ಮೈಸೂರು, ಆ.20(ಆರ್‍ಕೆಬಿ)- ಶುಕ್ರವಾರ ಗೌರಿ, ಶನಿವಾರ ಗಣೇಶ ಹಬ್ಬ ಇರುವುದರಿಂದ ಗುರುವಾರ ಮೈಸೂರಿನ ಪ್ರಮುಖ ದೇವರಾಜ ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರ ನಡೆಯಿತು. ಹೂವಿನ ಅಂಗಡಿ ಗಳನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸಿದ್ದರಿಂದ ದೇವ ರಾಜ ಮಾರುಕಟ್ಟೆಯಲ್ಲಿ ಗುರುವಾರ ಜನಜಂಗುಳಿ ಎಂದಿ ನಂತೆ ಇರಲಿಲ್ಲ. ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಕೊಳ್ಳುವವರಷ್ಟೇ ಇದ್ದರು. ಜನಸಂದಣಿ ಕಡಿಮೆ ಇದ್ದಿದ್ದರಿಂದ ವ್ಯಾಪಾರ ಸರಾಗ ನಡೆಯುತ್ತಿತ್ತು. ಮಾಮೂಲಿ ದಿನಗಳಿಗಿಂತ ಬಾಳೆಹಣ್ಣು, ತೆಂಗಿನ ಕಾಯಿ, ಬಾಳೆ ಎಲೆ, ಅವರೆಕಾಯಿ ಇನ್ನಿತರೆ ತರಕಾರಿ ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ…
ಅರಸು ಹೆಸರಲ್ಲಿ ಪ್ರಶಸ್ತಿ ನೀಡದ್ದಕ್ಕೆ ಶಾಸಕ ಹೆಚ್‍ಪಿಎಂ ನೇತೃತ್ವದಲ್ಲಿ ಪ್ರತಿಭಟನೆ
August 21, 2020ಮೈಸೂರು, ಆ.20(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಹೆಸರಿನಲ್ಲಿ 2 ವರ್ಷದಿಂದ ಪ್ರಶಸ್ತಿ ನೀಡದೆ ದೇವರಾಜ ಅರಸು ಅವರನ್ನು ಅವಮಾನಿಸ ಲಾಗಿದೆ ಎಂದು ಕಲಾಮಂದಿ ರದ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಯಿತು. ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ಅರಸು 105ನೇ ಜನ್ಮದಿನಾಚರಣೆ ಕಾರ್ಯಕ್ರಮ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಉಪಸ್ಥಿತಿಯಲ್ಲಿ ಕಲಾಮಂದಿರ ಮನೆಯಂಗಳದಲ್ಲಿ ನಡೆಯುತ್ತಿದ್ದರೆ, ಹೊರಗೆ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿ ಭಟನಾಕಾರರು…
ಮೈಸೂರು-ಮಡಿಕೇರಿ ಎಕ್ಸ್‍ಪ್ರೆಸ್ ಹೈವೇಗೆ ಭೂಸ್ವಾಧೀನಕ್ಕಾಗಿ ಸರ್ವೆ ಕಾರ್ಯ ಆರಂಭ
August 20, 2020ಮೈಸೂರು, ಆ.19 (ಆರ್‍ಕೆ) – ಮೈಸೂರು-ಮಡಿಕೇರಿ ಎಕ್ಸ್‍ಪ್ರೆಸ್ ವೇ ಯೋಜನೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಹೆಚ್‍ಎಐ)ವು ಭೂ ಸ್ವಾಧೀನ ಸಂಬಂಧ ಸರ್ವೆ ಕಾರ್ಯ ವನ್ನು ಆರಂಭಿಸಿದೆ. ಭೂಸ್ವಾಧೀನ ಪರಿಹಾರ, ಸಮೀಕ್ಷಾ ವೆಚ್ಚ ಸೇರಿದಂತೆ ಮೈಸೂರು-ಮಡಿಕೇರಿ ಎಕ ನಾಮಿಕ್ ಕಾರಿಡಾರ್ ಎಕ್ಸ್‍ಪ್ರೆಸ್ ವೇ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 6 ಸಾವಿರ ಕೋಟಿ ರೂ. ಹಣವನ್ನು ವೆಚ್ಚ ಮಾಡುತ್ತಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಈ ರಸ್ತೆಯು ಮಡಿಕೇರಿಯಿಂದ ಮೈಸೂರು ನಗರಕ್ಕೆ ಸಂಪರ್ಕ…
