ಮೈಸೂರು,ಆ.24(ಎಂಟಿವೈ)- ಯಾದವ ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಮೈಸೂರು ನಗರ ಹಾಗೂ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷ ಕೆ.ಶಿವಾನಂದ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದವ ಅಥವಾ ಗೊಲ್ಲ ಸಮುದಾಯ ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಹಿಂದುಳಿದಿದೆ. ರಾಜಕೀಯ ಕ್ಷೇತ್ರದಲ್ಲಿ ಸಮುದಾಯ ಪ್ರತಿನಿಧಿಸುವ ನಾಯಕರ ಕೊರತೆ ಎದ್ದು ಕಾಣುತ್ತಿದೆ. ರಾಜ್ಯಾದ್ಯಂತ 40 ಲಕ್ಷ ಜನ ಸಂಖ್ಯೆ ಹೊಂದಿರುವ ಯಾದವ ಸಮುದಾಯ ಅತ್ಯಂತ ಹಿಂದುಳಿದ…
ಇಂದು, ನಾಳೆ, ನಾಳಿದ್ದು ವಿದ್ಯುತ್ ವ್ಯತ್ಯಯ
August 25, 2020ಮೈಸೂರು, ಆ.24- ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತ ವತಿಯಿಂದ ಆ.25ರಂದು ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಕೈಗೊಳ್ಳ ಲಾಗಿದೆ. ಈ ಹಿನ್ನೆಲೆ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಯುನಿವರ್ಸಿಟಿ ಕ್ಯಾಂಪಸ್, ವಾಗ್ದೇವಿ ನಗರ, ಯುನಿವರ್ಸಿಟಿ ಕ್ವಾಟ್ರಸ್, Speech & hearing, Regional Institute of Education ಹಾಗೂ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ. ಆ.26ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯ, ಸಾತಗಳ್ಳಿ, ಗಳಿಗರಹುಂಡಿ,…
ಮುಷ್ಕರ ಹಿಂಪಡೆದ ವೈದ್ಯರು
August 24, 2020ಮೈಸೂರು, ಆ.23(ಆರ್‍ಕೆಬಿ)- ನಂಜನ ಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸಂಬಂಧ 3 ದಿನದಿಂದ ಮುಷ್ಕರ ನಡೆಸು ತ್ತಿದ್ದ ಸರ್ಕಾರಿ ವೈದ್ಯರು ಕೆಲವು ಷರತ್ತು ಗಳೊಂದಿಗೆ ಇಂದು ಮುಷ್ಕರವನ್ನು ಹಿಂಪಡೆ ದಿದ್ದು, ಸೋಮವಾರ (ಆ.24)ದಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿ ಕಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷರೂ ಆದ ಜಿಲ್ಲಾಧ್ಯಕ್ಷ ಡಾ.ದೇವಿ ಆನಂದ ಇಂದಿಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಡಾ.ನಾಗೇಂದ್ರ ಸಾವು…
ವೈದ್ಯರಿಗೆ ಸಚಿವ ಎಸ್‍ಟಿಎಸ್ ಅಭಿನಂದನೆ
August 24, 2020ಮೈಸೂರು, ಆ.23(ಆರ್‍ಕೆಬಿ)- ಡಾ.ನಾಗೇಂದ್ರ ಸಾವಿಗೆ ನ್ಯಾಯಕೋರಿ ನಡೆಸು ತ್ತಿದ್ದ ಮುಷ್ಕರವನ್ನು ವೈದ್ಯರು ಹಿಂಪಡೆದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಧನ್ಯವಾದ ಹೇಳಿ ದ್ದಾರೆ. 