ಮೈಸೂರು,ಮೇ 13(ಎಂಟಿವೈ)- ರಾಜ್ಯದ ಗ್ರೀನ್ ಝೋನ್ ಜಿಲ್ಲೆಗಳಲ್ಲೂ ಕೊರೊನಾ ಸೋಂಕಿತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಾ ಆತಂಕ ಮೂಡಿಸುತ್ತಿದ್ದರೂ, ಮೈಸೂರಲ್ಲಿ ಕೊರೊನಾ ಕಾರ್ಮೋಡ ನೇಪಥ್ಯಕ್ಕೆ ಸರಿಯುತ್ತಿದೆ. ಇಂದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡು ಗಡೆ ಹೊಂದಿದ್ದು, ಮತ್ತಿಬ್ಬರು ಗುಣಮುಖ ರಾದರೆ ಮೈಸೂರು ಕೊರೊನಾ ಮುಕ್ತ ಜಿಲ್ಲೆಯಾಗಲಿದೆ. ಇನ್ನೊಂದೆಡೆ ಕಂಟೇ ನ್ಮೆಂಟ್ ಝೋನ್‍ಗಳ ಸಂಖ್ಯೆಯೂ ಕಡಿಮೆ ಯಾಗುತ್ತಿವೆ. ಆ ಬಡಾವಣೆಗಳಲ್ಲಿನ ನಿರ್ಬಂಧ ಸಡಿಲಿಕೆಯಾಗಿವೆ. ಆ ಮೂಲಕ ರೆಡ್ ಝೋನ್‍ನಿಂದ ಆರೆಂಜ್ ಝೋನ್‍ಗೆ ಬಡ್ತಿ ಪಡೆಯಲು ಮೈಸೂರು ಜಿಲ್ಲೆಗೆ ಒಂದೇ…
ಇಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ
May 14, 2020ಖಾಸಗಿ ಆಸ್ಪತ್ರೆಗಳಿಗೆ ವಿಧಿಸಿದ್ದ ನಿರ್ಬಂಧ ಸಡಿಲ ಬೆಂಗಳೂರು, ಮೇ 13- ಖಾಸಗಿ ಆಸ್ಪತ್ರೆಗಳಿಗೆ ವಿಧಿಸಿದ್ದ ಕೆಲವು ನಿರ್ಬಂಧಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಗುರುವಾರ ದಿಂದ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಆರಂಭಿಸಲು ಆಸ್ಪತ್ರೆಗಳ ಆಡಳಿತ ಮಂಡಳಿಗಳು ಒಪ್ಪಿಗೆ ಸೂಚಿಸಿವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು. ವಿಕಾಸ ಸೌಧದಲ್ಲಿ 43 ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ತಜ್ಞರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಿಗೆ…
ರಾಜ್ಯದಲ್ಲಿ ಮೇ 17ರ ನಂತರ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ಸಾಧ್ಯತೆ
May 14, 2020ಬೆಂಗಳೂರು: ಮೂರನೇ ಹಂತದ ಲಾಕ್‍ಡೌನ್ ಮುಗಿಯುತ್ತಿ ದ್ದಂತೆ ರಾಜ್ಯದಲ್ಲಿ ಕ್ರೀಡಾ ಇಲಾಖೆಯಡಿ ಬರುವ ಫಿಟ್ನೆಸ್ ಸೆಂಟರ್‍ಗಳು, ಜಿಮ್‍ಗಳು ಮತ್ತು ಗಾಲ್ಫ್ ಕ್ಲಬ್ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. ಇದೇ 17ರ ನಂತರ ರಾಜ್ಯದಲ್ಲಿ ಕ್ರೀಡಾ ಇಲಾಖೆಯಡಿ ಬರುವ ಫಿಟ್ನೆಸ್ ಸೆಂಟರ್‍ಗಳು, ಜಿಮ್‍ಗಳನ್ನು ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದು,…
ಹತ್ತು ವರ್ಷ ಶಾಸಕರಾಗಿ ಏನೊಂದೂ ಅಭಿವೃದ್ಧಿ ಮಾಡದ ಎಂ.ಕೆ.ಸೋಮಶೇಖರ್
May 14, 2020ಮೈಸೂರು, ಮೇ 13(ಆರ್‍ಕೆಬಿ)- ಬಿಜೆ ಪಿಯ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಎರಡು ಬಾರಿ ಶಾಸಕರಾಗಿ 10 ವರ್ಷ ಏನೊಂದೂ ಅಭಿವೃದ್ಧಿ ಕೆಲಸ ಮಾಡದ ಎಂ.ಕೆ.ಸೋಮಶೇಖರ್, ಸೀವೆಜ್ ಫಾರಂ ಸಮಸ್ಯೆಯನ್ನು ಕಿಂಚಿತ್ತು ಬಗೆಹರಿಸದೆ ಕಾಲ ಹರಣ ಮಾಡಿದವರು. ಈಗ ಸೀವೆಜ್ ಫಾರ್ಮ್ ವಿಚಾರದಲ್ಲಿ ಅನಗತ್ಯವಾಗಿ ಶಾಸಕ ಎಸ್.ಎ.ರಾಮದಾಸ್ ಅವರ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು ಕಿಡಿಕಾರಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸೀವೆಜ್ ಫಾರಂ…
