ಮೈಸೂರು

ಬಡಾವಣೆ ಅಭಿವೃದ್ಧಿ ಹಂತದಲ್ಲೇ ನಿವೇಶನ ಮಾರಾಟಕ್ಕೆ ಅವಕಾಶ ರಿಯಲ್ ಎಸ್ಟೇಟ್ ಪ್ರೋತ್ಸಾಹಿಸಲು ಕಾನೂನನ್ನೇ ಸಡಿಲ
ಮೈಸೂರು

ಬಡಾವಣೆ ಅಭಿವೃದ್ಧಿ ಹಂತದಲ್ಲೇ ನಿವೇಶನ ಮಾರಾಟಕ್ಕೆ ಅವಕಾಶ ರಿಯಲ್ ಎಸ್ಟೇಟ್ ಪ್ರೋತ್ಸಾಹಿಸಲು ಕಾನೂನನ್ನೇ ಸಡಿಲ

May 15, 2020

ಬೆಂಗಳೂರು, ಮೇ 14- ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮತ್ತು ಆ ಕ್ಷೇತ್ರದ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಕಾನೂನನ್ನೇ ಸಡಿಲಗೊಳಿಸಿದೆ. ನಗರ ಯೋಜನಾ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಈ ಮೂಲಕ ಲೇಔಟ್‍ಗಳು ಮೂಲಸೌಕರ್ಯ ಭಾಗಶಃ ಪೂರ್ಣಗೊಳಿಸಿದರೂ ನಿವೇಶನ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈವರೆಗೆ ಪೂರ್ಣ ಮೂಲಸೌಕರ್ಯ ಕಲ್ಪಿಸಿದ ನಂತರವಷ್ಟೇ ನಿವೇಶನ ಮಾರಾಟಕ್ಕೆ ಎನ್‍ಒಸಿ ನೀಡಲಾಗುತ್ತಿತ್ತು. ಬಡಾವಣೆ ನಿರ್ಮಾತೃಗಳು ಪೂರ್ಣ…

ಮೈಸೂರಲ್ಲಿ ಶೇ.40ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಆರಂಭ
ಮೈಸೂರು

ಮೈಸೂರಲ್ಲಿ ಶೇ.40ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಆರಂಭ

May 15, 2020

ಮೈಸೂರು, ಮೇ 14 (ಆರ್‍ಕೆ)- ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಲಾಕ್‍ಡೌನ್ ಸಡಿಲಿಕೆಯಾಗಿದ್ದಾಗ್ಯೂ ಮೈಸೂರಲ್ಲಿ ಖಾಸಗಿ ಆಸ್ಪತ್ರೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಸೇವೆ ಆರಂಭಿಸಿಲ್ಲ. ವೈದ್ಯಕೀಯ ಸೇವೆ ಅತ್ಯಂತ ಅವಶ್ಯಕವಾಗಿರುವುದ ರಿಂದ ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್ ಹಾಗೂ ಡಯಾಗ್ನೋಸ್ಟಿಕ್ ಸೆಂಟರ್‍ಗಳನ್ನು ಮುಚ್ಚಬಾರದೆಂದು ಸರ್ಕಾರ ಪದೇ ಪದೆ ಹೇಳಿತ್ತು. ಅಲ್ಲದೆ ಬುಧವಾರ ಆರೋಗ್ಯ ಸಚಿವ ಶ್ರೀರಾಮುಲು ಅವರು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಮತ್ತು ತಜ್ಞರ ಜೊತೆ ವೀಡಿಯೋ ಸಂವಾದ ನಡೆಸಿ…

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಭೂಮಿಪೂಜೆ
ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಭೂಮಿಪೂಜೆ

May 15, 2020

ಮೈಸೂರು, ಮೇ 14 (ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧದ ನಡುವೆಯೂ ಶಾಸಕ ಎಲ್.ನಾಗೇಂದ್ರ ಗುರುವಾರ ಚಾಮರಾಜ ವಿಧಾನಸಭಾ ಕ್ಷೇತ್ರ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು. ಮೈಸೂರಿನ ಇರ್ವಿನ್ ರಸ್ತೆಯ ಸೋಮ ವಂಶ ಕ್ಷತ್ರಿಯ ಸೇವಾ ಸಂಘದ ಶ್ರೀ ಸೀತಾ ರಾಮಮಂದಿರದ ಮಹಡಿ ಮೇಲೆ ಮೆಟಲ್ ಟ್ರೆಸ್ ನಿರ್ಮಾಣ ಮಾಡುವ 10 ಲಕ್ಷ ರೂ. ಕಾಮಗಾರಿ, ಮೇದರ ಬ್ಲಾಕಿನ ಗಣಪತಿ ಹಾಗೂ ಮಾರಮ್ಮ ದೇವಸ್ಥಾನಗಳ ಜೀರ್ಣೋ ದ್ಧಾರ ಕಾಮಗಾರಿ (3 ಲಕ್ಷ ರೂ.), ಮೈಸೂರು ವಿಶ್ವವಿದ್ಯಾನಿಲಯದ…

