ಮೈಸೂರು, ಜೂ.20- ಮೈಸೂರಿನ ಪ್ರತಿಯೊಬ್ಬರೂ ಮೃಗಾ ಲಯದ ನೆರವಿಗೆ ಕೈಚಾಚುವಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ. ಸ್ನೇಹಿತರ ಸಹಕಾರದೊಂದಿಗೆ 20 ಸಾವಿರ ರೂ.ಗಳನ್ನು ಶನಿವಾರ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡಿಬೆಟ್ಟ, ಅರಮನೆ ಜೊತೆಗೆ ಮೃಗಾಲಯವೂ ಪ್ರವಾಸಿಗರ ನೆಚ್ಚಿನ ಸ್ಥಳ. ಆದರೆ ಕೊರೊನಾ ಪರಿಣಾಮದಿಂದ ಎರಡೂವರೆ ತಿಂಗಳು ಬಂದ್ ಮಾಡಿದ್ದರಿಂದ ಮೃಗಾಲಯದ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದರು. ಇತ್ತೀಚೆಗೆ ಎಸ್‍ಓಪಿ ಮೂಲಕ ಮೃಗಾಲಯವನ್ನು ತೆರೆದಿದ್ದರೂ ಬೆರಳೆಣಿಕೆಯಷ್ಟು ವೀಕ್ಷಕರು ಭೇಟಿ ನೀಡುತ್ತಿದ್ದಾರೆ. ಪ್ರಾಣಿ-ಪಕ್ಷಿಗಳು,…
ಯೋಗ ಮಂಥನ ಕೃತಿ ಬಿಡುಗಡೆ
June 21, 2020ಮೈಸೂರು, ಜೂ.20 (ಪಿಎಂ)- ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಯೋಗ ಸ್ಪೋಟ್ರ್ಸ್ ಫೌಂಡೇಷನ್ ಹಾಗೂ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ಪಿ.ಎನ್.ಗಣೇಶ್‍ಕುಮಾರ್ ಅವರ `ಯೋಗ ಮಂಥನ’(ಭಾಗ 1-2) ಪುಸ್ತಕವನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಬಿಡುಗಡೆ ಗೊಳಿಸಲಾಯಿತು. ಅಧ್ಯಾತ್ಮ ಚಿಂತಕಿ ಸುಚರಿತ ಮಾತಾಜಿ ಹಾಗೂ ಸರ್ಕಾರಿ ಹೈಟೆಕ್ ಪಂಚಕರ್ಮ ಆಸ್ಪತ್ರೆ ಆರ್‍ಎಂಓ ಡಾ.ಶಶಿರೇಖಾ ಪುಸ್ತಕ ಗಳನ್ನು ಬಿಡುಗಡೆಗೊಳಿಸಿದರು. ಪ್ರಾಚೀನ, ಪರಿಪೂರ್ಣ ವಿಜ್ಞಾನವೇ ಯೋಗ. ಯೋಗಾಭ್ಯಾಸದ ವಿವಿಧ ವಿಚಾರಗಳ ಮೇಲೆ ಬೆಳಕು ಚೆಲ್ಲಲು…
ವಿಶ್ವ ಸಂಗೀತ ದಿನ-7 ವಿದ್ವಾಂಸರಿಗೆ ಗೌರವ
June 21, 2020ಮೈಸೂರು,ಜೂ.20(ಆರ್‍ಕೆಬಿ)- ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮೈಸೂರಿನ ವಿದ್ವಾಂಸರನ್ನು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ `ವಿಶ್ವ ಸಂಗೀತ ದಿನ’ ಅಂಗವಾಗಿ ಶನಿವಾರ ಗೌರವಿಸಿತು. ಚಾಮುಂಡಿಪುರಂ ವೃತ್ತದ ಬಳಿಯ ಅಪೂರ್ವ ಸಭಾಂಗಣದಲ್ಲಿ ಸಂಗೀತ ವಿದ್ವಾಂಸರಾದ ಅಂಬಾ ಪ್ರಸಾದ್ (ಪಿಟೀಲು), ಶಂಕರ್(ವೀಣೆ), ವಿಶ್ವನಾಥ್ (ಮ್ಯಾಂಡೊಲಿನ್), ಇಂದೂ ಶೇಖರ್(ತಬಲಾ), ನಾಗಲಕ್ಷ್ಮಿ, ಇಂದ್ರಾಣಿ ಅನಂತರಾಮ್, ರಶ್ಮಿ (ಗಾಯ ಕರು) ಅವರನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ ಶಾಲು ಹೊದಿಸಿ ಗೌರವಿಸಿದರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರ ಮತ್ತು…
ಓದುವ ಹವ್ಯಾಸದಿಂದ ಮನಸ್ಥೈರ್ಯ, ವ್ಯಕ್ತಿತ್ವ ವಿಕಸನ