ಕೇರಳಕ್ಕೆ 250 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ
May 14, 2020ಮೈಸೂರು, ಮೇ 13 (ಆರ್‍ಕೆ) -ಅಕ್ರಮವಾಗಿ 250 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂ ದನ್ನು ವಶಪಡಿಸಿಕೊಂಡಿರುವ ನಂಜನಗೂಡು ಚೆಕ್ ಪೋಸ್ಟ್ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮಂಗಳವಾರ ಸಂಜೆ 500 ಮೂಟೆ (250 ಕ್ವಿಂಟಾಲ್) ಅಕ್ಕಿ ತುಂಬಿದ ಲಾರಿಯನ್ನು ನಂಜನಗೂಡು ಸಮೀ ಪದ ಹೆಜ್ಜಿಗೆ ಸೇತುವೆ ಬಳಿಯ ಚೆಕ್‍ಪೋಸ್ಟ್‍ನಲ್ಲಿ ಕರ್ತವ್ಯನಿರತ ಅಧಿಕಾರಿಗಳು ಪರಿಶೀಲಿಸಿದಾಗ ದಾಖಲೆ ಗಳಿಲ್ಲದೆ ಕೇರಳಾಗೆ ಅಕ್ಕಿ ಸಾಗಿಸುತ್ತಿದ್ದುದು ತಿಳಿಯಿತು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು, ಕಿರು ಗಾವಲು ಗ್ರಾಮದ ರೈಸ್ ಮಿಲ್‍ನಿಂದ ಕೇರಳ ನೋಂದಣಿ…
ವಿಶೇಷ ಪ್ಯಾಕೇಜ್‍ನಲ್ಲಿ ರೈತರು, ಕಾರ್ಮಿಕರಿಗೆ ಹೆಚ್ಚು ಹಣ ನೀಡಬೇಕು
May 14, 2020ಮೈಸೂರು, ಮೇ 13(ಆರ್‍ಕೆ)- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‍ನಲ್ಲಿ ರೈತರು ಹಾಗೂ ಕಾರ್ಮಿಕ ವರ್ಗಕ್ಕೆ ಹೆಚ್ಚು ಹಣವನ್ನು ಒದಗಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ. ಮೈಸೂ ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಮಾರಣಾಂತಿಕ ಸೋಂಕಿನಿಂದ ಕೃಷಿ ಮತ್ತು ಆಹಾರ ಉತ್ಪನ್ನಗಳ ಅವಶ್ಯಕತೆ ಎಷ್ಟಿದೆ ಎಂಬುದು ತಿಳಿದಿದೆ. ಕೃಷಿ ಕಾರ್ಮಿಕರ ಪ್ರಾಮುಖ್ಯತೆಯನ್ನು ಕೋವಿಡ್-19 ಲಾಕ್‍ಡೌನ್ ಸ್ಪಷ್ಟಪಡಿಸಿದೆ ಎಂದರು. ರೈತರು, ಗುಡಿ ಕೈಗಾರಿಕೆ…
ಮಣಿವಣ್ಣನ್ ವರ್ಗಾವಣೆ ಹಿಂಪಡೆಯಲು ಕಾರ್ಮಿಕ ಸಂಘಟನೆಗಳ ಮನವಿ
May 14, 2020ಮೈಸೂರು, ಮೇ 13(ಆರ್‍ಕೆಬಿ)- ಕಾರ್ಮಿಕ ಇಲಾಖೆ ಕಾರ್ಯ ದರ್ಶಿಯಾಗಿದ್ದ ಮಣಿವಣ್ಣನ್ ವರ್ಗಾವಣೆ ಆದೇಶ ಹಿಂಪಡೆಯು ವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ಗೃಹ ಸಚಿವಾಲಯ, `ವಿಕೋಪ ನಿರ್ವಹಣಾ ಕಾಯ್ದೆ-2005’ರಡಿ ಮಾ.29ರಂದು ಹೊರಡಿಸಿದ ಮಾರ್ಗಸೂಚಿಯಂತೆ ಲಾಕ್‍ಡೌನ್ ವೇಳೆ ಕಾರ್ಮಿಕರಿಗೆ ವೇತನ ನೀಡಬೇಕು, ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಏ.13ರಂದು ಹೊರಡಿಸಿದ್ದ ಆದೇಶ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ರಾಜ್ಯದ ಕಂಪನಿಗಳ ಮಾಲೀಕರ ಲಾಬಿ ಈಗ ಅವರನ್ನು ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದೆ….
