ಮೈಸೂರು, ಮೇ 9(ಆರ್‍ಕೆ)- ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕು ತೊಲಗಿಸಲು ಎಲ್ಲರೂ ಹೋರಾಡುತ್ತಿದ್ದಾರೆ. ಇದಕ್ಕೆ ಪೊಲೀಸ್ ಇನ್ಸ್‍ಪೆಕ್ಟರ್‍ವೊಬ್ಬರು ಸಾಥ್ ನೀಡಿದ್ದಾರೆ. ಈ ಮಾರಣಾಂತಿಕ ರೋಗದ ಬಗ್ಗೆ ಗಾಯನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಬಂದೋಬಸ್ತ್ ಕರ್ತವ್ಯದ ನಡುವೆಯೂ ಕೊರೊನಾ ಓಡಿಸಿ ಸುರಕ್ಷಿತವಾಗಿರುವಂತೆ ಸಂದೇಶ ನೀಡುವ ಅರ್ಥಗರ್ಭಿತ ಹಾಗೂ ಮನಮುಟ್ಟುವಂತೆ ಜಾಗೃತಿ ಮೂಡಿಸುವ ಹಾಡೊಂದನ್ನು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎಸ್.ಡಿ. ಸುರೇಶ್‍ಕುಮಾರ್ ಹಾಡುವ ಮೂಲಕ ಪೊಲೀಸ್ ಇಲಾಖೆ…
ರಾಜ್ಯದಲ್ಲಿ 28 ಮಹಿಳೆಯರು ಸೇರಿ 56 ಮಂದಿಗೆ ಕೊರೊನಾ ಸೋಂಕು
May 9, 2020ಸೋಂಕಿತರ ಸಂಖ್ಯೆ 761, ಹಸಿರು ವಲಯದಲ್ಲಿದ್ದ ಚಿತ್ರದುರ್ಗಕ್ಕೂ ಕೊರೊನಾ ಪ್ರವೇಶ ಬೆಂಗಳೂರು, ಮೇ 8-ರಾಜ್ಯದಲ್ಲಿ ಶುಕ್ರವಾರ 28 ಮಹಿಳೆಯರು ಸೇರಿದಂತೆ 56 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು ಆತಂಕಕ್ಕೆಡೆ ಮಾಡಿದೆ. ಹಸಿರು ವಲಯದಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಮೂವರು ವೃದ್ಧರಿಗೆ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ. ಅಹಮದಾಬಾದ್‍ನಿಂದ ಒಂದೇ ಬಸ್‍ನಲ್ಲಿ ಬಂದ 33 ಜನರ ಪೈಕಿ ಚಿತ್ರದುರ್ಗದಲ್ಲಿ 64 ವರ್ಷ ವಯಸ್ಸಿನ ಮೂವರು ವೃದ್ಧರಿಗೆ ಸೋಂಕು ಪತ್ತೆಯಾ ಗಿದೆ. ಈ ಬಸ್‍ನಲ್ಲಿ ಬಂದವರು…
ಬಾರ್, ಕ್ಲಬ್, ಲಾಡ್ಜ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ
May 9, 2020ಬೆಂಗಳೂರು, ಮೇ 8(ಕೆಎಂಶಿ)-ಬಾರ್, ಕ್ಲಬ್ ಹಾಗೂ ಲಾಡ್ಜ್‍ಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಲ್7, ಸಿಎಲ್9 ಹೊಂದಿರುವವರು ಎಂಆರ್‍ಪಿ ದರದಲ್ಲಿ ಪಾರ್ಸೆಲ್ ಮಾತ್ರ ಮಾರಾಟ ಮಾಡಬಹುದು. ಎಂಆರ್‍ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ದರೆ ಲೈಸೆನ್ಸ್ ರದ್ದಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬೆಳಿಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಪಾರ್ಸಲ್‍ನಲ್ಲಿ ಮಾರಾಟ ಮಾಡಬಹುದು. ಕಂಟೇನ್ಮೆಂಟ್ ಝೋನ್ ಬಿಟ್ಟು ಬೇರೆಡೆ ಮದ್ಯ ಮಾರಾಟಕ್ಕೆ ಅವಕಾಶ…
ಮೈಸೂರಲ್ಲೀಗ ಐದೇ ಜನ ಕೊರೊನಾ ಸೋಂಕಿತರು
