ಮೈಸೂರು, ಆ.25(ಎಂಟಿವೈ)- ಲಾಕ್‍ಡೌನ್‍ನಿಂದಾಗಿ ಆದಾಯವಿಲ್ಲದೆ ಕಷ್ಟಕ್ಕೆ ಸಿಲುಕಿರುವ ಮೈಸೂರು ಮೃಗಾ ಲಯದ ಪ್ರಾಣಿ-ಪಕ್ಷಿಗಳ ಪಾಲನೆಗೆ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ 105ನೇ ಜಯಂತಿಯಂದು ಜೆಎಸ್‍ಎಸ್ ಮಹಾಸಂಸ್ಥಾನದಿಂದ ಮಂಗಳವಾರ 1 ಲಕ್ಷ ರೂ. ದೇಣಿಗೆ ನೀಡಲಾಯಿತು. 10 ವರ್ಷಗಳಿಂದ ಈ ಕ್ರಮ ನಡೆದುಕೊಂಡು ಬರುತ್ತಿದೆ. ಮೃಗಾಲಯದ ಆವರಣದಲ್ಲಿ ಮಂಗಳವಾರ ಜೆಎಸ್‍ಎಸ್ ಮಹಾವಿದ್ಯಾಪೀಠದ ಆಡಳಿತ ನಿರ್ದೇಶಕ ಶಂಕರಪ್ಪ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ರವಿ ಅವರಿಗೆ ಚೆಕ್ ಹಸ್ತಾಂತರಿಸಿದರು….
ಮೈಸೂರಿನ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‍ನ ಪ್ರತಿ ಕೇಂದ್ರದಲ್ಲಿ 200 ಮಂದಿ ಪರೀಕ್ಷೆ ಗುರಿ
August 26, 2020ಮೈಸೂರು, ಆ.25(ಎಂಟಿವೈ)- ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದಿಂದಾಗಿ ಆರೋಗ್ಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದುದರಿಂದ ಆಗಸ್ಟ್ 20ರಿಂದ ಸ್ಥಗಿತಗೊಂಡಿದ್ದ ಸ್ವ್ಯಾಬ್ ಟೆಸ್ಟ್ ಮಂಗಳವಾರದಿಂದ ಒಂಭತ್ತು ಸ್ಥಳಗಳಲ್ಲಿ ಪುನಾರಂಭಗೊಂಡಿದೆ. ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಪೂರ್ಣ ಪ್ರಮಾಣದಲ್ಲಿ ಆರಂಭ ವಾಗಿದ್ದು, ಪ್ರತಿಕೇಂದ್ರದಲ್ಲೂ ನೂರಾರು ಮಂದಿ ಸ್ವಯಂ ಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳಲು ಸಾಲುಗಟ್ಟಿದ್ದರು. ಮಂಗಳವಾರ ಬೆಳಗ್ಗಿನಿಂದ ಮಾನಸಗಂಗೋತ್ರಿಯ ಬಯಲು ರಂಗಮಂದಿರ, ಹೆಬ್ಬಾಳಿನ ಸಿಐಟಿಬಿ ಛತ್ರ, ಪುರಭವನ, ಉದಯ ಗಿರಿ ಕ್ಯೂಬ ಪಬ್ಲಿಕ್ ಶಾಲೆ, ಕೆಸರೆ 3ನೇ ಹಂತದ ನಾಗಲಿಂಗೇಶ್ವರ ದೇವಾಲಯದ…
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಖಂಡಿಸಿ ಇಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ
August 26, 2020ಮೈಸೂರು, ಆ.25 (ಆರ್‍ಕೆಬಿ)- ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ವಡಗಾವಿಯಲ್ಲಿ ಅಪಮಾನ ಮಾಡಿದ ಬೆಳಗಾವಿ ಜಿಲ್ಲಾಡಳಿತದ ನಡೆ ಖಂಡಿಸಿ ವಿವಿಧ ಸಂಘಟನೆಗಳು ಆಗಸ್ಟ್ 26ರ ಬೆಳಗ್ಗೆ 11ಕ್ಕೆ ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿವೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ ಹೇಳಿದರು. ಮೈಸೂರಲ್ಲಿ ಮಂಗಳವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ರಾಯಣ್ಣ ಅವರ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರಳಿ ಸ್ಥಾಪಿಸಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು…
ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿದ ಅನುದಾನ ಕಡಿತ ಬೇಡ ಸಿಎಂ ಯಡಿಯೂರಪ್ಪರಿಗೆ ಕುಮಾರಸ್ವಾಮಿ ಮನವಿ
August 26, 2020ಬೆಂಗಳೂರು, ಆ.25(ಕೆಎಂಶಿ)-ಹಿಂದಿನ ಸರ್ಕಾರದಲ್ಲಿ ಪಕ್ಷಾತೀತ ವಾಗಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಘೋಷಿಸ ಲಾಗಿದ್ದ ಅನುದಾನವನ್ನು ಕಡಿತಗೊಳಿಸದೆ ಬಿಡುಗಡೆ ಮಾಡುವಂತೆ ಜೆಡಿಎಸ್ ಶಾಸ ಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ಎಲ್ಲಾ ಶಾಸಕರುಗಳಿಗೆ ನೀಡ ಲಾಗಿದ್ದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಮೂಲಕ ಔದಾರ್ಯ ಪ್ರದರ್ಶಿಸುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೋರಿದ್ದಾರೆ. ಕೊರೊನಾ ಸಂಕಷ್ಟ ಸಮಯದಲ್ಲಿ…
ಮೈಸೂರಲ್ಲಿ 202 ಹೊಸ ಕೊರೊನಾ ಸೋಂಕು ಪ್ರಕರಣ: 25 ಮಂದಿ ಸಾವು
August 25, 2020ಮೈಸೂರು, ಆ.24 (ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 202 ಜನರಿಗೆ ಸೋಂಕು ದೃಢಪಟ್ಟಿದ್ದು, ಕೆಲ ದಿನಗಳಲ್ಲಿ 25 ಸೋಂಕಿತರು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‍ನಲ್ಲಿ ಪ್ರಕಟಿಸಲಾಗಿದೆ. ಹೊಸ 202 ಪ್ರಕರಣ ಸೇರಿದಂತೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 12,598ಕ್ಕೆ ಏರಿಕೆಯಾಗಿದೆ. ಆದರೆ 2,240 ಸೋಂಕಿತರು ಡಿಸ್ಚಾರ್ಜ್ ಆಗಿರುವುದು ಸಮಾ ಧಾನಕರ ಸಂಗತಿಯಾಗಿದೆ. ಇದರೊಂದಿಗೆ ಈವರೆಗೆ 9,542 ಜನ ಕೊರೊನಾ ಸೋಂಕು ಜಯಿಸಿದಂತಾಗಿದೆ. ಇನ್ನು ಕೇವಲ 2,711 ಜನರಲ್ಲಿ ಮಾತ್ರ ಸೋಂಕು ಸಕ್ರಿಯವಾಗಿದ್ದು, ಕೋವಿಡ್ ಆಸ್ಪತ್ರೆ ಹಾಗೂ…
ನೀವೇ ಪಕ್ಷ ಮುನ್ನಡೆಸಿ, ಸಾಧ್ಯವಾಗದಿದ್ದರೆ ರಾಹುಲ್ ಗಾಂಧಿ ಅವರಿಗೆ ಪಟ್ಟ ಕಟ್ಟಿ
August 25, 2020ಬೆಂಗಳೂರು, ಆ. 24(ಕೆಎಂಶಿ)- ಅನಾರೋಗ್ಯ ಕಾರಣದಿಂದ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ ರಾಹುಲ್‍ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರ ನ್ನಾಗಿ ನೇಮಿಸಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸೋನಿಯಾಗಾಂಧಿ ಅವರಿಗೆ ಮನವಿ ಮಾಡಿದ್ದಾರೆ. ಪತ್ರ ಹಾಗೂ ಟ್ವೀಟ್ ಮೂಲಕ ಸೋನಿಯಾ ಅವರನ್ನು ವಿನಂತಿಸಿ ಕೊಂಡಿರುವ ಸಿದ್ದರಾಮಯ್ಯ ಸಂಕಷ್ಟ ಸನ್ನಿವೇಶದಲ್ಲಿ ಪಕ್ಷ ಸಿಲುಕಿ ಕೊಂಡಿರು ವುದು ಇದೇ ಮೊದಲೇನಲ್ಲ. ಪ್ರತಿ ಬಾರಿ ಇಂತಹ ಸನ್ನಿವೇಶ ಗಳನ್ನು ಪಕ್ಷ ಎದುರಿಸಿದೆ. ಗಾಂಧಿ ಕುಟುಂಬ ಇಂತಹ ಸಂಕಷ್ಟದ ಅವಧಿಯಲ್ಲಿ ಪಕ್ಷವನ್ನು ಮುನ್ನಡೆಸಿದೆ ಎಂದು ತಿಳಿಸಿದ್ದಾರೆ….
