ಮೈಸೂರು, ಜು.22(ಪಿಎಂ)- ಮೈಸೂರಿನಲ್ಲಿ ಬುಧವಾರ 50 ವರ್ಷದ ವಕೀಲ ರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪರಿಣಾಮ ಮೈಸೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮತ್ತು ಮಳಲವಾಡಿಯ ನ್ಯಾಯಾಲಯದ ಹೊಸ ಕಟ್ಟಡ ವನ್ನು ಇಂದಿನಿಂದ 2 ದಿನ ಸೀಲ್‍ಡೌನ್ ಮಾಡಿ, ನ್ಯಾಯಾಲಯದ ಕಲಾಪಗಳನ್ನು ಮುಂದೂಡಲಾಗಿದೆ. ಆರೋಗ್ಯ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಬುಧವಾರ ಎರಡೂ ನ್ಯಾಯಾ ಲಯ ಸಂಕೀರ್ಣಗಳಿಗೆ ರಾಸಾಯನಿಕ ಸಿಂಪಡಿಸಿ, ಸಂಪೂರ್ಣ ಸ್ಯಾನಿಟೈಸ್ ಮಾಡಿ ದ್ದಾರೆ. ಬುಧವಾರ ಬೆಳಿಗ್ಗೆಯಿಂದ ಸಂಜೆವ ರೆಗೂ ಸ್ಯಾನಿಟೈಸ್ ಕಾರ್ಯ ನಡೆದಿದೆ….
ಎನ್ 95 ವಾಲ್ವ್ ಮಾಸ್ಕ್ ಮಾರಾಟಕ್ಕೆ ನಿರ್ಬಂಧ
July 23, 2020ಮೈಸೂರು, ಜು.22(ಆರ್‍ಕೆ)- ವಾಲ್ವ್ ಹೊಂದಿರುವ ಎನ್95 ಮಾಸ್ಕ್‍ಗಳನ್ನು ಮಾರಾಟ ಮಾಡಬಾರದೆಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ (ಡಿಜಿಹೆಚ್‍ಎಸ್)ರು ಬರೆದಿರುವ ಪತ್ರದಲ್ಲಿ ವಾಲ್ವ್ ಇರುವ ಮಾಸ್ಕ್‍ನಿಂದ ಕೊರೊನಾ ವೈರಸ್ ನಿಯಂತ್ರಿಸಲು ಸಾಧ್ಯವಿಲ್ಲವಾದ್ದರಿಂದ ಅವುಗಳ ಮಾರಾಟ ಮಾಡಬಾರದೆಂದು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನಿರ್ಬಂಧವೇರಿದ್ದು, ಸಾರ್ವಜನಿಕರು ಅಂತಹ ಮಾಸ್ಕ್‍ಗಳನ್ನು ಖರೀದಿಸಬಾರದೆಂದೂ ಸೂಚನೆ ನೀಡಿದ್ದಾರೆ. ವಾಲ್ವ್‍ಡ್ ರೆಸ್ಪಿರೇಟರ್ ಇರುವ ಮಾಸ್ಕ್‍ಗಳನ್ನು ಜನರು ಬಳಸುತ್ತಿರುವುದನ್ನು ಗಮನಿಸಿರುವ ಡಿಜಿಹೆಚ್‍ಎಸ್, ಅದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತಪರಿಣಾಮ…
ಕುರುಬಾರಹಳ್ಳಿ, ಆಲನಹಳ್ಳಿ, ಚೌಡಹಳ್ಳಿ ಸರ್ವೆ ನಂಬರ್‍ಗಳ ಭೂಮಿ ಸಂಬಂಧ ಹೈಕೋರ್ಟ್ ತೀರ್ಪು ಅನುಷ್ಠಾನಗೊಳಿಸಿ
July 23, 2020ಮೈಸೂರು, ಜು.22(ಆರ್‍ಕೆಬಿ)- ಸರ್ಕಾರ, ಸಿದ್ದಾರ್ಥ ಬಡಾವಣೆ, ಕೆಸಿ ನಗರ, ಜೆಸಿ ನಗರ ಬಡಾವಣೆಗಳ ಭೂಮಿ ಹಸ್ತಾಂ ತರಕ್ಕೆ ತೋರಿಸುತ್ತಿರುವಷ್ಟೇ ಆಸಕ್ತಿಯನ್ನು ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41 ಹಾಗೂ ಚೌಡಹಳ್ಳಿ ಸರ್ವೆ ನಂ. 