ಇಂದು ಶಾಸಕ ರಾಮದಾಸ್‍ರಿಂದ ಜಾಗೃತಿ ಕಾರ್ಯಕ್ರಮ
May 14, 2020ಮೈಸೂರು, ಮೇ 13- ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ಘೋಷಿಸಿರುವ 1610 ಕೋಟಿ ರೂ.ಗಳ ಪ್ಯಾಕೇಜ್ ಪಡೆ ಯುವ ಬಗ್ಗೆ, `ಆರೋಗ್ಯ ಸೇತು’ ಆಪ್ ಡೌನ್‍ಲೋಡ್ ಮಾಡಿ ಕೊಳ್ಳುವುದು, ಪ್ರಧಾನ ಮಂತ್ರಿ ಕೇರ್ ಫಂಡ್ ಹಾಗೂ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಸಮರ್ಪಿಸುವ ಬಗ್ಗೆ ಶಾಸಕ ಎಸ್.ಎ. ರಾಮ ದಾಸ್ ನೇತೃತ್ವದಲ್ಲಿ ಕೆ.ಆರ್.ವಿಧಾನಸಭಾ ಕ್ಷೇತ್ರದಾದ್ಯಂತ ಮೇ 14ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಗ್ರಹಾರ ವೃತ್ತದಲ್ಲಿ ಬೆಳಿಗ್ಗೆ 9.45ಕ್ಕೆ…
ಕಣಿ ಹೇಳುವ ‘ಕೊರವಂಜಿ’ ಕುಟುಂಬಗಳಿಗೆ ನೆರವಾದ ದಂಪತಿ
May 14, 2020ಮೈಸೂರು, ಮೇ 13(ಆರ್‍ಕೆಬಿ)- ಮೈಸೂರಿನ ಖಾಸಗಿ ಕಂಪ ನಿಯ ನಿವೃತ್ತ ನೌಕರ ಸುರೇಶ್ ಸುಬ್ಬರಾವ್ ಮತ್ತು ನ್ಯೂರಾಲ ಜಿಸ್ಟ್ ಡಾ.ರತ್ನವಲ್ಲಿ ದಂಪತಿ ಮೈಸೂರಿನ ಬನ್ನಿಮಂಟಪದ ಯಲ್ಲಮ್ಮ ಕಾಲೋನಿಯಲ್ಲಿ 62 ಕೊರವಂಜಿ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ನೀಡುವ ಮೂಲಕ ನೆರವಾಗಿದ್ದಾರೆ. `ಕೊರವಂಜಿಗಳ ಬದುಕು ಕಿತ್ತುಕೊಂಡ ಕೊರೊನಾ’- `ಕಣಿ ಹೇಳುತ್ತಾ ಬೀದಿ ಸುತ್ತುವ ಕೊರವಂಜಿಗಳು ಲಾಕ್‍ಡೌನ್‍ನಲ್ಲಿ ಮನೆಯಲ್ಲಿಯೇ ಲಾಕ್’ `ಮೈಸೂರು ಮಿತ್ರ’ನ ವರದಿ ಓದಿ ಮನ ಕರಗಿತು. ಹೀಗಾಗಿ ಅವರಿಗೆ ನೆರವಾಗಬೇಕೆಂದು ನಿರ್ಧರಿಸಿದ್ದಾಗಿ ಸುರೇಶ್ ಸುಬ್ಬರಾವ್ `ಮೈಸೂರು ಮಿತ್ರ’ನಿಗೆ…
ಕಾರ್ಮಿಕ ಕಾಯ್ದೆ ದುರ್ಬಲಗೊಳಿಸದಂತೆ ಆಗ್ರಹಿಸಿ ಪ್ರತಿಭಟನೆ
May 14, 2020ಮೈಸೂರು, ಮೇ 13(ಪಿಎಂ)- ಲಾಕ್ ಡೌನ್ ನೆಪದಲ್ಲಿ ಕಾರ್ಮಿಕ ಕಾಯ್ದೆ ದುರ್ಬಲ ಗೊಳಿಸುವ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳಬಾರದು. ವಲಸೆ ಕಾರ್ಮಿಕರು ಅವರ ಊರಿಗೆ ಹೋಗಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ `ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್’ನ (ಎಐ ಯುಟಿಯುಸಿ) ಮೈಸೂರು ಜಿಲ್ಲಾ ಸಮಿತಿ ಯಿಂದ ಬುಧವಾರ ನಗರದಲ್ಲಿ ಪ್ರತಿ ಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾ ಕಾರರು, ಕೊರೊನಾ ನೆಪದಲ್ಲಿ ಕೇಂದ್ರ, ರಾಜ್ಯ…










