ಮೈಸೂರು

ಜನಪರ ಆಡಳಿತದಿಂದ ಇಂದಿಗೂ ಜನಮಾನಸದಲ್ಲಿ ನೆಲೆಸಿರುವ ಶ್ರೀ ಜಯಚಾಮರಾಜೇಂದ್ರ ಒಡೆಯರ್
ಮೈಸೂರು

ಜನಪರ ಆಡಳಿತದಿಂದ ಇಂದಿಗೂ ಜನಮಾನಸದಲ್ಲಿ ನೆಲೆಸಿರುವ ಶ್ರೀ ಜಯಚಾಮರಾಜೇಂದ್ರ ಒಡೆಯರ್

July 19, 2020

ಮೈಸೂರು, ಜು.18(ಎಂಟಿವೈ)- ರಾಜ ಪ್ರಭುತ್ವದೊಂದಿಗೆ ಪ್ರಜಾಪ್ರಭುತ್ವದ ಸುಂದರ ಅರುಣೋದಯ ಮೂಡಿಸಿದ ಕೀರ್ತಿ ಮೈಸೂರು ಸಂಸ್ಥಾನದ ರಾಜರುಗಳಿಗೆ ಸಲ್ಲ ಬೇಕು. ಅವರ ಆಡಳಿತಾವಧಿಯಲ್ಲಿ ಜಾರಿ ಗೊಳಿಸಿದ ಉತ್ತಮ ಯೋಜನೆಗಳು ಮತ್ತು ಜನಪರ ಆಡಳಿತದಿಂದಾಗಿ ಇಂದಿಗೂ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅದ ರಿಂದಲೇ ಜನರು ಒಡೆಯರ್ ಕುಟುಂಬ ವನ್ನು ಈಗಲೂ ಪೂಜ್ಯ ಭಾವದಿಂದ ಸ್ಮರಿಸುತ್ತಾರೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಬಣ್ಣಿಸಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ಶನಿವಾರ ಹಮ್ಮಿ ಕೊಂಡಿದ್ದ ಜಯಚಾಮ ರಾಜೇಂದ್ರ ಒಡೆ ಯರ್ ಜನ್ಮಶತಮಾನೋತ್ಸವದ…

ಟ್ರೈನಿ ನರ್ಸ್‍ಗಳ ಪ್ರತಿಭಟನೆಗೆ 10 ದಿನ: ಸರ್ಕಾರದ ದಿವ್ಯ ಮೌನ!
ಮೈಸೂರು

ಟ್ರೈನಿ ನರ್ಸ್‍ಗಳ ಪ್ರತಿಭಟನೆಗೆ 10 ದಿನ: ಸರ್ಕಾರದ ದಿವ್ಯ ಮೌನ!

July 19, 2020

ಮೈಸೂರು, ಜು.18(ಎಂಟಿವೈ)- ವೇತನ ಹೆಚ್ಚಳ, ಸೇವಾ ಭದ್ರತೆ ಹಾಗೂ ಮೂಲಸೌಕರ್ಯಕ್ಕೆ ಆಗ್ರಹಿಸಿ ಮೈಸೂ ರಿನ ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಗಳಲ್ಲಿ ಶಿಷ್ಯವೇತನದ ಆಧಾರ ಸೇವೆ ಸಲ್ಲಿಸುತ್ತಿರುವ ಟ್ರೈನಿ ಸ್ಟಾಫ್‍ನರ್ಸ್‍ಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಪ್ರತಿಭಟನೆ ಶನಿವಾರ 10ನೇ ದಿನಕ್ಕೆ ಕಾಲಿಟ್ಟಿತು. ಎರಡೂ ಆಸ್ಪತ್ರೆಗಳ 150 ಟ್ರೈನಿ ನರ್ಸ್ ಗಳು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಕೆ.ಆರ್.ಆಸ್ಪತ್ರೆ ಮುಂದೆ ಸಾಂಕೇತಿಕ ಪ್ರತಿ ಭಟನೆ ನಡೆಸಿದರು. ಬಳಿಕ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು. ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆ ಗಳಲ್ಲಿ…

ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ: ಮಾಯಾವತಿ ಆಗ್ರಹ
ಮೈಸೂರು

ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ: ಮಾಯಾವತಿ ಆಗ್ರಹ

July 19, 2020

ಲಖನೌ: ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ರಾಜ ಕೀಯ ಬಿಕ್ಕಟ್ಟು ಎದುರಿಸುತ್ತಿರುವ ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ತಿಕ್ಕಾಟದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದ್ದು ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕೆಂದು ಮಾಯಾವತಿ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಅಧಿಕಾರ ವನ್ನು ಕುಟುಕಿದ ಮಾಯಾವತಿ  ಇದು ಪಕ್ಷಾಂತರ ವಿರೋಧಿ ಕಾನೂನನ್ನು ಉಲ್ಲಂಘಿಸಿದೆ. ಅಲ್ಲದೆ ಒಕ್ಕೂಟ ವ್ಯವಸ್ಥೆಗೆ ದ್ರೋಹವೆಸಗಲಾಗಿದೆ ಎಂದು ಆರೋಪಿಸಿದರು. ಮೊದಲಿಗೆ…

ಆಗಸ್ಟ್‍ನಿಂದ ಪಡಿತರದಾರರಿಗೆ ಕಡಲೆಕಾಳು ಲಭ್ಯ
ಮೈಸೂರು

ಆಗಸ್ಟ್‍ನಿಂದ ಪಡಿತರದಾರರಿಗೆ ಕಡಲೆಕಾಳು ಲಭ್ಯ

July 19, 2020

ಮೈಸೂರು, ಜು.18(ಎಂಕೆ)- ಅನ್ನಭಾಗ್ಯ ಯೋಜನೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆಎವೈ) ಅಡಿಯಲ್ಲಿ ಯಾವುದೇ ಗೊಂದಲವಿಲ್ಲದಂತೆ ಪ್ರತಿ ಪಡಿತರ ದಾರರಿಗೂ ಪಡಿತರ ವಿತರಣೆಯಾಗುತ್ತಿದ್ದು, ಆಗಸ್ಟ್‍ನಿಂದ ಕಡಲೆಕಾಳು ವಿತರಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು. ಕಳೆದ ಮೇ, ಜೂನ್‍ನಲ್ಲಿ ಉಂಟಾಗಿದ್ದ ಗೊಂದಲಗಳು ಈಗ ನಿವಾರಣೆಯಾಗಿದ್ದು, ನಿರ್ಬಂಧಿತ ಪ್ರದೇಶಗಳಲ್ಲಿರುವ ಕೊರೊನಾ ಸೋಂಕಿತರ ಮನೆಗಳಿಗೂ ಮುನ್ನೆಚ್ಚರಿಕಾ ಕ್ರಮ ಗಳೊಂದಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ‘ಮೈಸೂರು ಮಿತ್ರ’ನಿಗೆ ಶನಿವಾರ…

ಮೋದಿ ಸರ್ಕಾರದ ಮೇಲೆ ವಿಶ್ವ ವಿಶ್ವಾಸ; ಭಾರತದಲ್ಲಿ ವಿದೇಶಿ ಕಂಪನಿಗಳಿಂದ ಮೂರು ತಿಂಗಳಲ್ಲಿ 2,000 ಕೋಟಿ ಡಾಲರ್ ಹೂಡಿಕೆ
ಮೈಸೂರು

ಮೋದಿ ಸರ್ಕಾರದ ಮೇಲೆ ವಿಶ್ವ ವಿಶ್ವಾಸ; ಭಾರತದಲ್ಲಿ ವಿದೇಶಿ ಕಂಪನಿಗಳಿಂದ ಮೂರು ತಿಂಗಳಲ್ಲಿ 2,000 ಕೋಟಿ ಡಾಲರ್ ಹೂಡಿಕೆ

