ಬೆಂಗಳೂರು, ಆ.26-`ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ. ದಕ್ಷಿಣ ಭಾಗದಲ್ಲಿ ಸ್ವಾತಂ ತ್ರ್ಯದ ಕಹಳೆ ಊದಿದ ವೀರ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಅಡಗೂರು ಹೆಚ್.ವಿಶ್ವನಾಥ್ ಹೇಳುವ ಮೂಲಕ ಟಿಪ್ಪುವಿನ ಹೆಸ ರೇಳಿದರೆ ಕೆರಳಿ ಕೆಂಡವಾಗುವ ಬಿಜೆಪಿ ವಲಯದಲ್ಲಿ ಭಾರೀ ಇರಿಸು-ಮುರಿಸಿಗೆ ಕಾರಣರಾಗಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಕುರಿತು ಇಂದು ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…
ಬುಧವಾರ ಮೈಸೂರಲ್ಲಿ 951 ಸೋಂಕು ಪ್ರಕರಣ
August 27, 2020ಮೈಸೂರು, ಆ. 26- ಮೈಸೂರು ಜಿಲ್ಲೆಯಲ್ಲಿ ಬುಧವಾರ 951 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 14,880ಕ್ಕೆ ಏರಿಕೆಯಾಗಿದೆ. 645 ಮಂದಿ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಈವರೆಗೆ 10,656 ಮಂದಿ ಗುಣಮುಖರಾಗಿದ್ದಾರೆ. ಬುಧವಾರ 20 ಮಂದಿ ಮೃತ ಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 381ಕ್ಕೆ ಏರಿಕೆಯಾಗಿದೆ. 3843 ಸಕ್ರಿಯ ಸೋಂಕಿತರ ಪೈಕಿ 226 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 93 ಮಂದಿ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್‍ನಲ್ಲಿ, 519 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 293…
ಮೈಸೂರು ಪಾಲಿಕೆ ವಲಯ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
August 27, 2020ಮೈಸೂರು, ಆ.26 (ಆರ್‍ಕೆ)-ಬುಧವಾರ ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳ ತಂಡ ಮೈಸೂರು ಮಹಾನಗರ ಪಾಲಿಕೆ ವಲಯ ಅಧಿಕಾರಿ ಯೊಬ್ಬರ ಮನೆ ಮೇಲೆ ದಾಳಿ ನಡೆಸಿದೆ. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-6 (ಶೇಷಾದ್ರಿ ಅಯ್ಯರ್ ರಸ್ತೆಯ ವಿದ್ಯಾ ವರ್ಧಕ ಕಾಲೇಜು ಎದುರು)ರ ವಲಯ ಅಧಿಕಾರಿ ನಾಗರಾಜು ಅವರ ಕುವೆಂಪುನಗರ ಎಂ-ಬ್ಲಾಕ್ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, 1.4 ಕೆ.ಜಿ. ಚಿನ್ನ, 2 ಕೆ.ಜಿ. ಬೆಳ್ಳಿ ಆಭರಣ, 9 ಲಕ್ಷ ರೂ….
ಆ.29ಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 105ನೇ ಜಯಂತಿ
August 27, 2020ಮೈಸೂರು, ಆ.26(ಎಂಟಿವೈ)- ಸುತ್ತೂರು ಜಗ ದ್ಗುರು ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ 23ನೇ ಪೀಠಾಧಿ ಪತಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 105ನೇ ಜಯಂತಿಯನ್ನು ಆ.29ರಂದು ಸರಳ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆಚರಿಸ ಲಾಗುತ್ತಿದ್ದು, ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ವನ್ನು ಆನ್‍ಲೈನ್ ಮೂಲಕ ದೆಹಲಿಯಿಂದಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಜೆಎಸ್‍ಎಸ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯದರ್ಶಿ ಮಂಜುನಾಥ್ ಅವರು, ಶ್ರೀ…
ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲೂ ವಿದೇಶಿ ಕಂಪನಿಗಳ ನೇರ ಹೂಡಿಕೆಗೆ ಉತ್ತೇಜನ