May 9, 2020ಮೈಸೂರು, ಮೇ 8(ಎಂಟಿವೈ)- ಸಾಂಸ್ಕೃತಿಕ ನಗರಿ ಮೈಸೂರಲ್ಲಿ 7ನೇ ದಿನವೂ ಕೊರೊನಾ ಸೋಂಕಿತ ಹೊಸ ಪ್ರಕರಣ ಪತ್ತೆಯಾಗಿಲ್ಲ. ಶುಕ್ರವಾರ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣ ಕೇವಲ 5ಕ್ಕೆ ಕುಸಿದಿದ್ದರೆ, ಬಿಡುಗಡೆಯಾದವರ ಸಂಖ್ಯೆ 85ಕ್ಕೆ ಏರಿಕೆಯಾದಂತಾಗಿದೆ. ಜಿಲ್ಲೆಯಲ್ಲಿ ಕಳೆದ 1 ವಾರದಿಂದ ಹೊಸ ಪ್ರಕರಣ ಪತ್ತೆಯಾಗದೇ ಇರುವುದು ಜಿಲ್ಲೆಯ ಜನರಲ್ಲಿ ಸಮಾಧಾನ ತಂದಿದೆ. 90ರ ಗಡಿ ಮುಟ್ಟಿದ್ದ ಸೋಂಕಿತರ ಸಂಖ್ಯೆ ಕೇವಲ 5ಕ್ಕೆ ಕುಸಿತ ಕಂಡಿದೆ. ಈ ಐದು ಮಂದಿ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ…
ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್‍ಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ
May 9, 2020ಮೈಸೂರು, ಮೇ 8 (ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ನೀಡಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗ ದೀಶ್ ಶೆಟ್ಟರ್ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಕೈಗಾ ರಿಕೆಗಳ ಸಂಘದ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿ ವರು, ಲಾಕ್‍ಡೌನ್‍ನಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ರಾಜ್ಯಾದ್ಯಂತ ಕೈಗಾರಿಕಾ ಕ್ಷೇತ್ರದಲ್ಲಿ…
ಜೆಎಸ್‍ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಕಡಿಮೆ ಬೆಲೆಯ ಅಮೂಲ್ಯ ವೈದ್ಯಕೀಯ ಉಪಕರಣ ಆವಿಷ್ಕಾರ
May 9, 2020ಮೈಸೂರು,ಮೇ 8(ಎಂಟಿವೈ)- ಕೊರೊನಾ ಸೋಂಕು ಹರಡುವು ದನ್ನು ತಡೆಗಟ್ಟಲು ವಿವಿಧ ದೇಶಗಳಲ್ಲಿ ಹಲವು ವೈದ್ಯಕೀಯ ಸಲಕರಣೆಗಳ ಆವಿಷ್ಕಾರ ನಡೆಯುತ್ತಿರುವ ಬೆನ್ನ ಹಿಂದೆಯೇ ಮೈಸೂರು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಎಚ್‍ಇಅರ್), ಐಡಿಯಾಸ್ ಅನ್‍ಲಿಮಿಟೆಡ್ ಸಂಸ್ಥೆ ಜತೆಗೂಡಿ ಕಡಿಮೆ ಬೆಲೆಯ ಬಹುಪ ಯೋಗಿ ವೈಜ್ಞಾನಿಕ ಉಪ ಕರಣ ಗಳನ್ನು ಅಭಿವೃದ್ಧಿಪಡಿಸಿದೆ. `ಜೆಎಎಚ್‍ಇಅರ್’ಯು ಗಾಲಿಗಳ ಮೇಲಿನ ತುರ್ತು ಚಿಕಿತ್ಸಾ ಘಟಕ (ಐಸಿಯು), ಕಡಿಮೆ ವೆಚ್ಚದ ವೆಂಟಿ ಲೇಟರ್, ಡೆಂಟಿ ಸೇಫ್ ಕುರ್ಚಿ, ಯುವಿ ಸರ್ಫೇಸ್ ಸ್ಯಾನಿಟೈಸರ್ ಪರಿಕರಗಳನ್ನು…
ಲಾಕ್‍ಡೌನ್ ಸಂಕಷ್ಟ ನಿವಾರಣೆಗೆ ರಾಜ್ಯಕ್ಕೆ 50 ಸಾವಿರ ಕೋಟಿ ವಿಶೇಷ ಪ್ಯಾಕೇಜ್: ಕೇಂದ್ರಕ್ಕೆ ವಿಪಕ್ಷಗಳ ಒತ್ತಾಯ
May 9, 2020ಬೆಂಗಳೂರು, ಮೇ 8(ಕೆಎಂಶಿ)- ಕೊರೊನಾ ಮಾರ ಣಾಂತಿಕ ಸೋಂಕು ಹಾಗೂ ಅದರ ತಡೆಗೆ ವಿಧಿಸಲಾಗಿ ರುವ ಲಾಕ್‍ಡೌನ್‍ನಿಂದ ಎದುರಾಗಿರುವ ಜನರ ಸಂಕಷ್ಟ ಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಟ ರೂ. 50,000 ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ ಮತ್ತಿತರರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ, ಕೋವಿಡ್-19ರ ನಂತರ…
ಸರ್ಕಾರದ ಅನ್ಯಾಯ, ಅಕ್ರಮಗಳ ನೋಡಿಯೂ ಸುಮ್ಮನಿರಬೇಕೇ…?
