ವಿಶ್ವದ ಶ್ರೇಷ್ಠ ನಾಯಕ, ಚಾಣಾಕ್ಷ ವಿಕೆಟ್ ಕೀಪರ್, ಕ್ಯಾಪ್ಟನ್ ಕೂಲ್, ಅತ್ಯುತ್ತಮ ಫಿನಿಷರ್, ಹೆಲಿಕಾಪ್ಟರ್ ಶಾಟ್ ಜನಕ, ಮೂರು ಐಸಿಸಿ ಟ್ರೋಫಿ ಗಳನ್ನು ಗೆದ್ದು ಕೊಟ್ಟು ಅನೇಕ ಸಾಧನೆಗಳನ್ನು ತಮ್ಮ ಹೆಸ ರಿಗೆ ಬರೆಸಿಕೊಂಡಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. ಶನಿವಾರ ತಮ್ಮ ಇನ್‍ಸ್ಟಾಗ್ರಾಮ್ ಮೂಲಕ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಧೋನಿ, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದರು. ಈ ಮೂಲಕ 2019ರ…
ಮೈಸೂರಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರು
August 17, 2020ಮೈಸೂರು, ಆ.16(ಎಸ್‍ಬಿಡಿ)- ಮೈಸೂರಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಭಾನುವಾರ ದಾಖಲೆಯ 620 ಹೊಸ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,535ಕ್ಕೆ ಏರಿಕೆಯಾಗಿದೆ. ಭಾನುವಾರ ಡಿಸ್ಚಾರ್ಜ್ ಆದ 386 ಮಂದಿ ಸೇರಿದಂತೆ ಈವರೆಗೆ ಒಟ್ಟು 6,475 ಸೋಂಕಿತರು ಗುಣಮುಖರಾಗಿದ್ದಾರೆ. 10 ಸಾವು: ಜಿಲ್ಲೆಯಲ್ಲಿ 65 ವರ್ಷದ ಮಹಿಳೆ, 46, 56, 57, 58, 60, 65, 67, 68 ಹಾಗೂ 80 ವರ್ಷದ ವ್ಯಕ್ತಿಗಳು ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು…
ಆ.19 ಚಾಮುಂಡೇಶ್ವರಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧ
August 17, 2020ಉತ್ತನಹಳ್ಳಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನಕ್ಕೆ ಆ.19, 21ರಂದು ನಿರ್ಬಂಧ ಮೈಸೂರು, ಆ.16(ಎಸ್‍ಬಿಡಿ)- ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಒಂದು ದಿನ ಹಾಗೂ ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯಕ್ಕೆ ಎರಡು ದಿನ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಮಾವಾಸ್ಯೆ ಹಾಗೂ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಈ ದೇವಾಲಯ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನಸಂದಣಿ ಆಗದಂತೆ ಕ್ರಮ ವಹಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ,…
ಮೈಸೂರು ಅರಸರೇ ಆತ್ಮನಿರ್ಭರ ಪರಿಕಲ್ಪನೆಗೆ ಆದ್ಯತೆ ನೀಡಿ ಸ್ವಾವಲಂಬಿ ರಾಜ್ಯ ಸ್ಥಾಪಿಸಿದ್ದರು
