ಗುಣಮುಖರಾದ ಮೈಸೂರಿನ ಸಿವಿ ರಸ್ತೆ ನಿವಾಸಿಯ ಬೇಸರದ ನುಡಿ ಮೈಸೂರು, ಆ.26(ವೈಡಿಎಸ್)- ಮನೆ, ಕಚೇರಿ, ಬೀದಿಗಳಿಗೆಲ್ಲಾ ಸ್ಯಾನಿಟೈಸ್ ಮಾಡೋಕೆ ಪೌರಕಾರ್ಮಿಕರು ಬೇಕು. ಆದರೆ, ನಂಗೆ ಕೊರೊನಾ ಬಂದಾಗ ಯಾವೊಬ್ಬ ಅಧಿಕಾರಿಯೂ ಬಂದು ಆರೋಗ್ಯ ವಿಚಾರಿಸ್ಲಿಲ್ಲ. ಕುಟುಂಬಕ್ಕೆ ದಿನಸಿ ಪದಾರ್ಥಗಳನ್ನೂ ನೀಡ್ಲಿಲ್ಲ… ಅಲ್ಲಿ ಆ ಮನೆ, ಇಲ್ಲಿ ಈ ಕಚೇರಿಗೆ ಸ್ಯಾನಿಟೈಸ್ ಮಾಡೆಂದು ಹೇಳುವ ಅಧಿಕಾರಿಗಳು, ನಂಗೆ ಕೊರೊನಾ ಪಾಸಿಟಿವ್ ಆದಾಗ ಆರೋಗ್ಯ ವಿಚಾರಿಸ್ಲ್ಲಿಲ್ಲ. ಕ್ವಾರಂಟೈನ್ ಆಗಿದ್ದ ನನ್ನ ಕುಟುಂಬಕ್ಕೆ ದಿನಸೀನೂ ನೀಡ್ಲಿಲ್ಲ. ಇದಕ್ಕೆ ಕೊರೊನಾ ವಾರಿಯರ್ಸ್ ಎಂದು…
ಪ್ರಜ್ಞಾಸ್ಥಿತಿಗೆ ಮರಳಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ
August 27, 2020ಚೆನ್ನೈ: ಗಾಯಕ ಎಸ್.ಪಿ. ಬಾಲ ಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಪ್ರಜ್ಞಾಸ್ಥಿತಿಗೆ ಮರಳಿದ್ದಾರೆ’ ಎಂದು ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ತಿಳಿಸಿದೆ. ಎಸ್‍ಪಿಬಿ ಅವರ ಆರೋಗ್ಯದ ಚೇತರಿಕೆಗೆ ಪ್ರಾರ್ಥಿಸುತ್ತಿದ್ದ ಲಕ್ಷಾಂತರ ಅಭಿಮಾನಿ ಗಳಿಗೆ ಇದು ಖುಷಿ ತಂದಿದೆ. ‘ಕೋವಿಡ್-19 ಸೋಂಕಿಗೆ ತುತ್ತಾಗಿ ರುವುದರಿಂದ ಅವರ ಶ್ವಾಸಕೋಶಕ್ಕೆ ಹಾನಿಯಾಗಿದೆ. ಆದರೆ, ಉಳಿದ ಅಂಗಾಂಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವರ ಪುತ್ರ ಎಸ್.ಪಿ. ಚರಣ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರೊಟ್ಟಿಗೆ ಮಾತನಾಡಲು ಎಸ್‍ಪಿಬಿ ಕೈಸನ್ನೆಗಳ ಮೂಲಕ ಪ್ರಯತ್ನಿಸಿದರು….
