ಮೈಸೂರು, ಜೂ. 20(ಆರ್‍ಕೆ)- ಮೈಸೂರಿನ ಡಿಸಿ ಕಚೇರಿ ಸುತ್ತಮುತ್ತ ಸಂಚಾರಕ್ಕೆ ಅಡೆತಡೆಯಾಗಿದ್ದ 6 ಕುದುರೆ ಗಳನ್ನು ನಗರಪಾಲಿಕೆ ಸಿಬ್ಬಂದಿ ಹಿಡಿದು, ದೊಡ್ಡಿಗೆ ದೂಡಿದ್ದಾರೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಈ ಬಿಡಾಡಿ ಕುದುರೆಗಳು ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡೆತಡೆ ಜೊತೆಗೆ ಆತಂಕ ತಂದೊಡ್ಡಿದ್ದವು. ಸಾರ್ವಜನಿ ಕರು ನೀಡಿದ ದೂರಿನನ್ವಯ ಶನಿವಾರ ಬೆಳಗ್ಗೆ ಕಾರ್ಯಾ ಚರಣೆ ನಡೆಸಿದ ಮೈಸೂರು ಮಹಾನಗರ ಪಾಲಿಕೆ ಪಶುವೈದ್ಯಾಧಿಕಾರಿ ಡಾ. ತಿರುಮಲಗೌಡ ನೇತೃತ್ವದ ಸಿಬ್ಬಂದಿ 6 ಕುದುರೆಗಳನ್ನು ಹಿಡಿದು ಸರ್ಕಾರಿ ಸಂಸ್ಕøತ ಪಾಠ ಶಾಲಾ…
ಮೆಗಾ ಮೆಡಿಕಲ್ ಸ್ಟೋರ್ ಬೆಂಕಿಗಾಹುತಿ
June 21, 2020ಮೈಸೂರು, ಜೂ.20(ಆರ್‍ಕೆ)- ಶನಿವಾರ ಮುಂಜಾನೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೈಸೂರಿನ ಕುವೆಂಪುನಗರದ ಹೆಸರಾಂತ ಮೆಗಾ ಮೆಡಿಕಲ್ ಸ್ಟೋರ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕುವೆಂಪುನಗರದ ಶಾಂತಿಸಾಗರ ಹೋಟೆಲ್ ಎದುರಿನ ನೃಪತುಂಗ ರಸ್ತೆ (ಕೆಎಸ್‍ಆರ್‍ಟಿಸಿ ಬಸ್ ಡಿಪೋಗೆ ಹೋಗುವ ರಸ್ತೆ)ಯಲ್ಲಿ ಮೂರು ಮಹಡಿಯ ಸ್ವಂತ ಕಟ್ಟಡದಲ್ಲಿರುವ ಬೃಹತ್ ಮೆಗಾ ಮೆಡಿಕಲ್ ಸ್ಟೋರ್‍ನಲ್ಲಿ ಶನಿವಾರ ಮುಂಜಾನೆ ಸುಮಾರು 1.30 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿ…
ಜೆಡಿಎಸ್‍ನಿಂದ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷೆಯರಿಗೆ ಸನ್ಮಾನ
June 21, 2020ಮೈಸೂರು, ಜೂ.20(ವೈಡಿಎಸ್)- ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ನಿರ್ಮಲಾ ಹರೀಶ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಪಲ್ಲವಿ ಬೇಗಂ ಅವರನ್ನು ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಸನ್ಮಾನಿಸಲಾಯಿತು. ಜೆಡಿಎಸ್ ಮೈಸೂರು ನಗರ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್ ಸನ್ಮಾನಿಸಿದರು. ನಂತರ ಮಾತನಾಡಿದ ಶಾಸಕರು, ಕಾರ್ಯ ಕರ್ತರಿಗೆ ಪಕ್ಷನಿಷ್ಠೆ ಇರಬೇಕು. ಆದರೆ, ಅಧಿಕಾರ ಅನುಭವಿಸಿ, ಪಕ್ಷನಿಷ್ಠೆ, ಪ್ರಾಮಾ ಣಿಕತೆ ಇಲ್ಲದೇ ಕೇವಲ ಸ್ವಾರ್ಥವಿದ್ದು, ಆಮಿಷಗಳಿಗೆ…
ಉಳಿತಾಯ ಖಾತೆ ತೆರೆಯಲು ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಷೇರುದಾರರಿಗೆ ಅರಿವು
