ಮೈಸೂರು

ಒಂದೇ ದಿನ 72 ಸಾವಿರ ಕೋವಿಡ್ ಟೆಸ್ಟ್: ನೂತನ ದಾಖಲೆ ಬರೆದ ರಾಜ್ಯ ಸರ್ಕಾರ
ಮೈಸೂರು

ಒಂದೇ ದಿನ 72 ಸಾವಿರ ಕೋವಿಡ್ ಟೆಸ್ಟ್: ನೂತನ ದಾಖಲೆ ಬರೆದ ರಾಜ್ಯ ಸರ್ಕಾರ

August 31, 2020

ಬೆಂಗಳೂರು, ಆ.30- ರಾಜ್ಯದಲ್ಲಿ ಶನಿವಾರ ಒಂದೇ ದಿನ ಅತಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದು, 72,684 ಮಂದಿಗೆ ಕೊರೊನಾ ಟೆಸ್ಟ್ ನಡೆಸಲಾಗಿದೆ. ಇದುವರೆಗೆ ರಾಜ್ಯದಲ್ಲಿ, ಒಟ್ಟು 27,85,718 ಕೋವಿಡ್ ಪರೀಕ್ಷೆ ನಡೆದಿದೆ. ಇನ್ನು ಕೋವಿಡ್ ಪಾಸಿಟಿವ್ ಪ್ರಕರಣಗಳು 8,000ರ ಗಡಿ ದಾಟುತ್ತಲೇ ಇದ್ದು, ಶನಿವಾರ ಸಹ 8,324 ಮಂದಿ ಹೊಸದಾಗಿ ಕೊರೊನಾಗೆ ತುತ್ತಾಗಿದ್ದಾರೆ. ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 3,27,076ಕ್ಕೆ ತಲುಪಿದೆ. ಒಂದೇ ದಿನ 115 ಸಾವಿನ ಪ್ರಕರಣ ವರದಿಯಾಗಿದ್ದು ಒಟ್ಟು 5,483 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ….

ಮೈಸೂರಲ್ಲಿ ಬೆಳ್ಳಂಬೆಳಿಗ್ಗೆ ವೃದ್ಧ ದಂಪತಿ ಕಟ್ಟಿ ಹಾಕಿ ನಗದು, ಚಿನ್ನಾಭರಣ ದರೋಡೆ
ಮೈಸೂರು

ಮೈಸೂರಲ್ಲಿ ಬೆಳ್ಳಂಬೆಳಿಗ್ಗೆ ವೃದ್ಧ ದಂಪತಿ ಕಟ್ಟಿ ಹಾಕಿ ನಗದು, ಚಿನ್ನಾಭರಣ ದರೋಡೆ

August 30, 2020

ಮೈಸೂರು, ಆ.29(ಆರ್‍ಕೆ)-ಬೆಳ್ಳಂ ಬೆಳಿಗ್ಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳಿ ಬ್ಬರು, ವೃದ್ಧ ದಂಪತಿಯನ್ನು ಕಟ್ಟಿ ಹಾಕಿ ನಗದು, ಚಿನ್ನಾಭರಣ ದೋಚಿ ಪರಾರಿ ಯಾಗಿರುವ ಘಟನೆ ಮೈಸೂರಿನ ವಿವೇಕಾ ನಂದನಗರದಲ್ಲಿ ಇಂದು ಸಂಭವಿಸಿದೆ. ವಿವೇಕಾನಂದನಗರ 7ನೇ ಕ್ರಾಸ್ ನಿವಾಸಿಗಳಾದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿ ನಿಯರ್ ವೀರಭದ್ರಯ್ಯ(91) ಹಾಗೂ ಪತ್ನಿ ಶ್ರೀಮತಿ ರಂಗಮ್ಮ(85) ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಖದೀಮರು 100 ಗ್ರಾಂ ಚಿನ್ನಾಭರಣ ಹಾಗೂ 15,000 ರೂ. ನಗದನ್ನು ದೋಚಿದ್ದಾರೆ. ಇಂದು ಬೆಳಿಗ್ಗೆ 6.30 ಗಂಟೆ ವೇಳೆಗೆ ದುಷ್ಕರ್ಮಿಗಳು ಬಾಗಿಲು…

