ಮೈಸೂರು

ಅಕ್ರಮ ಮರಳು ಸಾಗಣೆ: ಟಿಪ್ಪರ್ ವಶ, ಚಾಲಕ ಪರಾರಿ
ಮೈಸೂರು

ಅಕ್ರಮ ಮರಳು ಸಾಗಣೆ: ಟಿಪ್ಪರ್ ವಶ, ಚಾಲಕ ಪರಾರಿ

May 9, 2020

ಹುಣಸೂರು,ಮೇ 8(ಕೆಕೆ)-ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಅನ್ನು ತಹಶೀಲ್ದಾರ್ ವಶಕ್ಕೆ ಪಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ. ಶುಕ್ರವಾರ ಸಂಜೆ ಕಾರ್ಯ ನಿಮಿತ್ತ ತಹಶೀಲ್ದಾರ್ ಬಸವರಾಜು ಅವರು ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ, ನಗರಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಪಿರಿಯಪಟ್ಟಣ ಕಡೆಯಿಂದ ನಗರ ಪ್ರವೇಶಿಸಿ ಮೈಸೂರಿನಯತ್ತ ಮರಳು ಸಾಗಿಸುತ್ತಿದ್ದ ಟಿಪ್ಪರ್ (ಕೆಎ18 ಬಿ5668) ಅನ್ನು ನಗರದ ಅರಸು ಪ್ರತಿಮೆ ಬಳಿ ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದು ಬೆಳಕಿಗೆ ಬಂದಿದೆ. ಸ್ಥಳದಲ್ಲೇ ವಾಹನ ನಿಲ್ಲಿಸಿ, ಚಾಲಕ ಪರಾರಿಯಾಗಿ ದ್ದಾನೆ….

ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆ: 11 ಮಂದಿ ಸಾವು
ಮೈಸೂರು

ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆ: 11 ಮಂದಿ ಸಾವು

May 8, 2020

ವಿಶಾಖಪಟ್ಟಣಂ, ಮೇ 7- ಮೊದಲೇ ಕೊರೊನಾ ವೈರಸ್ ಸೋಂಕಿನಿಂದ ಸಂಕಷ್ಟ ಎದುರಿಸುತ್ತಿರುವ ಆಂಧ್ರ ಪ್ರದೇಶದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ವಿಷಾನಿಲ ಸೋರಿಕೆಯಿಂದ 11 ಮಂದಿ ಮೃತಪಟ್ಟು, ಸಾವಿರಾರು ಮಂದಿ ಅಸ್ವಸ್ಥಗೊಂಡಿರುವ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ. ಈ ದುರಂತದಲ್ಲಿ ಈವರೆಗಿನ ಮಾಹಿತಿ ಯಂತೆ 11 ಮಂದಿ ಮೃತಪಟ್ಟಿದ್ದು, 200 ಮಂದಿ ತೀವ್ರ ಅಸ್ವಸ್ಥಗೊಂಡಿ ದ್ದಾರೆ. 80 ಮಂದಿಯನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅಧಿಕೃತ ಮಾಹಿತಿಯಂತೆ 1500ಕ್ಕೂ ಹೆಚ್ಚು ಮಂದಿ ವಿವಿಧ…

