ಮೈಸೂರು, ಮೇ15 (ಎಂಟಿವೈ) – ಮೈಸೂರು ಮೃಗಾಲಯದಲ್ಲಿ ಪ್ರತಿವರ್ಷ ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳ ಜೀವನ ಕ್ರಮ, ಆಹಾರ ಪದ್ಧತಿ, ಜೀವವೈವಿಧ್ಯ, ಪರಿಸರ ರಕ್ಷಣೆ ವಿಷಯಗಳನ್ನು ಆಧರಿಸಿ ನಡೆಯುತ್ತಿದ್ದ `ಬೇಸಿಗೆ ಶಿಬಿರ’ ಈ ಬಾರಿ ಲಾಕ್‍ಡೌನ್‍ನಿಂದಾಗಿ ಆನ್‍ಲೈನ್ ರೂಪ ತಾಳಿದ್ದು, ಮೇ 28ರಿಂದ ಜೂನ್ 6ರವರೆಗೆ ಶಿಬಿರ ನಡೆಯಲಿದೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ `ಮೈಸೂರು ಮಿತ್ರ’ನೊಂದಿಗೆ ಶುಕ್ರವಾರ ಮಾತನಾಡಿ, ಮೃಗಾಲಯದ ಬೇಸಿಗೆ ಶಿಬಿರಕ್ಕೆ ಅದೆಷ್ಟು ಬೇಡಿಕೆ ಇತ್ತೆಂದರೆ, ನೂರಾರು ಮಂದಿ ಅವಕಾಶ ಸಿಗದೆ ವಾಪಸಾಗು ತ್ತಿದ್ದರು….
ಮೈಮುಲ್ ನೇಮಕ ಪ್ರಕ್ರಿಯೆ ಹೊಸದಾಗಿ ನಡೆಯಲಿ
May 16, 2020ಮೈಸೂರು, ಮೇ 15(ಆರ್‍ಕೆಬಿ)- ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಹುದ್ದೆಗಳ ಭರ್ತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ನಡೆಸಬೇಕು ಎಂದು ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಆಗ್ರಹಿಸಿದ್ದಾರೆ. ಮೈಸೂರಿನ ಸೀತಾವಿಲಾಸ ರಸ್ತೆಯಲ್ಲಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ನೇಮಕ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಹಣ ಪಡೆಯಲಾಗಿದೆ. ಹಾಗಾಗಿ ನೇಮಕ ಪ್ರಕ್ರಿಯೆಯ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದರು. ಈ ಸಂಬಂಧದ…
ಮೇ 19ರಿಂದ ತೆರಿಗೆ ಪಾವತಿಸಬಹುದು ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ
May 16, 2020ಮೈಸೂರು, ಮೇ 15- ಮೇ 19ರಿಂದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ ಕಚೇರಿಗಳಲ್ಲಿ ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸ ಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು. ಕೊರೊನಾ ಸೋಂಕು ಮೈಸೂರು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಗುಣ ವಾದ ನಿಟ್ಟಿನಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆಯ ಫೇಸ್‍ಬುಕ್ ಪೇಜ್‍ನಲ್ಲಿ ಮಾತನಾಡಿದ ಅವರು, ಮಂಗಳವಾರದಿಂದ ಆಸ್ತಿ ತೆರೆಗೆ ಪಾವತಿಸಬಹುದಾಗಿದ್ದು, ಜುಲೈವರೆಗೂ ತೆರಿಗೆ ಪಾವತಿಸಲು ಕಾಲಾವಾಶ…
ಸಣ್ಣ ರೈತರಿಗೆ ಸಾಲ, ವಲಸೆ ಕಾರ್ಮಿಕರಿಗೆ ಸುರಕ್ಷತೆ, ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ
May 15, 2020ನವದೆಹಲಿ, ಮೇ 14- ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, 9 ಪ್ರಮುಖ ನಿರ್ಧಾರ ಗಳನ್ನು ಘೋಷಿಸಲಾಗುವುದು. ಅದರಲ್ಲಿ 3 ವಲಸೆ ಕಾರ್ಮಿಕರಿಗೆ, 1 ಮುದ್ರಾ ಯೋಜನೆ ಯೊಂದಿಗೆ ಶಿಶು ಸಾಲ ಮತ್ತೊಂದು ರಸ್ತೆ ಬದಿ ವ್ಯಾಪಾರಿಗಳಿಗೆ ಮಗದೊಂದು ಬುಡಕಟ್ಟು ಜನಾಂಗದವರಿಗೆ, ಇನ್ನೊಂದು ಮಧ್ಯಮ ವರ್ಗದವರಿಗೆ ಹಾಗೂ 2 ನಿರ್ಧಾರ ಗಳು ಸಣ್ಣ ರೈತರನ್ನೊಳಗೊಂಡಿದೆ ಎಂದು ಪ್ರಾರಂಭದಲ್ಲಿ ಹೇಳಿದರು. ಗ್ರಾಮೀಣ ಭಾಗದ ಜನತೆಗೆ ಬಂಪರ್ ಕೊಡುಗೆ ನೀಡಿದ ಅವರು, ಗ್ರಾಮೀಣಾಭಿ ವೃದ್ಧಿಗೆ 4200 ಕೋಟಿ ರೂ.,…
ಮೈಸೂರಲ್ಲಿ ಆರಂಭವಾಯ್ತು ಮಾಮೂಲಿ ವ್ಯಾಪಾರ ವಹಿವಾಟು
May 15, 2020ಮೈಸೂರು, ಮೇ 14 (ಆರ್‍ಕೆ, ಎಂಟಿವೈ) -ಕೊರೊನಾ ಸಂಕಷ್ಟದಿಂದ ಮುಕ್ತವಾಗುತ್ತಿ ರುವ ಮೈಸೂರಿನಲ್ಲಿ ಸಹಜ ಸ್ಥಿತಿ ನಿರ್ಮಾಣ ವಾಗಿದ್ದು, ಸುಮಾರು 50 ದಿನಗಳ ನಂತರ ಪೂರ್ಣ ಪ್ರಮಾಣದ ವಾಣಿಜ್ಯ ವಹಿವಾಟು ಆರಂಭಗೊಂಡಿದೆ. ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್‍ಡೌನ್ ನಿರ್ಬಂಧ ವಿಧಿಸಿದ್ದರಿಂದ ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ, ಅಗತ್ಯವಲ್ಲದ ವಸ್ತುಗಳ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮೇ 3ರಿಂದ ನಗರದ ಪ್ರಮುಖ 91 ವಾಣಿಜ್ಯ ಮಾರ್ಗಗಳ ಹೊರತುಪಡಿಸಿ, ಉಳಿದೆಲ್ಲೆಡೆ ಎಲ್ಲಾ ರೀತಿಯ ಮಳಿಗೆಗಳನ್ನೂ ತೆರೆದು ವ್ಯಾಪಾರ ನಡೆಸಲು…
ಮೈಸೂರಲ್ಲಿ ಕೊರೊನಾ ಮುಕ್ತ ವೃದ್ಧ ಹೃದಯಾಘಾತದಿಂದ ಸಾವು
May 15, 2020ಮೈಸೂರು, ಮೇ 14(ಎಸ್‍ಬಿಡಿ)- ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಮೈಸೂರಿನ ವೃದ್ಧರೊಬ್ಬರು ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. ಮೈಸೂರಿನ ನಜರ್‍ಬಾದ್‍ನ 72 ವರ್ಷದ(ಪಿ-273) ವೃದ್ಧ, ಕೊರೊನಾ ಸೋಂಕು ಮುಕ್ತರಾಗಿದ್ದರಾದರೂ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪಿ-273 ವ್ಯಕ್ತಿಯು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ 4 ಬಾರಿ ಕೋವಿಡ್ ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿದೆ. ಹಾಗಾಗಿ ಇವರು…
ಎಪಿಎಂಸಿ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಸಂಪುಟ ಅಸ್ತು: ರೈತರು ತಮ್ಮ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಲು ಅವಕಾಶ
May 15, 2020ಬೆಂಗಳೂರು,ಮೇ 14-ವಿವಾದಿತ ಎಪಿಎಂಸಿ (ತಿದ್ದುಪಡಿ) ಕಾಯ್ದೆಗೆ ಸುಗ್ರೀವಾಜ್ಞೆ 2020ಕ್ಕೆ ಸಂಪುಟ ಅನುಮೋದನೆ ನೀಡಿದೆ. ರಾಜ್ಯಪಾಲರು ಈ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಬಳಿಕ ಕಳುಹಿಸಿಕೊಡುವಂತೆ ವಾಪಸು ಕಳುಹಿಸಿ ದ್ದರು. ಇಂದು ಸಂಪುಟ ಸಭೆ ಎಪಿಎಂಸಿ (ತಿದ್ದುಪಡಿ) ಕಾಯ್ದೆ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಈ ಸುಗ್ರೀವಾಜ್ಞೆ ಮೂಲಕ ಎರಡು ಸೆಕ್ಷನ್‍ಗಳಿಗೆ ತಿದ್ದುಪಡಿ ಮಾಡ ಲಾಗಿದೆ. ಅದರಂತೆ ಮಾರುಕಟ್ಟೆ ಸಮಿತಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರ ಇತ್ತು….