ಹಾಸನದಲ್ಲಿ ಕುಖ್ಯಾತ ಮನೆಗಳ್ಳನ ಬಂಧನ: 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಹಾಸನದಲ್ಲಿ ಕುಖ್ಯಾತ ಮನೆಗಳ್ಳನ ಬಂಧನ: 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

August 30, 2020

ಹಾಸನ, ಆ.29-ಹಾಸನ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಮನೆ ಬೀಗ ಮುರಿದು ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಿದ್ದ ಕುಖ್ಯಾತ ಹಾಗೂ ಚಾಣಾಕ್ಷ ಮನೆಗಳ್ಳನನ್ನು ಹಾಸನ ಗ್ರಾಮಾಂತರ ಪೆÇಲೀ ಸರು ಬಂಧಿಸಿ, 35 ಲಕ್ಷ ರೂಪಾಯಿ ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಆರ್.ಶ್ರೀನಿವಾಸ್‍ಗೌಡ ತಿಳಿಸಿದರು. ಗಿರೀಶ್ ಕುಮಾರ್ ಬಂಧಿತ ಆರೋಪಿ. ನಂಜನ ಗೂಡು ತಾಲೂಕಿನ ಹೆಡತಲೆ ಗ್ರಾಮದ ಈತ, ಹದಿನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಈತನಿಗೆ ಸಹಕರಿಸಿದ ಮತ್ತೊಬ್ಬ ಆರೋಪಿ ಬೆಳಗಾವಿಯ ರಾಜೇಶ್…

ಹುಲಿ ದಾಳಿ: ಹಸು ಬಲಿ
ಮೈಸೂರು

ಹುಲಿ ದಾಳಿ: ಹಸು ಬಲಿ

August 30, 2020

ಮೈಸೂರು, ಆ.29(ಎಸ್‍ಬಿಡಿ)- ಹುಲಿ ದಾಳಿಗೆ ಹಸು ಬಲಿಯಾದ ಘಟನೆ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಗ್ರಾಮದ ನಿಂಗೇಗೌಡ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡು ಹಸು ಸಾವನ್ನಪ್ಪಿದೆ. ಜೀವನೋಪಾಯಕ್ಕೆ ಈ ಹಸುವನ್ನೇ ನೆಚ್ಚಿಕೊಂಡಿದ್ದ ರೈತ ನಿಂಗೇಗೌಡ ಈಗ ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳೀಕ ಪರಿಹಾರ ನೀಡುವ ಬರವಸೆ ನೀಡಿದ್ದಾರೆಂದು ತಿಳಿದುಬಂದಿದೆ. ಗ್ರಾಮದಲ್ಲಿ ಹುಲಿಗಳ ಹಾವಳಿ ದಿನೇ…

ಮೈಸೂರು ರೈಲ್ವೆ ಕಾರ್ಯಾಗಾರದಲ್ಲಿ ಮೋಟಾರ್ ಕೋಚ್ ವ್ಹೀಲ್ ಸೆಟ್ ತಯಾರಿಕೆ
ಮೈಸೂರು

ಮೈಸೂರು ರೈಲ್ವೆ ಕಾರ್ಯಾಗಾರದಲ್ಲಿ ಮೋಟಾರ್ ಕೋಚ್ ವ್ಹೀಲ್ ಸೆಟ್ ತಯಾರಿಕೆ

August 30, 2020

ಮೈಸೂರು,ಆ.29(ಆರ್‍ಕೆ)- ಬಿಇಎಂಎಲ್‍ನ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್‍ಗಳಿಗೆ ಅಗತ್ಯವಿರುವ ಮೋಟಾರ್ ಕೋಚ್ ವ್ಹೀಲ್ ಸೆಟ್‍ಗಳನ್ನು ಮೈಸೂರು ರೈಲ್ವೆ ಕಾರ್ಯಾ ಗಾರವು ತಯಾರಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನೈರುತ್ಯ ರೈಲ್ವೆಯು, 6 ವ್ಹೀಲ್ ಸೆಟ್‍ಗಳ ಮೊದಲ ಯೂನಿಟ್ ಅನ್ನು ಬೆಮೆಲ್‍ಗೆ ರವಾನಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದೆ. 188 ಟ್ರೈಲರ್ ಕೋಚ್ ಚಕ್ರಗಳು ಮತ್ತು 52 ಮೋಟಾರ್ ಕೋಚ್ ಚಕ್ರಗಳನ್ನು ಈವರೆಗೆ ತಯಾರಿಸಿದ್ದು, ಅವುಗಳನ್ನು ದೆಹಲಿಯ ಬೆಮೆಲ್ ಉತ್ಪಾದಿಸಿದ 8 ಕೋಚ್ ಎಂಇಎಂಯುಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ….

