ಮೈಸೂರು, ಜು. 18- ಓದುಗರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಬದುಕು ಕುರಿತಾದ “ತಾಷ್ಕೆಂಟ್ ಡೈರಿ” ಕೃತಿ ಶುಕ್ರವಾರ ಲೋಕಾರ್ಪಣೆಗೊಂಡಿತು. ನಾಡಿನ ಹಿರಿಯ ಕಾದಂಬರಿ ಕಾರರೂ, ಸರಸ್ವತಿ ಸಮ್ಮಾನ್ ಪುರ ಸ್ಕøತರೂ ಆದ ಡಾ. ಎಸ್.ಎಲ್. ಭೈರಪ್ಪನವರು ಲೇಖಕರಾದ ಎಸ್. ಉಮೇಶ್ ಅವರಿಂದ ಪ್ರಥಮ ಕೃತಿ ಯನ್ನು ಸ್ವೀಕರಿಸುವ ಮೂಲಕ ಕೃತಿಯನ್ನು ಲೋಕಾರ್ಪಣೆಗೊಳಿಸಿ ದರು. ಅನಂತರ ಕೃತಿ ಮತ್ತು ಶಾಸ್ತ್ರೀಜಿ ಯವರನ್ನು ಕುರಿತು ಲೇಖಕರ ಜೊತೆ ತಮ್ಮ ಹಳೆಯ ನೆನಪುಗಳನ್ನು…
ರಘುಲಾಲ್ ಸೇರಿ ಮೈಸೂರಿನ 30 ಔಷಧಿ ಅಂಗಡಿಯಲ್ಲಿ ಹೋಂ ಐಸೋಲೇಷನ್ ಕಿಟ್ ಲಭ್ಯ
July 19, 2020ಮೈಸೂರು,ಜು.18(ಆರ್‍ಕೆ)-ಮನೆಯಲ್ಲೇ ಪ್ರತ್ಯೇಕವಾಗಿರ ಬಯಸುವವರಿಗಾಗಿ ಮೈಸೂರಿನ 30 ಮೆಡಿಕಲ್ ಸ್ಟೋರ್ ಗಳಲ್ಲಿ ಹೋಂ ಐಸೋಲೇಷನ್ ಕೋವಿಡ್-19 ಕಿಟ್ ಗಳು ಲಭ್ಯವಾಗಲಿದೆ ಎಂದು ಔಷಧ ಉಪನಿಯಂತ್ರಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಿಟ್‍ನಲ್ಲಿ ಪಲ್ಸ್ ಆಕ್ಸಿಮೀಟರ್, 1 ಡಿಜಿಟಲ್ ಥರ್ಮೋ ಮೀಟರ್, 1 ಫೇಸ್ ಶೀಲ್ಡ್, 14 ಎನ್95 ಮಾಸ್ಕ್, 14 ಜೊತೆ ಹ್ಯಾಂಡ್ ಗ್ಲೌಸ್ ಹಾಗೂ 200 ಎಂಎಲ್ ಹ್ಯಾಂಡ್ ಸ್ಯಾನಿಟೈಸರ್ ಒಳಗೊಂಡಿರುತ್ತದೆ. ಯಾವ ಕಂಪನಿಯ ಉಪಕರಣಗಳು ಹಾಗೂ ಎಷ್ಟು ಪ್ರಮಾಣದಲ್ಲಿ ಒದಗಿ ಸಲಾಗುವುದೋ ಅದಕ್ಕನುಗುಣವಾಗಿ ಸ್ಪರ್ಧಾತ್ಮಕ ಬೆಲೆ ಯಲ್ಲಿ…
ಟೆಂಡರ್ ಪ್ರಕ್ರಿಯೆಯಲ್ಲಿ ಅನರ್ಹಗೊಂಡ ಕಂಪನಿಯಿಂದ ಪಿಎಸ್‍ಎಸ್‍ಕೆ ಪುನಾರಂಭಕ್ಕೆ ಅಡ್ಡಿ: ಸಂಘಟನೆಗಳ ಆರೋಪ
July 19, 2020ಮೈಸೂರು, ಜು.18(ಪಿಎಂ)- ಪಾಂಡವ ಪುರದ ಸಹಕಾರ ಕ್ಷೇತ್ರದ ಸಕ್ಕರೆ ಕಾರ್ಖಾನೆ `ಪಿಎಸ್‍ಎಸ್‍ಕೆ’ ಪುನಾರಂಭಕ್ಕೆ ಶಾಸಕ ಮುರುಗೇಶ್ ನಿರಾಣಿ ಒಡೆತನದ ಕಂಪನಿಗೆ ಗುತ್ತಿಗೆ ನೀಡಿರುವುದು ಸೂಕ್ತ ಹಾಗೂ ಕ್ರಮಬದ್ಧವಾಗಿದೆ. ಆದರೆ ಮತ್ತೊಂದು ಸಕ್ಕರೆ ಕಂಪನಿ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿ, ಕಾರ್ಖಾನೆ ಪುನಾರಂಭ ವಿಳಂಬಗೊಳ್ಳುವಂತೆ ಮಾಡುತ್ತಿದೆ ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡ ಸಾಹಿತ್ಯ ಕಲಾಕೂಟ ಸಂಘಟನೆಗಳು ಮೈಸೂರಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿವೆ. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, 3 ವರ್ಷಗಳಿಂದ…
ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್‍ಕಿಟ್ ಮಾರಾಟ ಮಾಡಿದರೆ ಕಠಿಣ ಕ್ರಮ
July 19, 2020ಮೆಡಿಕಲ್ ಸ್ಟೋರ್ಸ್ ಮಾಲೀಕರಿಗೆ ಉಪ ಔಷಧ ನಿಯಂತ್ರಕರ ಎಚ್ಚರಿಕೆ ಮೈಸೂರು, ಜು. 18(ಆರ್‍ಕೆ)- ಚಿಲ್ಲರೆ ಹಾಗೂ ಸಗಟು ಔಷಧ ಅಂಗಡಿಗಳಲ್ಲಿ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್‍ಗಳನ್ನು ಮಾರಾಟ ಮಾಡಬಾರದೆಂದು ಮೈಸೂರು ಪ್ರಾದೇಶಿಕ ಕಚೇರಿಯ ಉಪ ಔಷಧ ನಿಯಂತ್ರಕ ಶ್ರೀಧರ ಸೂಚಿಸಿದ್ದಾರೆ. ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಸ್ವಯಂ ಪರೀಕ್ಷಿಸಿಕೊಳ್ಳಲು ಮೈಸೂರಲ್ಲಿ ಡಯಾಗ್ನೋಸ್ಟಿಕ್ ಕಿಟ್(ಖಚಿಠಿiಜ ಚಿಟಿಣiboಜಥಿ ಖಿesಣ ಏiಣ)ಗಳನ್ನು ಉಪಯೋಗಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದು ಸರಿಯಾದ ಕ್ರಮವಲ್ಲ. ಈ ಕುರಿತು ಸುತ್ತೋಲೆ ಹೊರಡಿಸಿರುವ ಶ್ರೀಧರ ಅವರು,…
ಕಾವಾ ಹಳೆ ವಿದ್ಯಾರ್ಥಿಗಳಿಂದ ಸಂಚಾರ ಪೊಲೀಸರು, ವಾಹನ ಸವಾರರಿಗೆ 600 ಮಾಸ್ಕ್ ಉಚಿತ ವಿತರಣೆ
July 19, 2020ಮೈಸೂರು, ಜು.18(ಎಂಟಿವೈ)- ಕೊರೊನಾ ಸೋಂಕಿತರ ಸಂಖ್ಯೆ ನಗರ ದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂ ರಿನ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜು (ಕಾವಾ) ಹಳೆ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಮೈಸೂರು-ಬೆಂಗಳೂರು ಮುಖ್ಯರಸ್ತೆಯ ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ಮಾಸ್ಕ್ ವಿತರಿಸಲಾಯಿತು. ಕೊರೊನಾ ಹರಡುವುದನ್ನು ತಡೆ ಯಲು ಮಾಸ್ಕ್ ಕಡ್ಡಾಯಗೊಳಿಸಿದ್ದರೂ ಕೆಲವರು ಮಾಸ್ಕ್ ಧರಿಸದೇ ಓಡಾಡು ತ್ತಿದ್ದಾರೆ. ಹಾಗಾಗಿ ಸಂಚಾರ ಪೊಲೀಸರ ಜತೆಗೂಡಿ ವಾಹನ ಸವಾರರಿಗೆ ಉಚಿತ ವಾಗಿ `ಕೊರೊನಾ ವಾರಿಯರ್ಸ್‍ಗೆ ನಮ್ಮ ಬೆಂಬಲ’ ಎಂಬ ಘೋಷಣೆಯೊಂದಿಗೆ ಮಾಸ್ಕ್ ವಿತರಿಸಲಾಯಿತು ಎಂದು ಕಾವಾ…
ನಾಳೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದರ್ಶನ ರದ್ದು
July 19, 2020ಮೈಸೂರು,ಜು.18(ಆರ್‍ಕೆ)- ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ದಲ್ಲಿ ಜು.20 (ಸೋಮವಾರ) ದೇವರ ದರ್ಶನ ರದ್ದುಪಡಿಸಲಾಗಿದೆ. ಆಷಾಢ ಮಾಸದ ಕಡೇ ದಿನವಾದ ಸೋಮವಾರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇರುವು ದರಿಂದ ಮುಂಜಾಗ್ರತಾ ಕ್ರಮವಾಗಿ ಜು.20ರಂದು ಚಾಮುಂಡೇಶ್ವರಿ ದೇವ ಸ್ಥಾನದಲ್ಲಿ ದೇವರ ದರ್ಶನವನ್ನು ರದ್ದುಪಡಿಸಿ ಜಿಲ್ಲಾಧಿಕಾರಿಗಳು ಜುಲೈ 16ರಂದು ಆದೇಶ ಹೊರಡಿಸಿದ್ದಾರೆ. ಜೂನ್ 6ರ ಆದೇಶದ ಪ್ರಕಾರ ಪ್ರತಿ ಶನಿವಾರ, ಭಾನುವಾರ ಹಾಗೂ ಸಾರ್ವ ತ್ರಿಕ ರಜಾ ದಿನಗಳಂದು…
ದಸರಾ ಇನ್ನೂ ಸರ್ಕಾರ ಕೈಗೊಂಡಿಲ್ಲ ನಿರ್ಧಾರ
July 17, 2020ಬೆಂಗಳೂರು, ಜು.16 (ಕೆಎಂಶಿ)- ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೌನ ವಹಿಸಿದೆ. ಕೋವಿಡ್-19 ನಿಯಂತ್ರಣದಲ್ಲಿ ಮಗ್ನವಾಗಿರುವ ಸರ್ಕಾರ, ಪ್ರಸಕ್ತ ವರ್ಷ ದಸರಾ ಆಚರಿಸುವ ಸಂಬಂಧ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಕ್ಟೋಬರ್ 17ರಿಂದ ದಸರಾ ಮಹೋತ್ಸವ ಆರಂಭವಾಗ ಬೇಕಿದ್ದು, ಆಚರಣೆ ಮಾಡುವುದಾದರೆ, ಈಗಿ ನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ರಾಜ್ಯದಲ್ಲಿ ಈ ಹಿಂದೆ ಬರ ಹಾಗೂ ಇನ್ನಿತರೆ ಪ್ರಕೃತಿ ವಿಕೋಪ ಉಂಟಾದ ಸನ್ನಿವೇಶಗಳಲ್ಲಿ ನಾಡದೇವತೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಸರಳವಾಗಿ ದಸರಾ ಆಚರಣೆ…
ಕೋವಿಡ್-19ಗೆ ಕಡಿವಾಣ ಹಾಕಲು ಇಂದಿನಿಂದ ಜುಲೈ 24ರವರೆಗೆ ಮೈಸೂರಿನ ಎನ್‍ಆರ್, ಉದಯಗಿರಿ, ಲಷ್ಕರ್, ಮಂಡಿ ಠಾಣಾ ವ್ಯಾಪ್ತಿ ನಿರ್ಬಂಧಿತ ಪ್ರದೇಶ
July 17, 2020ಮೈಸೂರು, ಜು.16(ಎಂಕೆ)- ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದ ನರಸಿಂಹರಾಜ, ಉದಯ ಗಿರಿ, ಲಷ್ಕರ್ ಹಾಗೂ ಮಂಡಿಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳನ್ನು ನಾಳೆ (ಶುಕ್ರ ವಾರ) ಬೆಳಗ್ಗೆ 6 ಗಂಟೆಯಿಂದ ಜುಲೈ 24ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧಿತ ಪ್ರದೇಶ ವೆಂದು ಘೋಷಿಸಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಗುರುವಾರ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಿಂದ ಕೋವಿಡ್-19 ಸೋಂಕು ಪ್ರಕರಣಗಳು ಪ್ರತಿ ದಿನ 100ಕ್ಕೂ ಅಧಿಕ ಸಂಖ್ಯೆಯಲ್ಲಿ…
ಮೈಸೂರಲ್ಲಿ ಐವರು ಗರ್ಭಿಣಿಯರು ಸೇರಿ 130 ಮಂದಿಯಲ್ಲಿ ಸೋಂಕು
July 17, 2020ಮೈಸೂರು, ಜು.16- ಮೈಸೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಗುರುವಾರ ಐವರು ಗರ್ಭಿಣಿಯರು ಸೇರಿ 130 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 1320ಕ್ಕೆ ಏರಿಕೆಯಾಗಿದೆ. ಮೂವರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇಂದು 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 531 ಮಂದಿ ಗುಣಮುಖರಾದಂತಾಗಿದೆ. ಉಳಿದ 739 ಸಕ್ರಿಯ ಸೋಂಕಿತರ ಪೈಕಿ 230 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 77 ಮಂದಿ ಕೋವಿಡ್ ಡೆಡಿಕೇಟೆಡ್ ಹೆಲ್ತ್ ಕೇರ್‍ನಲ್ಲಿ, 105 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ,…
ರಾಜ್ಯದಲ್ಲಿ ಸಾವಿರ ದಾಟಿದ ಸಾವಿನ ಸಂಖ್ಯೆ
July 17, 2020ಬೆಂಗಳೂರು, ಜು.16- ರಾಜ್ಯದಲ್ಲಿ ಗುರುವಾರ ಕೊರೊನಾ ಆರ್ಭಟಿಸಿದ್ದು, ಒಂದೇ ದಿನ 4169 ಮಂದಿಗೆ ಸೋಂಕು ಪತ್ತೆಯಾಗಿದ್ದು, 104 ಮಂದಿ ಮೃತಪಟ್ಟಿ ದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 51422 ಹಾಗೂ ಮೃತರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿಂದು 2344 ಮಂದಿ ಸೋಂಕಿಗೆ ತುತ್ತಾಗಿದ್ದು, 70 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 25 288ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 507 ಆಗಿದೆ. ಇಂದು 1263 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡು ಗಡೆಯಾಗಿದ್ದು, ಈವರೆಗೆ 19729 ಮಂದಿ ಗುಣಮುಖರಾದಂತಾಗಿದೆ….