July 19, 2020

ಸಾಂಕ್ರಾಮಿಕ ಕೊರೊನಾ ಭೀತಿ ಮಧ್ಯೆಯೂ ಬಹಳಷ್ಟು ದೇಶಗಳಿಗೆ ಭಾರತವೇ ಹೂಡಿಕೆಗೆ ವಿಶ್ವಾಸಾರ್ಹ ಬೆಂಗಳೂರು, ಜು.18- ಕೊರೊನಾದಂತಹ ಮಾರಣಾಂತಿಕ ಸಾಂಕ್ರಾಮಿಕ ಸೋಂಕಿನ ವ್ಯಾಪಕ ಹರಡುವಿಕೆ, ಲಕ್ಷಾಂತರ ಮಂದಿಯ ದಾರುಣ ಸಾವು ಹಾಗೂ ಸಿರಿವಂತ ದೇಶಗಳಲ್ಲಿ ಆರ್ಥಿಕ ಕುಸಿತವಾಗಿರುವ ಸಂದರ್ಭದಲ್ಲೂ ಬಹಳಷ್ಟು ದೇಶಗಳ ದೊಡ್ಡ ದೊಡ್ಡ ಕಂಪನಿಗಳಿಗೆ ಭಾರತವೇ ಅತ್ಯಂತ ಸುರಕ್ಷಿತ ಹಾಗೂ ಅಚ್ಚುಮೆಚ್ಚಿನ ತಾಣ ಎನಿಸಿದೆ. ಹಾಗಾಗಿಯೇ ಕಳೆದ ಮೂರು ತಿಂಗಳಲ್ಲಿ ವಿಶ್ವದ ದಿಗ್ಗಜ ಕಂಪೆನಿಗಳು ಭಾರತದಲ್ಲಿ ಒಟ್ಟು 20 ಶತಕೋಟಿ ಡಾಲರ್ (1.50 ಲಕ್ಷ ಕೋಟಿ ರೂ.)…

ಕೊರೊನಾ: ಆರೋಗ್ಯ ಇಲಾಖೆ ಸುತ್ತೋಲೆ
ಮೈಸೂರು

ಕೊರೊನಾ: ಆರೋಗ್ಯ ಇಲಾಖೆ ಸುತ್ತೋಲೆ

July 19, 2020

ಮೈಸೂರು, ಜು.18(ಎಸ್‍ಪಿಎನ್)- ಕೊರೊನಾ ಸೋಂಕಿಲ್ಲದ ವ್ಯಕ್ತಿಗಳ ಪ್ರಯೋಗಾಲಯ ಫಲಿತಾಂಶವನ್ನು ಎಸ್‍ಎಂಎಸ್ ಮೂಲಕ ಕಳುಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಶನಿವಾರ ಸುತ್ತೋಲೆ ಹೊರಡಿಸಿದೆ. ಪರೀಕ್ಷೆಗೊಳಪಟ್ಟ ವ್ಯಕ್ತಿಗೆ ಸೋಂಕಿಲ್ಲ ಎಂದು ತಿಳಿದ ಕೂಡಲೇ ಎಲ್ಲಾ ಕೋವಿಡ್-19 ಪ್ರಯೋಗಾಲಯಗಳ ನೋಡೆಲ್ ಅಧಿಕಾರಿಗಳು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಎಸ್‍ಎಂಎಸ್ ಮೂಲಕ ಸಂದೇಶ ರವಾನಿಸುವಂತೆ ತಿಳಿಸಿದ್ದಾರೆ. ಕನ್ನಡದಲ್ಲಿ ಎಸ್.ಆರ್.ಎಫ್. ಐಡಿ: ಎಕ್ಸ್‍ವೈಝಡ್, ಫಲಿತಾಂಶ: ಕೋವಿಡ್-19 ಸೋಂಕು ಇಲ್ಲ ಎಂದು ನಮೂದಿಸಬೇಕು. ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಇದ್ದಲ್ಲಿ…

ನಾಳೆ ಶಾಸಕ ನಾಗೇಂದ್ರ ಫೋನ್‍ಇನ್
ಮೈಸೂರು

ನಾಳೆ ಶಾಸಕ ನಾಗೇಂದ್ರ ಫೋನ್‍ಇನ್

July 19, 2020

ಮೈಸೂರು, ಜು.18- ಕೊರೊನಾ ಹಿನ್ನೆಲೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಜನರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು ಶಾಸಕ ಎಲ್.ನಾಗೇಂದ್ರ ಅವರು ಜುಲೈ 20ರ ಬೆಳಗ್ಗೆ 10ರಿಂದ 11ರವರೆಗೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ದೂರವಾಣಿ ಸಂಖ್ಯೆ 0821-2416199ಕ್ಕೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

ಕ್ವಾರಂಟೈನ್ ಕೇಂದ್ರದಲ್ಲಿ ಕಾಮುಕರ ಕ್ರೌರ್ಯ: ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರ
ಮೈಸೂರು