ಈರುಳ್ಳಿ ಬೆಲೆ ಏರಿಕೆ ಆಗಲ್ಲ ಎನ್ನುವ ದೇವರಾಜ ಮಾರುಕಟ್ಟೆ ವರ್ತಕರು
August 27, 2020ಮೈಸೂರು, ಆ.26(ಪಿಎಂ)- ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ಈರುಳ್ಳಿ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಸಾಧ್ಯತೆ ಇಲ್ಲ ಎಂದು ಮೈಸೂರಿನ ದೇವರಾಜ ಮಾರುಕಟ್ಟೆ ಈರುಳ್ಳಿ ವ್ಯಾಪಾರಿಗಳು ಅಂದಾಜು ಮಾಡಿದ್ದಾರೆ. ದೇವರಾಜ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿ ಜಿ.ಆನಂದ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಈರುಳ್ಳಿ ಬೆಲೆ ಯಲ್ಲಿ ಸದ್ಯ ಅಂಥ ಏರಿಕೆ ಆಗಿಲ್ಲ, ಏರಿಕೆ ಯಾಗುವ ಸಾಧ್ಯತೆಯೂ ಇಲ್ಲ. ಈರುಳ್ಳಿ ಸ್ಥಳೀಯವಾಗಿ ಪೂರೈಕೆ ಆಗಲಿರುವು ದರಿಂದ ಬೆಲೆ ದುಬಾರಿ ಆಗದು. ಈಗ ದೇವರಾಜ ಮಾರುಕಟ್ಟೆಯಲ್ಲಿ ಪ್ರಥಮ ಶ್ರೇಣಿ ಈರುಳ್ಳಿ…
ಕೊರೊನಾ ಜಾಗೃತಿ ವಾಹನಕ್ಕೆ ಶಾಸಕ ರಾಮದಾಸ್ ಚಾಲನೆ
August 26, 2020ಮೈಸೂರು, ಆ.25 (ಎಂಟಿವೈ)- ಕೊರೊನಾ ವೈರಸ್ ಸೋಂಕಿನಿಂದ ಪಾರಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಕೇಂದ್ರದ ಜನಸಂಪರ್ಕ ಕಾರ್ಯಾ ಲಯ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಆಯೋಜಿಸಿದ್ದ ಪ್ರಚಾರ ವಾಹನಕ್ಕೆ ಶಾಸಕ ಎಸ್.ಎ.ರಾಮ ದಾಸ್ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ತಮ್ಮ ಕಚೇರಿ ಮುಂಭಾಗ ಮಂಗಳವಾರ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿನಿಂದ ಪಾರಾಗುವ ಬಗೆ ಹೇಗೆಂದು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾ ಲಯ, ನಿಮ್ಹಾನ್ಸ್, ವಾರ್ತಾ…
ನವದೆಹಲಿ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನಿಂದ ರೇಡಿಯೋಡಯೋಗ್ನೋಸಿಸ್‍ನಲ್ಲಿ ಎಂಡಿ ಪದವಿ ಪಡೆದ ಮೈಸೂರು ಯುವತಿ