ರಾಷ್ಟ್ರೀಯ ಕ್ರೀಡಾದಿನ: ಹಿರಿಯ ಕ್ರೀಡಾಪಟು, ನಿವೃತ್ತ ಕೋಚ್‍ಗಳಿಗೆ ಸನ್ಮಾನ
ಮೈಸೂರು

ರಾಷ್ಟ್ರೀಯ ಕ್ರೀಡಾದಿನ: ಹಿರಿಯ ಕ್ರೀಡಾಪಟು, ನಿವೃತ್ತ ಕೋಚ್‍ಗಳಿಗೆ ಸನ್ಮಾನ

August 30, 2020

ಮೈಸೂರು, ಆ.29(ಎಂಟಿವೈ)- ಮೈಸೂ ರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂ ಗಣದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾದಿನ ಕಾರ್ಯಕ್ರಮದಲ್ಲಿ 6 ಕ್ರೀಡಾ ಸಾಧಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸನ್ಮಾನಿಸಿದರು. ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂ ಗಣದಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ-ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾ ಚರಣೆ ಸಮಿತಿ ಜಂಟಿಯಾಗಿ ನಡೆಸಿದ ರಾಷ್ಟ್ರೀಯ ಕ್ರೀಡಾದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಭಾವಚಿತ್ರಕ್ಕೆ…

ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿಗಳು ಶಿಕ್ಷಕರಾಗಲಿ: ಕುಲಪತಿ ಸಲಹೆ
ಮೈಸೂರು

ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿಗಳು ಶಿಕ್ಷಕರಾಗಲಿ: ಕುಲಪತಿ ಸಲಹೆ

August 30, 2020

ಮೈಸೂರು, ಆ.29(ಎಸ್‍ಪಿಎನ್)- ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾವಂತ ಶಿಕ್ಷಕರ ಕೊರತೆ ಎದುರಾಗಿದ್ದು, ಇದು ಆತಂಕದ ವಿಷಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬೇಸರ ವ್ಯಕ್ತಪಡಿಸಿದರು. ಮೈಸೂರು ಜೆಎಲ್‍ಬಿ ರಸ್ತೆಯ ಐಡಿ ಯಲ್ ಜಾವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆ ಹಾಗೂ ರೋಟರಿ ಮೈಸೂರು ಮಿಡ್‍ಟೌನ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು. ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿ…

ಪೌರಕಾರ್ಮಿಕರ ಜಮೀನು ಕಬಳಿಸಲು ಸಂಚು ಆರೋಪ; ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾ ಪ್ರತಿಭಟನೆ
ಮೈಸೂರು

ಪೌರಕಾರ್ಮಿಕರ ಜಮೀನು ಕಬಳಿಸಲು ಸಂಚು ಆರೋಪ; ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾ ಪ್ರತಿಭಟನೆ

August 30, 2020

ಮೈಸೂರು, ಆ.29(ಪಿಎಂ)- ಹುಣಸೂರು ತಾಲೂ ಕಿನ ಮಾರನಹಳ್ಳಿ ಪೆರಿಯಾರ್ ಬಡಾವಣೆಯ ಪೌರಕಾರ್ಮಿಕ ರಿಗೆ ಸೇರಿದ 12 ಎಕರೆ ಜಮೀನನ್ನು ಕಬಳಿಸಲು ಬಲಾಡ್ಯರು ಸಂಚು ನಡೆಸಿದ್ದಾರೆಂದು ಆರೋಪಿಸಿ ಹಾಗೂ ಅರುಂ ಧತಿಯಾರ್ ಸಮುದಾಯಕ್ಕೆ ಶೇ.3ರಷ್ಟು ಒಳಮೀಸಲಾತಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿ ಯಾರ್ ಮಹಾಸಭಾದಿಂದ ಶನಿವಾರ ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಬಡಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅರುಂಧತಿ ಯಾರ್ ಸಮುದಾಯದ 15 ಪೌರಕಾರ್ಮಿಕ ಕುಟುಂಬಗಳು…