June 21, 2020ಮೈಸೂರು, ಜೂ. 20(ಪಿಎಂ)- ಮೈಸೂರಿನ ಗಾಂಧಿಚೌಕದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಷೇರುದಾರರಿಗೆ ಉಳಿತಾಯ ಖಾತೆ ತೆರೆಯಲು ಶನಿವಾರ ಅರಿವು ಮೂಡಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಕೆ.ಉಮಾಶಂಕರ್ ಹಾಗೂ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ನೇತೃತ್ವದಲ್ಲಿ ಮಂಡಿ ಮೊಹಲ್ಲಾ ವ್ಯಾಪ್ತಿಯ ಕಾಮಾಟಗೇರಿ, ದೊಡ್ಡೊಕ್ಕಲಗೇರಿ, ಸೊಪ್ಪಿನಕೇರಿ, ಉಪ್ಪಿನ ಕೇರಿಯಲ್ಲಿ ಬ್ಯಾಂಕಿನ ಷೇರುದಾರರ ಮನೆ ಮನೆಗೆ ತೆರಳಿ ಉಳಿತಾಯ ಖಾತೆ ತೆರೆಯುವಂತೆ ಮನವಿ ಮಾಡಲಾಯಿತು. ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಬ್ಯಾಂಕಿನ ಸದಸ್ಯರು ಮತದಾನದ ಹಕ್ಕು, ಮರಣನಿಧಿ, ಡಿವಿಡೆಂಡ್…
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಖಂಡಿಸಿ ದಸಂಸ ಪ್ರತಿಭಟನೆ
June 21, 2020ಮೈಸೂರು,ಜೂ.20(ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79ಎ, ಬಿ ಮತ್ತು ಸಿ ಹಾಗೂ 80ನೇ ಕಲಂಗೆ ಪೂರ್ವಾನ್ವಯವಾಗುವಂತೆ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಖಂಡನೀಯ. ತಿದ್ದುಪಡಿಯಾದರೆ ಉಳುವವನೇ ಹೊಲದೊಡೆಯ ಎಂಬುದಕ್ಕೆ ಬದಲಾಗಿ ಉಳ್ಳವನೇ ಭೂ ಮಾಲೀಕ ಎನ್ನುವಂತೆ ಆಗಲಿದೆ. ಕೂಡಲೇ ಸರ್ಕಾರ ಈ ಪ್ರಸ್ತಾಪ…
ಗಂಡು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ
June 21, 2020ಮೈಸೂರು,ಜೂ.20(ಆರ್‍ಕೆ)- ಕೊರೊನಾ ಸೋಂಕಿತ ಮಹಿಳೆಯೊಬ್ಬರು ಮೈಸೂರಿನ ವಿವಿಪುರಂ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚೆಲುವಾಂಬ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯರ ತಂಡವು ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯರಿಗಾಗಿ ಕೋವಿಡ್ ಆಸ್ಪತ್ರೆಯಾಗಿ ಸಜ್ಜುಗೊಳಿಸಿರುವ ಜಯಲಕ್ಷ್ಮೀಪುರಂನಲ್ಲಿರುವ ವಿವಿಪುರಂ ಹೆರಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಕೆ.ಆರ್.ಪೇಟೆಯವರಾದ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ಬಂದ ಕಾರಣ ಅವರನ್ನು ಮಂಡ್ಯದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲ ದಿನಗಳ ನಂತರ ರಿಪೀಟೆಡ್…
ಅಪರೂಪದ ರೋಗದಿಂದ ನರಳುತ್ತಿರುವ ಬಾಲಕಿ ಚಿಕಿತ್ಸೆಗೆ ನೆರವಾದ ಶಾಸಕ ರಾಮದಾಸ್
June 21, 2020ಮೈಸೂರು, ಜೂ. 20(ಆರ್‍ಕೆ)- ಬಲು ಅಪರೂಪದ Rheumatoid Arthrities ರೋಗದಿಂದ ಬಳಲುತ್ತಿರುವ ಬಾಲಕಿಗೆ ಮೈಸೂರಿನ ಬೃಂದಾವನ ಬಡಾವಣೆ ಯಲ್ಲಿರುವ ಸರ್ಕಾರಿ ಹೈಟೆಕ್ ಪಂಚ ಕರ್ಮ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಶಾಸಕ ಎಸ್.ಎ.ರಾಮ ದಾಸ್ ನೆರವಾಗಿದ್ದಾರೆ. ಶನಿವಾರ ಬೆಳಗ್ಗೆ ತಾವೇ ಸ್ವತಃ ಆಸ್ಪತ್ರೆಗೆ ತೆರಳಿದ ರಾಮದಾಸ್, ಕಳೆದ 4 ತಿಂಗಳಿಂದ ಬಳಲುತ್ತಿರುವ ರುಮಟಾಯ್ಡ್ ಆಥ್ರ್ರೈಟೀಸ್ ರೋಗಿ ಯಾದ ಮೈಸೂರಿನ ಹೆಬ್ಬಾಳು ಬಡಾವಣೆ ಬಾಲಕಿಯ ರೋಗದ ಗುಣಲಕ್ಷಣಗಳು, ಯಾವುದರಿಂದ ಹೇಗೆ ಈ ರೋಗ ತಗುಲಿದೆ ಎಂಬುದರ ಬಗ್ಗೆ ವಿವರ…
