ಮೈಸೂರು, ಜೂ.23(ಎಂಕೆ)- ದೇವ ಸ್ಥಾನದ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾ ರಕ್ಕೆ ಘರ್ಷಣೆ ನಡೆದು, ಗ್ರಾಪಂ ಅಧ್ಯಕ್ಷ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ತಾಲೂಕಿನ ಆನಂದೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಆನಂದೂರು ಗ್ರಾಪಂ ಅಧ್ಯಕ್ಷ ರಾಮೇಗೌಡ ಹಾಗೂ ಅದೇ ಗ್ರಾಮದ ಚಂದ್ರಶೇಖರ್, ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆನಂದೂರಿನಿಂದ ಗ್ರಾಮದೇವತೆ ಆಲಕ್ಕಮ್ಮ ದೇವಸ್ಥಾನ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಪರಿಶೀಲನೆಗೆ ಹೋಗಿದ್ದ ಗ್ರಾಪಂ ಅಧ್ಯಕ್ಷ ರಾಮೇಗೌಡರು, ರಸ್ತೆಯನ್ನು…
ಜೂ.24ಕ್ಕೆ 12ನೇ ತರಗತಿ ಪರೀಕ್ಷೆ ರದ್ದು ಕುರಿತು ನಿರ್ಧಾರ ಸಾಧ್ಯತೆ: ಸುಪ್ರೀಂಗೆ ಕೇಂದ್ರ, ಸಿಬಿಎಸ್‍ಇ
June 24, 2020ನವದೆಹಲಿ, ಜೂ.23-12ನೇ ತರಗತಿಯ ಬಾಕಿ ಉಳಿದ ಪರೀಕ್ಷೆಗಳನ್ನು ರದ್ದುಪಡಿ ಸುವ ಕುರಿತು ಬುಧವಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‍ಇ) ಮಂಗಳವಾರ ಸುಪ್ರೀಂಕೋರ್ಟ್‍ಗೆ ತಿಳಿಸಿವೆ. ಜುಲೈ 1ರಿಂದ 15ರ ತನಕ 12ನೇ ತರಗತಿಯ ಪರೀಕ್ಷೆ ಗಳನ್ನು ನಡೆಸಲು ಸಿಬಿಎಸ್‍ಇ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿ ಕೆಲ ಪೆÇೀಷಕರು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಆಂತರಿಕ ಮೌಲ್ಯಮಾಪನ ಮತ್ತು ಪ್ರಾಯೋಗಿಕ ಪರೀಕ್ಷೆಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಬೇ ಕೆಂದೂ…
ಕೊರೊನಾ ಮಾರ್ಗಸೂಚಿ ಉಲ್ಲಂಘನೆ; 19 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ
June 24, 2020ಮೈಸೂರು, ಜೂ.23(ಎಂಕೆ)- ಕೋವಿಡ್-19 ನಿಯಂತ್ರಣಕ್ಕೆ ಮೈಸೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಮಂಗಳವಾರ ಒಂದೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಗೂಡಿದ್ದ 19 ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಸರ್ಕಾರ ಮಾರ್ಗಸೂಚಿ ನೀಡಿದ್ದು, ಸಾರ್ವಜನಿಕರು ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಆದ್ದರಿಂದ ಮೈಸೂರು ನಗರದಲ್ಲಿ ಸಿಆರ್‍ಪಿಸಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿ ದ್ದರೂ ಕೆಲವರು ತೀವ್ರ ನಿರ್ಲಕ್ಷ್ಯವಹಿಸಿದ್ದಾರೆ. ಮಾಸ್ಕ್ ಧರಿಸದೇ,…
ಸಿಎಂ ಭೇಟಿಗೆ ನಾಲ್ವಡಿ ಏಕಪ್ರತಿಮೆ ಹೋರಾಟ ಸಮಿತಿ ನಿರ್ಣಯ