August 26, 2020ಮೈಸೂರು, ಆ. 25- ಮೈಸೂರಿನ ಡಾ. ಚೋವಂಡ ಸ್ನೇಹಾ ಹರೀಶ್ ಅವರು ನವದೆಹಲಿಯ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್‍ನಿಂದ ರೇಡಿಯೋಡಯೋಗ್ನೋಸಿಸ್‍ನಲ್ಲಿ ಎಂಡಿ ಪದವಿ ಪಡೆದಿದ್ದಾರೆ. ಮೈಸೂರು ಗೋಕುಲಂನ ನಿರ್ಮಲಾ ಕಾನ್ವೆಂಟ್‍ನಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಸ್ನೇಹಾ, 2008ರಲ್ಲಿ ಶೇ.95.68 ಅಂಕಗಳೊಂದಿಗೆ ಎಸ್‍ಎಸ್ ಎಲ್‍ಸಿ ತೇರ್ಗಡೆಯಾಗಿದ್ದರು. ನಂತರ ಬೆಂಗಳೂರಿನ ಜೆಸಿ ರಸ್ತೆಯ ಶ್ರೀ ಭಗ ವಾನ್ ಮಹಾವೀರ್ ಜೈನ್ ಕಾಲೇಜಿ ನಲ್ಲಿ ದ್ವಿತೀಯ ಪಿಯುಸಿಯನ್ನು ಶೇ. 94.83 ಅಂಕಗಳೊಂದಿಗೆ 2010ರಲ್ಲಿ ತೇರ್ಗಡೆಯಾಗಿದ್ದರು. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ…
ಸಿರಿಧಾನ್ಯ ಹಕ್ಕು-ಮಹಿಳೆಯರ ಹಕ್ಕು: ಸಿರಿಧಾನ್ಯ ಸೋದರಿಯರ ಬಳಗ
August 26, 2020ಮೈಸೂರು,ಆ.25(ಆರ್‍ಕೆಬಿ)-`ಸಿರಿ ಧಾನ್ಯ ಹಕ್ಕು-ಮಹಿಳೆಯರ ಹಕ್ಕು’ ಎಂದು ಹೆಚ್.ಡಿ.ಕೋಟೆಯ `ಭಾರತೀಯ ಸಿರಿಧಾನ್ಯ ಸೋದರಿಯರ ಬಳಗ’ದವರು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಹಕ್ಕೊತ್ತಾಯ ಮಂಡಿಸಿದರು. ಸೀರನಹುಂಡಿ ದೇವಮ್ಮ, ದೇವಿರಮ್ಮ, ಜಯಮ್ಮ, ಸಣ್ಣರಾಮಮ್ಮ, ಪೀಪಲ್ ಟ್ರೀ ಕೃಷಿ ಸಂಶೋಧಕ ಎಲ್.ಸಿ.ಚೆನ್ನರಾಜು ಮಾತನಾಡಿ, ಕುಟುಂಬಕ್ಕೆ ಆಧಾರವಾದ ಆಹಾರ, ಆರೋಗ್ಯ, ಪೌಷ್ಟಿಕತೆ ಮತ್ತು ಮೇವಿನ ಭದ್ರತೆಯನ್ನು ಸಿರಿಧಾನ್ಯಗಳು ಒದಗಿಸುವುದರಿಂದ ಸಿರಿಧಾನ್ಯಕ್ಕೂ ಮಹಿಳೆಯ ಕಾಳಜಿಗೂ ನಂಟಿದೆ ಎಂದು ಬಳಗ ಪ್ರತಿ ಪಾದಿಸುತ್ತದೆ. ಅಪೌಷ್ಟಿಕ ದೇಶಗಳ ಪಟ್ಟಿ ಯಲ್ಲಿ 180ನೇ ಸ್ಥಾನದಲ್ಲಿರುವ ಭಾರತ ಪೌಷ್ಟಿಕತೆಯ ಆಗರವಾದ…
ಹೊರ ರಾಜ್ಯಗಳಿಗೆ ಬಸ್ ಓಡಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿದ್ಧತೆ
August 26, 2020ಬೆಂಗಳೂರು, ಆ.25(ಕೆಎಂಶಿ)-ದೇಶಾದ್ಯಂತ ಈಗ ಲಾಕ್‍ಡೌನ್ ಸಡಿಲಗೊಳಿಸಿರು ವುದರಿಂದ ನಮ್ಮ ರಾಜ್ಯದಿಂದ ಇತರ ರಾಜ್ಯಗಳಿಗೆ ಅದರಲ್ಲೂ ಮುಖ್ಯವಾಗಿ ನೆರೆ ರಾಜ್ಯಗಳಾದ ಗೋವಾ, ಕೇರಳ, ತಮಿಳು ನಾಡು, ಪಾಂಡಿಚೇರಿ, ತೆಲಂ ಗಾಣ ರಾಜ್ಯಗಳಿಗೆ ಪುನಃ ಬಸ್ ಸಂಚಾರ ಪ್ರಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸಜ್ಜಾಗಿವೆ. ಆದರೆ ಪಕ್ಕದ ಈ ಎಲ್ಲಾ ರಾಜ್ಯಗಳಿಂದ ಇದಕ್ಕೆ ಹಸಿರು ನಿಶಾನೆ ದೊರೆಯಬೇಕಿದೆ. ತದನಂತರ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಸಂಚಾರ…
ಇಂದು, ನಾಳೆ ವಿದ್ಯುತ್ ವ್ಯತ್ಯಯ