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ
ಮೈಸೂರು

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ

May 15, 2020

ಮೈಸೂರು, ಮೇ 14(ಪಿಎಂ)- ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು, ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಆ ಮೂಲಕ ರೈತರ ಮರಣ ಶಾಸನ ಬರೆಯಲಿದೆ. ಭೂ ಸುಧಾ ರಣಾ ಕಾಯ್ದೆಯನ್ನೂ ತಿದ್ದುಪಡಿ ಮಾಡಿ ಜಾರಿಗೆ ತರಲು ಮುಂದಾಗಿರುವ ಸರ್ಕಾರದ ಕ್ರಮ…

ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಯೋಜನೆ ಮುಂದುವರಿಸುವಂತೆ ಮನವಿ
ಮೈಸೂರು

ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಯೋಜನೆ ಮುಂದುವರಿಸುವಂತೆ ಮನವಿ

May 15, 2020

ಮೈಸೂರು, ಮೇ 14- ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಯೋಜನೆಯನ್ನು 2020-21ನೇ ಸಾಲಿನಿಂದ ಸ್ಥಗಿತಗೊಳಿಸುವ ತೀರ್ಮಾನ ಮಾಡಿರುವ ಸರ್ಕಾರದ ನಿರ್ಧಾರವನ್ನು ತಕ್ಷಣ ವಾಪಸ್ಸು ಪಡೆಯುವಂತೆ ಮೈಸೂರು ಜಿಲ್ಲಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳ ಎಂಟು ಒಕ್ಕೂಟಗಳು ಇಂದು (ಮೇ 14) ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅವರಿಗೆ ಮನವಿ ಪತ್ರ ಸಲ್ಲಿಸಿತು. ಈ ಕುರಿತು ಮುಖ್ಯಮಂತ್ರಿಗಳಿಗೆ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಪತ್ರ ಬರೆದಿರುವ ಒಕ್ಕೂಟಗಳು ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದೊಂದು ಸಾಂತ್ವನ ಕೇಂದ್ರಗಳಿವೆ. ಈ…

ನಕಲಿ ‘ನಾಮ’ಫಲಕ: ವ್ಯಕ್ತಿ ಬಂಧನ, ಬಿಡುಗಡೆ
ಮೈಸೂರು

ನಕಲಿ ‘ನಾಮ’ಫಲಕ: ವ್ಯಕ್ತಿ ಬಂಧನ, ಬಿಡುಗಡೆ

May 15, 2020

ಮೈಸೂರು, ಮೇ 14 (ಆರ್‍ಕೆ)- ನಕಲಿ ಸಂಘಟನೆಯ ನಾಮಫಲಕ ಹಾಗೂ ಲಾಂಛನ ಅಳವಡಿಸಿಕೊಂಡು ಓಡಾಡುತ್ತಿದ್ದ ಕಾರನ್ನು ವಶಪಡಿಸಿಕೊಂಡಿರುವ ಉದಯ ಗಿರಿ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮೈಸೂರಿನ ಅಜೀಜ್ ಸೇಠ್ ನಗರ ನಿವಾಸಿ ಜುಲ್ಫಿಕರ್ ಅಲಿಯಾಸ್ ಜುಲ್ಲಾ (45) ಬಂಧಿತ ಆರೋಪಿಯಾಗಿದ್ದು, ಮಹೀಂದ್ರಾ ಎಕ್ಸ್‍ಯುವಿ (ಕೆಎ 23, ಎನ್ 1314) ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಷನಲ್ ಆಂಟಿ ಕರಪ್ಸನ್ ಟೈಗರ್ ಸಂಸ್ಥಾನ ರಾಜ್ಯಾಧ್ಯಕ್ಷ ಎಂಬ ನಾಮಫಲಕ ಮತ್ತು ತ್ರಿಭುಜಾಕಾರದ ಹಸಿರು ಲಾಂಛನ ಹಾಗೂ ಹುಲಿ ಚಿತ್ರವನ್ನು ಕಾರಿನ ಮುಂಭಾಗ…

ಇಂದು, ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ಇಂದು, ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ

May 15, 2020

ಮೈಸೂರು,ಮೇ 14-ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬೆಳಗೊಳ, ಹೊಂಗಳ್ಳಿ ಯಂತ್ರಾಗಾರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದ ರಿಂದ ಮೇ 15 ಮತ್ತು 16ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಾರ್ಡ್ ನಂ.1ರಿಂದ 6, ವಾರ್ಡ್ ನಂ.20, 23, 38, ವಾರ್ಡ್ ನಂ. 42ರಿಂದ 45, ವಾರ್ಡ್ ನಂ.47ರ ವ್ಯಾಪ್ತಿಯ ಡಿಎಂಎ ಪ್ರದೇಶಗಳಾದ ಹೆಬ್ಬಾಳ, ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು, ಕೆ.ಜಿ.ಕೊಪ್ಪಲು, ಲೋಕನಾಯಕ ನಗರ, ಬೃಂದಾವನ ಬಡಾವಣೆ, ಒಂಟಿಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ಶಾರದಾದೇವಿ ನಗರ, ಸರಸ್ವತಿಪುರಂ,…

ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ಸಾಲ
ಮೈಸೂರು

ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ಸಾಲ

May 14, 2020

ನವದೆಹಲಿ, ಮೇ13- ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ವ್ಯವಸ್ಥೆಯ ಚೇತರಿಕೆಗಾಗಿ ಮಂಗಳವಾರ ಘೋಷಿ ಸಿದ್ದ `ವಿಶೇಷ ಆರ್ಥಿಕ ಪ್ಯಾಕೇಜ್’ ಮೂಲಕ ಬಡವರು, ಶ್ರಮಿಕರು, ರೈತರಿಗೆ ಭಾರೀ ಅನುಕೂಲ ಮಾಡಿಕೊಡ ಲಾಗುತ್ತಿದೆ. ಬುಧವಾರ ಸಂಜೆ 4ಕ್ಕೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ ಭಾಷಣದಲ್ಲಿ ಘೋಷಿಸಿದ್ದ `ಆತ್ಮ ನಿರ್ಭರ ಭಾರತ’ದ ವಿಶೇಷ ಆರ್ಥಿಕ ಪ್ಯಾಕೇಜ್‍ನ ಸ್ವರೂಪಗಳನ್ನು ಇಂದು ವಿವರವಾಗಿ ಬಿಡಿಸಿಟ್ಟರು….

ಸಾಮಾಜಿಕ ಅಂತರ ಕಾಯ್ದುಕೊಂಡು ಜುಲೈ 30, 31ರಂದು ಸಿಇಟಿ ಪರೀಕ್ಷೆ
ಮೈಸೂರು

ಸಾಮಾಜಿಕ ಅಂತರ ಕಾಯ್ದುಕೊಂಡು ಜುಲೈ 30, 31ರಂದು ಸಿಇಟಿ ಪರೀಕ್ಷೆ

May 14, 2020

ಬೆಂಗಳೂರು, ಮೇ 13(ಕೆಎಂಶಿ)- ಸಿಇಟಿ ಪರೀಕ್ಷೆ ಯನ್ನು ಜುಲೈ 30 ಮತ್ತು 31 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್‍ನಾರಾಯಣ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಮೊದಲ ವಾರದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದರು. ದ್ವಿತೀಯ ಪಿಯುಸಿಯಲ್ಲಿ ಬಾಕಿ ಇರುವ ಒಂದು ಪರೀಕ್ಷೆಯನ್ನು ಆದಷ್ಟು ಬೇಗ ನಡೆಸಲಾಗುವುದು. ಮೇ 31ರೊಳಗೆ ಆನ್‍ಲೈನ್ ಮೂಲಕ ಪಾಠಗಳನ್ನು ಮುಗಿಸಲು ಸೂಚನೆ…

ಮೈಸೂರಿನ ವಾಣಿಜ್ಯ ಮಾರ್ಗಗಳಲ್ಲಿ ಇಂದಿನಿಂದ ಎಲ್ಲಾ ರೀತಿಯ ವಹಿವಾಟು
ಮೈಸೂರು

ಮೈಸೂರಿನ ವಾಣಿಜ್ಯ ಮಾರ್ಗಗಳಲ್ಲಿ ಇಂದಿನಿಂದ ಎಲ್ಲಾ ರೀತಿಯ ವಹಿವಾಟು

May 14, 2020

ಮೈಸೂರು, ಮೇ 13- ಕಳೆದ 14 ದಿನಗಳಿಂದ ಯಾವುದೇ ಕೊರೊನಾ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ ಸೇರಿ ದಂತೆ ಪ್ರಮುಖ ಎಲ್ಲಾ ವಾಣಿಜ್ಯ ಮಾರ್ಗಗಳಲ್ಲೂ ಎಲ್ಲಾ ರೀತಿಯ ವ್ಯಾಪಾರ ವಹಿ ವಾಟಿಗೆ ಅನುಮತಿ ನೀಡಿ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಬುಧವಾರ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಗುರುವಾರದಿಂದ ಮೈಸೂರು ನಗರದಲ್ಲಿ ವ್ಯಾಪಾರ ವಹಿವಾಟು ಕಳೆಕಟ್ಟಲಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಾಗೂ…

1 575 576 577 578 579 1,611
Translate »