ಮೈಸೂರು, ಜು.23-(ಆರ್‍ಕೆ)-ಸರ್ಕಾರದ ಸೂಚನೆಯಂತೆ ಸೆಪ್ಟೆಂಬರ್ ತಿಂಗಳೊಳಗಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಗಿಸುವುದಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್ ತಿಳಿಸಿದ್ದಾರೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಿ ಎಂದು ಕೇಂದ್ರ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ ಎಂದು ತಿಳಿಸಿದರು. ದೇಶದ 900 ವಿಶ್ವವಿದ್ಯಾನಿಲಯಗಳ ಪೈಕಿ 760 ವಿಶ್ವ ವಿದ್ಯಾನಿಲಯಗಳು…
ಎಲ್ಲಾ ಬಣ ಒಂದಾಗಿಸಲು ದಲಿತ ಸಂಘರ್ಷ ಸಮಿತಿ ಒಕ್ಕೂಟ ರಚನೆ
July 24, 2020ಮೈಸೂರು, ಜು.23(ಪಿಎಂ)- ರಾಜ್ಯದ ದಲಿತ ಸಂಘರ್ಷ ಸಮಿತಿಯ ಎಲ್ಲಾ ಬಣ ಗಳನ್ನು ಒಂದೇ ವೇದಿಕೆಯಡಿ ತರುವ ಮೂಲಕ ಸಂಘಟನೆಗೆ ಹಿಂದೆ ಇದ್ದ ಬಲ ನೀಡುವ ಉದ್ದೇಶದಿಂದ `ದಲಿತ ಸಂಘರ್ಷ ಸಮಿತಿ ಒಕ್ಕೂಟ’ ರಚನೆ ಮಾಡಲಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಕಾರ್ಯ ಕಾರಿ ಸಮಿತಿ ಸದಸ್ಯ ಬಸವರಾಜ ದೇವ ನೂರು, 4 ದಶಕಗಳಿಗೂ ಹೆಚ್ಚು ಕಾಲ ನಾಡಿನ ದಿಕ್ಕು-ದೆಸೆಯಂತಿದ್ದ `ದಲಿತ ಸಂಘರ್ಷ ಸಮಿತಿ’ (ದಸಂಸ) ಈಗ ಮತ್ತೆ…
ಚೀನಾದಿಂದ ಕಾಲ್ಕಿತ್ತಿರುವ ಬೃಹತ್ ಕೈಗಾರಿಕೆ ರಾಜ್ಯಕ್ಕೆ ಸೆಳೆಯಲು ಭಾರೀ ರಿಯಾಯಿತಿ ಪ್ರಕಟ
July 24, 2020ಬೆಂಗಳೂರು, ಜು.23(ಕೆಎಂಶಿ)- ಚೀನಾದಿಂದ ಗುಳೆ ಎದ್ದಿರುವ ಬೃಹತ್ ಕೈಗಾ ರಿಕೆಗಳಿಗೆ ರಾಜ್ಯದಲ್ಲಿ ಅವಕಾಶ ಮಾಡಿ ಕೊಡಲು ದೊಡ್ಡ ಪ್ರಮಾಣ ದಲ್ಲಿ ರಿಯಾಯಿತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, ಇದರಿಂದ 20 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ನೂತನ ಕೈಗಾರಿಕಾ ನೀತಿಗೆ ಸಂಪುಟ ಸಭೆಯಲ್ಲಿ ಅನುಮತಿ ಪಡೆದ ನಂತರ ಮಾತನಾಡಿದ ಅವರು, ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ…
ಮೈಸೂರು ಪೊಲೀಸ್ ಆಯುಕ್ತರ ಹೊಸ ಕಚೇರಿ ಸಾಮಾನ್ಯ ವಿಭಾಗ ಸೀಲ್‍ಡೌನ್
July 24, 2020ಮೈಸೂರು, ಜು.23(ಆರ್‍ಕೆ)-ಸಿಬ್ಬಂದಿ ಯೊಬ್ಬರಲ್ಲಿ ಕೊರೊನಾ ದೃಢಪಟ್ಟಿರುವ ಹಿನ್ನೆಲೆ ನಜರ್‍ಬಾದಿನಲ್ಲಿರುವ ನಗರ ಪೊಲೀಸ್ ಆಯುಕ್ತರ ನೂತನ ಕಟ್ಟಡದ ಸಾಮಾನ್ಯ ವಿಭಾಗವನ್ನು ಸೀಲ್‍ಡೌನ್ ಮಾಡಲಾಗಿದೆ. ಡೆಪ್ಯೂಟೇಷನ್ ಮೇಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ ಅವರನ್ನು ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಹ ನೌಕರರನ್ನು ಮನೆಯಲ್ಲೇ ಪ್ರತ್ಯೇಕವಾಗಿ ರುವಂತೆ ಸೂಚಿಸಲಾಗಿದೆ. ಸೋಂಕು ದೃಢಪಟ್ಟಿರುವುದು ತಿಳಿಯು ತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತರ ಕಚೇರಿ ನೂತನ ಕಟ್ಟಡದ…
