xಮೈಸೂರು, ಜು.27(ಪಿಎಂ)- ಕರ್ನಾ ಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದನ್ನು ಹಿಂಪಡೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ `ನಮ್ಮ ಭೂಮಿ ಮಾರಾಟಕ್ಕಿಲ್ಲ, ಕಾರ್ಪೊರೇಟ್ ಕಂಪನಿ ಮತ್ತು ಬಂಡವಾಳ ಶಾಹಿಗಳಿಗೆ ಪ್ರವೇಶವಿಲ್ಲ’ ಎಂಬ ಫಲಕ ಗಳನ್ನು ಹಳ್ಳಿಗಳಲ್ಲಿ ಅಳವಡಿಸುವ ಚಳವಳಿಗೆ ಆ.8ರಂದು ಚಾಲನೆ ನೀಡುತ್ತಿದೆ. ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, `ಆ.8 ಕ್ವಿಟ್ ಇಂಡಿಯಾ ಚಳವಳಿ ಘೋಷಣೆ…
ಮುಖ್ಯಮಂತ್ರಿಗಳೇ ಮೌನ ಮುರಿಯಿರಿ… ನಮ್ಮ ಬೇಡಿಕೆಗಳ ಬಗ್ಗೆ ಮಾತನಾಡಿ
July 28, 2020ಮೈಸೂರು, ಜು.27(ಆರ್‍ಕೆಬಿ)- ಮಾಸಿಕ ಗೌರವಧನ ಹೆಚ್ಚಿಸಬೇಕು. ಕೋವಿಡ್-19ರ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಸುರಕ್ಷತಾ ಸಾಮಗ್ರಿ ಒದಗಿಸಬೇಕು ಎಂದು ಒತ್ತಾಯಿಸಿ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು 18ನೇ ದಿನವಾದ ಇಂದೂ ಮೈಸೂರಿನ ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಮುಖ್ಯಮಂತ್ರಿಗಳು ಮೌನ ವಹಿಸಿದ್ದಾರೆ. ಅಲ್ಲದೆ ಈಗಾಗಲೇ ಆಶಾ ಕಾರ್ಯಕರ್ತೆ ಯರಿಗೆ 11 ಸಾವಿರ ರೂ. ನೀಡುತ್ತಿರುವುದಾಗಿ ಸರ್ಕಾರ ಬರೀ ಸುಳ್ಳುಗಳನ್ನೇ…
ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಸಮರ್ಥನಂ ಸುರಕ್ಷತಾ ಕಿಟ್ ವಿತರಣೆ
July 28, 2020ಮೈಸೂರು, ಜು.27(ಆರ್‍ಕೆಬಿ)- ಕೋವಿಡ್-19 ನಿಯಂ ತ್ರಣದಲ್ಲಿ ಮುಂಚೂಣಿಯಲ್ಲಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಸಮರ್ಥನಂ ಅಂಗ ವಿಕಲರ ಸಂಸ್ಥೆ ವತಿಯಿಂದ ಸುರಕ್ಷತಾ ಕಿಟ್‍ಗಳನ್ನು ಗಾಯತ್ರಿಪುರಂನಲ್ಲಿರುವ ನಗರ ಪಾಲಿಕೆ ವಲಯ ಕಚೇರಿ-9ರ ಆವರಣದಲ್ಲಿ ವಿತರಿಸಲಾಯಿತು. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಕೋಕಾ-ಕೋಲಾ ಫೌಂಡೇಷನ್ ಮತ್ತು ಯುನೈಟೆಡ್ ವೇ ಮುಂಬೈ ಸಹಯೋಗದೊಂದಿಗೆ ಸಮರ್ಥನಂ ಅಂಗವಿಕಲರ ಸಂಸ್ಧೆಯು ಸ್ಯಾನಿಟೈಜರ್, ಮಾಸ್ಕ್, ಹ್ಯಾಂಡ್‍ವಾಷ್, ಮುಖ ಕವಚ, ಹ್ಯಾಂಡ್ ಗ್ಲೌಸ್ ಇನ್ನಿತರೆ ಪರಿಕರಗಳನ್ನು ಸಾಂಕೇತಿಕವಾಗಿ ನೀಡುವ ಮೂಲಕ ಉಪ ಮೇಯರ್ ಸಿ.ಶ್ರೀಧರ್…
ಕಾರುಗಳು ಡಿಕ್ಕಿ: ಪಯಣಿಸುತ್ತಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರು
July 28, 2020ಮೈಸೂರು, ಜು. 27(ಆರ್‍ಕೆ)- ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆ ವಿಜಯಾ ಬ್ಯಾಂಕ್ ಸರ್ಕಲ್‍ನಲ್ಲಿ ಸೋಮವಾರ ಬೆಳಗ್ಗೆ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮಾರುತಿ ಓಮ್ನಿ ಮತ್ತು ಸ್ವಿಫ್ಟ್ ಕಾರು ನಡುವೆ ಬೆಳಗ್ಗೆ 9.30 ಗಂಟೆಗೆ ಡಿಕ್ಕಿ ಸಂಭವಿ ಸಿದೆ. ಕಾರಿನಲ್ಲಿದ್ದವ ರಿಗೆ ಸಣ್ಣಪುಟ್ಟ ಗಾಯ ಗಳಾಯಿತು. ತಕ್ಷಣ ಸಾರ್ವಜನಿಕರು ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಘಟನೆಯಿಂದ ಎರಡೂ ಕಾರುಗಳು ಜಖಂಗೊಂಡವಾದರೂ, ಅವುಗಳಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಕೆಆರ್ ಸಂಚಾರ ಠಾಣೆ…
