ಮೈಸೂರು, ಜು.21(ಎಂಟಿವೈ)- ಸಹಾಯಕ ಪ್ರಾಧ್ಯಾ ಪಕರ ನೇಮಕ ಅಧಿಸೂಚನೆ ರದ್ದುಗೊಳಿಸಬೇಕು, ಅತಿಥಿ ಉಪನ್ಯಾಸಕರಿಗೆ ಹರಿಯಾಣ, ಪಶ್ಚಿಮ ಬಂಗಾಳ ಮಾದರಿ ಯಲ್ಲಿ ಸೇವಾ ಭದ್ರತೆ ಒದಗಿಸಬೇಕು ಹಾಗೂ ಲಾಕ್‍ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದೇ ಪರಿಗಣಿಸಿ ಪೂರ್ಣ ವೇತನ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿತು. ವಿವಿಧ ಕಾಲೇಜುಗಳ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು. ಅತಿಥಿ ಉಪನ್ಯಾಸಕರು ಆಟಕ್ಕುಂಟು ಲೆಕ್ಕಕ್ಕಿಲ್ಲ…
ಬಂಡೀಪುರ ಎನ್.ಬೇಗೂರು ವಲಯದಲ್ಲಿ ಹುಲಿ ಕಳೇಬರ ಪತ್ತೆ
July 22, 2020ಮೈಸೂರು, ಜು.21(ಎಂಟಿವೈ)- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎನ್.ಬೇಗೂರು ವಲಯದಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, 3 ದಿನಗಳ ಹಿಂದೆಯೇ ಸಾವನ್ನಪ್ಪಿದೆ ಎಂದು ಅಂದಾಜು ಮಾಡಲಾಗಿದೆ. ಮರಣೋ ತ್ತರ ಪರೀಕ್ಷೆ ಬಳಿಕ ನಿಯಮ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ಎನ್.ಬೇಗೂರು ವಲಯದ ವದಲಿ ಬೀಟ್‍ಗೆ ಒಳಪಡುವ ಕಡತಾಳ ಕಟ್ಟೆ ಏರಿ ಸಮೀಪದ ಪೊದೆಯಲ್ಲಿ ಹುಲಿ ಕಳೇ ಬರ ಕಂಡು ಬಂದಿದೆ. 7-8 ವರ್ಷದ ಗಂಡು ಹುಲಿ ಅನಾರೋಗ್ಯದಿಂದ ಸಾವ ನ್ನಪ್ಪಿರಬಹುದು ಎಂದು ಅಂದಾಜು ಮಾಡ ಲಾಗಿದೆ. ಹುಲಿಯ ಸಾವಿಗೆ ನಿಖರ…
ಪದವಿ ತರಗತಿ ಪ್ರವೇಶಕ್ಕೆ ಆನ್‍ಲೈನ್ ವ್ಯವಸ್ಥೆ ಅಳವಡಿಸಿ
July 22, 2020ಉನ್ನತ ಶಿಕ್ಷಣ ಸಚಿವರಿಗೆ ಮರಿತಿಬ್ಬೇಗೌಡರ ಆಗ್ರಹ ಮೈಸೂರು, ಜು.21(ಎಸ್‍ಬಿಡಿ)- ಪದವಿ ತರಗತಿಗಳಿಗೆ ಪ್ರವೇಶಾವಕಾಶ ಕಲ್ಪಿಸಿ ರುವುದು ಸ್ವಾಗತಾರ್ಹವಾಗಿದ್ದು, ಆನ್‍ಲೈನ್ ಮೂಲಕವೂ ಅರ್ಜಿ ಹಾಕಲು ಅನುವು ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ. ಕೊರೊನಾ ಪರಿಣಾಮ ಶೈಕ್ಷಣಿಕ ಕ್ಷೇತ್ರದಲ್ಲಿ ಗೊಂದಲ ಉಂಟಾ ಗಿದೆ. ಆದಾಗ್ಯೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪದವಿ ತರ ಗತಿಗಳಿಗೆ ಪ್ರವೇಶಾತಿ ಪಡೆಯಲು ಅವಕಾಶ ನೀಡಿರುವ ಕಾಲೇಜು ಶಿಕ್ಷಣ ಇಲಾಖೆಯ ಕ್ರಮ ಸ್ವಾಗತಾರ್ಹ. ಆದರೆ ಸದ್ಯದ ಪರಿಸ್ಥಿತಿ ಯಲ್ಲಿ ತಾವು ಇಚ್ಛಿಸಿದ ಕಾಲೇಜಿಗೆ ಅರ್ಜಿ…