August 17, 2020ಮೈಸೂರು, ಆ.16(ಎಂಟಿವೈ)- ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ ಒಡೆಯರ್ ವಂಶ ಸ್ಥರು ತಮ್ಮ ಅವಧಿಯಲ್ಲಿ ಆತ್ಮನಿರ್ಭರ ಪರಿಕಲ್ಪನೆ ಯನ್ನು ಜಾರಿಗೆ ತಂದು, ಕರ್ನಾಟಕವನ್ನು ಸ್ವಾವ ಲಂಬಿ ರಾಜ್ಯವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿ ದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರ ಆಯೋಜಿಸಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆ ಸಮಾ ರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತ ನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ `ಆತ್ಮ…
ರಕ್ತದಾನದ ಮೂಲಕ 74ನೇ ಸ್ವಾತಂತ್ರ್ಯೋತ್ಸವ ಆಚರಣೆ
August 17, 2020ಮೈಸೂರು, ಆ.16- 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೃಹತ್ ರಕ್ತ ದಾನ ಶಿಬಿರವನ್ನು ತೇರಾಪಂಥಾ ಯುವಕ ಪರಿಷದಾ ಹಾಗೂ ರಕ್ತದಾನ ಮಹಾದಾನ ಗೋಭಕ್ತ ಸಂಘದ ವತಿ ಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಆಯುರ್ವೇದಿಕ್ ಆಸ್ಪತ್ರೆ ಸಭಾಂಗಣದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು 75ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ವಿಶೇಷವಾಗಿ ಸ್ವಾತಂತ್ರ್ಯ ದಿನಾ ಚರಣೆಯನ್ನು ಆಚರಿಸಿದ್ದಾರೆ. ಕೊರೊನಾ ಸಂಕಷ್ಟ ಸಮಯದಲ್ಲೂ ರಕ್ತದಾನದಂತಹ ಸಾಮಾಜಿಕ ಕಾಳಜಿಯ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಜೀವಧಾರ…
ಜಿಲ್ಲಾಧಿಕಾರಿಗಳಂತೆ ಇತರರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ
August 17, 2020ಮೈಸೂರು, ಆ.16(ಆರ್‍ಕೆ)- ಕೊರೊನಾ ಸೋಂಕಿತರ ಸಾವು ತಡೆಗಟ್ಟಲು ಜಿಲ್ಲಾಧಿಕಾರಿಗಳಂತೆ ಸಂಬಂಧಪಟ್ಟ ಇಲಾಖೆಗಳ ಇತರ ಅಧಿಕಾರಿಗಳೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಖಡಕ್ ಸೂಚನೆ ನೀಡಿದರು. ಮೈಸೂರು ಜಿಪಂ ಸಭಾಂಗಣದಲ್ಲಿ ಶನಿವಾರ ಕೋವಿಡ್ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿತ ರಂತೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕ ಕಾರಿ ವಿಷಯ. ಪ್ರತಿದಿನ ನೆಗೆಟಿವ್ ರಿಪೋರ್ಟ್ ಬರುತ್ತಿದೆ ಯಾದರೂ ಅದೇ ಪ್ರಮಾಣದಲ್ಲಿ ಸೋಂಕು ದೃಢಪಡುತ್ತಿರು ವವರ ಸಂಖ್ಯೆಯೂ…
ಲಾಕ್‍ಡೌನ್: 5 ತಿಂಗಳ ನಂತರ ಭಕ್ತರಿಗೆ ವೈಷ್ಣೋದೇವಿ ದರ್ಶನ
August 17, 2020ಕಾಟ್ರಾ,ಆ.16-ಕೊರೊನಾ ವೈರಸ್ ಸಾಂಕ್ರಾಮಿಕದ ಲಾಕ್ ಡೌನ್‍ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾತಾ ವೈಷ್ಣೋದೇವಿ ದೇಗುಲ ವನ್ನು 5 ತಿಂಗಳ ಬಳಿಕ ಮೊದಲ ಬಾರಿಗೆ ಭಕ್ತರಿಗಾಗಿ ತೆರೆಯ ಲಾಗಿದೆ. ಜಮ್ಮುವಿನ ಕಾಟ್ರಾದಲ್ಲಿ ರುವ ತ್ರಿಕುಟಾ ಬೆಟ್ಟದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ವೈಷ್ಣೋದೇವಿ ದೇಗುಲ ಭೇಟಿಗೆ ಸರ್ಕಾರ ಅನುಮತಿ ನೀಡಿದ್ದು, ಭಕ್ತರ ದರ್ಶನ ಕ್ಕಾಗಿ ವೈಷ್ಣೋದೇವಿ ದೇಗುಲವನ್ನು ಇಂದಿನಿಂದ ತೆರೆಯಲಾಗಿದೆ. ಜಮ್ಮುವಿನ ಖುಷ್ವಿಂದರ್ ಸಿಂಗ್ ಅವರ ನೇತೃತ್ವದ 12 ಸದಸ್ಯರ ತಂಡ ಭಾನುವಾರ ಮುಂಜಾನೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ. ದೇವರಿಗೆ ಪ್ರಾರ್ಥನೆ…