August 27, 2020ಬೆಂಗಳೂರು, ಆ.26(ಕೆಎಂಶಿ)- ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶ ದಿಂದ ಎಲ್ಲಾ ಕ್ಷೇತ್ರ ಗಳಲ್ಲಿ ವಿದೇಶಿ ಕಂಪನಿ ಗಳ ನೇರ ಹೂಡಿಕೆ ಯನ್ನು ರಾಜ್ಯ ಸರ್ಕಾರ ಉತ್ತೇಜಿಸು ತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿ ಯನ್ ಚೇಂಬರ್ಸ್ ಆಫ್ ಕಾಮರ್ಸ್ ಬುಧವಾರ ಆಯೋಜಿಸಿದ್ದ ಇಂಡೋ -ಜಪಾನಿಸ್ ಬಿಸಿನೆಸ್ ಫೋರಂನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಪಾನಿನ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸು ವುದಾಗಿ ಭರವಸೆ ನೀಡಿದರು. ಅಲ್ಲದೆ,…
ಪಾರಂಪರಿಕ ತೆರಿಗೆ ಸಂಗ್ರಹಿಸಲು ಮೈಸೂರು ಪಾಲಿಕೆ ಚಿಂತನೆ
August 27, 2020ಮೈಸೂರು,ಆ.26(ಆರ್‍ಕೆ)- ಮೈಸೂರು ನಗರದ ಪಾರಂಪರಿಕ ಕಟ್ಟಡ ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಿಸಲು ಪಾರಂಪರಿಕ ತೆರಿಗೆ (ಊeಡಿiಣಚಿge ಛಿess) ಸಂಗ್ರಹಿಸಲು ಮೈಸೂರು ಮಹಾ ನಗರ ಪಾಲಿಕೆ ಮುಂದಾಗಿದೆ. ಇದು ಸಾಕಾರಗೊಂಡಲ್ಲಿ ಹೆರಿಟೇಜ್ ಕಟ್ಟಡಗಳ ಸಂರಕ್ಷಣೆಗಾಗಿ ಆರ್ಥಿಕ ಸಂಪ ನ್ಮೂಲ ಕ್ರೂಢೀಕರಣಕ್ಕೆ ಹೊಸ ವಿಧಾನ ಅನುಸರಿಸಿದ ಕೀರ್ತಿಗೆ ಮೈಸೂರು ಮಹಾನಗರ ಪಾಲಿಕೆ ಪಾತ್ರವಾಗಲಿದೆ. ಈಗಾಗಲೇ ಪಾರಂಪರಿಕ ತೆರಿಗೆ ಸಂಗ್ರ ಹಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಮೈಸೂರಿಗೆ…
ಕೆಆರ್ ಕ್ಷೇತ್ರದ 14 ದೇಗುಲಗಳ ಜೀರ್ಣೊದ್ಧಾರಕ್ಕಾಗಿ ಸರ್ಕಾರದ 11.67 ಲಕ್ಷ ರೂ. ಅನುದಾನ ಹಂಚಿಕೆ
August 27, 2020ಮೈಸೂರು, ಆ.26(ಪಿಎಂ)- ಕೃಷ್ಣರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 14 ದೇವಾಲಯಗಳ ಜೀರ್ಣೋ ದ್ಧಾರಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಒಟ್ಟಾರೆ 11.67 ಲಕ್ಷ ರೂ.ಗಳನ್ನು ಕ್ಷೇತ್ರದ ಆರಾಧನಾ ಸಮಿತಿ ಸಭೆಯಲ್ಲಿ ಬುಧವಾರ ಹಂಚಿಕೆ ಮಾಡಲಾಯಿತು. ಮೈಸೂರು ತಾಲೂಕು ಕಚೇರಿಯ ಕೊಠಡಿ 107ರ ಸಭಾಂಗಣದಲ್ಲಿ ಆರಾಧನಾ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯ ದೇವಾಲಯಗಳಿಗೆ ಅನುದಾನ ಹಂಚಿಕೆ ಮಾಡಲಾಯಿತು. 2017-18ನೇ ಸಾಲಿನ ಬಾಕಿ 89,200 ರೂ. ಅನು ದಾನ ಹಾಗೂ 2019-20ನೇ…
ಸ್ಕೂಟರ್ ಉರುಳಿ ಬಿದ್ದಿದ್ದ ವಾಟರ್‍ವಾಲ್ವ್ ಗುಂಡಿಗೆ ಬ್ಯಾರಿಕೇಡ್ ಜೋಡಣೆ
August 27, 2020ಮೈಸೂರು, ಆ.26(ಎಂಕೆ)- ಮೈಸೂರಿನ ರಾಜ್‍ಕುಮಾರ್ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಇರುವ 6 ಅಡಿ ಆಳದ ವಾಟರ್‍ವಾಲ್ವ್ ಗುಂಡಿಗೆ ಆ.24ರ ಸೋಮ ವಾರ ರಾತ್ರಿ ಸ್ಕೂಟರ್ ಉರುಳಿಬಿದ್ದು, ಸವಾರ ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಮುಂಜಾಗ್ರತಾ ಕ್ರಮವಾಗಿ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ಬುಧವಾರ ವಾಟರ್‍ವಾಲ್ವ್ ಗುಂಡಿಗೆ ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದಾರೆ. ಕಳೆದ ಐದಾರು ತಿಂಗಳಿಂದ ರಾಜ್‍ಕುಮಾರ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇಲ್ಲಿನ ಬಿಎಸ್‍ಎನ್‍ಎಲ್ ಕಚೇರಿ ಸಮೀಪದ ರಸ್ತೆಬದಿಯಲ್ಲಿ ವಾಟರ್ ವಾಲ್ವ್ ಗುಂಡಿ ಮಾಡಲಾಗಿದ್ದು, ಅದನ್ನಿನ್ನೂ…
ವಾಟ್ಸಾಪ್ ಮೂಲಕ ಸಿಕ್ಕ ವಸ್ತುಗಳ ವಾರಸುದಾರರ ಪತ್ತೆ!