ಕಂಟೇನ್ಮೆಂಟ್ ವಲಯದವರಿಗೆ ಆಹಾರ ಕಿಟ್ ವಿತರಿಸಿದ ಕಾರ್ಪೊರೇಟರ್
July 22, 2020ಮೈಸೂರು, ಜು.21(ಎಸ್‍ಪಿಎನ್)- ಮೈಸೂರಿನ ಶಾರದಾದೇವಿನಗರದ 1ನೇ ಮುಖ್ಯರಸ್ತೆ, 2ನೇ ಕ್ರಾಸ್‍ನ ಕಂಟೇನ್ಮೆಂಟ್ ವಲಯದಲ್ಲಿರುವ 20ಕ್ಕೂ ಹೆಚ್ಚು ಕುಟುಂಬ ಗಳಿಗೆ ನಗರ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್, ದಿನಸಿ ಕಿಟ್‍ಗಳನ್ನು ವಿತರಿಸಿದರು. ತಲಾ 10 ಕೆಜಿ ಅಕ್ಕಿ, ಬೇಳೆ, ಎಣ್ಣೆ, ಗೋಧಿ, ರಾಗಿ, ಅಕ್ಕಿ ಹಿಟ್ಟು, ಎಣ್ಣೆ ಸೇರಿದಂತೆ ಇತರೆ ಪದಾರ್ಥಗಳಿದ್ದ 20 ಕಿಟ್‍ಗಳನ್ನು ವಿತರಿಸಿದ ನಿರ್ಮಲಾ ಹರೀಶ್, ನಗರ ದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ವಲಯಗಳೂ ಜಾಸ್ತಿಯಾಗುತ್ತಿವೆ. ಇದರಿಂದ…
ಉತ್ತಮ ಚಿಕಿತ್ಸೆ, ವೈದ್ಯರ ಭರವಸೆ, ಸಕಾರಾತ್ಮಕ ಚಿಂತನೆಯಿಂದ `ಗುಣಮುಖ’
July 22, 2020ಮೈಸೂರು, ಜು.21(ವೈಡಿಎಸ್)- ಕೋವಿಡ್-19 ಸೋಂಕು ದೃಢಪಟ್ಟಾಗ ಸ್ವಲ್ಪ ಹೆದರಿಕೆಯಾಯಿತು. ಆಸ್ಪತ್ರೆಗೆ ಹೋದಾಗ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದನ್ನು ಕಂಡು ಧೈರ್ಯ ಬಂತು. ಹಾಗಾಗಿ ಯಾರೊಬ್ಬರು ಹೆದರಬೇಕಿಲ್ಲ. ಸಕಾರಾತ್ಮಕ ಯೋಚನೆ ಇದ್ದರೆ ಕೋವಿಡ್ ಗೆಲ್ಲಬಹುದು… ಇದು, ಶ್ರೀರಾಂಪುರ ನಿವಾಸಿ, ಬೆಮೆಲ್ ಉದ್ಯೋಗಿ 56 ವರ್ಷದ ಗುರುರಾಜ್ ಅವರ ಆತ್ಮವಿಶ್ವಾಸದ ನುಡಿಗಳು. ಕಳೆದ ಜೂನ್ 27ರಂದು ಕೋವಿಡ್ ಆಸ್ಪತ್ರೆ ಸೇರಿದ ಗುರು ರಾಜ್, ಅಲ್ಲಿನ ಉತ್ತಮ ವಾತಾವರಣ, ಗುಣಮಟ್ಟದ ಚಿಕಿತ್ಸೆ, ವೈದ್ಯರ ಧೈರ್ಯದ ನುಡಿಗಳಿಂದ ತಾವು ಗುಣಮುಖರಾಗಿ ಬಂದ ಬಗೆಯನ್ನು,…
ಕೆ.ಆರ್.ಕ್ಷೇತ್ರದಲ್ಲಿ ಕೊರೊನಾ ಸೋಂಕು ಕಡಿವಾಣಕ್ಕೆ ಟಾಸ್ಕ್‍ಫೋರ್ಸ್ ಮಹತ್ವದ ಕಾರ್ಯತಂತ್ರ ಅನುಸರಣೆ
