ಮೈಸೂರು, ಮೇ 8- ಮೈಸೂರು ಮೈಗಾಲಯಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿರುವ ಕಾರಣದಿಂದ ಪ್ರಾಣಿ-ಪಕ್ಷಿಗಳ ನಿರ್ವಹಣೆಗೆ ಸುತ್ತೂರು ಶ್ರೀಮಠ ಮತ್ತು ಜೆಎಸ್‍ಎಸ್ ಮಹಾವಿದ್ಯಾಪೀಠ ದಿಂದ 5 ಲಕ್ಷ ರೂ. ಗಳ ದೇಣಿಗೆಯನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶುಕ್ರವಾರ ಮೈಸೂರಿನ ಶ್ರೀ ಸುತ್ತೂರು ಶಾಖಾಮಠದಲ್ಲಿ ಸಚಿವ ರಾದ ಜಗದೀಶ್ ಶೆಟ್ಟರ್, ಎಸ್.ಟಿ. ಸೋಮಶೇಖರ್ ಹಾಗೂ ಭೈರತಿ ಬಸವ ರಾಜ್ ಅವರ ಮೂಲಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹಾಗೂ ಕಾರ್ಯನಿರ್ವಾಹಕ ನಿರ್ವಾಹಕ ನಿರ್ದೇಶಕ ಅಜಿತ್ ಎಂ….
ಪಠ್ಯಕ್ರಮ ಕಡಿತದ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ: ಸರ್ಕಾರಕ್ಕೆ ಎ.ಹೆಚ್.ವಿಶ್ವನಾಥ್ ಸಲಹೆ
May 9, 2020ಮೈಸೂರು, ಮೇ8(ಎಂಟಿವೈ)- ವಿದ್ಯಾರ್ಥಿಗಳಿಗೆ ಆನ್‍ಲೈನ್ ಕೋಚಿಂಗ್ ಹಾಗೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.30ರಷ್ಟು ಪಠ್ಯಕ್ರಮ ಕಡಿತಗೊಳಿಸುವ ಆದೇಶಕ್ಕೂ ಮುನ್ನ ಶಿಕ್ಷಣ ತಜ್ಞರೊಡನೆ ಸಮಾಲೋಚಿಸುವಂತೆ ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮೈಸೂರಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಶಿಕ್ಷಣ ವಿಷಯದಲ್ಲಿ ಸರ್ಕಾರ ಆತು ರದ ನಿರ್ಧಾರ ತಾಳುವುದು ಸರಿಯಲ್ಲ. ಆನ್‍ಲೈನ್ ಕೋಚಿಂಗ್, ಪಠ್ಯಕ್ರಮದ ವಿಚಾರದಲ್ಲಿ ಸರ್ಕಾರ ಅವಸರದ ಹೆಜ್ಜೆ ಇಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ನಾವಿನ್ನೂ ಮೇ ರಜೆ ತಿಂಗಳಲ್ಲೇ ಇದ್ದೇವೆ. ಪಠ್ಯದಲ್ಲಿ…
ಸಚಿವರಿಗೆ ಕೈಗಾರಿಕೋದ್ಯಮಿಗಳ ಸರಣಿ ಬೇಡಿಕೆ ಮನವಿ ಸಲ್ಲಿಕೆ
May 9, 2020ಮೈಸೂರು, ಮೇ 8(ಆರ್‍ಕೆ)- ಲಾಕ್ ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಕೈಗಾ ರಿಕೆಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡ ಬೇಕೆಂದು ಆಗ್ರಹಿಸಿ ಮೈಸೂರಿನ ವಿವಿಧ ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಸರಣಿ ಬೇಡಿಕೆಗಳನ್ನು ಸಲ್ಲಿಸಿದರು. ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಅವರು ಸಲ್ಲಿಸಿದ ಮನವಿ ಪತ್ರದಲ್ಲಿ ಎಂಎಸ್‍ಎಂಇ ಕೈಗಾರಿಕೆಗಳಿಗೆ 2 ತಿಂಗಳ ಎಂಎಂಟಿ ಚಾರ್ಜ್ ವಿನಾ ಯಿತಿಯನ್ನು ತಕ್ಷಣವೇ ಅನುಷ್ಠಾನಗೊಳಿಸ ಬೇಕು, ಪ್ರಸಕ್ತ ಸಾಲಿನ…
ಮೃಗಾಲಯದ ಜೀಬ್ರಾ ದತ್ತು ಸ್ವೀಕರಿಸಿದ ಸುಮನ