June 24, 2020ಮೈಸೂರು, ಜೂ.23(ಎಂಕೆ)- ಕೆಆರ್‍ಎಸ್ ಆವರಣ ದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕ ಪತ್ರಿಮೆ ನಿರ್ಮಾಣ ಕುರಿತು ವಾರದೊಳಗೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಕ್ಕೆ ಹಾಗೂ ಜೂ.30 ರಂದು ಕೆಆರ್‍ಎಸ್ ಡ್ಯಾಂ ಎದುರು ಧರಣಿ ನಡೆಸುವುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪತ್ರಿಮೆ ಹೋರಾಟ ಸಮಿತಿ ಸಭೆ ತೀರ್ಮಾನ ಕೈಗೊಂಡಿತು. ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪ್ರೊ.ನಂಜರಾಜ ಅರಸ್ ಮಾತನಾಡಿ, ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೊಡಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ…
ನೆಲಕ್ಕುರುಳಿದ ಟೊಳ್ಳು ಗುಲ್‍ಮೊಹರ್; ಬೈಕ್ ಸವಾರ ಸ್ವಲ್ಪದರಲ್ಲೇ ಪಾರು
June 24, 2020ಮೈಸೂರು,ಜೂ.23(ಪಿಎಂ)- ಟೊಳ್ಳು ಬಿದ್ದಿದ್ದ ಗುಲ್ ಮೊಹರ್ ಮರವೊಂದು ರಸ್ತೆಗೆ ಏಕಾಏಕಿ ಉರುಳಿ ಬಿದ್ದಿದ್ದರಿಂದ ಅದೇ ಸಮಯದಲ್ಲಿ ಆ ಮಾರ್ಗದಲ್ಲಿ ಬಂದ ಬೈಕ್ ಸವಾರರೊಬ್ಬರು ಗಾಯಗೊಂಡರು. ಆದರೆ, ಕೂದಲೆಳೆ ಅಂತರದಲ್ಲಿ ಪ್ರಾಣಾ ಪಾಯದಿಂದ ಪಾರಾದರು. ಅಗ್ರಹಾರ ವೃತ್ತದ ಸಮೀಪ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಮರದ ಬುಡದಿಂದ ಮೂರಡಿ ಮೇಲೆ ಪೊಟರೆ ಬಿದ್ದಿತ್ತು. ಈ ಭಾಗ ಸೋಮ ವಾರ ಸಂಜೆ ಮಳೆಗೆ ನೆನೆದಿದ್ದರಿಂದ ಸಡಿಲ ಗೊಂಡಿತ್ತು. ಪರಿಣಾಮ ಮರುದಿನ ಬೆಳಿಗ್ಗೆ ನೆಲಕ್ಕುರಳಿದೆ. ಮರ ಬೀಳುವಾಗ…
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಜೂ.27ಕ್ಕೆ ಕೆಂಪೇಗೌಡರ ಪ್ರತಿಮೆಗೆ ಶಂಕುಸ್ಥಾಪನೆ
June 24, 2020ಬೆಂಗಳೂರು, ಜೂ.23(ಕೆಎಂಶಿ)-ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣದ ಮುಂಭಾಗದ 23 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗ ಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ ಇದೇ 27ರಂದು ಭೂಮಿಪೂಜೆ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾ ಯಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಉನ್ನತ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ವ್ಯಾಪಕ ಪರಿಶೀಲನೆ ನಡೆಸಿದ ಅವರು, ಕಾರ್ಯಕ್ರಮವು ಗೊಂದಲ ಇಲ್ಲದೆ ಸರಳವಾಗಿ, ಅರ್ಥಪೂರ್ಣವಾಗಿ ನಡೆಯಬೇಕು. ಹೆಚ್ಚು ಜನ ಸೇರಲು ಅವಕಾಶ…
ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ ಉಚಿತ 54 ಬಸ್ ವ್ಯವಸ್ಥೆ
