ಮೈಸೂರು, ಆ.18(ಆರ್‍ಕೆ)- ನಾಳೆ (ಆ.19)ಯಿಂದ ನಾಲ್ಕು ದಿನಗಳ ಕಾಲ ಮೈಸೂರಿನ ಜೆ.ಕೆ. ಮೈದಾನದಲ್ಲಿ ಹೂವಿನ ಮಾರಾಟ ನಡೆಯಲಿದೆ. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣು-ಹಂಪಲು, ಪೂಜಾ ಸಾಮಗ್ರಿ ಖರೀದಿಸಲು ಜನರು ಮುಗಿ ಬೀಳುವುದರಿಂದ ದೇವರಾಜ ಮಾರುಕಟ್ಟೆಯಲ್ಲಿ ನೂಕು-ನುಗ್ಗಲು ಉಂಟಾಗುವ ಕಾರಣ ಕೊರೊನಾ ವೈರಸ್ ಸೋಂಕು ಹರಡಲಿದೆ ಎಂಬ ಭೀತಿಯಿಂದಾಗಿ ಮೈಸೂರು ಮಹಾನಗರ ಪಾಲಿಕೆಯು ಮುಂಜಾಗ್ರತೆ ಕ್ರಮವಾಗಿ ದೇವರಾಜ ಮಾರುಕಟ್ಟೆಯಿಂದ ಹೂ ಅಂಗಡಿಗಳನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೂ ವ್ಯಾಪಾರಿಗಳು ಇಂದು ಜೆ.ಕೆ.ಮೈದಾನದಲ್ಲಿ ಜಾಗ ಗುರುತಿಸಿಕೊಂಡು…
ಮೈಸೂರಿನ ಹಲವೆಡೆ ಮುಂದುವರಿದ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್
August 19, 2020ಮೈಸೂರು, ಆ.18(ಆರ್‍ಕೆಬಿ)- ಹೆಚ್ಚುತ್ತಿರುವ ಕೊರೊನಾ ಸೋಂಕಿ ತರ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೈಸೂರಿನ ಹಲವೆಡೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ಆರ್‍ಎಟಿ) ಶಿಬಿರ ನಡೆಸಲಾಗುತ್ತಿದ್ದು, ಮಂಗಳವಾರವೂ ಪರೀಕ್ಷೆ ನಡೆಸುವುದನ್ನು ಮುಂದುವರಿಸಲಾಯಿತು. ಪುರಭವನ ಆವರಣ, ಹೆಬ್ಬಾಳ ಸಿಐಟಿಬಿ ಛತ್ರ, ಉದಯಗಿರಿಯ ಖುಬಾ ಸ್ಕೂಲ್, ರಾಜೀವ್‍ನಗರದ ಅಲ್-ಕರೀಂ ಸ್ಕೂಲ್, ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರ್‍ಎಟಿ ನಡೆಯುತ್ತಿದ್ದು, ಸಾರ್ವಜನಿಕರೇ ನೇರವಾಗಿ ಬಂದು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಪುರಭವನ ಆವರಣದಲ್ಲಿ ಸೋಮವಾರ 180 ಮಂದಿ ಆರ್‍ಎಟಿಗೆ ಒಳಪಟ್ಟಿದ್ದು,…
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
August 19, 2020ಮೈಸೂರು, ಆ.18- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಆಗಸ್ಟ್ 20ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ನೆಲ್ಲಿತಾಳಪುರ, ಕುರಿಹುಂಡಿ, ಹರದನಹಳ್ಳಿ ಮತ್ತು ದುಗ್ಗಳ್ಳಿ ಗ್ರಾಮಗಳು ಮತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ ಅಂದೇ ಇದೇ ವೇಳೆ ಹೆಮ್ಮರಗಾಲ, ಕುಂಬ್ರಳ್ಳಿ, ಮಾಡ್ರಳ್ಳಿ, ಶ್ರೀನಗರ, ಸಿಂಗಾರಿಪುರ, ಗೊಣತಗಾಲ, ಹೆಡತಲೆ, ಭುಜಂಗಯ್ಯನಹುಂಡಿ, ಮಲ್ಲಹಳ್ಳಿ, ಹಂಪಾಪುರ, ಹಳೇಪುರ ವ್ಯಾಪ್ತಿಯ ಗ್ರಾಮಗಳು ಮತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ…
ಮೈಸೂರು ಎಸ್ಪಿಗೆ ಕೊರೊನಾ ಸೋಂಕು ಹೋಂ ಕ್ವಾರಂಟೈನ್‍ನಲ್ಲಿ ಸಿ.ಬಿ.ರಿಷ್ಯಂತ್
August 19, 2020ಮೈಸೂರು, ಆ. 18(ಆರ್‍ಕೆ)- ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಸೋಮವಾರ ರಿಷ್ಯಂತ್ ಅವರನ್ನು ರ್ಯಾಪಿಡ್ ಆ್ಯಂಟಿಜೆನ್ ಕಿಟ್‍ನಲ್ಲಿ ಪರೀಕ್ಷಿಸಿದಾಗ ವರದಿಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ಯಲ್ಲಿ ಅವರು ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಎಸ್ಪಿ ಅವರ ಕಚೇರಿ, ಕಟ್ಟಡವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ಅವರ ಸಂಪರ್ಕಿತರೆಲ್ಲರನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ. ಸರ್ಕಲ್ ಇನ್ಸ್‍ಪೆಕ್ಟರ್ ಕಚೇರಿ ಸೀಲ್‍ಡೌನ್: ಮೂವರು…
ಸೋಮವಾರ ಮೈಸೂರು ಜಿಲ್ಲೆಯಲ್ಲಿ 597 ಹೊಸ ಸೋಂಕಿತರು: 11 ಸಾವಿರ ಗಡಿ ದಾಟಿದ ಒಟ್ಟು ಸಂಖ್ಯೆ ರಾಜ್ಯದಲ್ಲಿ 6317 ಸೋಂಕಿತರು
August 18, 2020ಮೈಸೂರು, ಆ.17(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 597 ಕೊರೊನಾ ಪ್ರಕರಣ ವರದಿಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 11 ಸಾವಿರ ಗಡಿ ದಾಟಿದೆ. ಹೊಸ 597 ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕಿತರು 239, ಟ್ರಾವಲ್ ಹಿಸ್ಟರಿ ಇರುವವರು 197, ವಿಷಮ ಶೀತ ಜ್ವರ(ಐಎಲ್‍ಐ) ಇರುವವರು 144 ಹಾಗೂ ಉಸಿರಾಟ ಸಮಸ್ಯೆ(ಸಾರಿ) ಇರುವವರು 17 ಮಂದಿ ಇದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 11,132ಕ್ಕೆ ಏರಿಕೆಯಾಗಿದೆ. ಸೋಮವಾರ 289 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 6,764…
