ಮೈಸೂರು, ಜೂ.22(ಆರ್‍ಕೆಬಿ)- ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ವೇತನ ಬಿಕ್ಕಟ್ಟನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿ ಎಐಡಿವೈಓ ಸಂಘಟನೆಯಿಂದ ಜೂ.25ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಧಿಕಾರಿ ಕಚೇರಿ, ತಾಲೂಕು ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿವೈಓ ಕಾರ್ಯದರ್ಶಿ ಟಿ.ಆರ್. ಸುನಿಲ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಕರು, ಉಪನ್ಯಾಸಕರನ್ನು ಇಂತಹ ಅಸಹಾಯಕ ಪರಿಸ್ಥಿತಿಗೆ ಸರ್ಕಾರ ದೂಡಿದೆ. ಕೂಡಲೇ ರಾಜ್ಯ ಸರ್ಕಾರ ವಿಶೇಷ ಅನುದಾನ ಘೋಷಿಸಬೇಕು. ಬಾಕಿ…
ವಿಧಾನ ಪರಿಷತ್‍ಗೆ ವಿಶ್ವನಾಥ್ ನಾಮ ನಿರ್ದೇಶನಕ್ಕೆ ಆಗ್ರಹ
June 23, 2020ಮೈಸೂರು, ಜೂ.22(ಆರ್‍ಕೆಬಿ)-ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಅವರಿಗೆ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವಂತೆ ಹಳೆಬೇರು ಹೊಸಚಿಗುರು ಗಾಯಕರ ಗೆಳೆಯರ ಬಳಗ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಬಳಗದ ಕಾರ್ಯದರ್ಶಿ ರೇವಣ್ಣ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಧೃವೀಕರಣದಲ್ಲಿ 17 ಬಂಡಾಯ ಶಾಸಕರು, ಮಂತ್ರಿಗಳ ನಾಯಕತ್ವ ವಹಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಎ.ಹೆಚ್.ವಿಶ್ವನಾಥ್ ಅವರಿಗೆ ಸಾಹಿತ್ಯ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು….
ಕೆ.ಸಿ.ರೆಡ್ಡಿಯವರ ಕಂಚಿನ ಪ್ರತಿಮೆ ಸ್ಥಾಪನೆ
June 23, 2020ಬೆಂಗಳೂರು,ಜೂ.22(ಕೆಎಂಶಿ)-ದಿ.ಕೆ.ಸಿ.ರೆಡ್ಡಿ ಅವರ ಮಾದರಿ ಪ್ರತಿಮೆ ಬದಲಾಯಿಸಿ ಶಾಶ್ವತವಾಗಿ ಉಳಿಯುವಂತಹ ಮೂಲ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರ ಜೋಳ ತಿಳಿಸಿದರು. ವಿಧಾನಸೌಧದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಮೆಯ ಮಾದರಿಗಳ ತರಿಸಿಕೊಂಡು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ನೈಜ ಪ್ರತಿಮೆಯನ್ನು ಸ್ಥಾಪಿಸಬೇಕು. ನುರಿತ ಹಾಗೂ ಪರಿಣಿತರ ಸಹಕಾರದೊಂದಿಗೆ ಈ ಪ್ರತಿಮೆಯನ್ನು ಸ್ಥಾಪಿಸಬೇಕು. ಕೆ.ಸಿ.ರೆಡ್ಡಿಯವರ ಕೊಡುಗೆ ಅಪಾರವಾಗಿದೆ. ಅವರ ಪ್ರತಿಮೆಯು ಶಾಶ್ವತ ವಾಗಿರುವಂತೆ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಅನುಸರಣಾ ವರದಿಯೊಂದಿಗೆ…
ಮೈಸೂರು ಜನರ ಕುತೂಹಲ ತಣಿಸಿದ ಉಂಗುರ ಸೂರ್ಯಗ್ರಹಣ