ಹಣ್ಣು, ತರಕಾರಿಗೆ ಹೆಕ್ಟೇರ್‍ಗೆ 15 ಸಾವಿರ ಪರಿಹಾರ
May 15, 2020ಬೆಂಗಳೂರು: ಸಂಪುಟ ಸಭೆ 1610 ಕೋಟಿ ಇದ್ದ ವಿಶೇಷ ಪ್ಯಾಕೇಜನ್ನು 1,777 ಕೋಟಿ ರೂ.ಗೆ ಹೆಚ್ಚಳ ಮಾಡಿದೆ. ಈ ಹಿಂದೆ 1,610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು ಎಂದರು. ಅದರಂತೆ 7 ಹಣ್ಣು ಬೆಳೆಗಳಾದ ಬಾಳೆ, ಪಪ್ಪಾಯ, ಟೇಬಲ್ ದ್ರಾಕ್ಷಿ, ಅಂಜೂರಾ, ಅನಾನಸ್, ಕಲ್ಲಂಗಡಿ/ ಕರ್ಜೂರಾ, ಬೋರೆ/ ಬೆಣ್ಣೆ ಹಣ್ಣು ಬೆಳೆಗಳಿಗೆ ಮತ್ತು 10 ಬಗೆಯ ವಿವಿಧ ತರಕಾರಿ ಬೆಳೆಗಳಾದ ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಹೂ ಕೋಸು, ಎಲೆ ಕೋಸು, ಸಿಹಿ ಕುಂಬಳಕಾಯಿ, ಬೂದು…
ರಾಜ್ಯದಲ್ಲಿ ಸಾವಿರದ ಗಡಿಗೆ ಕೊರೊನಾ ಸೋಂಕಿತರ ಸಂಖ್ಯೆ
May 15, 2020ಬೆಂಗಳೂರು, ಮೇ 14(ಕೆಎಂಶಿ)- ರಾಜ್ಯದಲ್ಲಿ ಸಾವಿರ ಗಡಿಗೆ (987) ಕೊರೊನಾ ಸೋಂಕು ತಲುಪಿದೆ. ಮುಂಬೈ, ಅಹಮದಾಬಾದ್, ದೆಹಲಿ ಹಾಗೂ ಅಜ್ಮೀರ್‍ನಿಂದ ಬಂದವರಿಂದ ಸೋಂಕು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ವಿದೇಶಿಗರು ಹಾಗೂ ತಬ್ಲಿಘಿಗಳಿಗೆ ಸೀಮಿತವಾಗಿದ್ದ ಸೋಂಕು ಈಗ ಲಾಕ್‍ಡೌನ್ ಸಡಿಲಿಕೆಯ ನಂತರ ಈ ಪಟ್ಟಣಗಳಿಂದ ರಾಜ್ಯಕ್ಕೆ ಬಂದವರಿಗೆ ತಗುಲಿದೆ. ಅದರಲ್ಲಿ ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿ, ಸಾವಿರ ಗಡಿ ತಲುಪುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಮೈಸೂರಿನಲ್ಲಿ ಕೊರೊನಾ ಸೋಂಕು ತಡೆಯುವ ಪ್ರಯತ್ನದಲ್ಲಿ ಯಶಸ್ವಿ ಹಾದಿ…
`ಸೇವಾಸಿಂಧು’ ಮಾಹಿತಿ, `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್ ಅಭಿಯಾನಕ್ಕೆ ಚಾಲನೆ
May 15, 2020ಮೈಸೂರು, ಮೇ 14(ಆರ್‍ಕೆಬಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ 1610 ಕೋಟಿ ರೂ. ಆರ್ಥಿಕ ನೆರವಿನ ಪ್ಯಾಕೇಜ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್‍ನ ಸಹಾಯ ಧನವನ್ನು ಸಾರ್ವಜನಿಕರು ಪಡೆದುಕೊಳ್ಳುವ ಬಗೆ, ಕೊರೊನಾ ನಿಯಂತ್ರಣಕ್ಕಾಗಿ `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್ ಹಾಗೂ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಪರಿ ಹಾರ ನಿಧಿಗೆ ದೇಣಿಗೆ ನೀಡುವ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಅಭಿಯಾನಕ್ಕೆ ಗುರುವಾರ ಚಾಲನೆ ದೊರೆ ಯಿತು. ಮೈಸೂರಿನ ಅಗ್ರಹಾರ ವೃತ್ತದಲ್ಲಿ…










