ಬೆಂಗಳೂರು, ಜೂ.23(ಕೆಎಂಶಿ)-ರಾಜ್ಯದಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರ ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ. ಪರೀಕ್ಷೆ ನಡೆಸಲೇಬೇಕೆಂದಾದರೆ, ಅಕ್ಟೋಬರ್ ತಿಂಗಳವರೆಗೆ ಕಾಯ್ದು ನಡೆಸಲಿ. ಕೊರೊನಾ ಸೋಂಕು ಸಾವಿನ ನಗಾರಿ ಬಾರಿಸುತ್ತಿದೆ. ಸುಮಾರು 8 ಲಕ್ಷ SSಐಅ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ, ಪೋಷಕರು, ಪರೀಕ್ಷಾ ಸಿಬ್ಬಂದಿ ಸೇರಿ 24 ಲಕ್ಷ ಮಂದಿಯ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ತೆಲಂಗಾಣ ರಾಜ್ಯದಲ್ಲಿ SSಐಅ ಪರೀಕ್ಷೆಯನ್ನು ರದ್ದುಪಡಿಸಿ, ಎಲ್ಲರನ್ನೂ ಉತ್ತೀರ್ಣಗೊಳಿಸಲಾಗಿದೆ. ಅದೇ…
ಕೋವಿಡ್-19 ಕಡಿವಾಣ ಹಾಕಲು ಪೊಲೀಸ್ ಠಾಣೆಗಳ ಸ್ವಾಗತ ಕೌಂಟರ್‍ನಲ್ಲೇ ದೂರು ಸ್ವೀಕಾರ, ಲಘು ವಿಚಾರಣೆ ವ್ಯವಸ್ಥೆ
June 23, 2020ಮೈಸೂರು,ಜೂ.22(ಆರ್‍ಕೆ)- ಕೊರೊನಾ ಭೀತಿ ಹಿನ್ನೆಲೆ ಹಾಗೂ ಸೋಂಕು ಹರಡುವು ದನ್ನು ತಡೆಯುವ ಸಲುವಾಗಿ ಮೈಸೂರಿನ ಪೊಲೀಸ್ ಠಾಣೆಗಳ ಸ್ವಾಗತ ಕೌಂಟರ್ ಗಳಲ್ಲೇ ಸಾರ್ವಜನಿಕರಿಂದ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ಲಘು ವಿಚಾರಣೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಲಾಕ್ ಡೌನ್ ನಿರ್ಬಂಧ ತೆರವುಗೊಂಡು ಸಾರಿಗೆ ಸಂಚಾರ, ವಾಣಿಜ್ಯ ಚಟುವಟಿಕೆ ಆರಂಭ ವಾಗಿರುವ ಹಿನ್ನೆಲೆ ಹಾಗೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿ ರುವುದರಿಂದ ಎಚ್ಚೆತ್ತ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಸಾರ್ವ ಜನಿಕರು ಠಾಣೆಗೆ ಭೇಟಿ ನೀಡುವುದರ…
ಕೆ.ಆರ್. ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣಾ ಕೇಂದ್ರ ಆರಂಭ
June 23, 2020ಮೈಸೂರು, ಜೂ. 22(ಆರ್‍ಕೆ)- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಪ್ರಾಥಮಿಕ ತಪಾಸಣಾ ಕೇಂದ್ರ ((Primary Screening- (Q))ವನ್ನು ಆರಂಭಿಸಲಾಗಿದೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕಚೇರಿ ಮತ್ತು ಹೊರರೋಗಿ ವಿಭಾಗದ ಮಧ್ಯೆ ಇರುವ ಗಣಪತಿ ದೇವಸ್ಥಾನದ ಹಿಂಭಾಗ ಈ ವಿನೂತನ ಟ್ರಿಯೇಜ್ ಪದ್ಧತಿಯನ್ನು ಅನುಷ್ಠಾನಗೊಳಿಸಲಾಗಿದ್ದು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯೂ ಮೊದಲು ಈ ಪ್ರಾಥಮಿಕ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ಹೊರ ರೋಗಿ ನೋಂದಣಿ ಚೀಟಿ ನೀಡಲು, ಒಳರೋಗಿಯಾಗಿ ದಾಖಲು ಮಾಡಿಕೊಳ್ಳಲು ಕೌಂಟರ್‍ಗಳನ್ನು…
ದೇಶಾದ್ಯಂತ 24 ಗಂಟೆಗಳಲ್ಲಿ 14,821 ಹೊಸ ಪಾಸಿಟಿವ್ ಪ್ರಕರಣ: 445 ಸೋಂಕಿತರ ಸಾವು