ಸಾತಗಳ್ಳಿ ಬಸ್ ನಿಲ್ದಾಣ ಸಮುಚ್ಛಯದಲ್ಲಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿ
August 18, 2020ಮೈಸೂರು, ಆ. 17(ಆರ್‍ಕೆ)- ಮೈಸೂರಿನ ಮಹ ದೇವಪುರ ರಸ್ತೆ ಹಾಗೂ ರಿಂಗ್ ರೋಡ್ ಜಂಕ್ಷನ್‍ನಲ್ಲಿರುವ ಸಾತ ಗಳ್ಳಿ ಬಸ್ ನಿಲ್ದಾಣ ಸಮುಚ್ಛಯ ದಲ್ಲಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿ ಎಂದು ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಮೈಸೂರಲ್ಲಿ ಆ್ಯಂಟಿಜೆನ್ ಕಿಟ್‍ಗಳ ಮೂಲಕ ಪರೀಕ್ಷೆ ತೀವ್ರಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗುತ್ತಿವೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂಜಾ…
ಮೈಸೂರಲ್ಲಿ ಬಿಜೆಪಿ ವತಿಯಿಂದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ ಆತ್ಮೀಯ ಅಭಿನಂದನೆ ಸಲ್ಲಿಕೆ
August 18, 2020ಮೈಸೂರು, ಆ.17(ಎಂಕೆ)- ಬಿಜೆಪಿ ರಾಜ್ಯ ಉಪಾ ಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ಮೈಸೂರು ನಗರ, ಗ್ರಾಮಾಂತರ ಮತ್ತು ಯುವ ಮೋರ್ಚಾ ಘಟಕದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಆತ್ಮೀಯವಾಗಿ ಅಭಿನಂದಿಸಿದರು. ನಗರದ ಚಾಮರಾಜಪುರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಬಿಜೆಪಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಹಿರಿಯ ಮುಖಂಡರು, ಕಾರ್ಯ ಕರ್ತರು ವಿಜಯೇಂದ್ರ ಅವರಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿದ ಬಳಿಕ…
ಬಿಸಿಯೂಟ ಮಹಿಳೆಯರ ಬಂಧನ ಖಂಡಿಸಿ ಪ್ರತಿಭಟನೆ
August 18, 2020ಮೈಸೂರು, ಆ.17(ಪಿಎಂ)- ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಬೆಂಗಳೂರು ನಿವಾಸಕ್ಕೆ ತೆರಳಿದ್ದ ಅಕ್ಷರ ದಾಸೋಹ ಯೋಜನೆ ಅಡಿಯ 70 ಮಂದಿ ಮಹಿಳೆಯರನ್ನು ಪೊಲೀ ಸರು ಬಂಧಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬಂಧಿ ಸಿರುವ 70 ಮಂದಿ ಬಿಸಿಯೂಟದ…
ಬೆಂಗಳೂರು ಡಿಜೆ, ಕೆಜಿ ಹಳ್ಳಿ ಗಲಭೆ ಸಂಬಂಧ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ದೇವೇಗೌಡರ ಆಗ್ರಹ
August 18, 2020ಬೆಂಗಳೂರು, ಆ. 17(ಕೆಎಂಶಿ)- ನಗ ರದ ಡಿ.ಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತು ಹೈಕೋರ್ಟ್‍ನ ಹಾಲಿ ನ್ಯಾಯಾ ಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಗ್ರಹಿಸಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಶಾಸ ಕರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು ಗಳು ಮತ್ತು ಜಿಲ್ಲಾ ಮುಖಂಡರ ಜೊತೆ ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ವಿಷಯ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನ ವಿರೋಧಿ…
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ; ತನ್ವೀರ್‍ಸೇಠ್
August 18, 2020ಮೈಸೂರು, ಆ.17(ಆರ್‍ಕೆ)- ಬೆಂಗಳೂರಿನ ಕೆಜಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವುದು ಸರ್ಕಾರದ ಆದ್ಯ ಜವಾಬ್ದಾರಿ. ಅದನ್ನು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ ಎಂದು ಎನ್‍ಆರ್ ಕ್ಷೇತ್ರದ ಶಾಸಕ ತನ್ವೀರ್‍ಸೇಠ್ ತಿಳಿಸಿದ್ದಾರೆ. ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರ ಕೆಲಸ. ಆದರೆ ಎಸ್‍ಡಿಪಿಐ ಅಥವಾ ಮತ್ತೊಂದು ಸಂಘ ಟನೆ ನಿಷೇಧಿಸಬೇಕು ಎಂಬುದನ್ನು ಬಿಂಬಿಸುತ್ತಿರುವುದು ಎಷ್ಟರ…










