ಮೈಸೂರು,ಆ.24-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆಯುವ ಪ್ರವೇಶ, ಪ್ರಥಮ, ದ್ವಿತೀಯ ಮತ್ತು ತೃತೀಯ ಸೋಪಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, 9 ತಿಂಗಳುಗಳ ಕಾಲ ಸಾಮಾಜಿಕ ಕಾರ್ಯ ಗಳಲ್ಲಿ ತೊಡಗಿಸಿಕೊಂಡ ಕೌಟಿಲ್ಯ ವಿದ್ಯಾ ಲಯದ ವಿದ್ಯಾರ್ಥಿಗಳು, ರಾಜ್ಯ ಸರ್ಕಾ ರದ ವತಿಯಿಂದ ನಡೆಸಲಾಗುವ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿ, ‘ರಾಜ್ಯ ಪುರಸ್ಕಾರ್ ಪ್ರಶಸ್ತಿ’ಯನ್ನು ಪಡೆದಿದ್ದಾರೆ. ಗೈಡ್ಸ್‍ಗಳಾದ ಶುಭಾಂಗಿ, ಅಮೂಲ್ಯ, ಜಾನ್ವಿ ಚೇತನ್ ಪಟೇಲ್, ಸ್ಕೌಟ್ಸ್‍ಗಳಾದ ಧ್ಯಾನ್ ಕೆ.ಎನ್., ನಿತಿನ್ ಕೃಷ್ಣ, ಸಾಯಿತ್ ಪ್ರಕಾಶ್, ಶ್ರೇಯಸ್ ಕುಮಾರ್, ಲಿಖಿತ್…
ನಂಜನಗೂಡು ತಾಲೂಕು ನೂತನ ಆರೋಗ್ಯಾಧಿಕಾರಿ ಡಾ.ಈಶ್ವರ್ ಬಿ.ಕಾನಟ್ಕಿ
August 25, 2020ಮೈಸೂರು, ಆ. 24(ಆರ್‍ಕೆ)-ಡಾ.ನಾಗೇಂದ್ರ ಅವರ ಆತ್ಮ ಹತ್ಯೆಯಿಂದ ತೆರವಾಗಿದ್ದ ನಂಜನ ಗೂಡು ತಾಲೂಕು ಆರೋಗ್ಯಾಧಿ ಕಾರಿ ಸ್ಥಾನಕ್ಕೆ ಮೂಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಈಶ್ವರ್ ಬಿ. ಕಾನಟ್ಕಿ ಅವರನ್ನು ನಿಯೋಜಿಸ ಲಾಗಿದೆ. ನಂಜನಗೂಡು ತಾಲೂಕು ಪ್ರಭಾರ ತಾಲೂಕು ಆರೋಗ್ಯಾಧಿ ಕಾರಿಯಾಗಿ ಡಾ. ಈಶ್ವರ್ ಬಿ. ಕಾನಟ್ಕಿ ಅವರನ್ನು ನಿಯೋಜಿಸಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದ್ದು, ಅವರು ನಾಳೆ (ಆ. 25) ಅಧಿಕಾರ ವಹಿಸಿಕೊಳ್ಳುವರು. ನಂಜನಗೂಡು ತಾಲೂಕು ಪ್ರಭಾರ ಆರೋಗ್ಯಾಧಿಕಾರಿಯಾಗಿ…
ಪಾರ್ಕ್ ಪ್ರವೇಶ ನಿರ್ಬಂಧ ತೆರವಿಗೆ ಸಾರ್ವಜನಿಕರ ಆಗ್ರಹ
August 25, 2020ಮೈಸೂರು, ಆ.24 (ಎಸ್‍ಬಿಡಿ)- ಪಾರ್ಕ್ ಗಳಿಗೆ ಪ್ರವೇಶಾವಕಾಶ ನೀಡುವಂತೆ ಮೈಸೂರಿನ ನಾಗರಿಕರು ಆಗ್ರಹಿಸಿದ್ದಾರೆ. ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ಪಾರ್ಕ್‍ಗಳ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಮೇ ತಿಂಗ ಳಲ್ಲೇ ತೆರವು ಮಾಡಲಾಗಿತ್ತು. ಆದರೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದಷ್ಟು ನಿಬಂಧನೆ ವಿಧಿಸಲಾಯಿತು. ಪಾರ್ಕ್‍ಗಳಲ್ಲಿ ಜನ ಒಟ್ಟಿಗೆ ಸೇರದಂತೆ ನಿರ್ವಹಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಮೈಸೂರಿನಲ್ಲಿ ಪಾರ್ಕ್ ಗಳಿಗೆ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಅಧಿಕಾರಿಗಳ ಮಾಹಿತಿ ಪ್ರಕಾರ ನಗರ ಪಾಲಿಕೆ ವ್ಯಾಪ್ತಿಯಲ್ಲಿ…
ಪರಿಸರ ಸ್ನೇಹಿ ಅರಿಷಿಣ ಗಣಪನ ಅರ್ಥಪೂರ್ಣ ವಿಸರ್ಜನೆ
August 25, 2020ಮೈಸೂರು, ಆ.24(ಎಸ್‍ಪಿಎನ್)- ಅರಿಷಿಣದಲ್ಲಿ ತಯಾರಿಸಿದ ಪರಿಸರ ಸ್ನೇಹಿ ಗಣಪನನ್ನು ಧಾರ್ಮಿಕ ವಿಧಿ-ವಿಧಾನದಂತೆ ನೀರಿನಲ್ಲಿ ವಿಸರ್ಜಿಸಿ ಉದ್ಯಾನವನದ ಗಿಡಗಳಿಗೆ ಹಾಕುವ ಮೂಲಕ ಸ್ಪಂದನ ಟ್ರಸ್ಟ್ ಅಧ್ಯಕ್ಷ ಎಂ. ಜಯಶಂಕರ್ ಪರಿಸರ ಕಾಳಜಿ ಮೆರೆದಿ ದ್ದಾರೆ. ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿ ಅವರು ಸ್ವತಃ ತಾವೇ ಅರಿಷಿಣ ದಿಂದ ತಯಾರಿಸಿದ ಗಣಪನಿಗೆ ಅನಿಕೇತನ ರಸ್ತೆಯ ಉದ್ಯಾನವನದಲ್ಲಿ ಪ್ರತಿಷ್ಟಾಪಿಸಿ, ಕೊರೊನಾ ಸೋಂಕಿನಿಂದ ದೇಶಕ್ಕೆ ಒಳ್ಳೆಯ ದಾಗಲಿ ಎಂದು ಪ್ರಾರ್ಥಿಸಿ ವಿಸರ್ಜನೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಕುವೆಂಪುನಗರ ನಾಗರಿಕರ ಸ್ನೇಹ ಜೀವಿ ಬೀದಿ…
ಅಂಕಣಬರಹಕ್ಕೆ ಹೊಸ ಶೈಲಿ ಕೊಟ್ಟವರು ಪ್ರೊ. ಎಚ್ಚೆಸ್ಕೆ
August 25, 2020ಮೈಸೂರು, ಆ. 24- ಕ್ರಿಯಾಪದಗಳೇ ಇಲ್ಲದ ಸಣ್ಣ ಸಣ್ಣ ವಾಕ್ಯ ರಚನೆಯ ಹೊಸದೊಂದು ಶೈಲಿಯನ್ನು ಕನ್ನಡಕ್ಕೆ ಕೊಟ್ಟವರು ಪ್ರೊ. ಎಚ್ಚೆಸ್ಕೆ ಎಂದು ಹಿರಿಯ ಸಾಹಿತಿ ಹಾಗೂ ದತ್ತಪೀಠದ ಆಸ್ಥಾನ ವಿದ್ವಾನ್ ಡಾ. ಸಿಪಿಕೆ ನುಡಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು, ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಯುಕ್ತಾಶ್ರಯದಲ್ಲಿ ಹಿರಿಯ ಸಾಹಿತಿ ಪ್ರೊ. ಕೆ.ಭೈರವಮೂರ್ತಿ ನಿವಾಸ ದಲ್ಲಿ ಹಿರಿಯ ಅಂಕಣಕಾರ ಪ್ರೊ. ಎಚ್ಚೆಸ್ಕೆ ಜನ್ಮಶತಮಾನೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪ್ರೊ….