ವಿದ್ಯಾರ್ಥಿಗಳ ಜೀವ ಪಣಕ್ಕಿಟ್ಟು ಪರೀಕ್ಷೆ ಬೇಡ
July 28, 2020ಮೈಸೂರು, ಜು.27(ಆರ್‍ಕೆಬಿ)- ಅಂತಿಮ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಪಡಿಸಬೇಕು. ವಿದ್ಯಾರ್ಥಿಗಳ ಜೀವವನ್ನು ಪಣಕ್ಕಿಟ್ಟು ಪರೀಕ್ಷೆ ನಡೆಸುವುದು ಬೇಡವೇ ಬೇಡ ಎಂದು ಆಗ್ರಹಿಸಿ ಎಐಡಿಎಸ್‍ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್) ಆಶ್ರಯದಲ್ಲಿ ಸೋಮ ವಾರ ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಎದುರು ಪ್ರತಿಭಟನೆ ನಡೆಸಲಾಯಿತು. ಕೊರೊನಾ ಭೀಕರತೆ ಹೆಚ್ಚುತ್ತಿದೆ. ಸಾವು ಪ್ರಕರಣಗಳೂ ಏರುತ್ತಲೇ ಇವೆ. ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ, ಹಾಸಿಗೆ ಗಳು ದೊರೆಯದ ಪರಿಸ್ಥಿತಿ…
ಆ.15ರಂದು ಕೊರೊನಾ ಸೋಂಕಿನಿಂದ ಸ್ವಾತಂತ್ರ್ಯ ಪಡೆಯುವ ಸಂಕಲ್ಪ ಮಾಡೋಣ
July 27, 2020ನವದೆಹಲಿ,ಜು.26-ಕೊರೊನಾ ವೈರಸ್ ಆರಂಭ ಕ್ಕಿಂತಲೂ ಪ್ರಸ್ತುತ ಅತಿಹೆಚ್ಚು ಅಪಾಯಕಾರಿಯಾಗಿದ್ದು, ಈ ವರ್ಷ ಆಗಸ್ಟ್ 15ರಂದು ದೇಶ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿ ಸುವ ಸಂದರ್ಭದಲ್ಲಿ ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ನಾವು ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ತೆಗೆದು ಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತದಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 13 ಲಕ್ಷದ ಗಡಿದಾಟಿದೆ. ಕೊರೊನಾದಿಂದ ಮೃತ ಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗು ತ್ತಲೇ ಇದೆ. ಕೊರೋನಾದಿಂದಾಗಿ ಅತಿಹೆಚ್ಚು ಹಾನಿ ಗೊಳಗಾದ ದೇಶಗಳ ಪೈಕಿ ಅಮೆರಿಕ,…
ಕಾರ್ಗಿಲ್ ಯುದ್ಧದಿಂದ ನಮ್ಮ ಯೋಧರ ಶಕ್ತಿ ಇಡೀ ವಿಶ್ವಕ್ಕೇ ಪರಿಚಯವಾಗಿದೆ: ಮೋದಿ
July 27, 2020ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತ ಪಾಕಿಸ್ತಾನ ಮಣಿಸಿದ ಐತಿಹಾಸಿಕ ದಿನಕ್ಕಿಂದು 21 ವರ್ಷ ತುಂಬಿದ್ದು, 21 ವರ್ಷಗಳ ಹಿಂದೆ ಇದೇ ದಿನ ನಾವು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿ ದ್ದೆವು. ಕಾರ್ಗಿಲ್ ಯುದ್ಧದಿಂದ ನಮ್ಮ ಯೋಧರ ಶಕ್ತಿ ಇಡೀ ವಿಶ್ವಕ್ಕೇ ಪರಿಚಯ ವಾಗಿದೆ ಎಂದು ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಯೋಧರ ಬಲಿದಾನವನ್ನು ಸ್ಮರಿಸಿದ್ದಾರೆ. ಇಂದು ಕಾರ್ಗಿಲ್ ವಿಜಯ ದಿವಸ. ಕಾರ್ಗಿಲ್ ಹುತಾತ್ಮ ಯೋಧರಿಗೆ ನನ್ನ ಧನ್ಯವಾದಗಳು….