June 21, 2020ಮೈಸೂರು, ಜೂ.20(ಆರ್‍ಕೆಬಿ)-ಗ್ರಂಥಾಲಯ ಚಳವಳಿಯ ಪಿತಾಮಹ ಪಿ.ಎನ್.ಪಣಿಕ್ಕರ್ ಸ್ಮರಣಾರ್ಥ ರಾಜ್ಯ ಸರ್ಕಾರದ ಸೂಚನೆಯಂತೆ ಮೈಸೂರು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ `ಓದುವ ದಿನ’ ಆಚರಿಸಲಾಯಿತು. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆ, ವಿಸ್ತರಣಾ ತರ ಬೇತಿ ಕೇಂದ್ರದ ಸಹಯೋಗದಲ್ಲಿ ಗೂಗಲ್ ಮೀಟ್ ಆನ್‍ಲೈನ್‍ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಬಿ.ರವೀಶ್ ಕುಮಾರ್ ಮಾಹಿತಿ ನೀಡಿದರು. ಓದುವ ಅಭ್ಯಾಸದಿಂದ ಜ್ಞಾನ, ಮಾನಸಿಕ ಸ್ಥೈರ್ಯ, ಸಂಸ್ಕಾರ, ವ್ಯಕ್ತಿತ್ವ ವಿಕಸನ ಲಭಿಸುತ್ತದೆ ಎಂದು ತಿಳಿಸಿಕೊಟ್ಟರು. ಉಪನಿಷತ್ ಮತ್ತು ಪಂಚತಂತ್ರ ಕಥೆ ಗಳನ್ನು…
ಚಿರತೆ ಸೆರೆ: ಜಂತಗಳ್ಳಿ ಗ್ರಾಮಸ್ಥರಿಗೀಗ ನಿರಾತಂಕ
June 21, 2020ಮೈಸೂರು, ಜೂ.20(ಎಂಟಿವೈ)- ಮೈಸೂರು ತಾಲೂಕಿನ ಜಂತಗಳ್ಳಿ ಗ್ರಾಮದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಅತಂಕ ಉಂಟು ಮಾಡಿದ್ದ ಹೆಣ್ಣು ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ. ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಗ್ರಾಮದ ಜೆ.ಕೆ.ಫಾರಂನಲ್ಲಿ ಇಟ್ಟಿದ್ದ ಬೋನಿನಲ್ಲಿ 4 ವರ್ಷದ ಚಿರತೆ ಸೆರೆಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿದ್ದ ಆತಂಕ ದೂರವಾಗಿದೆ. ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಮೈಸೂರಿನ ಅರಣ್ಯ ಭವನಕ್ಕೆ ಒಯ್ದರು. ಚಿರತೆ ಆರೋಗ್ಯವಾಗಿದ್ದು, ಅದನ್ನು ಬಂಡೀಪುರದ ಮೂಲೆಹೊಳೆ ಅರಣ್ಯದಲ್ಲಿ ಬಿಡಲಿದ್ದಾರೆ. ಕೆಲ ದಿನಗಳಿಂದ ಗ್ರಾಮದಲ್ಲಿ ಚಿರತೆ…
150 ಆಟೋ ಚಾಲಕರಿಗೆ 1 ಲೀ. ಉಚಿತ ಪೆಟ್ರೋಲ್ ವಿತರಣೆ
June 21, 2020ಮೈಸೂರು, ಜೂ.20(ಆರ್‍ಕೆಬಿ)- ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ದರ ಏರಿಕೆ ನೀತಿ ಖಂಡಿಸಿ ದಟ್ಟಗಳ್ಳಿ ವಾರ್ಡ್‍ನ ಯಶವಂತ್ ನೇತೃತ್ವದಲ್ಲಿ ದಟ್ಟಗಳ್ಳಿಯ ಅಮ್ಮ ಸಮುದಾಯ ಭವನದಲ್ಲಿ ಶನಿವಾರ 150 ಆಟೋ ಚಾಲಕರಿಗೆ ತಲಾ 1 ಲೀ. ಉಚಿತ ಪೆಟ್ರೋಲ್ ವಿತರಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು. ಕಾಂಗ್ರೆಸ್‍ನ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಗುರು ಪಾದಸ್ವಾಮಿ, ಬ್ಲಾಕ್ ಅಧ್ಯಕ್ಷ ಉಮಾಶಂಕರ್, ಚಂದ್ರು…
ಜಮೀನು ವಿವಾದ: ತಮ್ಮನಿಂದ ಅಣ್ಣನ ಕೊಲೆ
June 21, 2020ಹೆಚ್.ಡಿ.ಕೋಟೆ,ಜೂ.20- ಜಮೀನು ವಿವಾದ ತಾರಕ್ಕೇರಿ ತಮ್ಮನಿಂದ ಅಣ್ಣ ಹತ್ಯೆಯಾದ ಘಟನೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಗಂಗಾಧರ ಎಂಬಾತನೇ ತನ್ನ ಅಣ್ಣ ಮಹದೇವೇಗೌಡ (53) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮೃತನ ಮಗ ಶ್ರೀಕಾಂತ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಮಕ್ಕಳಿರುವ ಈ ಕುಟುಂಬಕ್ಕೆ ಸುಮಾರು 150ಕ್ಕೂ ಹೆಚ್ಚು ಎಕರೆ ಜಮೀನಿದ್ದರೂ ಕೇವಲ 6 ಎಕರೆ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆದು, ನ್ಯಾಯ ಪಂಚಾಯಿತಿಗಳು ನಡೆಯುತ್ತಿದ್ದವು ಎಂದು…
ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಸೂಚನೆ
June 21, 2020ಮೈಸೂರು,ಜೂ.20-ಬಿಪಿಎಲ್ ಪಡಿತರ ಚೀಟಿಗಳನ್ನು ಬಡತನ ರೇಖೆಗಿಂತ ಕೆಳಗಿ ರುವ ಬಡವರು ಹೊರತುಪಡಿಸಿ ಸರ್ಕಾರಿ/ ಸರ್ಕಾರದ ನಿಗಮ/ಮಂಡಳಿ/ಪ್ರಾಧಿಕಾರ/ ವಿಶ್ವವಿದ್ಯಾಲಯ/ ಸಂಸ್ಥೆಯ ಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತ ಕುಟುಂಬದವರು ಹೊಂದಿರುವುದು ಅಕ್ಷಮ್ಯ ಅಪರಾಧ. ಅಂತÀವರು ತಿಂಗಳೊಳಗಾಗಿ ಬಿಪಿಎಲ್ ಕಾರ್ಡ್ ಅನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಕೂಡಲೇ ಹಿಂದಿರುಗಿಸಿ ಕಾರ್ಡ್ ಅನ್ನು ರದ್ದುಪಡಿಸಿಕೊಳ್ಳತಕ್ಕದ್ದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. 1 ತಿಂಗಳ ನಂತರವೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಗ್ಗೆ ಮಾಹಿತಿ/ದೂರುಗಳು ಸ್ವೀಕೃತವಾದರೆ, ಅಂತಹ ಅಧಿಕಾರಿ/ನೌಕರರ ವಿರುದ್ಧ…
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 168 ವೆಂಟಿಲೇಟರ್, 3500 ಹಾಸಿಗೆ ಕಾಯ್ದಿರಿಸಲಾಗಿದೆ
June 20, 2020ಮೈಸೂರು, ಜೂ.19(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ 168 ವೆಂಟಿ ಲೇಟರ್ ಹಾಗೂ 3500ಕ್ಕೂ ಹೆಚ್ಚು ಹಾಸಿಗೆ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಿಯಮ ಸಡಿಲಿಕೆಯಿಂ ದಾಗಿ ದೆಹಲಿ, ಆಂಧ್ರಪ್ರದೇಶ, ರಾಜಸ್ತಾನ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ವಾಪಸ್ಸಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆ ಮಾರ್ಗದಲ್ಲಿ ದಿನಕ್ಕೆ ಸರಾಸರಿಯಂತೆ 110 ಮಂದಿ, ವಿಮಾನ ದಲ್ಲಿ 50ರಿಂದ 60…
ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜೆ; ಭಕ್ತರ ಪ್ರವೇಶ ನಿರ್ಬಂಧ
June 20, 2020ಮೈಸೂರು, ಜೂ.19(ಎಂಟಿವೈ)- ಕೊರೊನಾ ಸೋಂಕು ತಡೆ ನಿಟ್ಟಿನಲ್ಲಿ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಹಾಗೂ ವರ್ಧಂತಿ ದಿನದ ವಿಶೇಷ ಪೂಜೆಯಲ್ಲಿ ಭಕ್ತರು ಪಾಲ್ಗೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಜೂ.22ರಂದು ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ನೋಡಿಕೊಂಡು ಆಷಾಢ ಮಾಸದ ಎಲ್ಲಾ ದಿನ ಬೆಟ್ಟಕ್ಕೆ ಪ್ರವೇಶ ಬಂದ್ ಮಾಡುವ ಕುರಿತು ನಿರ್ಧಾರ ಪ್ರಕ ಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿವರ್ಷ ಆಷಾಢ ಮಾಸ ದಲ್ಲಿ ಚಾಮುಂಡಿಬೆಟ್ಟದಲ್ಲಿ…