July 21, 2020ಮೈಸೂರು, ಜು.20(ಎಸ್‍ಬಿಡಿ)- ಮೈಸೂರಿನ ಕೃಷ್ಣರಾಜ ಕ್ಷೇತ್ರದ ಟಾಸ್ಕ್ ಫೋರ್ಸ್ ಕಮಿಟಿ ಸಭೆ ನಡೆಸಿ, ಕೊರೊನಾ ನಿಯಂತ್ರಣ ಸಂಬಂಧ ಕೆಲವು ನಿರ್ಣಯ ಕೈಗೊಳ್ಳಲಾಯಿತು. ಶಾಸಕ ಎಸ್.ಎ.ರಾಮದಾಸ್ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವ ದಲ್ಲಿ ಸೋಮವಾರ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರಪಾಲಿಕೆ ಆಯುಕ್ತ ರಾದ ಗುರುದತ್ ಹೆಗ್ಡೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು, ಕೃಷ್ಣರಾಜ ಕ್ಷೇತ್ರದ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ…
ಕೋವಿಡ್ ಆಸ್ಪತ್ರೆಗೆ ಅಗತ್ಯ ಉಪಕರಣ, ಸಿಬ್ಬಂದಿ ನಿಯೋಜನೆಗೆ ಮಾಜಿ ಶಾಸಕ ವಾಸು ಒತ್ತಾಯ
July 21, 2020ಮೈಸೂರು,ಜು.20(ಎಂಟಿವೈ)- ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದರೊಂದಿಗೆ ಕೋವಿಡ್ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ ನೇಮಕ ಹಾಗೂ ಅಗತ್ಯ ಉಪಕರಣ ಪೂರೈಸುವಂತೆ ಮಾಜಿ ಶಾಸಕ ವಾಸು ಒತ್ತಾಯಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನವಾಗಿ ನಿರ್ಮಿಸಿರುವ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಅಲ್ಲಿ ಟೆಸ್ಟ್ ಲ್ಯಾಬ್, ಸಿಟಿ ಸ್ಕಾೃನ್, ಎಕ್ಸ್‍ರೇ ಯಂತ್ರ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಕನಿಷ್ಠ ಸ್ವಚ್ಛತೆಯನ್ನೂ ಕಾಯ್ದುಕೊಳ್ಳಲಾಗಿಲ್ಲ ಎಂದು ಕಿಡಿಕಾರಿದರು. ಕೋವಿಡ್ ಆಸ್ಪತ್ರೆಯಲ್ಲಿ…
ಆರೋಗ್ಯ ಸುರಕ್ಷಾ ಕ್ರಮಕ್ಕೆ ಪ್ರಾಂಶುಪಾಲರ ಸಭೆ ನಡೆಸಿ
July 21, 2020ಮೈಸೂರು, ಜು.20(ಪಿಎಂ)- ಮೈಸೂರು ವಿವಿಯ ಪದವಿ, ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಪ್ರಾರಂಭಿಸುವ ಸಂಬಂಧ ಪರೀಕ್ಷಾ ಕೇಂದ್ರಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಆರೋಗ್ಯ ಸುರಕ್ಷಾ ಕ್ರಮ ಕೈಗೊಳ್ಳಲು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಪ್ರಾಂಶು