ಮೈಸೂರು, ಜು.26- ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರೊಂದಿಗೆ ದಿನಕ್ಕೆ ಶೇ.50ರಷ್ಟು ಚಟುವಟಿಕೆ ಸ್ಥಗಿತಗೊಳಿಸಿ ಜನಜಂಗುಳಿ ತಡೆಗೆ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಮೈಸೂರಲ್ಲಿರುವ ಪೂರ್ವ ಮತ್ತು ಪಶ್ಚಿಮ ಪ್ರಾದೇ ಶಿಕ ಸಾರಿಗೆ ಕಚೇರಿಗಳಲ್ಲಿ ಪ್ರತಿದಿನ ನೂರಾರು ಮಂದಿ ಸಾರ್ವಜನಿಕರು ವಿವಿಧ ಉದ್ದೇಶಕ್ಕೆ ಆಗಮಿಸುತ್ತಿದ್ದರು. ಆದರೆ ಕೋವಿಡ್‍ನಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ವಾಗಿರುವ ಹಿನ್ನೆಲೆಯಲ್ಲಿ ಇದೀಗ ಸರ್ಕಾರದ ಸೂಚನೆ ಮೇರೆಗೆ ಆರ್‍ಟಿಓ ಕಚೇರಿ ಚಟುವಟಿಕೆಯನ್ನು ಶೇ.50ರಷ್ಟಕ್ಕೆ…
ಮಂಗಳವಾರದವರೆಗೆ ಬೋಟಿ ಬಜಾರ್ ಮಾಂಸ ಮಾರುಕಟ್ಟೆ ಬಂದ್
July 27, 2020ಮೈಸೂರು, ಜು.26(ಎಂಟಿವೈ)-ಮಾಂಸದ ಅಂಗಡಿ ನೌಕರನೊಬ್ಬ ಕೊರೊನಾ ಸೋಂಕಿ ನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಮೈಸೂ ರಿನ ಬೋಟಿ ಬಜಾರ್ ಮಾಂಸದ ಅಂಗಡಿಯನ್ನು ಮಂಗಳವಾರದವರೆಗೆ ಬಂದ್ ಮಾಡಲಾಗಿದ್ದು, ಪಾಲಿಕೆ ವತಿ ಯಿಂದ ಸ್ಯಾನಿಟೈಸ್ ಮಾಡಲಾಗಿದೆ. ಬೋಟಿ ಬಜಾರ್‍ನಲ್ಲಿರುವ ಮಾಂಸದ ಮಾರುಕಟ್ಟೆಯ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 10 ದಿನದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆ ಅವರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಅವರ ಗಂಟಲು ದ್ರವ ಪರೀಕ್ಷಾ ವರದಿ 4 ದಿನದ ಹಿಂದೆ ಪಾಸಿಟಿವ್ ಬಂದಿತ್ತು….
ಡಿ.ಕೆ.ಶಿವಕುಮಾರ್‍ಗೆ ಮತ್ತೊಂದು ಸಂಕಷ್ಟ
July 27, 2020ಬೆಂಗಳೂರು, ಜು.26- ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ರದ್ದು ಮಾಡುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಶಶಿಕುಮಾರ್ ಅವರು ಸಲ್ಲಿಸಿದ್ದ ಮನವಿ ಯನ್ನು ಹೈಕೋರ್ಟ್ ತಳ್ಳಿಹಾಕಿದೆ. ದೆಹಲಿ ಡಿಕೆಶಿ ನಿವಾಸದಲ್ಲಿ ಸಿಕ್ಕಿದ್ದ ಅಕ್ರಮ ಹಣ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿದೆ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಪರಿಶೀಲನೆ ಆರಂಭಿಸಿದೆ. ತನಿಖೆ ರದ್ದು ಮಾಡುವಂತೆ ಈ ಹಿಂದೆ ಡಿಕೆಶಿ ಆಪ್ತ ಶಶಿಕುಮಾರ್ ಅವರು…
ಕೋವಾಕ್ಸಿನ್‍ನ ಮೊದಲ ಹಂತದ ಮಾನವ ಪ್ರಯೋಗದಲ್ಲಿ ಪ್ರೋತ್ಸಾಹದಾಯಕ ಫಲಿತಾಂಶ