August 26, 2020ಮೈಸೂರು, ಆ.25- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಆ.26ರಂದು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ತುರ್ತು ನಿರ್ವಹಣೆ ಸಂಬಂಧ 66 ಕೆ.ವಿ ವಿದ್ಯುತ್ ವಿತರಣಾ ಕೇಂದ್ರವು ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆ ಪಿರಿಯಾಪಟ್ಟಣ ಪುರಸಭೆ, ಮುತ್ತೂರು, ಚಿಟ್ಟೇನಹಳ್ಳಿ, ಚೌತಿ, ಮಾಲಂಗಿ, ಕಂಪಲಾಪುರ, ಕೀರನಹಳ್ಳಿ, ಪಂಚವಳ್ಳಿ, ಹುಣಸವಾಡಿ, ಪುನಾಡಹಳ್ಳಿ, ನವಿಲೂರು ಗ್ರಾಮ ಪಂಚಾಯಿತಿಗಳಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆ.27ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಿದ್ದಿಖ್‍ನಗರ, ಶ್ರೀ ಶಿವರಾತ್ರಿಶ್ವರನಗರ,…
ನಿಶ್ಚಿತಾರ್ಥದ ಮನೆಯಲ್ಲಿ 4 ಲಕ್ಷ ರೂ. ಆಭರಣ ಕಳವು: ಯುವತಿ ಸೆರೆ
August 26, 2020ಮೈಸೂರು,ಆ.25(ಎಂಕೆ)- ಮದುವೆ ನಿಶ್ಚಿತಾರ್ಥ ದಿನವೇ ವಧುವಿನ 4.15 ಲಕ್ಷ ರೂ. ಮೌಲ್ಯದ 85 ಗ್ರಾಂ ಚಿನ್ನಾ ಭರಣಗಳನ್ನು ಎಗರಿಸಿದ್ದ ಯುವತಿ ಯನ್ನು ಮೇಟಗಳ್ಳಿ ಪೊಲೀಸರು ಬಂಧಿಸಿ ದ್ದಾರೆ. ಆರೋಪಿಯಿಂದ ಎರಡು ನೆಕ್ಲೇಸ್ ಮತ್ತು 1 ಜೊತೆ ಓಲೆ (ಒಟ್ಟು 85 ಗ್ರಾಂ) ವಶಪಡಿಸಿಕೊಂಡಿದ್ದಾರೆ. ಕುಂಬಾರಕೊಪ್ಪಲಿನ ಸುಭಾಷ್ ನಗರದ ಅಶ್ರಿತಾ(21) ಬಂಧಿತ ಯುವತಿ. ಈಕೆ ಆ.23ರಂದು ಇಲ್ಲಿನ ನಿವಾಸಿ ರಮೇಶ್ ಎಂಬುವರ ಮನೆ ಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದಳು. ಕಾರ್ಯ ಕ್ರಮ ಮುಗಿದ ಬಳಿಕ ವಧು…
ಅತಿಥಿ ಉಪನ್ಯಾಸಕರ ಪ್ರತಿಭಟನೆ ಮುಂದುವರಿಕೆ
August 26, 2020ಮೈಸೂರು, ಆ.25(ಪಿಎಂ)- ಲಾಕ್‍ಡೌನ್ ಅವಧಿಯ ಗೌರವಧನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇ ರಿಸಲು ಆಗ್ರಹಿಸಿ ಅತಿಥಿ ಉಪನ್ಯಾಸಕರು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರ ನ್ಯಾಯಯುತವಾಗಿ ಕೊಡಬೇಕಿರುವ ಗೌರವ ಧನ ನೀಡದೇ ನಾವು ಅತಂತ್ರ ಸ್ಥಿತಿಯಲ್ಲಿ ಬದುಕುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲೆಂದೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ…