June 22, 2020ಮೈಸೂರು, ಜೂ.21(ಆರ್‍ಕೆಬಿ)- ಮೈಸೂರಿನಲ್ಲಿ ಭಾನುವಾರ ಮೋಡ ಕವಿದಿದ್ದರೂ `ಉಂಗುರ’ ಸೂರ್ಯ ಗ್ರಹಣ ಕಾಣಿಸಿಕೊಂಡು ಜನರ ಕುತೂ ಹಲ ತಣಿಸಿತು. ಆಗೊಮ್ಮೆ ಈಗೊಮ್ಮೆ ಮೋಡಗಳು ಸೂರ್ಯನನ್ನು ಮರೆ ಮಾಡುತ್ತಿದ್ದರೂ ಜನತೆ ಸೂರ್ಯ ಗ್ರಹಣ ವೀಕ್ಷಿಸಿ ಖುಷಿಪಟ್ಟರು. ನಭೋಮಂಡಲದಲ್ಲಿ ಭಾನುವಾರ ಬೆಳಗ್ಗೆ 10.10 ಗಂಟೆಗೆ ಸರಿಯಾಗಿ ಸೂರ್ಯ ನಿಗೆ ಚಂದ್ರನ ನೆರಳು ನಿಧಾನವಾಗಿ ಆವರಿಸತೊಡಗಿತು. ಮಧ್ಯಾಹ್ನ 12ರ ವೇಳೆಗೆ ಉಂಗುರ ಆಕೃತಿಯಲ್ಲಿ ಸೂರ್ಯ ಗೋಚರಿಸಿತು. ಜನರು ತಮ್ಮ ಮನೆ ತಾರಸಿಯಲ್ಲಿ ನಿಂತು ಸೌರ ಕನ್ನಡಕ ಧರಿಸಿ ರವಿ-ಚಂದ್ರರ ಬೆಳಕಿನಾಟ ನೋಡಿದರೆ,…
ಮೈಸೂರಲ್ಲಿ ಮತ್ತೆ ಮೂವರು ಪೇದೆಗಳು ಸೇರಿದಂತೆ 18 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ
June 22, 2020ಮೈಸೂರು, ಜೂ.21(ಎಂಟಿವೈ)-ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಎರಡನೇ ಹಂತದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರಿಂದ ಬೆಚ್ಚಿ ಬೀಳು ತ್ತಿದೆ. ಹೊರ ರಾಜ್ಯ, ಬೇರೆ ಜಿಲ್ಲೆಯಿಂದ ವಾಪಸ್ಸಾದವರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಭಾನುವಾರ ಮೂವರು ಪೊಲೀಸರೂ ಸೇರಿದಂತೆ 18 ಮಂದಿ ಯಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕ ಇಮ್ಮಡಿ ಮಾಡಿದೆ. ಶನಿವಾರವಷ್ಟೇ ಕೆಎಸ್‍ಆರ್‍ಪಿಯ 13 ಪೇದೆಗಳೂ ಸೇರಿದಂತೆ 22 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ನಗರದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಇದೀಗ ಮರು ದಿನವೇ 18 ಹೊಸ ಪ್ರಕ ರಣ…
ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ‘ಪ್ರಾಣಾಯಾಮ’ ಸಹಕಾರಿ
June 22, 2020ನವದೆಹಲಿ, ಜೂ.21-ಯೋಗದಲ್ಲಿ ಉಸಿರಾಟ ವನ್ನು ನಿಯಂತ್ರಿಸುವ ಅಭ್ಯಾಸ ಮಾಡುವ ಪ್ರಾಣಾ ಯಾಮ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಸಮಸ್ಯೆ ಇರುವ ಸಂದರ್ಭದಲ್ಲಿ ಪ್ರಾಣಾಯಾಮ ಮಾಡುವ ಮೂಲಕ ಕೊರೊನಾ ಬರುವುದನ್ನು ತಡೆಗಟ್ಟಲು ಸಹಾಯವಾಗ ಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ತಿಳಿಸಿದ್ದಾರೆ. 6ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗ ವಾಗಿ ದೆಹಲಿಯಲ್ಲಿ ಭಾಷಣ ಮಾಡಿದ ಅವರು, ಕೊರೊನಾ ವೈರಸ್ ಸೋಂಕು ನಮ್ಮ ಉಸಿರಾಟ ವ್ಯವಸ್ಥೆ…
ರಾಜ್ಯದಲ್ಲಿ 9 ಸಾವಿರ ಗಡಿ ದಾಟಿದ ಕೊರೊನಾ ಸೋಂಕು
June 22, 2020ಬೆಂಗಳೂರು, ಜೂ.21-ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಆರ್ಭಟ ಹೆಚ್ಚಾ ಗುತ್ತಿದ್ದು, ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರು ಕೊರೊನಾ ವೈರಸ್‍ನಿಂದ ತಲ್ಲಣಗೊಂಡಿದ್ದು, ಭಾನುವಾರ 196 ಪ್ರಕರಣ ದಾಖ ಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಸೋಂಕಿನ ಸಂಖ್ಯೆ 1272ಕ್ಕೆ ಏರಿದೆ. ಇಂದು ಬೆಂಗಳೂರಿನಲ್ಲಿ ಹೊಸ ದಾಗಿ 20 ಪ್ರದೇಶಗಳು ಕಂಟೈನ್ಮೆಂಟ್ ಜೋನ್‍ಗಳಾಗಿವೆ. ಬೆಂಗಳೂರಿನ ವಾಣಿಜ್ಯ ಪ್ರದೇಶವಾಗಿರುವ ಚಿಕ್ಕಪೇಟೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿರುವ ಕಾರಣ ಅಲ್ಲಿನ ವರ್ತಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಇಂದು ಚಿಕ್ಕಪೇಟೆಯ ಎಲ್ಲಾ ವರ್ತಕರು ಸಭೆ ಸೇರಿ ಒಂದು…