ನಾಳೆ ಕೆಲವೆಡೆ ನೀರು ಸರಬರಾಜು ವ್ಯತ್ಯಯ
August 25, 2020ಮೈಸೂರು, ಆ. 24- ವಿದ್ಯುತ್ ವ್ಯತ್ಯಯದ ಹಿನ್ನೆಲೆಯಲ್ಲಿ ಆ. 26ರಂದು ಮೈಸೂರು ನಗರ ಪಾಲಿಕೆ ವಾರ್ಡ್ ನಂ. 9ರಿಂದ 16, 28ರಿಂದ 39, 52, 53 ಇದಕ್ಕೆ ಸಂಬಂಧಪಟ್ಟ ಪ್ರದೇಶ ಗಳಾದ ಕೆಸರೆ, ರಾಜೇಂದ್ರನಗರ, ಸುಭಾಷ್‍ನಗರ, ಎನ್.ಆರ್.ಮೊಹಲ್ಲಾ, ಗಾಂಧಿನಗರ, ಉದಯ ಗಿರಿ, ರಾಜೀವ್‍ನಗರ, ಶಾಂತಿನಗರ, ಕಲ್ಯಾಣಗಿರಿ, ಡಾ. ರಾಜ್ ಕುಮಾರ್ ರಸ್ತೆಗೆ ಸೇರಿಕೊಂಡ ಪ್ರದೇಶಗಳು, ಯರಗನಹಳ್ಳಿ, ಸಿದ್ಧಾರ್ಥ ಬಡಾವಣೆ, ಆಲನಹಳ್ಳಿ, ನಂದಿನಿ ಬಡಾವಣೆ, ಗಿರಿ ದರ್ಶಿನಿ ಬಡಾವಣೆ, ಗೌಸಿಯಾನಗರ, ಕ್ಯಾತಮಾರನಹಳ್ಳಿ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ…
ವಾಟರ್ ವಾಲ್ವ್ ಚೇಂಬರ್‍ಗೆ ಉರುಳಿ ಬಿದ್ದ ಸ್ಕೂಟರ್: ಅದೃಷ್ಟವಶಾತ್ ಸವಾರ ಪಾರು
August 25, 2020ಮೈಸೂರು, ಆ.24(ಎಂಕೆ)-ಸುಮಾರು 6 ಅಡಿ ಆಳದ ವಾಟರ್ ವಾಲ್ವ್ ಚೇಂಬರ್‍ಗೆ ಸ್ಕೂಟರ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನ ರಾಜ್‍ಕುಮಾರ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಇಲ್ಲಿನ ಶಕ್ತಿನಗರದ ನಿವಾಸಿ ದೇವರಾಜು (59) ಎಂಬುವರು ರಾತ್ರಿ 8 ಗಂಟೆಯಲ್ಲಿ ಯರಗನಹಳ್ಳಿ ಕಡೆಯಿಂದ ಸಾತಗಳ್ಳಿ ಕಡೆಗೆ ರಾಜ್‍ಕುಮಾರ್ ರಸ್ತೆಯಲ್ಲಿ ಬರುವಾಗ ನಿಯಂತ್ರಣ ತಪ್ಪಿದ ಪರಿಣಾಮ ಬಿಎಸ್‍ಎನ್‍ಎಲ್ ಕಚೇರಿ ಸಮೀಪದ ರಸ್ತೆ ಬದಿ ಯಲ್ಲಿದ್ದ ಸುಮಾರು ಆರು ಅಡಿ ಆಳದ ವಾಟರ್ ವಾಲ್ವ್ ಗುಂಡಿಯೊಳಗೆ ಸ್ಕೂಟರ್…
ಮೈಸೂರು ಶ್ರೀ ಸುತ್ತೂರು ಶಾಖಾಮಠದಲ್ಲಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ
August 25, 2020ಮೈಸೂರು, ಆ. 24- ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಶನಿವಾರ ದಂದು ಪರಿಸರ ಸ್ನೇಹಿ ಅರಿಷಿಣ ಗಣೇಶ ನನ್ನು ಪ್ರತಿಷ್ಠಾಪಿಸಿ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸ್ನೇಹಿ ಅರಿಷಿಣ ಗಣೇಶನ ಸ್ಥಾಪನೆಗೆ ಕರೆ ನೀಡಿತ್ತು. ಅರಿ ಷಿಣದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಮತ್ತು ವೈರಾಣುಗಳನ್ನು ಕೊಲ್ಲುವ ವಿಶೇಷ ಗುಣಗಳಿರುವುದರಿಂದ ಅರಿಷಿಣ ದಲ್ಲಿ ತಯಾರಿಸಿದ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು….
ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಜಮಾಕ್ಕೆ ಆಗ್ರಹಿಸಿ ನಾಳೆ ಪ್ರತಿಭಟನೆ
August 25, 2020ಮೈಸೂರು,ಆ.24(ಎಂಟಿವೈ)- ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ಪಾಲಿಕೆ ವತಿಯಿಂದಲೇ ನೇರವಾಗಿ ವೇತನ ಜಮೆ ಮಾಡುವಂತೆ ಆಗ್ರಹಿಸಿ ಮೈಸೂರು ಪಾಲಿಕೆ ಕಚೇರಿ ಬಳಿ ಆ.26ರಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಮುಂದಿನ ಕೌನ್ಸಿಲ್ ಸಭೆಯಲ್ಲಿ ಪೌರಕಾರ್ಮಿಕರ ಖಾತೆಗೆ ವೇತನ ಜಮೆ ಮಾಡುವ ನಿರ್ಧಾರ ಕೈಗೊಳ್ಳ ದಿದ್ದರೆ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ಮೈಸೂರು ನಗರ ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾ ಸಂಘದ ರಾಜ್ಯಾಧÀ್ಯP್ಷÀ ನಾರಾಯಣ ಎಚ್ಚರಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ…
ಮೈಸೂರಲ್ಲಿ ದಸಂಸ ಪ್ರತಿಭಟನಾ ಧರಣಿ
August 25, 2020ಮೈಸೂರು,ಆ.24(ಆರ್‍ಕೆ)-ಉತ್ತರ ಪ್ರದೇ ಶದ ಲಕ್ಷ್ಮೀಪುರ ಕೇರಿ ಜಿಲ್ಲೆಯ ನೇಪಾಳದ ಗಡಿ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ನಂತರ ಕತ್ತು ಹಿಸುಕಿ ಅಮಾನವೀಯವಾಗಿ ಹತ್ಯೆಗೈದ ಕಾಮಾಂಧರನ್ನು ನೇಣಿಗೇರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಮೈಸೂರಿನ ಜಿಲ್ಲಾಧಿಕಾರಿ ಬಳಿ ಪ್ರತಿಭಟನಾ ಧರಣಿ ನಡೆಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಗಳಾದರೂ ಇಂತಹ ದುಷ್ಕøತ್ಯಗಳು ಆಗಿಂ ದಾಗ್ಗೆ ನಡೆಯುತ್ತಿರುವುದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮಹಿಳೆ ಯರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಪೋಕ್ಸೋದಂತಹ ಪರಿಣಾಮ ಕಾರಿ…