ಪಠ್ಯಕ್ರಮ ಶೇ.30ರಷ್ಟು ಕಡಿತ
ಮೈಸೂರು

ಪಠ್ಯಕ್ರಮ ಶೇ.30ರಷ್ಟು ಕಡಿತ

May 8, 2020

ಬೆಂಗಳೂರು, ಮೇ 7(ಕೆಎಂಶಿ)- ಕೋವಿಡ್ ಲಾಕ್ ಡೌನ್‍ನಿಂದ ಏರುಪೇರಾಗಿರುವ ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಪೂರ್ಣಗೊಳಿಸಲು ಶೇ.30ರಷ್ಟು ಪಠ್ಯಕ್ರಮ (ಸಿಲಬಸ್) ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ರಾಜ್ಯ, ರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಮುಂದಿನ ಆಗಸ್ಟ್, ಸೆಪ್ಟೆಂಬರ್‍ವರೆಗೂ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಪ್ರಸಕ್ತ ಸಾಲಿನ 2020-21 ಶೈಕ್ಷಣಿಕ ವರ್ಷ ನಿಗದಿತ ಮಾರ್ಚ್- ಏಪ್ರಿಲ್ ಮೇ ತಿಂಗಳಲ್ಲೇ ಪೂರ್ಣಗೊಳ್ಳಬೇಕು. ಇದರಲ್ಲಿ ಯಾವುದೇ ವ್ಯತ್ಯಾಸಗಳಾಗಬಾರದೆಂಬ ಉದ್ದೇಶದಿಂದ ಪಠ್ಯಕ್ರಮವನ್ನೇ ಕಡಿತಗೊಳಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಶೇ.70ರಷ್ಟು…

ಕೊಡವ ಕೌಟುಂಬಿಕ ಹಾಕಿ ನಮ್ಮೆ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ
ಮೈಸೂರು

ಕೊಡವ ಕೌಟುಂಬಿಕ ಹಾಕಿ ನಮ್ಮೆ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ

May 8, 2020

ಮಡಿಕೇರಿ, ಮೇ 7- ಕೊಡವ ಕೌಟುಂಬಿಕ ಹಾಕಿ ಉತ್ಸವದ ಪಿತಾಮಹ ಎಂದೇ ಜನಜನಿತರಾಗಿದ್ದ ಕೊಡಗಿನ ಪಾಂಡಂಡ ಕುಟ್ಟಪ್ಪ(86) ಅವರು ಗುರುವಾರ ಬೆಂಗ ಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಪಾಂಡಂಡ ಕುಟ್ಟಪ್ಪ ಅವರು ಕೊಡಗಿ ನಲ್ಲಿ ಹಾಕಿ ಪಂದ್ಯಾವಳಿಗೆ ಕಾಯಕಲ್ಪ ನೀಡುವ ಮೂಲಕ ಕೊಡವ ಕುಟುಂಬ ಗಳ ನಡುವೆ ಹಾಕಿ ಪಂದ್ಯಾವಳಿ ಆಯೋ ಜಿಸಿ, ನೂರಾರು ಹಾಕಿಪಟುಗಳು ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟ…

ಮೈಸೂರು ಪಾಲಿಕೆ ವ್ಯಾಪ್ತಿ ಆಸ್ತಿ ಕಂದಾಯ ಪಾವತಿಗೆ 3 ತಿಂಗಳ ಕಾಲಾವಕಾಶ
ಮೈಸೂರು

ಮೈಸೂರು ಪಾಲಿಕೆ ವ್ಯಾಪ್ತಿ ಆಸ್ತಿ ಕಂದಾಯ ಪಾವತಿಗೆ 3 ತಿಂಗಳ ಕಾಲಾವಕಾಶ

May 8, 2020

ಮೈಸೂರು, ಮೇ 7(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ಇರುವುದರಿಂದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿನ ಆಸ್ತಿ ಕಂದಾಯ ಪಾವತಿಗೆ ಮೂರು ತಿಂಗಳ ಕಾಲಾ ವಕಾಶ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರು ಮಹಾ ನಗರ ಪಾಲಿಕೆ ಹಳೇ ಕೌನ್ಸಿಲ್ ಹಾಲ್‍ನಲ್ಲಿ ಕೋವಿಡ್-19 ಸೋಂಕು ನಿಯಂತ್ರಣ, ಕುಡಿಯುವ ನೀರು, ಅಭಿವೃದ್ಧಿ ಯೋಜ ನೆಗಳ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮ ದಾಸ, ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಮೇಯರ್ ತಸ್ನೀಂ,…

