಸೂರಿನ 42 ವಾರ್ಡ್‍ಗಳಲ್ಲಿ ಕೊರೊನಾ ಜನಜಾಗೃತಿ ಅಭಿಯಾನ
August 18, 2020ಮೈಸೂರು, ಆ.17(ಎಂಟಿವೈ)- ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ 20ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ 42 ವಾರ್ಡ್‍ಗಳಲ್ಲಿ ಆ.24ರಿಂದ 28ರವರೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಭಾರತೀಯ ಪರಂಪರೆ ಆಹಾರ ಪದಾರ್ಥಗಳ ಬಳಕೆಗೆ, ಕೊರೊನಾ ತಡೆಗಟ್ಟುವ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯ ಕ್ರಮ ರೂಪಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಾದಾರ ಚನ್ನಯ್ಯ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಡಾ.ಎಸ್.ಈ.ಮಹದೇವಪ್ಪ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರ ತೀಯ ಸಾಂಸ್ಕೃತಿಕ ವಿಕಾಸ ವೇದಿಕೆ…
ಕೊರೊನಾ ಭೀತಿಯಲ್ಲೂ ಮೈಸೂರು ಜಿಲ್ಲೆಯಲ್ಲಿ 52 ಬಾಲ್ಯವಿವಾಹ
August 18, 2020ಮೈಸೂರು, ಆ.17(ಎಸ್‍ಪಿಎನ್)- ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಬಾಲ್ಯ ವಿವಾಹ ಹೆಚ್ಚಾಗಿವೆ. ಕಳೆದ ಏಪ್ರಿಲ್‍ನಿಂದ ಜೂನ್ ಅಂತ್ಯದವರೆಗೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 52 ಬಾಲ್ಯ ವಿವಾಹಗಳು ಬೆಳಕಿಗೆ ಬಂದಿವೆ. ಇದರಲ್ಲಿ 39 ವಿವಾಹ ಗಳನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ಸು ಕಂಡಿ ದ್ದರೆ, 13 ಪ್ರಕರಣಗಳಲ್ಲಿ ವಿವಾಹ ಸಂಪನ್ನವಾಗಿ ದ್ದರೂ ಬಳಿಕ ಕಾನೂನು ಕ್ರಮ ಜರುಗಿಸಲಾಗಿದೆ. ಕರ್ನಾಟಕ ರಾಜ್ಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗದ (ಮೈಸೂರು ವಿಭಾಗ) ಸದಸ್ಯ ಎಂ.ಎಲ್. ಪರಶುರಾಮ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ,…
ಆಯ್ಕೆ ಪಟ್ಟಿ ಪ್ರಕಟಿಸದಂತೆ ಮೈಮುಲ್‍ಗೆ ಸಾ.ರಾ.ಮಹೇಶ್ ಪತ್ರ
August 18, 2020ಮೈಸೂರು, ಆ.17 (ಆರ್‍ಕೆಬಿ)- ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ (ಮೈಮುಲ್) ವತಿಯಿಂದ ವಿವಿಧ ಹುದ್ದೆ ನೇಮಕಾತಿಗೆ ನಮ್ಮ ವಿರೋಧ ಇಲ್ಲ. ಆದರೆ ನೇಮಕಾತಿ ಪಾರದರ್ಶಕವಾಗಿ ರಬೇಕು. ಕೆಲಸ ಅರಸಿ ಬರುವ ಅಭ್ಯರ್ಥಿ ಗಳಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಹೋರಾಟ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಮುಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಹೋರಾಟ ನಡೆಸಿದ್ದೇವೆ. ಹೈಕೋರ್ಟ್ ರಿಟ್…
`ಆರೋಗ್ಯವಾಗಿದ್ದೇನೆ ಎಂದರೂ ಕೇಳದೇ ಆಂಬುಲೆನ್ಸ್‍ನಲ್ಲಿ ಬಲವಂತವಾಗಿ ಕರೆದೊಯ್ದರು’