ಆರೋಗ್ಯ ಇಲಾಖೆಗೆ ಅಗತ್ಯ ಸಿಬ್ಬಂದಿ ನಿಯೋಜನೆಗೆ ಎಐಡಿವೈಓ ಆಗ್ರಹ
August 25, 2020ಮೈಸೂರು, ಆ.24(ಎಸ್‍ಬಿಡಿ)- ಅನಿರೀಕ್ಷಿತ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯದಷ್ಟು ವೈದ್ಯರು ಹಾಗೂ ಆರೋಗ್ಯ ಸಹಾಯಕರನ್ನು ನಿಯೋಜಿಸುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಓ) ಸರ್ಕಾರವನ್ನು ಒತ್ತಾಯಿಸಿದೆ. ಈ ಸಂಬಂಧ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ನಂಜನಗೂಡಿನ ತಾಲೂಕು ವೈದ್ಯಾಧಿಕಾರಿ ಯಾಗಿದ್ದ ಡಾ.ನಾಗೇಂದ್ರ ಅವರು ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ, ರಾಜ್ಯದ ಆರೋಗ್ಯ ವ್ಯವಸ್ಥೆಯ ವಿರೂಪತೆಗೆ ಸಾಕ್ಷಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ 130 ಅನುಮೋದಿತ ವೈದ್ಯ ಹುದ್ದೆಗಳಿದ್ದು, ಕೇವಲ 90 ವೈದ್ಯರು…
ಅಮೂಲ್ಯ ಹಸ್ತಪ್ರತಿಗಳ ಡಿಜಿಟಲೀಕರಣ ಹಾದಿ ಸುಗಮಗೊಳಿಸಲು ಓಆರ್‍ಐನಲ್ಲಿ ಸಜ್ಜಾಗಿದೆ ಫ್ಯೂಮಿಗೇಷನ್ ಚೇಂಬರ್
August 25, 2020ಮೈಸೂರು, ಆ.24- ಭಾರತೀಯ ಪರಂಪರೆಯ ವೈವಿಧ್ಯಮಯ ಜ್ಞಾನ ಸಂಪತ್ತಾ ಗಿರುವ ತಾಳೆಗರಿ ಹಸ್ತಪ್ರತಿಗಳ ಸಂಗ್ರಹಣೆ ಯೊಂದಿಗೆ ಅವುಗಳ ಸಂರಕ್ಷಣೆಗೆ ಕಾಲಕ್ಕನು ಗುಣವಾಗಿ ಲಭ್ಯವಾಗುವ ಸಂರಕ್ಷಣೆ ವಿಧಾನ ಗಳನ್ನು ಅಳವಡಿಸಿಕೊಳ್ಳುವಲ್ಲಿ ಮುನ್ನಡೆಯುತ್ತಿ ರುವ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋ ಧನಾಲಯ (ಓಆರ್‍ಐ) ಇದೀಗ ಮತ್ತೊಂದು ಸರಳ ಹಾಗೂ ಪರಿಣಾಮಕಾರಿ ವಿಧಾನ ಅಳವಡಿಸಿಕೊಳ್ಳಲು ಸಿದ್ಧತೆ ಪೂರ್ಣಗೊಳಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ (ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ) ನಿವೃತ್ತ ಅಧೀಕ್ಷಕ ಪುರಾತತ್ವ ರಸಾಯನಶಾಸ್ತ್ರಜ್ಞ ಡಾ.ಸುಬ್ಬರಾಮನ್ ಅವರ ಮಾರ್ಗದರ್ಶನದಲ್ಲಿ ಈ ಸರಳ…