ಜೀವನಾಧಾರವಾಗಿದ್ದ ವಾಹನವನ್ನೇ ಮಾರಬೇಕಾದ ಸಂಕಷ್ಟದಲ್ಲಿ ಟ್ಯಾಕ್ಸಿ ಚಾಲಕರು
August 20, 2020ಮೈಸೂರು, ಆ.19(ಪಿಎಂ)- ಮೊದಲೇ ಕೊರೊನಾ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಬದುಕು ಈಗಲೂ ಸುಧಾರಣೆ ಕಂಡಿಲ್ಲ. ಲಾಕ್‍ಡೌನ್ ಮುಗಿದಿದ್ದರೂ ಸೋಂಕು ಭೀತಿಯಿಂದ ಪ್ರವಾಸೋದ್ಯಮ ಚುರುಕುಗೊಂಡಿಲ್ಲ. ಹೀಗಾಗಿ ಕೆಲಸವಿಲ್ಲದೆ, ವೇತನ ಕಡಿತ ದಿಂದ ಚಾಲಕರು ಕಂಗಾಲಾಗಿದ್ದಾರೆ. ಟ್ರಾವೆಲ್ ಕಂಪನಿಗಳಲ್ಲಿ ಬಹುತೇಕರು ಸ್ವಂತ ಕಾರುಗಳನ್ನೇ ಓಡಿಸಿ ಜೀವನ ದೂಡು ತ್ತಿರುವವರು ಇದ್ದಾರೆ. ಆದರೆ ಈಗ ಕೈಯಲ್ಲಿ ಕೆಲಸವಿಲ್ಲ, ಇದ್ದರೂ ಕನಿಷ್ಠ ಜೀವನ ಸಾಗಿ ಸುವಷ್ಟೂ ವೇತನ ಸಿಗುತ್ತಿಲ್ಲ. ಈ ನಡುವೆ ವಾಹನ ಖರೀದಿ ಸಾಲದ ಮಾಸಿಕ ಕಂತು…
ರಾಜ್ಯದಲ್ಲಿ ಅತಿವೃಷ್ಟಿ ಯಶಸ್ವಿ ನಿರ್ವಹಣೆ ಕಂದಾಯ ಸಚಿವ ಅಶೋಕ್ ವಿಶ್ವಾಸ
August 20, 2020ಬೆಂಗಳೂರು,ಆ.19(ಕೆಎಂಶಿ)-ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆ ಗೂಡಿ, ಅತಿವೃಷ್ಟಿಯನ್ನು ಎದುರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಸಹಮತ ವಿದೆ, ಒಡಂಬಡಿಕೆ ಇದೆ. ಜನರ ಕೆಲಸವನ್ನು ಹಂಚಿಕೊಂಡು ಮಾಡಿ, ಸರ್ಕಾರದ ಸವಲತ್ತುಗಳು ಕೆಳಮಟ್ಟಕ್ಕೆ ತಲುಪುವಂತೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿ ಹೊಂದಾಣಿಕೆ ಇಲ್ಲ, ಅದೇ ಬುದ್ಧಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿರುವುದನ್ನು ಅಲ್ಲಗಳೆದ ಅಶೋಕ್, ಭಾರೀ ಮಳೆಯಿಂದ ಉಂಟಾದ ನೆರೆ ಹಿನ್ನೆಲೆ ಯಲ್ಲಿ…
ಆರ್‍ಸಿಐಎಸ್‍ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