39ರ ಆಸ್ತಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಲು ತೋರ ಬೇಕು. ಅದು ಬಿಟ್ಟು ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮ ನವಿ ಸಲ್ಲಿಸಲು ಮುಂದಾದರೆ ಚಾಮುಂಡಿ ಬೆಟ್ಟ ತಪ್ಪಲಿನ ಇಡೀ ಭೂ ವಿವಾದ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಗಳ…
`ಕೊರೊನಾ ದೊಡ್ಡ ಕಾಯಿಲೆ ಏನಲ್ಲ, ಅದಕ್ಕೆ ಭಯಪಡಬೇಕಿಲ್ಲ’
July 23, 2020ಮೈಸೂರು, ಜು.22(ವೈಡಿಎಸ್)- `ಜನರು ತಿಳಿ ದಿರುವಂತೆ ಕೋವಿಡ್-19 ದೊಡ್ಡ ಕಾಯಿಲೆ ಏನಲ್ಲ. ಶೀತ, ನೆಗಡಿಯಾದಾಗ ಸೀನಿದರೆ ಬೇರೆಯವರಿಗೂ ಹರಡುವಂತೆ ಕೋವಿಡ್-19 ಸೋಂಕೂ ಹರಡುತ್ತದೆ. ಇದಕ್ಕೆ ಯಾರೂ ಭಯಪಡಬೇಕಿಲ್ಲ. ಬದಲಾಗಿ ಧೈರ್ಯದಿಂದ ಇರಬೇಕು. ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಡಬೇಕು ಅಷ್ಟೆ…ಇದು ಕೆಪಿಟಿಸಿಎಲ್ ಉದ್ಯೋಗಿ ಬಿ.ಎಂ.ಮಧು ಅವರ ಅನುಭವದ ಮಾತುಗಳು. `ನನಗೆ ಕೋವಿಡ್ ಹೇಗೆ ಬಂತು ಎಂಬುದನ್ನು ಇದುವರೆಗೂ ಕಂಡುಕೊಳ್ಳಲಾಗಿಲ್ಲ. ನಾನು ಕೋವಿಡ್ ಪರೀಕ್ಷೆ ಮಾಡಿಸುವ ವಾರದ ಮುನ್ನ ಜ್ವರ ಬಂದಿತ್ತು. ನಂತರ ಆರೋಗ್ಯವಾಗಿಯೇ…
ಬೈಕುಗಳ ನಡುವೆ ಡಿಕ್ಕಿ: ಸವಾರ ಸಾವು
July 23, 2020ಮೈಸೂರು, ಜು.22(ಆರ್‍ಕೆ)-ನಿನ್ನೆ ರಾತ್ರಿ ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಇಂದು ಸಾವನ್ನಪ್ಪಿದ್ದು, ಗಾಯಗೊಂಡಿರುವ ಮತ್ತಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಸರಸ್ವತಿಪುರಂನ ಬೇಕ್ ಪಾಯಿಂಟ್ ಸರ್ಕಲ್‍ನಲ್ಲಿ ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿತ್ತು. ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ರಾಹುಲ್(26) ಸಾವನ್ನಪ್ಪಿದ ಯುವಕ. ಘಟನೆಯಲ್ಲಿ ಇಮ್ರಾನ್ ಮತ್ತು ಆಕಾಶ ಎಂಬುವರು ಗಾಯಗೊಂಡಿದ್ದರು. ಸಾಹುಕಾರ್ ಚೆನ್ನಯ್ಯ ರಸ್ತೆಯಿಂದ ವಿಶ್ವಮಾನವ ಜೋಡಿ ರಸ್ತೆ ಕಡೆಗೆ ಬಜಾಜ್ ಪಲ್ಸರ್ (ಕೆಎ 09, ಹೆಚ್‍ಎಕ್ಸ್ 2114) ಬೈಕಿನಲ್ಲಿ ರಾಹುಲ್ ಹೋಗುತ್ತಿದ್ದಾಗ ವಿಜಯ…
ಕೋವಿಡ್ ಸೋಂಕಿತ ವ್ಯಕ್ತಿ ಸಾವು: ಸಂಬಂಧಿಕರಿಂದ ಆಂಬುಲೆನ್ಸ್‍ಗೆ ಬೆಂಕಿ