May 9, 2020ಮೈಸೂರು,ಮೇ8-ಮೈಸೂರಿನ ಶ್ರೀಮತಿ ಡಿ. ಸುಮನ ಅವರು 50 ಸಾವಿರಗಳನ್ನು ಪಾವತಿಸಿ ಮೈಸೂರು ಮೃಗಾಲಯದ ಜೀಬ್ರಾವನ್ನು ಮಾರ್ಚ್ 8, 2020 ರಿಂದ 2021ರ ಮಾರ್ಚ್ 7ರ ಒಂದು ವರ್ಷ ಅವಧಿಗೆ ದತ್ತು ಸ್ವೀಕರಿಸಿದ್ದಾರೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮ ರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮೈಸೂರು ನಾಗರಿಕ ವೇದಿಕೆಯಿಂದ ಶ್ರಮಿಕವರ್ಗದವರಿಗೆ ದಿನಸಿ ಕಿಟ್
May 9, 2020ಮೈಸೂರು,ಮೇ 8(ಎಂಟಿವೈ)- ಲಾಕ್ ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ಪೌರಕಾರ್ಮಿಕರು, ಟಾಂಗಾ ವಾಲಾಗಳು ಹಾಗೂ ಇನ್ನಿತರ ಶ್ರಮಿಕ ವರ್ಗದವರಿಗೆ ಶುಕ್ರವಾರ ಮೈಸೂರು ನಾಗರಿಕ ವೇದಿಕೆ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ ಶುಕ್ರ ವಾರ ಬೆಳಿಗ್ಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್ ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದರು. ಈ ಬಾರಿ 2500 ಕುಟುಂಬ ಗಳಿಗೆ ದಿನಸಿ ಕಿಟ್ ನೀಡಲು ಉದ್ದೇಶಿಸ…
ಸ್ವಯಂ ಸೇವಕರಿಂದ ಕೋವಿಡ್-19 ಬಗ್ಗೆ ಜಾಗೃತಿ
May 9, 2020ಮೈಸೂರು, ಮೇ 8- ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಸ್ವಯಂ ಸೇವಕರಿಂದ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರಮ್ಮನಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಹೊಸದಾದ ಟಿಪ್ಪಿ ಟ್ಯಾಪ್ ಮಾದರಿ ಯನ್ನು ಬಳಸಿ ಕೈತೊಳೆಯುವ ವಿಧಾನ ವನ್ನು ಪರಿಚಯಿಸಲಾಯಿತು. ಕಾರ್ಯ ಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈ.ಬಿ.ಈಶಕುಮಾರ್, ಪಂಚಾ ಯಿತಿ ಅಧ್ಯಕ್ಷ ನಾಗರಾಜು, ಜವರೇಗೌಡ, ಗೋವಿಂದ, ಮೈಸೂರು ಗ್ರಾಮಾಂತರ ಪೆÇಲೀಸರು ಕಿರಿಯ ಮಹಿಳಾ ಆರೋಗ್ಯ…
ಸೀವೆಜ್ ಫಾರಂನಲ್ಲಿ ವೈಜ್ಞಾನಿಕ ರೀತಿ ತ್ಯಾಜ್ಯ ವಿಲೇವಾರಿ ಯೋಜನೆ ಜಾರಿಗೊಳಿಸುವುದು ಶತಸಿದ್ಧ
May 9, 2020ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ಎಲ್ಲಾ ಪ್ರಕ್ರಿಯೆ ಪೂರ್ಣ: ಟೆಂಡರ್ ಕರೆಯುವುದೊಂದೇ ಬಾಕಿ ಮೈಸೂರು, ಮೇ 8(ಎಂಟಿವೈ)- ಕಳೆದ ಮೂವತ್ತು ವರ್ಷದಿಂದ ವಿದ್ಯಾರಣ್ಯಪುರಂನ ಸೀವೆಜ್ ಫಾರಂ ನಲ್ಲಿನ ತ್ಯಾಜ್ಯ ರಾಶಿಯ ದುರ್ವಾಸನೆಯಿಂದ ನರಕಯಾತನೆ ಅನುಭವಿಸುತ್ತಿರುವ ಇದರ ಸುತ್ತಮುತ್ತಲಿನ ಜನರ ಹಿತಕಾಯಲು, ದೇಶದ ವಿವಿಧೆಡೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿ ಪ್ರಶಂಸೆಗೆ ಪಾತ್ರವಾಗಿರುವ ಸಿಗ್ಮಾ ಕಂಪನಿ ಮೂಲಕ ಇಲ್ಲಿನ ತ್ಯಾಜ್ಯ ವಿಲೇವಾರಿ ಮಾಡುವ ಯೋಜನೆಯನ್ನು ತಂದೇ ತರುತ್ತೇನೆ ಎಂದು ಸಂಸದ ಪ್ರತಾಪ ಸಿಂಹ ಸ್ಪಷ್ಟಪಡಿಸಿದ್ದಾರೆ. ಸುತ್ತೂರು ಮಠದ ಆವರಣದಲ್ಲಿ…