August 20, 2020ಮೈಸೂರು, ಆ.19- ಮೈಸೂರಿನ ರಾಯೇಲ್ ಕಾಂಕರ್ಡ್ ಇಂಟರ್ ನ್ಯಾಷ ನಲ್ ಸ್ಕೂಲ್ (ಆರ್‍ಸಿಐಎಸ್)ನಲ್ಲಿ ಇತ್ತೀ ಚೆಗೆ 74ನೇ ಸ್ವಾತಂತ್ರ್ಯೋತ್ಸವವನ್ನು ದೇಶ ಭಕ್ತಿ ಘೋಷಣೆಗಳೊಂದಿಗೆ ಸಡಗರ ದಿಂದ ಆಚರಿಸಲಾಯಿತು. ಆರ್‍ಸಿಐಎಸ್ ಮೈಸೂರು ಅಧ್ಯಕ್ಷ ಶಿವ ಪ್ರಸಾದ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ನಿಖಿಲ್ ಶಿವಪ್ರಸಾದ್ ಮುಖ್ಯ ಅತಿಥಿ ಯಾಗಿದ್ದು, ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡ ಲಾಯಿತು. ಶಿಕ್ಷಕ ಸಮೂಹ `ಝಂಡಾ ಊಂಚಾ’, `ಹಮ್ ಸಬ್ ಭಾರತೀಯ ಹೈ’ ಮೊದಲಾದ ದೇಶಭಕ್ತಿ ಗೀತೆಗಳನ್ನು ಹಾಡಿದರು. ಬಳಿಕ ಪ್ರಾಂಶುಪಾಲರಾದ ಪಿ.ಅರೋಕಿಯಾ…
ಎಸ್‍ಪಿಬಿಗೆ ಇನ್ನೂ ವೆಂಟಿಲೇಟರ್‍ನಲ್ಲೇ ಚಿಕಿತ್ಸೆ ತಮಿಳು ಚಿತ್ರರಂಗ ನಾಳೆ ಸಾಮೂಹಿಕ ಪ್ರಾರ್ಥನೆ
August 20, 2020ಚೆನೈ,ಆ.19: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲಿ ಎಂದು ತಮಿಳು ಚಿತ್ರರಂಗದ ಹೆಸರಾಂತ ನಟ-ನಟಿಯರು, ಸಂಗೀತ ನಿರ್ದೇ ಶಕರು ಹಾಗೂ ಚಿತ್ರ ರಂಗದ ಇತರರು ನಾಳೆ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲಹಾಸನ್, ಎ.ಆರ್. ರೆಹಮಾನ್, ಇಳಯರಾಜ, ಭಾರತಿರಾಜಾ ಸೇರಿದಂತೆ ಹಲವರು ಈ ಪ್ರಾರ್ಥನೆ ಮಾಡಲಿದ್ದಾರೆ. ಆದರೆ ಕೊರೊನಾ ಸೋಂಕು ಇರು ವುದರಿಂದ ಸಾರ್ವಜನಿಕ ಸ್ಥಳದಲ್ಲಿ ಈ ಸಾಮೂಹಿಕ ಪ್ರಾರ್ಥನೆ ಮಾಡದೆ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿ ಸಲಿದ್ದಾರೆ. ಈ…
ನಾನು ಆಸ್ಪತ್ರೆಗೆ ಹೋದಾಗ ನೆರೆಹೊರೆಯವರು ಮನೆಗೆ ಹಾಲು, ತರಕಾರಿ ತಂದುಕೊಟ್ಟು ನೆರವಾದರು
August 20, 2020ಮೈಸೂರು, ಆ.19(ವೈಡಿಎಸ್)- `ನಾನು ಕೊರೊನಾ ದಿಂದ ಆಸ್ಪತ್ರೆಗೆ ಹೋದಾಗ ಕ್ವಾರಂಟೈನ್‍ನಲ್ಲಿದ್ದ ಕುಟುಂಬ ದವ್ರಿಗೆ ಸಂಬಂಧಿಕರು, ನೆರೆಹೊರೆಯವರು ದಿನಸಿ ಪದಾರ್ಥ ಗಳನ್ನು ತಂದುಕೊಟ್ಟು ಕಷ್ಟಕ್ಕೆ ಸ್ಪಂದಿಸಿದರು. ಆದರೆ, ಕೊರೊನಾ ಗೆದ್ದು ಮನೆಗೆ ಬಂದ 2 ದಿನಕ್ಕೇ ಪತ್ನಿ, ಮಗಳಿಗೆ ಪಾಸಿಟಿವ್ ಬಂದಿದ್ದು ನೋವುಂಟು ಮಾಡಿತು’… ಇದು ಕೊರೊನಾದಿಂದ ಗುಣಮುಖರಾದ ಸಾತಗಳ್ಳಿ ನಿವಾಸಿ ಫಾರ್ಮಾಸಿಸ್ಟ್‍ವೊಬ್ಬರ (ರೋಗಿ ಸಂಖ್ಯೆ ಎಂವೈಎಸ್2083) ಬೇಸರದ ನುಡಿಗಳು. ನಾನು ಮೆಡಿಕಲ್ ಸ್ಟೋರ್‍ವೊಂದರಲ್ಲಿ ಫಾರ್ಮಸಿಸ್ಟ್ ಆಗಿರುವೆ. ಜು.9ರಂದು ಸ್ವಲ್ಪ ಜ್ವರ ಬಂತು. ಮಾತ್ರೆ ತಗೊಂಡೆ. ಜ್ವರ ಹೋಯ್ತು….