ಅಂತಾರಾಷ್ಟ್ರೀಯ ಯೋಗ ದಿನ: ಐವರು ಸಾಧಕರಿಗೆ `ಯೋಗ ನಕ್ಷತ್ರ’ ಪ್ರಶಸ್ತಿ
June 21, 2020ಮೈಸೂರು,ಜೂ.20(ಪಿಎಂ)-ಜಿಎಸ್‍ಎಸ್ ಯೋಗ ಪ್ರತಿಷ್ಠಾನ, ಮೈಸೂರು ಯೋಗ ಬಳಗದ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಕ್ಷೇತ್ರದ ಐವರು ಹಿರಿ-ಕಿರಿಯ ಸಾಧಕರಿಗೆ `ಯೋಗ ನಕ್ಷತ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಯೋಗ ಸಾಧಕರಾದ ಹೆಚ್.ಜಿ.ಹಿರಣ್ಣಯ್ಯ, ಜಿ.ವೆಂಕಟೇಶ್, ಎಸ್.ಹರೀಶ್, ವಿನಾಯಕ ಹೊನ್ನಾವರ ಹಾಗೂ ಎನ್.ಆಶಾದೇವಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಎಸ್‍ಎಸ್ ಯೋಗ ಪ್ರತಿಷ್ಠಾನದ ಅಧ್ಯಕ್ಷ ಶ್ರೀಹರಿ ಮಾತನಾಡಿ, ಯೋಗ ಪರಂಪರೆ ಯಲ್ಲಿ ಮೈಸೂರು ವಿಶಿಷ್ಟ ಛಾಪು ಮೂಡಿಸಿದೆ. 2019ರಲ್ಲಿ…
ಜೆ.ಪಿ.ನಗರದಲ್ಲಿ ಮಹಿಳೆಯ ಸರ ಅಪಹರಣ
June 21, 2020ಮೈಸೂರು, ಜೂ. 20(ಆರ್‍ಕೆ)- ಹಾಡಹಗಲೇ ಖದೀಮರು, ತಾಯಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕೊರಳಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿ ರುವ ಘಟನೆ ಮೈಸೂರಿನ ಜೆ.ಪಿ. ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮೈಸೂರಿನ ಜೆ.ಪಿ. ನಗರ ನಿವಾಸಿ ಸಂಜೀವ ಮೂರ್ತಿ ಅವರ ಪತ್ನಿ ಶ್ರೀಮತಿ ಮಮತಾ(39) ಎಂಬುವರೇ ಚಿನ್ನದ ಸರ ಕಳೆದುಕೊಂಡವರು. ಪಕ್ಕದಲ್ಲಿರುವ ಸಿದ್ದಲಿಂಗೇಶ್ವರ ಬಡಾವಣೆಯ ತಮ್ಮ ತಾಯಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಯಮಹಾ ಕ್ರಕ್ಸ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ಮಾಸ್ಕ್‍ಧಾರಿಗಳು, ಮಧ್ಯಾಹ್ನ 12.45…
ಕಳುವಾಗಿದ್ದ ಲಾರಿ ವಶ: ಇಬ್ಬರು ಖದೀಮರ ಸೆರೆ
June 21, 2020ಮೈಸೂರು, ಜೂ.20(ಆರ್‍ಕೆ)-ಖದೀಮರಿಬ್ಬರನ್ನು ಬಂಧಿಸಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು, ಕಳುವಾಗಿದ್ದ ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು, ಗೆಜ್ಜಲಗೆರೆ ಗ್ರಾಮದ ಲೇಟ್ ನಾರಾಯಣ ಗೌಡ ಅವರ ಮಗ ಗೋವಿಂದ ಹಾಗೂ ಕೋಣಶಾಲೆ ಗ್ರಾಮದ ಕೆ.ಎಸ್. ಇಂದೂಶೇಖರ್ ಅವರ ಮಗ ರತನ್ ಶೇಖರ್ ಬಂಧಿತ ಆರೋಪಿಗಳು. ಮೇ 29ರಂದು ಮೈಸೂರಿನ ನಂಜನಗೂಡು ರಸ್ತೆಯಲ್ಲಿ ರುವ ಎಪಿಎಂಸಿ ಪೆಟ್ರೋಲ್ ಬಂಕ್‍ನಲ್ಲಿ ನಿಲ್ಲಿಸಿದ್ದ ವಿ.ಮಹೇಶ್ ಎಂಬುವರಿಗೆ ಸೇರಿದ ಲಾರಿ (ಕೆಎ 17, ಎ-5335)ಯನ್ನು ಈ ಖದೀಮರು ಕಳವು…