ರಾಜ್ಯದಲ್ಲಿ ಮುಂಗಾರು ದುರ್ಬಲ
ಮೈಸೂರು

ರಾಜ್ಯದಲ್ಲಿ ಮುಂಗಾರು ದುರ್ಬಲ

August 30, 2020

ಬೆಂಗಳೂರು, ಆ.29(ಕೆಎಂಶಿ)- ರಾಜ್ಯದಲ್ಲಿ ಮುಂಗಾರು ಮಳೆ ದುರ್ಬಲಗೊಂಡಿದ್ದು, ಕಳೆದೊಂದು ವಾರದಲ್ಲಿ ವಾಡಿಕೆಗಿಂತ ಶೇ.51ರಷ್ಟು ಮಳೆ ಕೊರತೆ ಉಂಟಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದೊಂದು ವಾರದಲ್ಲಿ ವಾಡಿಕೆಯ ಮಳೆ ಪ್ರಮಾಣ 40 ಮಿ.ಮೀ.ನಷ್ಟಿದ್ದು, ಕೇವಲ 20 ಮಿ.ಮೀ.ನಷ್ಟು ಮಾತ್ರ ರಾಜ್ಯದಲ್ಲಿ ಮಳೆಯಾಗಿದೆ. ಅದರಲ್ಲೂ ದಕ್ಷಿಣ ಒಳನಾಡಿ ನಲ್ಲಿ ಹೆಚ್ಚು ಮಳೆ ಕೊರತೆಯಾಗಿದೆ. ಅಧಿಕ ಮಳೆಯಾಗು ತ್ತಿದ್ದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲೂ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆಗಸ್ಟ್‍ನಲ್ಲಿ ದಕ್ಷಿಣ ಒಳನಾಡು ಹೊರತುಪಡಿಸಿ ಉಳಿದೆಡೆ…

ಬಿಗ್‍ಬಾಸ್: ಸಲ್ಮಾನ್ ಖಾನ್ ಸಂಭಾವನೆ 250 ಕೋಟಿ ರೂ.!
ಮೈಸೂರು

ಬಿಗ್‍ಬಾಸ್: ಸಲ್ಮಾನ್ ಖಾನ್ ಸಂಭಾವನೆ 250 ಕೋಟಿ ರೂ.!

August 30, 2020

ಮುಂಬೈ, ಆ.29- ಕಳೆದ 10 ಸೀಸನ್‍ಗಳಿಂದಲೂ ಹಿಂದಿ ಬಿಗ್ ಬಾಸ್ ನಿರೂ ಪಣೆ ಮಾಡುತ್ತ ಬರುತ್ತಿರುವ ನಟ ಸಲ್ಮಾನ್ ಖಾನ್ ಈ ಬಾರಿಯೂ ಮುಂದುವರಿಯಲಿದ್ದಾರೆ. ಕೆಲವೇ ದಿನಗಳ ಹಿಂದೆ ಪೆÇ್ರೀಮೋ ಚಿತ್ರೀಕರಣ ಮಾಡಲಾಗಿದೆ. ಈ ಬಾರಿ ಸಲ್ಲು ಬರೋಬ್ಬರಿ 250 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನುತ್ತಿವೆ ಮೂಲಗಳು! ಸಿನಿಮಾ ಮತ್ತು ಜಾಹೀರಾತುಗಳಿಗೆ ಬಹುಕೋಟಿ ರೂ. ಸಂಭಾವನೆ ಪಡೆಯುವ ಸಲ್ಮಾನ್ ಖಾನ್‍ಗೆ ಬಿಗ್ ಬಾಸ್ ಆಯೋಜಕರು ಈ ಬಾರಿ ದೊಡ್ಡ ಮೊತ್ತವನ್ನೇ ಸಂಭಾವನೆಯನ್ನಾಗಿ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ….

1 449 450 451 452 453 1,611
Translate »