ಕಾರ್ಗಿಲ್ ವಿಜಯ ದಿವಸ್: ಹುತಾತ್ಮ ಯೋಧರಿಗೆ ಸಿಎಂ, ಸಚಿವರಿಂದ ಗೌರವ ನಮನ
July 27, 2020ಬೆಂಗಳೂರು: ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯ ಮಂತ್ರಿ ಯಡಿಯೂರಪ್ಪ, ಇಡೀ ದೇಶ ಇಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುತ್ತಿದೆ. ದೇಶಕ್ಕಾಗಿ ಹುತಾತ್ಮರಾದ ಎಲ್ಲ ಭಾರತೀಯ ಸೈನಿಕರಿಗೂ ಇಂದು ವಿಶೇಷವಾಗಿ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರತೀಯ ಸೇನಾಪಡೆಗಳ ವೀರಯೋಧರಿಗೆ ಮತ್ತು ಅವರ ಕುಟುಂಬ ದವರಿಗೆ ಬೆಂಬಲ ಹಾಗೂ ಹೆಮ್ಮೆಯ ಅಭಿ ನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಭಾರತದ ಏಕತೆ,…
ಮೈಸೂರಲ್ಲಿ ಕೊರೊನಾ ಸೋಂಕಿಗೆ ಮತ್ತೆ ಐವರು ಸಾವು: ಭಾನುವಾರ 230 ಮಂದಿಗೆ ಸೋಂಕು
July 27, 2020ಮೈಸೂರು, ಜು.26(ಎಂಟಿವೈ)-ಮೈಸೂರಿನಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಭಾನುವಾರ 31 ವರ್ಷದ ಯುವಕ, ಮೂವರು ವೃದ್ಧೆಯರು, ಓರ್ವ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇದರಿಂದ ಮೃತಪಟ್ಟವರ ಸಂಖ್ಯೆ 112ಕ್ಕೆ ಏರಿಕೆಯಾಗಿದ್ದು, ಹೊಸದಾಗಿ 230 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದ ರೊಂದಿಗೆ ಸೋಂಕಿತರ ಸಂಖ್ಯೆ 2867ಕ್ಕೆ ಏರಿದೆ. ಕಳೆದ ಕೆಲವು ದಿನಗಳಿಂದ ಮೈಸೂರಲ್ಲಿ ಕೊರೊನಾಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಇದ್ದು, 2ನೇ ಬಾರಿ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ಬಾರಿಸಿದೆ. ಅಲ್ಲದೇ ಸಾವಿನ ಸರಣಿಯೂ ಮುಂದು ವರೆದಿದ್ದು, 31 ವರ್ಷದ ಯುವಕ,…
ಬೆಂಗಳೂರಿನಲ್ಲಿ 3,338 ಕೊರೊನಾ ಸೋಂಕಿತರು ನಾಪತ್ತೆ ಬಿಬಿಎಂಪಿಗೆ ಹೊಸ ತಲೆನೋವು
July 27, 2020ಬೆಂಗಳೂರು: ಕೊರೊನಾ ಮಹಾಮಾರಿ ಬೆಂಗಳೂರಿಗರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಗೆ ಬ್ರೇಕ್ ಹಾಕಲು ಸರ್ಕಾರ ಮತ್ತು ಬಿಬಿಎಂಪಿ ಹರಸಾಹಸಪಡುತ್ತಿದೆ. ಆದರೆ ಇತ್ತ ಉದ್ಯಾನ ನಗರಿಯಲ್ಲಿ ಬರೋಬ್ಬರಿ 3,338 ಕೊರೊನಾ ಸೋಂಕಿತರು ನಾಪತ್ತೆಯಾಗಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬೆಂಗಳೂರಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿತರು ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಬೆಂಗಳೂರಿನಲ್ಲಿ ಇದುವರೆಗೂ ಒಟ್ಟು 45,453 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 33,156 ಸಕ್ರಿಯ ಪ್ರಕರಣಗಳು ಇವೆ. ಅಲ್ಲದೇ…