May 9, 2020ಬೆಂಗಳೂರು, ಮೇ 8(ಕೆಎಂಶಿ)- ತಾವು ನೀಡಿದ ರಚನಾತ್ಮಕ ಸಲಹೆ ಸ್ವೀಕರಿಸುವ ಬದಲು, ತಾವು ಎತ್ತಿ ತೋರಿಸುವ ಲೋಪದೋಷಗಳನ್ನು ತಿದ್ದಿಕೊಳ್ಳುವ ಬದಲು ಸಚಿವರುಗಳು ತಮ್ಮ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಲಾಕ್‍ಡೌನ್‍ನಿಂದ ವೃತ್ತಿ ಆಧಾರಿತ ಸಮುದಾಯಗಳು, ರೈತರು, ಕಾರ್ಮಿಕರು, ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಕರೆದಿದ್ದ ಕಾಂಗ್ರೆಸ್ ಸೇರಿದಂತೆ ನಾನಾ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದ…
ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಂತರ ಸಿಇಟಿ ಪರೀಕ್ಷೆ
May 9, 2020ಬೆಂಗಳೂರು, ಮೇ 8- ಕೊರೊನಾ ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಮುಂದಿನ ಶೈಕ್ಷ ಣಿಕ ವರ್ಷದ ಅವಧಿ ಎಷ್ಟಿರಬೇಕು ಎನ್ನುವ ಕುರಿತು ತಜ್ಞರು ಮತ್ತು ಇಲಾಖಾ ಅಧಿಕಾರಿಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಶೀಘ್ರದಲ್ಲೇ ಶೈಕ್ಷ ಣಿಕ ವೇಳಾಪಟ್ಟಿ ಪ್ರಕಟವಾಗಲಿದ್ದು, ಹೆಚ್ಚುವರಿ ಶೈಕ್ಷಣಿಕ ಚಟುವಟಿಕೆಗಳು ಇರುವುದಿಲ್ಲ. ಸೀಮಿತ ಅವಧಿಯಲ್ಲಿ ಯಾವ ಯಾವ ಚಟುವಟಿಕೆಗಳನ್ನು ಕೈಗೊಳ್ಳ ಬೇಕು ಎನ್ನುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ….
ಜುಲೈನಲ್ಲಿ ಸಿಬಿಎಸ್‍ಇ 10, 12ನೇ ತರಗತಿ ಪರೀಕ್ಷೆ
May 9, 2020ನವದೆಹಲಿ: ಸಿಬಿಎಸ್‍ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳು ಕೊರೊನಾ ವೈರಸ್‍ನಿಂದಾಗಿ ಮುಂದೂಡಿಕೆಯಾ ಗಿದ್ದು, ಜುಲೈ ಮೊದಲಾ ರ್ಧದ ಅವಧಿಯಲ್ಲಿ ಈ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೆÇೀಖ್ರಿ ಯಾಲ್ ನಿಶಾಂಕ್ ಸ್ಪಷ್ಟಪಡಿಸಿದ್ದಾರೆ. ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂದು ವಿದ್ಯಾರ್ಥಿಗಳು ತಾಳ್ಮೆಯಿಂದ ಕಾಯುತ್ತಿದ್ದಾರೆ. ಜು.1ರಿಂದ 15ರವರೆಗೆ ಸಿಬಿಎಸ್‍ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಇಂದು ತೀರ್ಮಾ ನಿಸಲಾಗಿದೆ ಎಂದು ತಿಳಿಸಿದ್ದಾರೆ. ಪರೀ ಕ್ಷೆಯ ವೇಳಾಪಟ್ಟಿಯನ್ನು ಸವಿವರ ವಾಗಿ ಸಿಬಿಎಸ್‍ಸಿ ನಂತರದಲ್ಲಿ…