4-5 ತಿಂಗಳಿಂದ ಕೋವಿಡ್-19 ಮಹಾ ಮಾರಿ ವಿರುದ್ಧ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಜಿಲ್ಲಾಡಳಿತ ಸೇರಿ ದಂತೆ ಅನೇಕ ಇಲಾಖೆಗಳು ಒಂದು ತಂಡವಾಗಿ ಅವಿರತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದನ್ನು ಮರೆಯ ಲಾಗದು. ಕೋವಿಡ್ ಸಂದರ್ಭ ವೈದ್ಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಬಗೆಹರಿಸಲಿ ಎಂದು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದರು. ಎಲ್ಲಾ ಸಮಸ್ಯೆಗಳು…
ಮೈಸೂರು ಜಿಪಂ ಸಿಇಒ ವಿರುದ್ಧ ಎಫ್‍ಐಆರ್ ಸಿಇಒ ವರ್ಗಾವಣೆ, ಡಿಸಿಗೆ ಹೆಚ್ಚುವರಿ ಹೊಣೆ
August 24, 2020ಮೈಸೂರು, ಆ.23(ಆರ್‍ಕೆಬಿ)- ನಂಜನಗೂಡು ತಾಲೂಕು ಆರೋ ಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂ ಧಿಸಿ ಮೈಸೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಡಾ.ನಾಗೇಂದ್ರ ಅವರ ತಂದೆ ರಾಮಕೃಷ್ಣ ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 306ರನ್ವಯ ಎಫ್‍ಐಆರ್ ದಾಖಲಿಸಿದ್ದಾರೆ. ಸಿಇಓ ವರ್ಗಾವಣೆ: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರಿಗೆ ಕಿರುಕುಳ ನೀಡಿ, ಅವರ ಸಾವಿಗೆ ಕಾರಣರಾದರು ಎಂಬ ಆರೋಪಕ್ಕೆ ಗುರಿ ಯಾಗಿರುವ ಮೈಸೂರು…
ವರ್ಷಾಂತ್ಯಕ್ಕೆ ಕೊರೊನಾಗೆ ಲಸಿಕೆ
August 24, 2020ಗಾಜಿಯಾಬಾದ್, ಆ.23- ದೇಶದ ಪ್ರಥಮ ಕೋವಿಡ್ ಲಸಿಕೆ ವರ್ಷಾಂತ್ಯಕ್ಕೆ ದೊರೆ ಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ. ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆ ಯೊಂದು 3ನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದ್ದು, ಈ ವರ್ಷಾಂತ್ಯಕ್ಕೆ ಲಸಿಕೆ ಅಭಿವೃದ್ಧಿಯಾಗುವ ವಿಶ್ವಾಸ ಹೊಂದಿರುವುದಾಗಿ ಅವರು ಹೇಳಿದ್ದಾರೆ. ಎನ್‍ಡಿಆರ್‍ಎಫ್-10 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ವಿರುದ್ಧದ ಎಂಟು ತಿಂಗಳ ಹೋರಾಟದಲ್ಲಿ ದೇಶದಲ್ಲಿ ಶೇ.75 ರಷ್ಟು ಉತ್ತಮ ಚೇತರಿಕೆ ಪ್ರಮಾಣವಿದೆ. ಒಟ್ಟಾರೆ 2.2 ಮಿಲಿಯನ್ ರೋಗಿಗಳು…
ಎಐಸಿಸಿ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾದ ಸೋನಿಯಾ ಗಾಂಧಿ
August 24, 2020ಇಂದು ಸಿಡಬ್ಲ್ಯೂಸಿ ಸಭೆ ನವದೆಹಲಿ,ಆ.23-ಪಕ್ಷದ ಹಿತ ದೃಷ್ಟಿ ಯಿಂದ ಅಗತ್ಯ ಬಿದ್ದರೆ ಅಧ್ಯಕ್ಷ ಸ್ಥಾನದಿಂದ ಕೆಳ ಗಿಳಿಯುವುದಾಗಿ ಸೋನಿಯಾ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕನ ಅಗತ್ಯವಿದೆ. ಹೀಗಾಗಿ ಉನ್ನತ ಮಟ್ಟದ ಹುದ್ದೆಯಲ್ಲಿ ಜನರಿಗೆ ಹೆಚ್ಚು ಪರಿಚಯವಾಗಿರುವ ಹಾಗೂ ಪಕ್ಷದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ನಾಯಕ ನನ್ನು ಆಯ್ಕೆ ಮಾಡಬೇಕು ಎಂದು 23 ಕಾಂಗ್ರೆಸ್ ನಾಯಕರು ಒಟ್ಟಾಗಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಔಪಚಾರಿಕ ಉತ್ತರವನ್ನು…