ಯೋಜನೆ ಜಾರಿಗೂ ಮುನ್ನ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು
May 9, 2020ಶಾಸಕ ರಾಮದಾಸರ ವಾದ ತ್ಯಾಜ್ಯ ವಿಲೇವಾರಿಗೆ ತಾವು ನಡೆಸಿದ ಹೋರಾಟ ಜನರಿಗೆ ತಿಳಿದಿದೆ ಮೈಸೂರು, ಮೇ 8(ಎಂಟಿವೈ)- ವಿದ್ಯಾ ರಣ್ಯಂಪುರಂನಲ್ಲಿರುವ ಸೀವೆಜ್ ಫಾರಂನಲ್ಲಿ ಕಸದ ರಾಶಿಯಿಂದ ಸ್ಥಳೀಯ ರಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಪಾಲಿಕೆ ಮುಡಾ ವಿರುದ್ದ ಕೇಸ್ ಹಾಕಿದ್ದೇನೆ ಎಂದು ಶಾಸಕ ಎಸ್.ಎ. ರಾಮ ದಾಸ್ ಸ್ಪಷ್ಟಪಡಿಸಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ನರಗಾಭಿವೃದ್ಧಿ ಸಚಿವ…
ಕ್ಯಾತಮಾರನಹಳ್ಳಿ ಯುವಕನ ಹತ್ಯೆಗೆ ಪ್ರತೀಕಾರ ಆರೋಪಿ ಸಹೋದರನ ಹತ್ಯೆಗೈದ ಇಬ್ಬರು ಜೈಲಿಗೆ
May 9, 2020ಮೈಸೂರು, ಮೇ 8(ಆರ್‍ಕೆ)- ಮೂರು ದಿನಗಳ ಹಿಂದಷ್ಟೇ ಯುವಕನ ಕೊಲೆಯಾಗಿದ್ದು, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆರೋಪಿ ಸಹೋದರ ಅಭಿಷೇಕ್‍ನನ್ನು ಹತ್ಯೆಗೈದಿದ್ದ ಮಹೇಂದ್ರ ಮತ್ತು ಇರ್ಫಾನ್ ಖಾನ್‍ನನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಕಳೆದ ರಾತ್ರಿಯೇ ಬಂಧಿಸಲಾಗಿದ್ದ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಜಿ.ಎನ್. ಶ್ರೀಕಾಂತ್, ಮಧ್ಯಾಹ್ನ ನ್ಯಾಯಾಧೀಶರ ನಿವಾಸದಲ್ಲಿ ಹಾಜರು ಪಡಿಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಸತೀಶನನ್ನು ಕೊಲೆಗೈದಿದ್ದ ಪೈಕಿ ಕಿರಣ್ ಸಹೋದರನಾದ ಅಭಿಷೇಕ್‍ನನ್ನು ಗುರುವಾರ ರಾತ್ರಿ ಇರ್ಫಾನ್ ಖಾನ್ ಮತ್ತು ಮಹೇಂದ್ರ,…
ಶ್ರೀರಾಂಪುರದಲ್ಲಿ ಹಬ್ಬದ ವಾತಾವರಣ: ಕೊರೊನಾ ವಾರಿಯರ್ಸ್‍ಗೆ ಹೂ ಮಳೆಗರೆದು ಅಭಿನಂದನೆ
May 9, 2020ಮೈಸೂರು, ಮೇ 8(ಎಸ್‍ಬಿಡಿ)- ಮೈಸೂರಿನ ಶ್ರೀರಾಂಪುರ ನಿವಾಸಿಗಳು, ಹೂ ಮಳೆಗರೆಯುವ ಮೂಲಕ ಕೊರೊನಾ ವಾರಿಯರ್ಸ್‍ಗೆ ಕೃತಜ್ಞತೆ ಸಲ್ಲಿಸಿದರು. ಶ್ರೀರಾಂಪುರ 2ನೇ ಹಂತ, ನಾಯ್ಡು ಸ್ಟೋರ್ ವೃತ್ತದ ಪ್ರದೇಶ, ಕಂಟೇನ್ಮೆಂಟ್ ವಲಯದಿಂದ ಮುಕ್ತಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಹಬ್ಬದ ಸಂಭ್ರಮ ಸೃಷ್ಟಿಯಾಗಿತ್ತು. ಕೆಲ ದಿನಗಳಿಂದ ಮೌನವಾಗಿದ್ದ ರಸ್ತೆಗಳೆಲ್ಲಾ ರಂಗೋಲಿಯಿಂದ ಸಿಂಗಾರ ಗೊಂಡಿದ್ದವು. ಜೀವದ ಹಂಗು ತೊರೆದು ಕರ್ತವ್ಯ ನಿರ್ವ ಹಿಸಿದ ಆರೋಗ್ಯ ಇಲಾಖೆ, ಪೊಲೀಸ್, ನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೌರ ಕಾರ್ಮಿಕರನ್ನು ಮೆರವಣಿಗೆಯಲ್ಲಿ…