ಎಸ್‍ಬಿಎಂ ಬಡಾವಣೆ ಉದ್ಯಾನದಲ್ಲಿ ಅಕ್ರಮ ಶೆಡ್, ಮುಡಾಗೆ ದೂರು
August 20, 2020ಮೈಸೂರು, ಆ.19(ಎಂಕೆ)- ಮೈಸೂರಿನ ಬೋಗಾದಿ ಮುಖ್ಯರಸ್ತೆಯಲ್ಲಿರುವ ಎಸ್‍ಬಿಎಂ ಬಡಾ ವಣೆಯ ‘ಎ’ ಬ್ಲಾಕ್ ನಲ್ಲಿರುವ ಪಾರ್ಕ್ ಆವರಣದೊಳಗೆ ಅಕ್ರಮವಾಗಿ ನಿರ್ಮಿ ಸಿರುವ ಶೆಡ್ ತೆರವು ಗೊಳಿಸುವಂತೆ ಬಡಾ ವಣೆ ನಿವಾಸಿಗಳು ಒತ್ತಾಯಿಸಿದ್ದಾರೆ. 23 ವರ್ಷಗಳ ಹಿಂದೆ ಎಸ್‍ಬಿಎಂ ಗೃಹ ನಿರ್ಮಾಣ ಸಹಕಾರ ಸಂಘದಿಂದ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ಪಾರ್ಕ್ ಎಂದು ಗುರುತಿಸಿರುವ ಜಾಗದಲ್ಲಿ ಬೋಗಾದಿ ನಿವಾಸಿಯೊಬ್ಬರು ಅಕ್ರಮವಾಗಿ ಶೆಡ್ ನಿರ್ಮಿಸಿ ತಿಂಗಳು ಕಳೆದರೂ ತೆರವು ಮಾಡಿಲ್ಲ. ಬಡಾವಣೆ ನಿವಾಸಿಗಳು ಪ್ರಶ್ನಿಸಿದರೆ ಈ ಜಾಗ ನಮ್ಮದು ಎನ್ನುತ್ತಿದ್ದಾರೆ ಎಂದು ‘ಮೈಸೂರು…
ಮೈವಿವಿ ಪಿಹೆಚ್.ಡಿಗಾಗಿ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ
August 20, 2020ಮೈಸೂರು, ಆ.19 (ಎಂಕೆ)- ಕೋವಿಡ್-19 ಹಿನ್ನೆಲೆ ಮೈಸೂರು ವಿಶ್ವವಿದ್ಯಾ ಲಯದ ಇತಿಹಾಸದಲ್ಲಿಯೇ ಪಿಹೆಚ್‍ಡಿ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ನಾಲ್ಕು ಬಾರೀ ಅವಧಿ ವಿಸ್ತರಣೆ ಮಾಡಿದಂತಾಗಿದೆ. ಕೊರೊನಾ ಸೋಂಕು ಹರಡುವುದನ್ನು ನಿಯಂ ತ್ರಿಸುವ ಹಿನ್ನೆಲೆ ಲಾಕ್‍ಡೌನ್ ಜಾರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇನ್ನಿತರೆ ನಿಯಮಗಳ ಜಾರಿಯಾದ್ದರಿಂದ ಪಿಹೆಚ್‍ಡಿ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ 2020ರ ಫೆಬ್ರವರಿ 18ರಿಂದ ಮಾರ್ಚ್ 16ರವರೆಗೆ ನೀಡಿದ್ದ ಅವಕಾಶ ವನ್ನು ಮೊದಲ ಬಾರಿಗೆ ವಿಸ್ತರಿಸಿ,…