August 18, 2020ಮೈಸೂರು, ಆ.17 (ವೈಡಿಎಸ್)- `ಕೊರೊನಾ ಭಯ ಪಡುವ ಖಾಯಿಲೆಯೇ ಅಲ್ಲ. ಧೈರ್ಯದಿಂದ ಇರಬೇಕು. ನಾನು ಗುಣಮುಖಳಾಗಿ ಮನೆಗೆ ಹೋದಾಗ ನೆರೆಯ ನಿವಾಸಿಗಳು ಇನ್ನೂ ಸೋಂಕಿತರಂತೆಯೇ ನೋಡು ತ್ತಿದ್ದುದು ಬೇಸರ ತರಿಸಿತು’… ಕೊರೊನಾದಿಂದ ಗುಣಮುಖರಾದ ಬೋಗಾದಿ ಮಹಿಳೆ ಯೊಬ್ಬರ(ರೋಗಿ ಸಂಖ್ಯೆ 2087) ಬೇಸರದ ನುಡಿ ಇದು. `ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ವಿಷಯ ತಿಳಿದ ದಿನವೇ ಅಕ್ಕ-ಪಕ್ಕದ ನಿವಾಸಿಗಳು ಮನೆಗೆ ಬೀಗ ಹಾಕಿಕೊಂಡು ಹೋದವರು ಇನ್ನೂ ಮನೆಗೆ ವಾಪಸ್ ಬಂದಿಲ್ಲ. ಸುತ್ತಲಿನ ಜನ ಇಂದಿಗೂ ನಮ್ಮನ್ನು ಸೋಂಕಿತರಂತೆಯೇ…
ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದಿಂದ ಚಿತ್ರಕಲಾ ಸ್ಪರ್ಧೆ
August 18, 2020ಮೈಸೂರು, ಆ.17(ಪಿಎಂ)- ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದಿಂದ 5ರಿಂದ 10 ವರ್ಷದ ಮಕ್ಕಳಿಗೆ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ವಸ್ತು ಸಂಗ್ರಹಾಲಯ ಆವರಣದಲ್ಲಿ ಮುಕ್ತ ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು. ನಗರದ 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತಮ್ಮ ಕಲಾಕೌಶಲ ಅನಾವರಣಗೊಳಿಸಿದರು. ರೈಲುಗಳು, ರೈಲು ಪ್ರಯಾಣ, ಅಥವಾ ರೈಲ್ವೆ ವಸ್ತು ಸಂಗ್ರಹಾ ಲಯದ ಯಾವುದೇ ವಿಷಯ ಕುರಿತಂತೆ ಚಿತ್ರಕಲೆ ರಚಿಸಲು ಸೂಚಿಸಲಾಗಿತ್ತು. ರೈಲ್ವೆ ಅಧಿಕಾರಿಗಳ ಆಯ್ಕೆ ಸಮಿತಿಯು ಮಕ್ಕಳ ಚಿತ್ರಕಲೆಯ ಮೌಲ್ಯಮಾಪನ ನಡೆಸಿ,…
ಎಸ್‍ಬಿಎಂ ಬಡಾವಣೆ ಮ್ಯಾನ್‍ಹೋಲ್ ದುರಸ್ತಿಪಡಿಸಿದ ಗ್ರಾಪಂ ಸದಸ್ಯರು
August 18, 2020ಮೈಸೂರು, ಆ.17(ಎಂಕೆ)- ಮೈಸೂರಿನ ಬೋಗಾದಿ ಮುಖ್ಯರಸ್ತೆಯಲ್ಲಿರುವ ಎಸ್‍ಬಿಎಂ ಬಡಾವಣೆಯಲ್ಲಿ ಹಾಳಾಗಿದ್ದ ಯುಜಿಡಿ (ಒಳಚರಂಡಿ) ಮ್ಯಾನ್‍ಹೋಲ್‍ಗಳನ್ನು ಭಾನುವಾರ ದುರಸ್ತಿಗೊಳಿಸಲಾಯಿತು. ಆ.6ರಂದು ‘ಮೈಸೂರು ಮಿತ್ರ’ ದಿನ ಪತ್ರಿಕೆಯಲ್ಲಿ ‘ಲಕ್ಷ ಲಕ್ಷ ಕೊಟ್ಟು ನಿವೇಶನ ಖರೀದಿಸಿ, ಸಾಲ ಮಾಡಿ ಮನೆಕಟ್ಟಿದವರ 23 ವರ್ಷದ ಗೋಳು ಕೇಳುವವರೇ ಇಲ್ಲ!’ ಶೀರ್ಷಿಕೆಯಡಿ ಬಡಾವಣೆಯಲ್ಲಿನ ಸಮಸ್ಯೆ ಗಳ ಕುರಿತು ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಬೋಗಾದಿ ಗ್ರಾಪಂ ಸದಸ್ಯರಾದ ಹೊನ್ನೇಗೌಡ, ಚಂದ್ರಶೇಖರ್, ಮ್ಯಾನ್ ಹೋಲ್‍ಗಳ ದುರಸ್ತಿ ಕಾರ್ಯ ಕೈಗೊಂಡರು. ಶಾಶ್ವತ ಪರಿಹಾರಕ್ಕೆ ಒತ್ತಾಯ: 1500 ನಿವೇಶನಗಳಿರುವ…
ವಾರಸುದಾರರಿಂದಲೇ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ
August 17, 2020ಮೈಸೂರು, ಆ.16(ಆರ್‍ಕೆ)- ಕೋವಿಡ್-19 ಸೋಂಕು ತಗುಲಿ ಮೃತಪಟ್ಟ ವ್ಯಕ್ತಿಗಳ ಅಂತ್ಯಕ್ರಿಯೆ ಯನ್ನು ವಾರಸುದಾರರೇ ತಮ್ಮ ಸಂಪ್ರದಾಯದಂತೆ ನಡೆಸಬಹುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯ ಕ್ಷತೆಯಲ್ಲಿ ನಡೆದ ಕೋವಿಡ್ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದ ಅವರು ಕೊರೊನಾ ಸೋಂಕು ಇತರರಿಗೆ ಹರಡಬಾರದೆಂದಬ ಕಾರಣಕ್ಕಾಗಿ ಈವರೆಗೆ ಸೋಂಕಿ ನಿಂದ ಮೃತಪಟ್ಟವರ ಪಾರ್ಥಿವ ಶರೀರವನ್ನು ವಾರಸುದಾರರಿಗೆ ನೀಡದೇ ಜಿಲ್ಲಾಡಳಿತದಿಂದ…