ಪೊಲೀಸ್ ಪೇದೆಗಳ ಸಮಯಪ್ರಜ್ಞೆಯಿಂದ ದೇವರಾಜ ಮಾರುಕಟ್ಟೆಯಲ್ಲಿ ತಪ್ಪಿದ ಅಗ್ನಿ ದುರಂತ
August 25, 2020ಮೈಸೂರು, ಆ.24(ಎಂಕೆ)- ನಗರದ ಸಂಚಾರ ಪೊಲೀಸ್ ಠಾಣೆ ಯೊಂದರ ಮೂವರು ಕಾನ್‍ಸ್ಟೇಬಲ್‍ಗಳ ಸಮಯಪ್ರಜ್ಞೆಯಿಂದ ದೇವರಾಜ ಮಾರುಕಟ್ಟೆ ಬಳಿ ಭಾರಿ ಬೆಂಕಿ ಅನಾಹುತ ತಪ್ಪಿದ್ದು, ಪೊಲೀಸರ ಕಾರ್ಯವೈಖರಿಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಗೌರಿ-ಗಣೇಶ ಹಬ್ಬದ ದಿನದಂದು ದೇವರಾಜ ಮಾರುಕಟ್ಟೆಯ ಡೂಪ್ಲಿನ್ ಕಾಂಪ್ಲೆಕ್ಸ್‍ನಲ್ಲಿರುವ ಮೈಸೂರು ಕಾಫಿ ವಕ್ರ್ಸ್ ಮಳಿಗೆ ಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ದೇವರಾಜ ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್ಸ್‍ಸ್ಟೇಬಲ್ ಶಿವಣ್ಣ, ಕಾನ್ಸ್‍ಸ್ಟೇಬಲ್‍ಗಳಾದ ಶಶಿಕಾಂತ್ ಮತ್ತು ಸುಗು ಅವರು,…
ಮತದಾರರ ಪಟ್ಟಿ ಪರಿಷ್ಕರಣೆ: 2021, ಜನವರಿ 1ಕ್ಕೆ 18 ವರ್ಷ ಪೂರೈಸಿದವರ ಹೆಸರು ಸೇರ್ಪಡೆಗೆ ಅವಕಾಶ
August 25, 2020ಮೈಸೂರು, ಆ.24- ಮತದಾರರ ಪಟ್ಟಿ ಪರಿ ಷ್ಕರಣೆ-01.01.2021ಕ್ಕೆ ಸಂಬಂ ಧಿಸಿದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜನವರಿ 1, 2021ಕ್ಕೆ ಅನ್ವಯ ವಾಗುವಂತೆ 18 ವರ್ಷಗಳನ್ನು ಪೂರೈಸಿದ ಯುವ ಹಾಗೂ ಭವಿ ಷ್ಯದ ಮತದಾರರು ನಮೂನೆ-6ನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹತ್ತಿರದ ಮತಗಟ್ಟೆ ಅಧಿಕಾರಿಗಳ (ಬಿ.ಎಲ್.ಒ) ಮೂಲಕ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯವರ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಮತದಾರರ ಪಟ್ಟಿಯ ಹೆಸರು ನೋಂದಾವಣಿ, ತಿದ್ದುಪಡಿ…