ಮುಡಾದಿಂದ ಶೀಘ್ರ 6 ನೂತನ ಬಡಾವಣೆ ನಿರ್ಮಾಣ
ಮೈಸೂರು

ಮುಡಾದಿಂದ ಶೀಘ್ರ 6 ನೂತನ ಬಡಾವಣೆ ನಿರ್ಮಾಣ

May 8, 2020

ಮೈಸೂರು,ಮೇ 7(ವೈಡಿಎಸ್)-ಮುಡಾದಿಂದ 6 ನೂತನ ಬಡಾವಣೆಗಳ ನಿರ್ಮಾಣ ಸಂಬಂಧ ಶೀಘ್ರ ದಲ್ಲಿಯೇ ನಿರ್ಧಾರ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಭರವಸೆ ನೀಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜೊತೆಗೂಡಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಮುಡಾದಿಂದ ಕೈಗೆತ್ತಿಕೊಳ್ಳು ತ್ತಿರುವ ಯೋಜನೆಗಳು, ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ. ರಾಮ ದಾಸ್ ಹಾಗೂ ಎಲ್.ನಾಗೇಂದ್ರ ಅವರು, ಅಧಿಕಾರಿ ಗಳು…

ಕೊರೊನಾ ಪರಿಹಾರ ನಿಧಿಗೆ 1.01 ಕೋಟಿ ರೂ. ದೇಣಿಗೆ
ಮೈಸೂರು

ಕೊರೊನಾ ಪರಿಹಾರ ನಿಧಿಗೆ 1.01 ಕೋಟಿ ರೂ. ದೇಣಿಗೆ

May 8, 2020

ಮೈಸೂರು, ಮೇ 7(ಪಿಎಂ)- ಕಳೆದ ವರ್ಷ ತಮ್ಮ ಪುತ್ರಿಯ ಹುಟ್ಟುಹಬ್ಬದಂದು ಭಾರತೀಯ ಸೇನೆಯ ರಕ್ಷಣಾ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿ ಉದಾರತೆ ಮೆರೆದಿದ್ದ ಮೈಸೂರಿನ ಗೋಕುಲಂನ ಆದಿತ್ಯಾ ಅಧಿಕಾರಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇ ಶಕರೂ ಆದ ಹಿರಿಯ ವೈದ್ಯರಾದ ಡಾ.ಎನ್. ಚಂದ್ರಶೇಖರ್, ಈಗ ಕೊರೊನಾ ವಿರು ದ್ಧದ ಹೋರಾಟಕ್ಕೂ ಕೋಟಿ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ್ದಾರೆ. ಡಾ.ಎನ್.ಚಂದ್ರಶೇಖರ್ ತಮ್ಮ ಪುತ್ರಿಯ ಈ ಬಾರಿಯ ಹುಟ್ಟುಹಬ್ಬ ದಿನವಾದ ಗುರುವಾರ `ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ…

ಮೈಸೂರಿನ ವಿವಿಧೆಡೆ ಭಗವಾನ್ ಬುದ್ಧ ಸ್ಮರಣೆ
ಮೈಸೂರು

ಮೈಸೂರಿನ ವಿವಿಧೆಡೆ ಭಗವಾನ್ ಬುದ್ಧ ಸ್ಮರಣೆ

May 8, 2020

ಮೈಸೂರು, ಮೇ 7(ಪಿಎಂ)- ಇಡೀ ವಿಶ್ವಕ್ಕೆ ಶಾಂತಿ, ಸಮಾನತೆ, ಸಹಬಾಳ್ವೆ, ಸಾಮರಸ್ಯ ಸಂದೇಶ ಸಾರಿದ ಬುದ್ಧ ಭಗವಾನರ ಜನ್ಮದಿನವಾದ ಇಂದು ಮೈಸೂರು ನಗರದ ವಿವಿಧೆಡೆ `ಬುದ್ಧ ಪೂರ್ಣಿಮೆ’ ಸರಳವಾಗಿ ಆಚರಣೆಗೊಂಡಿತು. ಮೈಸೂರಿನ ಅಶೋಕ ವೃತ್ತ ಬಳಿಯ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಬೌದ್ಧ ಬಿಕ್ಕು ಕಲ್ಯಾಣಸಿರಿ ಬಂತೇಜಿ ಅವರ ಸಾನಿಧ್ಯದಲ್ಲಿ ಬುದ್ಧಪೂರ್ಣಿಮೆ ಆಚರಿಸಲಾಯಿತು. ಬುದ್ಧ ವಂದನೆ, ಧಮ್ಮ ವಂದನೆ ಸೇರಿದಂತೆ ಧಮ್ಮದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಸದ ವಿ.ಶ್ರೀನಿವಾಸಪ್ರಸಾದ್, ಮಾಜಿ ಮೇಯರ್ ಪುರು ಷೋತ್ತಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಮೈಸೂರಿನ…

ಪಿಎಂ, ಸಿಎಂ ಪರಿಹಾರ ನಿಧಿಗೆ ಬಂದ ಹಣವೆಷ್ಟು? ಬಳಸಿದ್ದೆಷ್ಟು?: ಕೆಪಿಸಿಸಿ ವಕ್ತಾರ ಪ್ರಶ್ನೆ
ಮೈಸೂರು

ಪಿಎಂ, ಸಿಎಂ ಪರಿಹಾರ ನಿಧಿಗೆ ಬಂದ ಹಣವೆಷ್ಟು? ಬಳಸಿದ್ದೆಷ್ಟು?: ಕೆಪಿಸಿಸಿ ವಕ್ತಾರ ಪ್ರಶ್ನೆ

May 8, 2020

ಮೈಸೂರು, ಮೇ 7(ಆರ್‍ಕೆಬಿ)- ಕೋವಿಡ್-19 ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಷ್ಟು ಹಣ ಸಂಗ್ರಹವಾಗಿದೆ? ಎಷ್ಟು ಹಣ ಬಳಸಲಾಗಿದೆ ಎಂಬ ಬಗ್ಗೆ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆ ಸಿದ ಅವರು, ಪಿಎಂ ಪರಿಹಾರ ನಿಧಿ ಬದಲು `ಕೋವಿಡ್-19 ಪಿಎಂ ಕೇರ್ ಫಂಡ್’ ತೆರೆದಿರುವುದು ಸರಿಯಲ್ಲ. ಅಷ್ಟೂ ಹಣ ವನ್ನು ಪಿಎಂ…

ಟ್ಯಾಕ್ಸಿಗಳ ತೆರಿಗೆ, ವಿಮೆ ಕಡಿತಕ್ಕೆ ಉಸ್ತುವಾರಿ ಸಚಿವರಿಗೆ ಮನವಿ
ಮೈಸೂರು

ಟ್ಯಾಕ್ಸಿಗಳ ತೆರಿಗೆ, ವಿಮೆ ಕಡಿತಕ್ಕೆ ಉಸ್ತುವಾರಿ ಸಚಿವರಿಗೆ ಮನವಿ

May 8, 2020

ಮೈಸೂರು, ಮೇ 7-ಟ್ಯಾಕ್ಸಿಗಳಿಗೆ ಒಂದು ವರ್ಷದ ರಸ್ತೆ ತೆರಿಗೆ ಶುಲ್ಕ ಹಾಗೂ ವಾಹನ ವಿಮೆ ಕಡಿತಗೊಳಿಸಬೇಕೆಂದು ಮೈಸೂರು ಜಿಲ್ಲಾ ಲಕ್ಸುರಿ ಟ್ಯಾಕ್ಸಿ ಸ್ಟ್ಯಾಂಡ್ ಮಾಲೀಕರು ಮತ್ತು ಚಾಲಕರ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾಹನಗಳ ಚಾಲನೆಗೆ ಅವಕಾಶವಿಲ್ಲದ ಕಾರಣ ಟ್ಯಾಕ್ಸಿ ಚಾಲಕರ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿರುವುದರಿಂದ ಈ ಕುಟುಂಬಗಳಿಗೆ ವೃತ್ತಿ ವೇತನ ಅಥವಾ ಸೂಕ್ತ ಸೌಲಭ್ಯ ಒದಗಿಸಿ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡ ಬೇಕೆಂದು ಮನವಿಯಲ್ಲಿ…

1 585 586 587 588 589 1,611
Translate »