ಶ್ರಾವಣ ಶನಿವಾರಗಳಂದು ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ
July 24, 2020ಮೈಸೂರು, ಜು.23- ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಮನೆ ಮುಜರಾಯಿ ಸಂಸ್ಥೆಗಳಲ್ಲಿ ಒಂದಾದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವಾಲಯ ಹಾಗೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮತ್ತು ಖಾಸಗಿ ಆಡಳಿತ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಶ್ರಾವಣ ಮಾಸದ ಶನಿವಾರಗಳಂದು ಸಾರ್ವ ಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಜು.25, ಆಗಸ್ಟ್ 1, ಆ.8 ಮತ್ತು ಆ.15ರಂದು ಭಕ್ತಾದಿಗಳಿಗೆ ಪ್ರವೇಶ, ದೇವಾಲಯದಿಂದ ಜರುಗುವ ಎಲ್ಲಾ ಸೇವೆಗಳು,…
ಅಕ್ರಮವಾಗಿ ರೈಲ್ವೆ ಇ-ಟಿಕೆಟ್ ಮಾರುತ್ತಿದ್ದವನ ಬಂಧನ
July 24, 2020ಮೈಸೂರು,ಜು.23-ಐಆರ್‍ಸಿಟಿಸಿ ವೆಬ್‍ಸೈಟ್ ಮೂಲಕ ರೈಲ್ವೇ ಇ-ಟಿಕೆಟ್ ಬುಕ್ ಮಾಡಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಚಿಕ್ಕಮಗಳೂರಿನ ವ್ಯಕ್ತಿಯನ್ನು ರೈಲ್ವೆ ಸಂರಕ್ಷಣಾ ಪಡೆ(ಆರ್‍ಪಿಎಫ್) ಬಂಧಿಸಿದೆ. ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆ ಕ್ರೈಂ ವಿಂಗ್ ಸಬ್ ಇನ್ಸ್‍ಪೆಕ್ಟರ್ ಎಸ್.ಕೃಷ್ಣೋಜಿರಾವ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರಿನ ಟೆಕ್ಸ್‍ಟೈಲ್ಸ್ ಮೇಲೆ ದಾಳಿ ನಡೆಸಿ, ಮನೀಶ್ ಜೈನ್‍ನನ್ನು ಬಂಧಿಸಿದ್ದಾರೆ. ಈತ ತನ್ನ ವೈಯಕ್ತಿಕ ಖಾತೆ ಮೂಲಕ ಐಆರ್‍ಸಿಟಿಸಿ ವೆಬ್‍ಸೈಟ್‍ನಲ್ಲಿ ಟಿಕೆಟ್‍ಗಳನ್ನು ಕಾಯ್ದಿರಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಎಂಬುದು ಪರಿಶೀಲನೆಯಲ್ಲಿ ತಿಳಿದುಬಂದಿದೆ….
ಎಲ್ಲಾ ಜಾತಿ-ಧರ್ಮ, ಭಾಷಿಗರಿಗೂ ರಾಜಕೀಯ ಅಧಿಕಾರ ನೀಡುವುದು ಬಿಜೆಪಿ ಸಂಸ್ಕøತಿ
July 24, 2020ಮೈಸೂರು, ಜು.23(ಪಿಎಂ)- ಎಲ್ಲಾ ಜಾತಿ-ಧರ್ಮ, ಭಾಷಿಗರಿಗೂ ರಾಜ ಕೀಯ ಅಧಿಕಾರ ನೀಡುವ ಸಂಸ್ಕøತಿ ಬಿಜೆಪಿಯಲ್ಲಿದೆ ಎಂದು ವಿಧಾನ ಪರಿ ಷತ್‍ಗೆ ಈಗಷ್ಟೇ ನೇಮಕಗೊಂಡಿರುವ ಎ.ಹೆಚ್.ವಿಶ್ವನಾಥ್ ಹೇಳಿದರು. ಮೈಸೂರಿನ ಚಾಮರಾಜಪುರಂನಲ್ಲಿ ರುವ ಬಿಜೆಪಿ ಕಚೇರಿ `ಸಚಿತ್ ರಾಜೇಂದ್ರ ಭವನ’ದಲ್ಲಿ ಗುರುವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾತಿಗೆ ತಪ್ಪದ ಮಗ ಎಂದರೆ ಸಿಎಂ ಬಿ.ಎಸ್. ಯಡಿಯೂರಪ್ಪ ಎಂಬುದು ಇಂದು ಸಾಬೀತಾಗಿದೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್‍ಗೆ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ…
ಸ್ವಚ್ಛನಗರಿಗೆ ಶ್ರಮಿಸುವ ಪೌರಕಾರ್ಮಿಕರ ಬಡಾವಣೆಯಲ್ಲಿ ಸಮಸ್ಯೆಗಳ ಸರಮಾಲೆ!