July 27, 2020ನವದೆಹಲಿ: ದೇಶದ ಮೊದಲ ಕೋವಿಡ್-19 ಲಸಿಕೆ ಕೋವಾಕ್ಸಿನ್‍ನ ಮೊದಲ ಹಂತದ ಮಾನವ ಪ್ರಯೋಗ ದಲ್ಲಿ ‘ಪೆÇ್ರೀತ್ಸಾಹದಾಯಕ ಫಲಿತಾಂಶ’ ಕಂಡುಬಂದಿದೆ ಎಂದು ಲಸಿಕೆಯ ಪ್ರಯೋಗ ತಂಡದ ಪ್ರಧಾನ ಅನ್ವೇಷ ಕರು ತಿಳಿಸಿದ್ದಾರೆ. ಕೋವಾಕ್ಸಿನ್‍ನ ಮೊದಲ ಹಂತದ ಮಾನವ ಪ್ರಯೋಗ ಮುಗಿದಿದ್ದು, ದೇಶಾ ದ್ಯಂತ 50 ಜನರಿಗೆ ಈ ಲಸಿಕೆಯನ್ನು ನೀಡಲಾಗಿದ್ದು, ಪೆÇ್ರೀತ್ಸಾಹದಾಯಕ ಫಲಿತಾಂಶ ಕಂಡುಬಂದಿದೆ. ಮೊದಲ ಹಂತದ 2ನೇ ಭಾಗವಾಗಿ ಶನಿವಾರ 6 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಲಸಿಕೆ ಪ್ರಯೋಗ ತಂಡದ ಪ್ರಧಾನ ಅನ್ವೇಷಕಿ ಡಾ.ಸವಿತಾ ವರ್ಮಾ…
ವಂದೇ ಭಾರತ್ ಮಿಷನ್: ಆಗಸ್ಟ್ 1ರಿಂದ 5ನೇ ಹಂತ ಆರಂಭ
July 27, 2020ನವದೆಹಲಿ: ಕೊರೊನಾ ವೈರಸ್ ಕಾರಣದಿಂದ ವಿದೇಶಗಳಲ್ಲಿ ಸಿಕ್ಕಿ ಹಾಕಿ ಕೊಂಡಿರುವ ಭಾರತೀಯರನ್ನು ಸ್ವದೇ ಶಕ್ಕೆ ಕರೆತರುವ ವಂದೇ ಭಾರತ್ ಮಿಷನ್‍ನ 5ನೇ ಹಂತ ಆಗಸ್ಟ್ 1ರಿಂದ ಆರಂಭ ವಾಗಲಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಈಗಾಗಲೇ 53 ವಿಮಾನ ಗಳಿಂದ ವಿದೇಶದಲ್ಲಿ ಸಿಲುಕಿದ್ದ 2.5 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಆಗಸ್ಟ್ 1ರಿಂದ 5ನೇ ಹಂತ ಆರಂಭವಾಗಲಿದ್ದು, ಹೆಚ್ಚುವರಿ ವಿಮಾನ ಒದಗಿಸುವ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡಲಾಗುವುದು ಎಂದು ಏರ್…
ಕೊರೊನಾ ಸೋಂಕಿತರ, ಅವರ ಅಕ್ಕಪಕ್ಕದ ಮನೆಗಳಿಗೆ ಸ್ಯಾನಿಟೈಸ್ ಮಾಡಿ
July 27, 2020ಮೈಸೂರು,ಜು.26(ಆರ್‍ಕೆ)-ಕೊರೊನಾ ಸೋಂಕಿ ತರು ಹಾಗೂ ಅಕ್ಕಪಕ್ಕದ ಮನೆಗಳಿಗೆ ಸ್ಯಾನಿಟೈಸ್ ಮಾಡಿ ಕೋವಿಡ್-19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಿ ಎಂದು ಶಾಸಕ ಎಲ್. ನಾಗೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಕೋವಿಡ್-19 ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೋವಿಡ್-19 ಪರೀಕ್ಷೆಯಲ್ಲಿ ಪಾಸಿ ಟಿವ್ ಬಂದ ತಕ್ಷಣ ಆ ವ್ಯಕ್ತಿಯನ್ನು ತಡಮಾಡದೇ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ಕರೆದೊಯ್ಯ ಬೇಕು ಹಾಗೂ ಸೋಂಕಿತರು ವಾಸವಿದ್ದ ಮನೆ ಹಾಗೂ ಅಕ್ಕಪಕ್ಕದ ಮನೆಗಳಿಗೆ…
ಕೊರೊನಾ ಸೋಂಕಿತರ ಸೇವೆಗಾಗಿ ಕೆಪಿಸಿಸಿಯಿಂದ 300 ವೈದ್ಯರ ನಿಯೋಜನೆ
July 27, 2020ಮೈಸೂರು, ಜು.26(ಎಂಟಿವೈ)- ಕೊರೊನಾ ಸೋಂಕಿತ ರಿಗೆ ಆರೋಗ್ಯ ಸೇವೆ ಒದಗಿಸಲು ರಾಜ್ಯದಲ್ಲಿ ಕೆಪಿಸಿಸಿ ಯಿಂದ 300ಕ್ಕೂ ಹೆಚ್ಚು ವೈದ್ಯರನ್ನು ನಿಯೋಜಿಸಲಾಗಿದೆ. ಪ್ರತಿ ತಾಲೂಕಿಗೆ ಒಬ್ಬರು ವೈದ್ಯರನ್ನು ನಿಯೋಜಿಸ ಲಾಗಿದ್ದು, ಅವರಿಗೆ ನೆರವಾಗಲು ಪಕ್ಷದ ಕಾರ್ಯಕರ್ತ ರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ತಿಳಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಮೈಸೂರು ಜಿಲ್ಲಾ ಗ್ರಾಮಾಂತರ ಸಮಿತಿ ಹಮ್ಮಿಕೊಂಡಿದ್ದ `ಆರೋಗ್ಯ ಹಸ್ತ’ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿದ ಅವರು, ರಾಜ್ಯ ಸರ್ಕಾರ ಸೋಂಕು ತಡೆಗಟ್ಟಲು ಹಾಗೂ…