June 23, 2020ನವದೆಹಲಿ: ಮಾರಕ ಕೊರೊನಾ ವೈರಸ್ ಅಬ್ಬರ ದೇಶಾದ್ಯಂತ ಮುಂದು ವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶ ದಲ್ಲಿ ಮತ್ತೆ 14,821 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 3870, ದೆಹಲಿಯಲ್ಲಿ 3 ಸಾವಿರ, ತಮಿಳುನಾಡಿನಲ್ಲಿ 2532, ಗುಜರಾತ್‍ನಲ್ಲಿ 580 ಮತ್ತು ಕರ್ನಾಟಕದಲ್ಲಿ 702 (ಎರಡು ದಿನ) ಹೊಸ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ನಿನ್ನೆ ಒಂದೇ…
ಮೈಷುಗರ್ ಖಾಸಗೀಕರಣ: ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ
June 23, 2020ಬೆಂಗಳೂರು, ಜೂ. 22 (ಕೆಎಂಶಿ)- ಮೈಷುಗರ್ ಕಾರ್ಖಾನೆ ಖಾಸಗೀಕರಣದ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕಾರ್ಖಾ ನೆಯ ಜೊತೆ ನಿರಾಣಿ ಶುಗರ್ಸ್ ಲಿಮಿಟೆಡ್ ಹೆಸರು ತಳುಕು ಹಾಕು ವುದು ಬೇಡ ಎಂದು ಶಾಸಕರೂ ಆದ ನಿರಾಣಿ ಶುಗರ್ಸ್ ಅಧ್ಯಕ್ಷರಾದ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವುದಕ್ಕಾಗಲೀ ಅಥವಾ ಕಾರ್ಯಾಚರಣೆ ಮತ್ತು ನಿರ್ವಹಣೆ (ಔ&ಒ) ಸಂಬಂಧ ರಾಜ್ಯ ಸರ್ಕಾರ ಈ ಕ್ಷಣದವರೆಗೆ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಮೈಷು ಗರ್ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆಯಲು…
ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂಕೋರ್ಟ್ ಷರತ್ತು ಬದ್ಧ ಅನುಮತಿ
June 23, 2020ನವದೆಹಲಿ: ಜಗದ್ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯನ್ನು ನಡೆಸಲು ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನು ಮತಿ ನೀಡಿದೆ. ಅಲ್ಲದೆ ದೇವಾ ಲಯ ರಥಯಾತ್ರೆ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಮತ್ತು ದೇವಾಲಯ ನಿರ್ವಹಣೆ ಮಂಡ ಳಿಗೆ ವಹಿಸಿದೆ. ಇದರೊಡನೆ ಸುಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆಗೆ ಹಾದಿ ಸುಗಮ ವಾಗಿದೆ. ಆದರೆ ನ್ಯಾಯಾಲಯ ಕೆಲ ಷರತ್ತು ಸಹ ವಿಧಿಸಿದೆ. ಭಕ್ತರು ಇಲ್ಲದೆಯೇ ರಥಯಾತ್ರೆ ನಡೆಸಬೇಕು, ರಥಯಾತ್ರೆ ಕೈಂಕರ್ಯದ ನೇರಪ್ರಸಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ. ಜೂ.18ರಂದು ನೀಡಿದ್ದ ತನ್ನ…
ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಶೀಘ್ರ ವಿಭಜನೆ
June 23, 2020ಬೆಂಗಳೂರು, ಜೂ.22(ಕೆಎಂಶಿ)-ಲೋಕೋಪಯೋಗಿ ಇಲಾಖೆ, ನೀರಾವರಿ, ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಶೀಘ್ರವಾಗಿ ವಿಭಜಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಸೂಚಿಸಿದರು. ವಿಧಾನಸೌಧದಲ್ಲಿ ಇಲಾಖೆಗಳನ್ನು ವಿಭಜಿಸುವ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಗಳನ್ನು ವಿಭಜಿಸಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಇಂಜಿನಿಯರ್ ಹಾಗೂ ಇಂಜಿನಿಯರಿಂಗ್ ಸಂಘದ ಪದಾಧಿಕಾರಿಗಳ ಅಭಿಪ್ರಾಯ ವನ್ನು ಪಡೆಯಲಾಗಿದೆ. ಈ 3 ಇಲಾಖೆಗಳಿಂದ ಮಾಹಿತಿ ಕ್ರೋಢೀಕರಿಸಲಾಗಿದೆ. ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗಿದೆ. ವಿಭಜಿಸುವ ನಿರ್ಣಯವನ್ನು ಕೈಗೊಳ್ಳ ಲಾಗಿದೆ. ಇದು ಉತ್ತಮ ನಿರ್ಧಾರವಾಗಿದೆ. ನೀರಾವರಿ ಸಚಿವರು…