July 23, 2020ಮೈಸೂರು, ಜು.22(ವೈಡಿಎಸ್)-`ಮೈಸೂರು ಸ್ವಚ್ಛ ನಗರಿ’ ಎಂಬ ಬಿರುದಿಗೆ ಪೌರಕಾರ್ಮಿಕರ ಶ್ರಮವೇ ಮುಖ್ಯ ಕಾರಣ ಎಂದು ಹೊಗಳುವ ಪಾಲಿಕೆ, ಅವರಿಗೇ ಮೂಲಸೌಕರ್ಯಗಳನ್ನು ಕಲ್ಪಿಸದೇ ನಿರ್ಲಕ್ಷಿಸಿದೆ. ವಾರ್ಡ್ ನಂ.21ರ ವ್ಯಾಪ್ತಿಗೆ ಬರುವ ಕುದುರೆಮಾಳ (ಮಾನಸನಗರ)ದಲ್ಲಿ 350ಕ್ಕೂ ಹೆಚ್ಚು ಪೌರಕಾರ್ಮಿಕ ಕುಟುಂಬಗಳು ವಾಸವಿವೆ. 200ಕ್ಕೂ ಹೆಚ್ಚು ಪೌರ ಕಾರ್ಮಿಕರು ಮುಂಜಾನೆ 5 ಗಂಟೆಗೆ ಎದ್ದು ವಿವಿಧ ಬಡಾವಣೆಗಳಿಗೆ ತೆರಳಿ ನಗರದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೆ. ನಮ್ಮ ಮೈಸೂರು ನಗರ ಸ್ವಚ್ಛವಾಗಿ ರಬೇಕೆಂದು ದುರ್ವಾಸನೆ ಬೀರುತ್ತಿದ್ದರೂ ಲೆಕ್ಕಿಸದೆ ಕಸವನ್ನು ಎತ್ತುತ್ತೇವೆ. ಆದರೆ, ಪಾಲಿಕೆ…
ವಿಕ್ರಂ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್‍ಗೆ ಚಿಕಿತ್ಸೆ ಆರಂಭ
July 23, 2020ಮೈಸೂರು, ಜು.22(ಆರ್‍ಕೆ)- ಕೊರೊನಾ ಸೋಂಕಿತ ಕೊರೊನಾ ಮುಂಚೂಣಿ ವಾರಿಯರ್ಸ್‍ಗೆ ಮೈಸೂರಿನ ವಿಕ್ರಂ ಜೇಷ್ಠ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇಂದಿ ನಿಂದ ಚಿಕಿತ್ಸೆ ಆರಂಭವಾಗಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಬುಧವಾರ ಬೆಳಿಗ್ಗೆ ಕೋವಿಡ್ ಕೇರ್ ಸೆಂಟರ್ ಕಾರ್ಯಕ್ಕೆ ಚಾಲನೆ ನೀಡಿ ದರು. ವೈದ್ಯರು, ನರ್ಸ್‍ಗಳು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆ ಅಲ್ಲಿ ಚಿಕಿತ್ಸೆ ನೀಡ ಲಿದ್ದು, ಮೈಸೂರು ಅಸೋಸಿ ಯೇಷನ್ ಆಫ್ ಹಾಸ್ಪಿಟಲ್, ನರ್ಸಿಂಗ್ ಹೋಂ ಮತ್ತು ಡಯಾಗ್ನೋಸ್ಟಿಕ್ ಸೆಂಟರ್(ಒಂಊಂಓ) ಮತ್ತು ಜಿಲ್ಲಾಡಳಿತದಿಂದ 97 ಹಾಸಿಗೆಯ ವೈದ್ಯಕೀಯ ಸೌಲಭ್ಯವನ್ನು…
ಎನ್.ಆರ್.ಕ್ಷೇತ್ರದ ಕೆಲ ಭಾಗಗಳಲ್ಲಿ ನಾಳೆವರೆಗೆ ನಿರ್ಬಂಧ ಮುಂದುವರಿಕೆ
July 23, 2020ಮೈಸೂರು, ಜು.22(ಆರ್‍ಕೆ)-ಕೊರೊನಾ ಸೋಂಕು ಹರಡದಂತೆ ತಡೆಯಲು ಮೈಸೂರಿನ ಎನ್.ಆರ್.ವಿಧಾನಸಭಾ ಕ್ಷೇತ್ರದ ಕೆಲ ಭಾಗಗಳಲ್ಲಿ ಜಿಲ್ಲಾ ಡಳಿತ ವಿಧಿಸಿರುವ ನಿರ್ಬಂಧ ಜು.24ರವರೆಗೆ ಮುಂದುವರಿಯ ಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾಜ್ಯದ ಜನತೆಯನ್ನುದ್ದೇಶಿಸಿ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಲಾಕ್‍ಡೌನ್ ಇರುವುದಿಲ್ಲ ಎಂದು ಹೇಳಿರುವ ಜೊತೆಗೆ ಯಾವ ಯಾವ ಸ್ಥಳಗಳಲ್ಲಿ ಕೊರೊನಾ ಸೋಂಕು ಮತ್ತು ಸಾವು ಹೆಚ್ಚುತ್ತಿವೆಯೋ ಆ ಪ್ರದೇಶದಲ್ಲಿ ಮಾತ್ರ ನಿರ್ಬಂಧ ವಿಧಿಸಿ ಎಂದು…