ಪಿಯು ಕಾಲೇಜು ಉಪನ್ಯಾಸಕರ ವಿಶೇಷ ಪ್ರಕರಣದಡಿ ವರ್ಗಾವಣೆ ಪ್ರಕ್ರಿಯೆ ಮುಂದೂಡಿ
July 27, 2020ಮೈಸೂರು, ಜು.26(ಪಿಎಂ)- ವಿಶೇಷ ಪ್ರಕರಣದಡಿಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾ ವಣೆ ಪ್ರಕ್ರಿಯೆ ಮುಂದೂಡುವಂತೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪತ್ರ ಮುಖೇನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರಲ್ಲಿ ಕೋರಿದ್ದಾರೆ. ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ `ಸಿ’ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ವಿಶೇಷ ಪ್ರಕರಣದಡಿ ವರ್ಗಾವಣೆಗೆ ಜು.23ರಂದು ಆನ್‍ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಇದನ್ನು ತಾತ್ಕಾಲಿಕವಾಗಿ ಮುಂದೂಡಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ವಿಶೇಷ ಪ್ರಕರಣದಡಿ ವರ್ಗಾವಣೆ…
ಎನ್‍ಆರ್ ಕ್ಷೇತ್ರದ ಕೊರೊನಾ ಟಾಸ್ಕ್‍ಫೋರ್ಸ್ ಅಧ್ಯಕ್ಷನಾಗಿ ನಾನೇ ಇರುತ್ತೇನೆ
July 27, 2020ಮೈಸೂರು, ಜು.26(ಪಿಎಂ)- ಎನ್‍ಆರ್ ವಿಧಾನಸಭಾ ಕ್ಷೇತ್ರದ ಕೊರೊನಾ ಟಾಸ್ಕ್‍ಫೋರ್ಸ್ ಅಧ್ಯಕ್ಷನಾಗಿ ನಾನೇ ಇರುತ್ತೇನೆ ಎಂದು ಕ್ಷೇತ್ರದ ಶಾಸಕ ತನ್ವೀರ್‍ಸೇಠ್ ಹೇಳಿದರು. ತನ್ವೀರ್ ಅವರಿಗೆ ಅನಾ ರೋಗ್ಯವಾಗಿದ್ದ ಕಾರಣ ಸಂಸದ ಪ್ರತಾಪ್ ಸಿಂಹ ಅವರಿಗೆ ಎನ್‍ಆರ್ ಕ್ಷೇತ್ರದ ಟಾಸ್ಕ್‍ಫೋರ್ಸ್ ಜವಾಬ್ದಾರಿ ನೀಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವ ರಿಗೆ ಪ್ರತಿಕ್ರಿಯೆ ನೀಡಿದ ಅವರು, ಅನಾರೋಗ್ಯ ಕಾರಣದಿಂದ ಜನರ ನಡುವೆ ಇರಲು ಸಾಧ್ಯವಾಗಿರಲಿಲ್ಲ. ಕ್ಷೇತ್ರದ ಬಗ್ಗೆ ಮಾಹಿತಿ ಪಡೆಯು ತ್ತಿದ್ದೆ. ಇದೀಗ ಚೇತರಿಸಿಕೊಳ್ಳುತ್ತಿದ್ದು, ಈವರೆಗೆ ಕ್ಷೇತ್ರದಲ್ಲಿ ಏನೆಲ್ಲಾ…
ಸರ್ಕಾರಕ್ಕೆ ವರ್ಷ: ಫಲಾನುಭವಿ ಜತೆ ಸಿಎಂ ಡಿಜಿಟಲ್ ಸಂವಾದ
July 27, 2020ಜಿಪಂ ಸಭಾಂಗಣದಲ್ಲಿ ಇಂದು ನೇರ ಪ್ರಸಾರದ ವೀಕ್ಷಣೆ ಅವಕಾಶ ಮೈಸೂರು, ಜು.26(ಆರ್‍ಕೆಬಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ `ಆಡಳಿತ 1 ವರ್ಷ: ಸವಾಲುಗಳ ವರ್ಷ-ಪರಿಹಾರದ ಸ್ಪರ್ಶ’ ಕಾರ್ಯ ಕ್ರಮ ಜು.27ರ ಬೆಳಗ್ಗೆ 11ಕ್ಕೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿದ್ದು, ವರ್ಚುವಲ್ ವೇದಿಕೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನೇರ ಪ್ರಸಾರವಾಗ ಲಿದೆ. ಸರ್ಕಾರದ 1 ವರ್ಷದ ಸಾಧನೆ ಕುರಿತು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳು ಸಂಪಾದಿಸಿ, ವಾರ್ತಾ-ಸಾರ್ವಜನಿಕ…