ಪಾಲರ ಸಭೆ ನಡೆಸುವಂತೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅವರಿಗೆ ಪತ್ರ ಮುಖೇನ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ. ಪರೀಕ್ಷೆಗೆ ಸಂಬಂಧಿಸಿದಂತೆ ವಿವಿ ವ್ಯಾಪ್ತಿಯ ಎಲ್ಲಾ ಕಾಲೇ ಜಿನ ಪ್ರಾಂಶುಪಾಲರ ಸಭೆ…
ಪತ್ರಕರ್ತರೆದುರು ಕಣ್ಣೀರಿಟ್ಟ ಶಿರಮಳ್ಳಿ ಗ್ರಾಮದ ಮಹದೇವಪ್ಪ ಕುಟುಂಬ
July 21, 2020ಮೈಸೂರು, ಜು.20(ಆರ್‍ಕೆಬಿ)- ವೈಯಕ್ತಿಕ ದ್ವೇಷದಿಂದಾಗಿ ಗ್ರಾಮದಲ್ಲಿ ನನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಶಿರಮಳ್ಳಿ ಗ್ರಾಮದ ಎಂ. ಮಹದೇವಪ್ಪ ಮತ್ತು ಕುಟುಂಬದ ಸದಸ್ಯರು ಸೋಮವಾರ ಮೈಸೂರಿನಲ್ಲಿ ಪತ್ರಕರ್ತರ ಎದುರು ಕಣ್ಣೀರು ಹಾಕಿ ನ್ಯಾಯಕ್ಕಾಗಿ ಮನವಿ ಮಾಡಿಕೊಂಡರು. ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಹಿಷ್ಕಾರ ಘಟನೆಯ ಬಗ್ಗೆ ವಿವರಿಸಿದ ಮಹದೇವಪ್ಪರ ಪುತ್ರ ನವೀನ್, ಗ್ರಾಮದಲ್ಲಿ ನಡೆಯುತ್ತಿರುವ ಸೀಮೆಂಟ್ ರಸ್ತೆಗೆ ಸಂಬಂಧಿಸಿದಂತೆ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಪಕ್ಕದಲ್ಲಿ ಮಾಡಬೇಕಾದ ಚರಂಡಿಯನ್ನು…
ಜೆಡಿಎಸ್‍ನಲ್ಲಿ ರಾಜಪ್ರಭುತ್ವವಿದೆ ಎಂಬ ವಿಶ್ವನಾಥ್ ಹೇಳಿಕೆಗೆ ಖಂಡನೆ
July 21, 2020ಮೈಸೂರು, ಜು.20(ಪಿಎಂ)- ಜೆಡಿಎಸ್ ಪಕ್ಷ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುರಿತು ಮಾಜಿ ಸಚಿವ, ಬಿಜೆಪಿ ಮುಖಂಡ ಎ.ಹೆಚ್.ವಿಶ್ವನಾಥ್ ತೀರಾ ಹಗುರವಾಗಿ ಮಾತನಾಡಿದ್ದಾರೆ ಎಂದು ಖಂಡಿಸಿರುವ ಜೆಡಿಎಸ್ ಮುಖಂಡರು, ಜೆಡಿಎಸ್ ತಮಗೆ ರಾಜಕೀಯ ಪುನರ್‍ಜನ್ಮ ನೀಡಿದೆ ಎಂಬುದನ್ನು ಮರೆಯಬೇಡಿ ಎಂದು ತಿರುಗೇಟು ನೀಡಿದ್ದಾರೆ. ಮೈಸೂರಿನ ಸೀತಾವಿಲಾಸ ರಸ್ತೆಯಲ್ಲಿ ರುವ ಶಾಸಕ ಸಾ.ರಾ.ಮಹೇಶ್ ಕಚೇರಿ ಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ವಿಶ್ವನಾಥ್ ಮಾಧ್ಯಮಗಳಲ್ಲಿ ಜೆಡಿಎಸ್ ಹಾಗೂ ನಮ್ಮ…