July 23, 2020ಬೆಳಗಾವಿ: ಕೋವಿಡ್ ಪಾಸಿಟಿವ್ ರೋಗಿಗೆ ಸರಿಯಾದ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಜಿಲ್ಲಾಸ್ಪತ್ರೆ ಮೇಲಡಕಲ್ಲು ತೂರಾಟ ನಡೆಸಿ, ಆಂಬುಲೆನ್ಸ್‍ಗೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಘೀ ಗಲ್ಲಿಯಿಂದ 59 ವರ್ಷದ ವ್ಯಕ್ತಿಯನ್ನು ಜುಲೈ 19ರಂದು ಆಸ್ಪತ್ರೆಗೆ ಕರೆ ತರಲಾಗಿತ್ತು. ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಸೂಕ್ತ ಚಿಕಿತ್ಸೆ ಸಿಗದೇ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ಸೋಂಕಿತ ವ್ಯಕ್ತಿ ಮೃತಪಡುತ್ತಿದ್ದಂತೆ ಏಕಾಏಕಿ ಆಸ್ಪತ್ರೆಗೆ ಬಂದ ಗುಂಪು ಆಸ್ಪತ್ರೆ ಮುಂಭಾಗದಲ್ಲಿ ನಿಂತಿದ್ದ ಆಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದಾರೆ….
ಪರಿಶಿಷ್ಟ ನೌಕರರ ಬಡ್ತಿ ಮಧ್ಯಂತರ ಆದೇಶ ನಿರಾಕರಿಸಿದ ಸುಪ್ರೀಂ
July 23, 2020ನವದೆಹಲಿ, ಜು.22- ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿಯ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಾಮಾನ್ಯ ವರ್ಗದ ನೌಕರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಜೀವ್ ಧವನ್ ಮತ್ತು ವಕೀಲ ಕುಮಾರ್ ಪರಿಮಳ್ ಅವರು, ಈ ವಿಷಯದಲ್ಲಿ ಮಧ್ಯಂತರ ಆದೇಶವನ್ನು ಜಾರಿ ಗೊಳಿಸಬೇಕೆಂಬ ಮನವಿಗೆ ವಿರೋಧ ವ್ಯಕ್ತಪಡಿಸಿದರು. ವರ್ಚುವಲ್ ನ್ಯಾಯಾಲಯದ ಬದಲಿಗೆ ಭೌತಿಕ ನ್ಯಾಯಾಲಯದಲ್ಲಿ ಈ ವಿಷಯದಲ್ಲಿ ಆಲಿಸಬೇಕು ಎಂದು ಮನವಿ ಮಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿ ನೀಡುವಲ್ಲಿ ಮೀಸಲಾತಿಯ ಯಥಾಸ್ಥಿತಿಯನ್ನು…
ನೈರುತ್ಯ ರೈಲ್ವೇ ಮೈಸೂರು ವಿಭಾಗದಿಂದ ಸರ್ಕಾರಿ ಇ-ಮಾರ್ಕೆಟ್ ಮೂಲಕ ಸರಕು ಸೇವೆ
July 23, 2020ಮೈಸೂರು, ಜು.22(ಆರ್‍ಕೆ)-Gem (Government e-market Place) ಪ್ರೊಕ್ಯೂರ್‍ಮೆಂಟ್ ಮೂಲಕ ಸರಕು ಸಾಗಣೆ ಸೇವೆ ಒದಗಿಸಲು ನೈರುತ್ಯ ರೈಲ್ವೇ ಮೈಸೂರು ವಿಭಾಗವು ಮುಂದಾ ಗಿದೆ. ಸರ್ಕಾರದ ಸಚಿವಾಲಯ ಹಾಗೂ ಇಲಾಖೆಗಳಿಗೆ ಸಂಬಂಧಿಸಿದ ಸರಕು ಮತ್ತು ಸೇವೆ ಪೂರೈಸಲು ತಂತ್ರಾಂಶ ಬಳಸಿಕೊಂಡಿರುವ ರೈಲ್ವೇ ಇಲಾಖೆಯು