ಪಾಕಿಸ್ತಾನ ಸೇನೆ ದಾಳಿ: ಭಾರತೀಯ ವೀರ ಯೋಧ ಹುತಾತ್ಮ
June 23, 2020ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪ್ರದೇಶಗಳಲ್ಲಿ ಗಡಿ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನಾ ಯೋಧರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಯೋಧರು ಸೋಮವಾರ ನಸುಕಿನ ಜಾವ ಗಡಿ ನಿಯಂತ್ರಣ ರೇಖೆಯ ಪೂಂಚ್ ಜಿಲ್ಲೆಯ ರಜೌರಿ ನೌಶೆರಾ ವಲಯದಲ್ಲಿ ಮತ್ತು ಕತೌ ಜಿಲ್ಲೆಯ ಐಬಿ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ದಾಳಿ ನಡೆಸಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ನಸುಕಿನ ಜಾವ 3.30ರ ಸುಮಾರಿಗೆ ಪಾಕಿಸ್ತಾನ ಸೇನೆ ಪೂಂಚ್ ಜಿಲ್ಲೆಯ ಕೃಷ್ಣನಗಾಟಿ ವಲಯದಲ್ಲಿ…
ಗಲ್ವಾನ್ ಸಂಘರ್ಷ: ಚೀನಾ ಸಂಸ್ಥೆಗಳೊಂದಿಗಿನ 5,000 ಕೋಟಿ ಮೊತ್ತದ 3 ಒಪ್ಪಂದಕ್ಕೆ ‘ಮಹಾ’ ಸರ್ಕಾರ ತಡೆ!
June 23, 2020ಮುಂಬೈ: 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಗಲ್ವಾನ್ ಸಂಘರ್ಷದ ನಡುವೆಯೂ ಚೀನಾ ಮೂಲದ ಸಂಸ್ಥೆ ಗಳೊಂದಿಗೆ 5 ಸಾವಿರ ಕೋಟಿ ರೂ.ಗಳ ಹೂಡಿಕೆ ಒಪ್ಪಂದ ಮಾಡಿ ಕೊಂಡು ಟೀಕೆ ಎದುರಿಸುತ್ತಿದ್ದ ಮಹಾರಾಷ್ಟ್ರ ಸರ್ಕಾರ ಕೊನೆಗೂ ಎಚ್ಚೆತ್ತಿದ್ದು, ಯೋಜನೆಗಳಿಗೆ ತಡೆ ನೀಡಿದೆ. ಮಹಾರಾಷ್ಟ್ರ ಸರ್ಕಾರ ಚೀನಾದ ಸಂಸ್ಥೆಗಳ ಜೊತೆ ಮಾಡಿಕೊಂಡಿದ್ದ ಸುಮಾರು 5000 ಕೋಟಿಯ 3 ಒಪ್ಪಂದಗಳಿಗೆ ತಡೆ ನೀಡಿದೆ. ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ಸಚಿವ ಸುಭಾಷ್…
ನೂತನ ಕೈಗಾರಿಕಾ ನೀತಿ ಘೋಷಿಸಿ ಭಾರೀ ಉದ್ಯೋಗ ಸೃಷ್ಟಿ: ಸಿಎಂ
June 23, 2020ಬೆಂಗಳೂರು,ಜೂ.22(ಕೆಎಂಶಿ)-ನೂತನ ಕೈಗಾರಿಕಾ ನೀತಿ 2019-24 ಅನ್ನು ಜಾರಿಗೆ ತಂದು ದೊಡ್ಡ ಮಟ್ಟದ ಉದ್ಯೋಗ ಸೃಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಸಿ.ಐ.ಐ ಆಯೋಜಿಸಿದ್ದ 12ನೇ ಹೋರಾಸಿಸ್ ಇಂಡಿಯಾ ಸಭೆಯಲ್ಲಿ ಪಾಲ್ಗೊಂಡು `ಕೋವಿಡ್ ನಂತರ ಆರ್ಥಿಕ ಅಭಿವೃದ್ಧಿ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು. ಕೈಗಾರಿಕಾ ವಲಯದ ಸದಸ್ಯರನ್ನೊಳಗೊಂಡ ವಿಶೇಷ ಟಾಸ್ಕ್‍ಫೋರ್ಸ್‍ನ್ನು ರಚಿಸಲಾಗಿದ್ದು, ರಾಜ್ಯಕ್ಕೆ ಹೊಸದಾಗಿ ಹೂಡಿಕೆಗಳನ್ನು ಗುರುತಿಸಿ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸ್ಯಾಂಡ್ ಬಾಕ್ಸ್ ನಿಯಂತ್ರಣಕ್ಕಾಗಿ ಸರ್ಕಾರವು ಕರ್ನಾಟಕ ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪಿಸಲು ಕಾಯ್ದೆಯನ್ನು…