June 24, 2020ಮೈಸೂರು, ಜೂ.23 (ಎಂಟಿವೈ) – ಕೊರೊನಾಗೆ ಸೆಡ್ಡು ಹೊಡೆದು, ವಿದ್ಯಾರ್ಥಿಗಳಲ್ಲಿ ಧನಾತ್ಮಕ ಭಾವ ತುಂಬಿ ಪರೀಕ್ಷೆ ಎದುರಿಸಲು ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದ್ಡು, ಮೈಸೂರಿನ 48 ಕೇಂದ್ರ ಸೇರಿದಂತೆ ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟೈಸ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಕೆಎಸ್‍ಆರ್‍ಟಿಸಿಯ 54 ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರಯಾಣ ಉಚಿತ. ತಜ್ಞ ವೈದ್ಯರು, ಆರೋಗ್ಯ ಇಲಾಖೆ ಅಧಿ ಕಾರಿಗಳ ಸೂಚನೆ ಮೇರೆಗೆ ಮೈಸೂರು ನಗರದ 48 ಪರೀಕ್ಷಾ…
ಬೌದ್ಧಸ್ತೂಪ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ
June 24, 2020ಮೈಸೂರು, ಜೂ.23(ಎಂಟಿವೈ)- ಬೌದ್ಧರ ಐತಿಹಾಸಿಕ ಸ್ಥಳಗಳು, ಸ್ತೂಪಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬುದ್ಧ ಧಮ್ಮ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎರಡು ಸಾವಿರ ವರ್ಷ ಇತಿಹಾಸದ ಬೌದ್ಧರ ಐತಿಹಾಸಿಕ ಸ್ಥಳಗಳಿವೆ. ಇವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಈ ನಿಟ್ಟಿನಲ್ಲಿ ಬೌದ್ಧರ ಐತಿಹಾಸಿಕ ಸ್ಥಳಗಳ ಸಂರಕ್ಷಣೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಅಯೋಧ್ಯೆಯಲ್ಲಿ ದೊರಕಿರುವ ಬೌದ್ಧಧರ್ಮದ ಅವಶೇಷಗಳು, ಕುರುಹುಗಳನ್ನು ಸಂರಕ್ಷಿಸುವ ಜೊತೆಗೆ ಆ ಸ್ಥಳವನ್ನು ಬೌದ್ಧರ ಸ್ಥಳವಾಗಿಯೇ ಉಳಿಸಬೇಕು…
ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ದಸಂಸ ಪ್ರತಿಭಟನೆ
June 24, 2020ಮೈಸೂರು, ಜೂ.23(ಎಂಟಿವೈ)- ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ಮಾಡಿ ರೈತರನ್ನು ಬೀದಿಗೆ ತರಲಿದೆ ಎಂದು ಟೀಕಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು, ಬಿಜೆಪಿ ಸರ್ಕಾರ ಅಧಿ ಕಾರಕ್ಕೆ ಬಂದಾಗಲೆಲ್ಲಾ ಜನ ವಿರೋಧಿ, ರೈತ ವಿರೋಧಿ ನೀತಿಯನ್ನೇ ಅನುಸರಿಸುತ್ತದೆ. ಬಂಡವಾಳಶಾಹಿಗಳಿಗೆ ಅನುಕೂಲ ವಾಗುವ ಯೋಜನೆಗಳಿಗೇ ಆದ್ಯತೆ ನೀಡುತ್ತ್ತದೆ. ಇದೀಗ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುವ…
ಬಿಜೆಪಿ, ಕಾಂಗ್ರೆಸ್‍ನಿಂದ ಭೂ ಸುಧಾರಣಾ ಕಾಯ್ದೆ ದುರ್ಬಲ: ಎಐಕೆಕೆಎಸ್
June 24, 2020ಮೈಸೂರು, ಜೂ.23(ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮೂಲಕ ಭೂಮಿ ಖರೀದಿಗೆ ಇದ್ದ ಆದಾಯ ಮಿತಿಯನ್ನು ಹೆಚ್ಚಿಸಿ ಕಾಯ್ದೆಯನ್ನು ಬಲಹೀನಗೊಳಿಸಿ ದರೆ, ಇದೀಗ ಬಿಜೆಪಿ ಸರ್ಕಾರ ತಿದ್ದುಪಡಿ ಮೂಲಕ ಕಾಯ್ದೆಯನ್ನು ಪೂರ್ಣ ದುರ್ಬಲಗೊಳಿಸಲು ಹೊರ ಟಿದೆ. ಆ ಮೂಲಕ ಬಿಜೆಪಿ ಸರ್ಕಾರ, ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ನಾಶ ಮಾಡಲು ಮುಂದಾಗಿದೆ ಎಂದು ಆಲ್ ಇಂಡಿಯಾ ಕ್ರಾಂತಿಕಾರಿ ಕಿಸಾನ್ ಸಭಾ (ಎಐಕೆಕೆಎಸ್) ಕರ್ನಾಟಕ ಘಟಕ ಖಂಡಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ…