August 27, 2020ಹುಣಸೂರು, ಆ.26- ವ್ಯಕ್ತಿಯೊಬ್ಬರು ತಮಗೆ ರಸ್ತೆಯಲ್ಲಿ ಸಿಕ್ಕಿದ ವಸ್ತುಗಳನ್ನು ಫೋಟೋ ತೆಗೆದು ವಾಟ್ಸಾಪ್ ಗ್ರೂಪ್‍ನಲ್ಲಿ ಅಪ್‍ಲೋಡ್ ಮಾಡುವ ಮೂಲಕ ವಾರಸುದಾರರನ್ನು ಪತ್ತೆ ಹಚ್ಚಿ ವಸ್ತುಗಳನ್ನು ಹಿಂತಿರುಗಿಸಿದ ಬಗ್ಗೆ ವರದಿಯಾಗಿದೆ. ತಾಲೂಕಿನ ಗಾವಡಗೆರೆ ಗ್ರಾಮದ ಗಿರೀಶ್ ರಾವ್ ನಿಂಬಾಳ್ಕರ್, ತಮಗೆ ರಸ್ತೆಯಲ್ಲಿ ದೊರೆತ ವಸ್ತುಗಳನ್ನು ವಾರಸುದಾರರಿಗೆ ಸುರಕ್ಷಿತವಾಗಿ ಒಪ್ಪಿಸಿ, ಪ್ರಾಮಾಣಿಕತೆ ಮೆರೆದವರು. ವಿವರ: ಹುಣಸೂರು ತಾಲೂಕು ಮಾರಗೌಡನಹಳ್ಳಿಯ ಗಣಪತಿ ಮತ್ತು ಮೇಘನಾ ದಂಪತಿ ಗೌರಿ ಹಬ್ಬಕ್ಕಾಗಿ ತಮ್ಮ ಮಗುವಿಗೆ ಕೆ.ಆರ್.ನಗರದಲ್ಲಿ ಬೆಳ್ಳಿ ಕಾಲ್ಚೈನು ಮತ್ತು ಬಟ್ಟೆ ಖರೀದಿಸಿದ್ದರು. ಅದರ…
ಜೆಎಸ್‍ಎಸ್ ಜನಶಿಕ್ಷಣ ಸಂಸ್ಥೆಯ ಅರೆಕಾಲಿಕ ವೃತ್ತಿ ಬೋಧಕರಿಗೆ ಹೊಲಿಗೆ ಯಂತ್ರದ ದುರಸ್ತಿ ತರಬೇತಿ
August 27, 2020ಮೈಸೂರು, ಆ.26(ಪಿಎಂ)- ಜೆಎಸ್‍ಎಸ್ ಜನಶಿಕ್ಷಣ ಸಂಸ್ಥೆಯ ಅರೆಕಾಲಿಕ ವೃತ್ತಿ ಬೋಧಕರಿಗೆ ಬುಧವಾರ ಹೊಲಿಗೆ ಯಂತ್ರದ ಬೇಸಿಕ್ ದುರಸ್ತಿ ತರಬೇತಿ ನೀಡಲಾಯಿತು. ಮೈಸೂರಿನ ಉದಯಗಿರಿಯ ಜನಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಿಳಾ ಪಾಲಿಟೆಕ್ನಿಕ್‍ನ ಮೆಕ್ಯಾನಿಕಲ್ ವಿಷಯದ ಸಂಪನ್ಮೂಲ ವ್ಯಕ್ತಿ ಪುಟ್ಟಸ್ವಾಮಿ, ಹೊಲಿಗೆ ಯಂತ್ರಗಳ ವಿವಿಧ ಭಾಗಗಳ ಜೋಡಿಸುವಿಕೆ ಮತ್ತು ದುರಸ್ತಿ ಸಂಬಂಧ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದಿಂದ ಅನುಮೋದನೆಯಾಗಿರುವ 2020-21ನೇ ಸಾಲಿನ ಉಡುಪು ತಯಾರಿಕೆ ತರಬೇತಿ ಪ್ರಾರಂಭಿಸಲು…