ಇ-ಮಾರ್ಕೆಟ್ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಅದರಲ್ಲಿ ಟ್ರಾನ್ಸ್‍ಪೋ ರ್ಟೇಷನ್, ಹೌಸ್ ಕೀಪಿಂಗ್ ಮತ್ತು ಸೆಕ್ಯೂರಿಟಿ ಏಜೆನ್ಸಿಯಂತಹ ಚಟುವಟಿಕೆಗಳನ್ನು ಕಾಗದ ರಹಿತ ಹಾಗೂ ನಗದು ರಹಿತ ಪ್ರಕ್ರಿಯೆಗೊಳಪಡಿಸಲಾಗಿದೆ. ಮಾರಾಟಗಾರರು ತಾಂತ್ರಿಕ ಸ್ಟೆಸಿಫಿಕೇಷನ್‍ನೊಂದಿಗೆ ತಮ್ಮ ಉತ್ಪನ್ನಗಳನ್ನು ಪೋಸ್ಟ್ ಮಾಡಿ…
ಮೈಸೂರು ಎನ್.ಆರ್ ಕ್ಷೇತ್ರದಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಮೂರು ಕೋವಿಡ್ ಕೇರ್ ಸೆಂಟರ್
July 23, 2020ಮೈಸೂರು, ಜು. 22(ಆರ್‍ಕೆ)- ಕೊರೊನಾ ವೈರಸ್ ಸೋಂಕು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರಿನ ಎನ್.ಆರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕೋವಿಡ್ ಕೇರ್ ಸೆಂಟರ್‍ಗಳನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ನಗರ ಪಾಲಿಕೆ ಸದ ಸ್ಯರು, ಧಾರ್ಮಿಕ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉದಯಗಿರಿಯ ಫಾರೂಖಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ರಾಜೀವ್‍ನಗ ರದ ಆಂಡುಲನ್ಸ್ ಪಬ್ಲಿಕ್ ಶಾಲೆ ಹಾಗೂ ಅಜೀಜ್ ಸೇಠ್…
ಜೆಕೆ ಟೈರ್ಸ್ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ಸೋಂಕು
July 23, 2020ಮೈಸೂರು, ಜು. 22(ಆರ್‍ಕೆ)- ನಂಜನಗೂಡಿನ ಜುಬಿಲಂಟ್ ಕಾರ್ಖಾ ನೆಯ ಕಾರ್ಮಿಕರಲ್ಲಿ ಆರಂಭದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕು ತಗುಲಿ ಗುಣಮುಖರಾಗುತ್ತಿದ್ದಂತೆಯೇ ಇದೀಗ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಜೆ.ಕೆಟೈರ್ಸ್ ನೌಕರರಿಗೆ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ. ಪ್ರತೀ ದಿನ ಸುಮಾರು 50 ರಿಂದ 100 ಮಂದಿ ಕಾರ್ಮಿಕರಿಗೆ ಸೋಂಕು ದೃಢಪಡುತ್ತಿರುವ ಹಿನ್ನೆಲೆ ಯಲ್ಲಿ ಜೆಕೆ ಟೈರ್ಸ್‍ನ ವಿಟಿಪಿ-1 ಹಾಗೂ ಓಟಿಆರ್-111 ಸ್ಥಾವರಗಳಲ್ಲಿ ಜುಲೈ 19ರಿಂದ 23ರವರೆಗೆ ಉತ್ಪಾದನೆ ಸ್ಥಗಿತಗೊಳಿ ಸಲಾಗಿದೆ ಎಂದು ಪ್ರಧಾನ ವ್ಯವಸ್ಥಾಪಕ ವಿಕ್ರಮ್ ಹೆಬ್ಬಾರ ಸೂಚನಾ ಫಲಕದಲ್ಲಿ…