ರೈತ, ಜನ ವಿರೋಧಿ ಕಾಯ್ದೆ ಜಾರಿ ಖಂಡಿಸಿ ಇಂದಿನಿಂದ ರಾಜ್ಯಾದ್ಯಂತ ಜೆಡಿಎಸ್ ಪ್ರತಿಭಟನೆ
August 14, 2020ಬೆಂಗಳೂರು, ಆ.13(ಕೆಎಂಶಿ)-ರಾಜ್ಯ ಸರ್ಕಾರದ ಜನ ವಿರೋಧಿ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕೈಗಾರಿಕೆ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳನ್ನು ವಿರೋ ಧಿಸಿ ನಾವು ನಾಳೆಯಿಂದ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಾಳೆ ಯಿಂದಲೇ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧತೆ ಮಾಡಿ ಕೊಂಡಿದ್ದೇವೆ. ನಾಳೆ ಹಾಸನದಲ್ಲಿ ಸಾಂಕೇತಿಕವಾಗಿ ಹೋರಾಟ ವನ್ನು ಉದ್ಘಾಟನೆ ಮಾಡುತ್ತೇವೆ ಎಂದರು. ಹಾಸನ ಜಿಲ್ಲೆಯ ಎಲ್ಲಾ ಶಾಸಕರು…
ರಾಜ್ಯದ ವಿವಿಧೆಡೆ ನಡೆದ ಗಲಭೆಗಳಲ್ಲಿ ಎಸ್‍ಡಿಪಿಐ ಪಾತ್ರ ಮೇಲ್ನೋಟಕ್ಕೆ ಗೋಚರ
August 14, 2020ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ಈ ಸಂಘಟನೆ ನಿಷೇಧ ಸಂಬಂಧ ಸರ್ಕಾರದ ಚಿಂತನೆ ಬೆಂಗಳೂರು, ಆ.13(ಕೆಎಂಶಿ)-ರಾಜ್ಯದ ಹಲವೆಡೆ ನಡೆದ ಗಲಭೆಗಳಲ್ಲಿ ಎಸ್‍ಡಿಪಿಐ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಸಂಘಟನೆಯನ್ನು ನಿಷೇಧಿಸುವ ಸಂಬಂಧ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆ.ಜಿ.ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಕೂಡ ಎಸ್‍ಡಿಪಿಐ ಪಾತ್ರ ಇರುವುದು ಕಂಡು ಬಂದಿದೆ. ಈ…
ತಲೆ ತಲಾಂತರದಿಂದ ನೆಮ್ಮದಿ ನೆಲೆಯಾಗಿದ್ದ ಮನೆ ಕರಕಲಾಗಿರುವುದ ಕಂಡು ಕಣ್ಣೀರಿಟ್ಟ `ಅಖಂಡ’ ಕುಟುಂಬ
August 14, 2020ಬೆಂಗಳೂರು, ಆ.13-ಪುಲಿಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಕುಟುಂಬದವರು ಸುಟ್ಟು ಕರಕಲಾಗಿರುವ ತಮ್ಮ ಮನೆಗೆ ಮರಳಿ, ತಲೆ ತಲಾಂತರಗಳಿಂದ ನೆಮ್ಮದಿ ನೆಲೆಯಾ ಗಿದ್ದ ನೆಚ್ಚಿನ ನಿವಾಸದ ಸ್ಥಿತಿ ಕಂಡು ಭಾವುಕ ರಾಗಿ ಕಣ್ಣೀರು ಸುರಿಸಿದರು. ಮನೆಯಲ್ಲಿದ್ದ ಪೀಠೋಪಕರಣಗಳೂ ಸೇರಿದಂತೆ ಗೃಹೋ ಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗು ತ್ತಿರುವುದನ್ನು ಕಂಡು ಶ್ರೀನಿವಾಸಮೂರ್ತಿ ಯವರ ಪತ್ನಿ ಹಾಗೂ ಮಗಳ ಆಕ್ರಂದನ ಮುಗಿಲು ಮುಟ್ಟಿತು. ತಮ್ಮ ಕುಟುಂಬದವರು ದಿನ ನಿತ್ಯ ಪೂಜಿ ಸುತ್ತಿದ್ದ ದೇವಿಯ ಮುಖವಾಡ ನಾಪತ್ತೆ ಯಾಗಿರುವುದನ್ನು ಕಂಡು…