ಕ್ವಾರಂಟೈನ್ ಕೇಂದ್ರದಲ್ಲಿ ಕಾಮುಕರ ಕ್ರೌರ್ಯ: ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರ

July 19, 2020

ಮುಂಬೈ: ಕ್ವಾರಂಟೈನ್ ಕೇಂದ್ರದಲ್ಲೂ ಕಾಮುಕರು ಕ್ರೌರ್ಯ ಮುಂದುವರೆಸಿದ್ದು, ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ನವೀ ಮುಂಬೈನ ಪನ್ವೆಲ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘೋರ ಘಟನೆ ನಡೆದಿದ್ದು, ಕ್ವಾರಂಟೈನ್ ಕೇಂದ್ರದಲ್ಲಿದ್ದ ಕೊರೋನಾ ಸೋಂಕಿತೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ಈ ಬಗ್ಗೆ ಸಂತ್ರಸ್ಥೆ ಪೆÇಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪನ್ವೆಲ್ ಪೆÇಲೀಸ್ ಠಾಣಾ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ಬಗ್ಗೆ ಪೆÇಲೀಸ್ ಅಧಿಕಾರಿ ಅಶೋಕ್ ರಜಪೂತ್, 40 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿದ್ದ…

ಜಯಚಾಮರಾಜೇಂದ್ರ ಒಡೆಯರ್ ಸ್ಮರಣೆ; ಪ್ರತಿಮೆ ಶಿಲ್ಪಿಗೆ ಸನ್ಮಾನ
ಮೈಸೂರು

ಜಯಚಾಮರಾಜೇಂದ್ರ ಒಡೆಯರ್ ಸ್ಮರಣೆ; ಪ್ರತಿಮೆ ಶಿಲ್ಪಿಗೆ ಸನ್ಮಾನ

July 19, 2020

ಮೈಸೂರು, ಜು.18(ಎಂಟಿವೈ)- ಮೈಸೂರು ಸಂಸ್ಥಾನದ 25ನೇ ಅರಸ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಮೈಸೂರಿನ ಚಾಮ ರಾಜೇಂದ್ರ ವೃತ್ತದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆಗೆ ಶನಿವಾರ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು. ಇದೇ ವೇಳೆ, ಪ್ರತಿಮೆ ರೂಪಿಸಿದ ಶಿಲ್ಪಿ ಅರುಣ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿಲ್ಪಿ ಅರುಣ್ ಮಾತನಾಡಿ, ನಮ್ಮ ತಾತ ಶಿಲ್ಪಿ ಬಸವಣ್ಣನವರು ಶಿಲ್ಪಕಲೆ ಮತ್ತು ಶಿಲ್ಪವಿನ್ಯಾಸ ವೃತ್ತಿಯನ್ನು ಕುಲಕಸುಬಾಗಿಸಿಕೊಂಡಿದ್ದರು. 1953ರಲ್ಲಿ ಶಿಲ್ಪಕಲೆಯ ಕೆಲಸಗಳೇ ಇಲ್ಲದೇ ಜೀವನ ನಿರ್ವಹಣೆ…

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ
ಮೈಸೂರು

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ

July 19, 2020

ಮೈಸೂರು, ಜು.18(ಪಿಎಂ)- ಭೂ ಸುಧಾರಣಾ ತಿದ್ದು ಪಡಿ ಕಾಯ್ದೆಯ ಸುಗ್ರೀ ವಾಜ್ಞೆಗೆ ರಾಜ್ಯ ಪಾಲರ ಅಂಗೀಕಾರ ದೊರಕಿರಬಹುದು. ಆದರೆ ಈ ಕಾಯ್ದೆ ಹಿಂಪಡೆಯುವವರೆಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರಂತರ ಹೋರಾಟ ನಡೆಸ ಲಿವೆ ಎಂದು ಸಂಘದ ಅಧ್ಯಕ್ಷ ಬಡಗಲ ಪುರ ನಾಗೇಂದ್ರ ಮೈಸೂರಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕಾಯ್ದೆಗೆ ತಿದ್ದು ಪಡಿ ತರುವ ಮೂಲಕ ರೈತರ ಕೊರಳಿಗೆ ನೇಣು ಕುಣಿಕೆ ಹಾಕಿದೆ. ಆ ಕುಣಿಕೆಯು…

1 484 485 486 487 488 1,611
Translate »