ಮನೆಯಲ್ಲೇ ಯೋಗ ಮಾಡಿ 6ನೇ ವಿಶ್ವ ಯೋಗ ದಿನ ಆಚರಿಸಿ ಸಂಭ್ರಮಿಸಿದ ಯೋಗಪಟುಗಳು
June 22, 2020ಮೈಸೂರು, ಜೂ.21(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಮೈಸೂರಲ್ಲಿ ಭಾನುವಾರ ಯೋಗ ಪಟು ಗಳು ತಮ್ಮ ಮನೆಯಲ್ಲಿಯೇ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಆರನೇ `ವಿಶ್ವ ಯೋಗ ದಿನ’ವನ್ನು ಸಂಭ್ರಮದಿಂದ ಆಚರಿಸಿದರು. ಜಿಲ್ಲಾಡಳಿತ, ಯೋಗ ಒಕ್ಕೂಟ ಸೇರಿದಂತೆ ವಿವಿಧ ಯೋಗ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಭಾನು ವಾರ ಬೆಳಗ್ಗೆ `ಮನೆಯಲ್ಲೇ ಮನೆಯವರೊಂದಿಗೆ ಯೋಗ’ ಶೀರ್ಷಿಕೆಯಲ್ಲಿ ನಡೆದ ಆರನೇ ವಿಶ್ವ ಯೋಗ ದಿನದಲ್ಲಿ ವಯಸ್ಸಿನ ಭೇದವಿಲ್ಲದೆ ಸಾವಿರಾರು ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗ ಪ್ರದರ್ಶನ ನೀಡಿದರು. ಕೊರೊನಾ ಸೋಂಕು ಹರ ಡುತ್ತಿರುವ…
ಲಡಾಖ್ ಗಡಿ ಘರ್ಷಣೆಯಲ್ಲಿ ಚೀನಾದ 40 ಯೋಧರು ಸಾವು
June 22, 2020ನವದೆಹಲಿ: ಪೂರ್ವ ಲಡಾಖ್ ಗಡಿ ಯಲ್ಲಿನ ಗಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಚೀನಾ ಹಾಗೂ ಭಾರ ತೀಯ ಸೇನಾ ಪಡೆಗಳ ನಡುವಣ ನಡೆದ ಮುಖಾಮುಖಿ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂದು ಮಾಜಿ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಮೊದಲ ಬಾರಿಗೆ ಚೀನಾ ದೇಶದ ಸಾವು -ನೋವುಗಳ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದರೆ ಚೀನಾ ದೇಶದವ ರಿಗೆ ಇದಕ್ಕಿಂತಲೂ ದುಪ್ಪಟು ಪ್ರಮಾಣದ ಸೈನಿಕರು ಸಂಘರ್ಷದಲ್ಲಿ ಮೃತ ಪಟ್ಟಿದ್ದಾರೆ ಎಂದು ಹಾಲಿ ಕೇಂದ್ರದ…
ಸೇನಾ ಮುಖ್ಯಸ್ಥರು, ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಸಭೆ
June 22, 2020ನವದೆಹಲಿ, ಜೂ.21- ಪೂರ್ವ ಲಡಾಖ್‍ನಲ್ಲಿನ ಗಡಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜ ನಾಥ್ ಸಿಂಗ್ ಭಾನು ವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರೊಂ ದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಲಡಾಖ್‍ನಲ್ಲಿನ ವಾಸ್ತವ ಪರಿಸ್ಥಿತಿ ಹಾಗೂ ಗಡಿನಿಯಂತ್ರಣಾ ರೇಖೆ ಯುದ್ದಕ್ಕೂ ಸನ್ನದ್ಧತೆಯ ಬಗ್ಗೆ ಸಚಿ ವರು ಮಾಹಿತಿ ಪಡೆದಿದ್ದಾರೆ. ಭೂಗಡಿ, ವೈಮಾನಿಕ ಪ್ರದೇಶ ಮತ್ತು ಸಾಗರ ರೇಖೆಗಳಲ್ಲಿ ಚೀನಾ ಚಟುವಟಿಕೆಗಳ ಬಗ್ಗೆ ತೀವ್ರ…