ದೇವರಾಜ ಮಾರುಕಟ್ಟೆ ಸ್ಥಳಾಂತರದಿಂದ ಹಬ್ಬದ ಆದಾಯಕ್ಕೆ ಕುತ್ತು
August 24, 2020ಮೈಸೂರು, ಆ.23(ಪಿಎಂ)- ಮೈಸೂರಿನ ದೇವರಾಜ ಮಾರುಕಟ್ಟೆ ಹೂ ಮಾರಾಟದ ಅಂಗಡಿಗಳನ್ನು ಜೆಕೆ ಮೈದಾನಕ್ಕೆ ತಾತ್ಕಾಲಿಕ ಸ್ಥಳಾಂತರ ಮಾಡಿದ್ದು ವರ್ಷಕ್ಕೊಂದು ಹಬ್ಬದ ಆದಾಯಕ್ಕೂ ಕುತ್ತಾಯಿತು ಎಂದು ಹೂ ವ್ಯಾಪಾರಿ ಗಳು ಅಳಲು ತೋಡಿಕೊಂಡಿದ್ದಾರೆ. ಜೆಕೆ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆಗೆ ಮೂಲ ಸೌಲಭ್ಯಕ್ಕೂ ನಾವೇ ವೆಚ್ಚ ಮಾಡಿ ದ್ದೇವೆ. ಮಹಾನಗರ ಪಾಲಿಕೆಯಿಂದ ಮೈದಾನದ ವ್ಯವಸ್ಥೆ ಬಿಟ್ಟರೆ ಬೇರಾವುದೇ ಸೌಲಭ್ಯ ಒದಗಲಿಲ್ಲ ಎಂದು ಹೂ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಗೌರಿ-ಗಣೇಶ ಹಬ್ಬದಲ್ಲಿ ಮಾರುಕಟ್ಟೆಯಲ್ಲಿ ಜನ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಪಾಲಿಕೆ…
ಶ್ರೀರಾಮುಲು, ಡಾ.ಸುಧಾಕರ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
August 24, 2020ಮೈಸೂರು, ಆ.23(ಎಂಟಿವೈ)- ನಂಜನಗೂಡು ತಾಲೂಕು ಆರೋಗ್ಯಾ ಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕ ರಣವನ್ನು ಬಿಜೆಪಿ ಸರ್ಕಾರ ಕಡೆಗಣಿ ಸುತ್ತಿದ್ದು, ಪ್ರಕರಣದ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ರಾಜೀನಾಮೆ ನೀಡುವುದ ರೊಂದಿಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದ್ದಾರೆ. ಮೈಸೂರು ಕಾಂಗ್ರೆಸ್ ಕಚೇರಿ ಸಭಾಂ ಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ ನೌಕರರಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ…
`ಭಯಪಟ್ಟು ಸಾಯುವುದಕ್ಕಿಂತ ಕೊರೊನಾ ಗೆಲ್ಲಬೇಕೆಂದು ಧೈರ್ಯದಿಂದಲೇ ಎದುರಿಸಿದೆವು’
August 24, 2020ಸಾತಗಳ್ಳಿ ನಿವಾಸಿ, ಕೊರೊನಾ ಗೆದ್ದ ವ್ಯಕ್ತಿಯ ಅನುಭವ ಕಥನ ಮೈಸೂರು, ಆ.23(ವೈಡಿಎಸ್)- `ಕುಟುಂಬದ ನಾಲ್ವರಿಗೂ ಕೊರೊನಾ ಪಾಸಿಟಿವ್ ಬಂದಾಗ ತುಂಬಾ ಭಯ ಆಗಿತ್ತು. ಗಟ್ಟಿ ಮನಸ್ಸಿಂದ ಕೊರೊನಾ ವಿರುದ್ಧ ಹೋರಾಡಿ ಗೆದ್ದೆವು’… `ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸ್ಬೇಕು. ಬಿಸಿನೀರು ಹೆಚ್ಚು ಕುಡೀಬೇಕು. ಧೈರ್ಯವಾಗಿ ಇರ್ಬೇಕು. ಇದಕ್ಕೆ ಧೈರ್ಯವೇ ಮದ್ದು’… ಇದು ಸಾತಗಳ್ಳಿ ನಿವಾಸಿ, ಕೊರೊನಾ ಗುಣಮುಖ(ಎಂವೈಎಸ್2556)ವ್ಯಕ್ತಿಯ ಅನುಭವದ ಮಾತುಗಳು. `ನನಗೆ ಕೊರೊನಾ ಹೇಗ್ಬಂತು ಎಂದು ಗೊತ್ತಿಲ್ಲ. 20 ದಿನಗಳಿಂದ ಜ್ವರ ದಿನಬಿಟ್ಟು ದಿನ ಬರ್ತಿತ್ತು….










