ಕುಶಾಲನಗರ,ಮೇ2-ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿ ಯುವ ವೇಳೆ ಭಾರೀ ಗಾತ್ರದ ಮೀನು ಪತ್ತೆಯಾಗಿದ್ದು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಮೀನುಗಾರಿಕೆಗೆ ಬಳಸಿದ್ದ ರಾಟೆ ಗಾಣ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ 2 ದಿನಗಳ ಹಿಂದೆ ಮಳೂರಿನ ಪ್ರವೀಶ್ ಎಂಬಾತ ಗೆಳೆಯರೊಂದಿಗೆ ಹಾರಂಗಿ ಹಿನ್ನೀರಿನಲ್ಲಿ ಸುಮಾರು 38 ಕೆಜಿ ತೂಕದ ಬೃಹತ್ ಮಹಷೀರ್ ಮೀನು ಹಿಡಿದಿ ದ್ದರು. ಈ ಬಗ್ಗೆ ಮಾಹಿತಿ ಅರಿತ ಜಿಲ್ಲಾ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್…
ದೆಹಲಿಯಲ್ಲಿ ಒಂದೇ ಬಿಲ್ಡಿಂಗ್ ನಲ್ಲಿ ವಾಸಿಸುತ್ತಿದ್ದ 41 ಮಂದಿಗೆ ಕೊರೊನಾ ಪಾಸಿಟಿವ್
May 3, 2020ನವದೆಹಲಿ,ಮೇ 2-ದೆಹಲಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ಮಂದಿಗೆ ಶನಿವಾರ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ದೆಹಲಿಯ ಕಪಶೇರಾ ಡಿಸಿ ಕಚೇರಿ ಸಮೀಪ ಇರುವ ತೆಕೆವಾಲಿ ಗಲ್ಲಿಯಲ್ಲಿರುವ ಕಟ್ಟಡವೊಂದರಲ್ಲಿ ಏಪ್ರಿಲ್ 19ರಂದು ಓರ್ವ ವ್ಯಕ್ತಿಗೆ ಪಾಸಿಟಿವ್ ಬಂದಿತ್ತು. ಬಳಿಕ ಆ ಕಟ್ಟಡ ವನ್ನು ಸೀಲ್ ಮಾಡಲಾಗಿತ್ತು. ಇದೀಗ ಆ ಬಿಲ್ಲಿಂಗ್ ನಲ್ಲಿದ್ದ 41 ಮಂದಿಗೆ ಸೋಂಕು ತಗುಲಿದೆ ಎಂದು ದೆಹಲಿ ನೈರುತ್ಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ. ಇಂದು ಬೆಳಗ್ಗೆಯಷ್ಟೇ 1…
ಮೇಯರ್, ಉಪಮೇಯರ್, ಸದಸ್ಯರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ
May 3, 2020ಮೈಸೂರು, ಮೇ2 (ಆರ್‍ಕೆಬಿ)- ಮೇಯರ್, ಉಪ ಮೇಯರ್, ಪಾಲಿಕೆಯ ವಿಪಕ್ಷ ನಾಯಕರು ಮತ್ತು ಸದಸ್ಯರು ಎಲ್ಲ ರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಾಲಿಕೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸು ವಂತೆ ಆಯುಕ್ತರು, ಪಾಲಿಕೆಯ ಇತರೆ ಅಧಿಕಾರಿ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೂಚನೆ ನೀಡಿದ್ದಾರೆ. ಸರ್ಕಾರದ ಯಾವುದೇ ಕಾರ್ಯಕ್ರಮ ಗಳ ಬಗ್ಗೆ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡುವಂತೆಯೇ ಮೇಯರ್, ಉಪ ಮೇಯರ್‍ಗೂ ಮಾಹಿತಿ ನೀಡಿ ಆಹ್ವಾನಿಸ ಬೇಕು ಎಂದೂ ಆಯುಕ್ತರಿಗೆ ಆದೇಶಿಸಿದ್ದಾರೆ. ಇಂದಿಲ್ಲ ಸುದ್ದಿಗಾರರ ಜತೆ ಮಾತನಾ…
ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಹಾರ ತಯಾರಿಸುವ ಅಡುಗೆ ಮನೆಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ
May 3, 2020ಮೈಸೂರು,ಮೇ 2(ಎಂಟಿವೈ)-ಲಾಕ್ ಡೌನ್‍ನಿಂದಾಗಿ ಸಂತ್ರಸ್ತರಾಗಿದ್ದವರಿಗೆ ಆಹಾರ ಪೂರೈಸುವ ನಿಟ್ಟಿನಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಮನೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಸಮಾಜ ಸೇವಾ ಕಾರ್ಯಕ್ಕೆ ಶ್ಲಾಘಿಸಿದರು. ಮೈಸೂರಿನ ವಿವೇಕಾನಂದನಗರದ ವಿವೇಕಾನಂದ ವೃತ್ತದ ಸಮೀಪ ಲಾಕ್ ಡೌನ್ ಸಂತ್ರಸ್ತರು ಹಾಗೂ ಬಡ ಕಾರ್ಮಿಕ ವರ್ಗದವರಿಗೆ ಆಹಾರ ಪೂರೈಸಲು ಪ್ರತಿ ದಿನ ಅಡುಗೆ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕೊರೊನಾ ಹಿನ್ನೆಲೆಯ ಲಾಕ್‍ಡೌನ್‍ನಿಂ…
ಚಾಮರಾಜ ಕ್ಷೇತ್ರದಲ್ಲಿ 18 ಸಾವಿರ ದಿನಸಿ ಕಿಟ್ ವಿತರಣೆ: ಶಾಸಕ ನಾಗೇಂದ್ರ
May 3, 2020ಮೈಸೂರು, ಮೇ 2(ಆರ್‍ಕೆಬಿ)- ಲಾಕ್ ಡೌನ್‍ನಿಂದಾಗಿ ತೊಂದರೆಗೀಡಾಗಿರುವ ಚಾಮರಾಜ ಕ್ಷೇತ್ರ ವ್ಯಾಪ್ತಿಯ ವಿಜಯ ನಗರ 1ನೇ ಹಂತದ ಕಾರ್ಮಿಕರು, ಬಡ ಜನರಿಗೆ ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ನಗರಪಾಲಿಕೆ ಸದಸ್ಯ ಸುಬ್ಬಯ್ಯ ಶುಕ್ರವಾರ ಕೊಡಗು ಗೌಡ ಸಮಾ ಜದ ಛತ್ರದ ಆವರಣದಲ್ಲಿ ಅಕ್ಕಿ, ತೊಗರಿ ಬೇಳೆ, ಸಕ್ಕರೆ, ಈರುಳ್ಳಿ, ಆಲೂಗೆಡ್ಡೆ, ಗೋಧಿಹಿಟ್ಟು, ಅಡುಗೆ ಎಣ್ಣೆ ಒಳಗೊಂಡ ದಿನಸಿ ಕಿಟ್‍ಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಲಾಕ್‍ಡೌನ್‍ನಿಂದ ತೊಂದ ರೆಗೆ ಸಿಲುಕಿರುವ ಕೂಲಿ ಕಾರ್ಮಿಕರು…
ಸ್ವಾರಸ್ಯ, ಅರ್ಥಗರ್ಭಿತ ಪುಟ್ಟ ಕಥೆ ಮೂಲಕ 3ನೇ ಸಂಚಿಕೆಯಲ್ಲಿ ಕೊರೊನಾ ಕಡಿವಾಣದ ರಾಮಬಾಣ
May 3, 2020ಸಾಮಾಜಿಕ ಅಂತರದ ಮಹತ್ವ ವಿವರಿಸುವ ಚೇತನಾ! ಮೈಸೂರು, ಮೇ.2(ಎಂಕೆ)- ಕೊರೊನಾ ವೈರಸ್‍ಗೆ ಕಡಿವಾಣ ಹಾಕಲು ಐದು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯ. ಆದರೆ ಅಂತರ ನಮ್ಮ ನಮ್ಮ ದೇಹಗಳ ನಡುವೆ ಇರಬೇಕೇ ಹೊರತು ಮನಸ್ಸುಗಳ ನಡುವೆ ಅಲ್ಲ ಎಂಬುದು ಪುಟಾಣಿ ಛೋಟಿ ಚೇತನಾಳ ಕಿವಿಮಾತು. ಮೈಸೂರಿನ ಖ್ಯಾತ ಉದ್ಯಮಿ ಎಸ್.ಎ.ಶ್ರೀಕಾಂತ್‍ದಾಸ್ ಹಾಗೂ ಶ್ರೀಮತಿ ಪ್ರತಿಭಾ ಶ್ರೀಕಾಂತ್ ಅವರ ಮಂಗಳೂರಿನ ಎಯುಎಂ ಆನಿ ಮೇಷನ್ ಸ್ಟುಡಿಯೋಸ್ ಪ್ರೈ.ಲಿ. ‘ಛೋಟಿ ಚೇತನಾ ಆನಿಮೇಷನ್’ ಕಿರು ಚಿತ್ರದ ಮೂಲಕ ಕೋವಿಡ್-19…
ಶಾಸಕ ನಾಗೇಂದ್ರ, ರಾಮಕೃಷ್ಣ ಆಶ್ರಮದಿಂದ ಬಡವರು, ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
May 3, 2020ಮೈಸೂರು,ಮೇ2(ಆರ್‍ಕೆಬಿ)- ಮೈಸೂರು ನಗರಪಾಲಿಕೆಯ 18ನೇ ವಾರ್ಡ್ ವ್ಯಾಪ್ತಿಯ ಮೇದರ ಬ್ಲಾಕ್‍ನಲ್ಲಿ 500 ಬಡ ಕುಟುಂಬ ಗಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವರಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ದಿನಸಿ ಪದಾರ್ಥಗಳಿರುವ ಕಿಟ್‍ಗಳನ್ನು ವಿತರಿಸಿದರು. ಮಂಜುನಾಥಪುರ ಪ್ರದೇ ಶದ 768 ಬಡವರು ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳಿಗೆ ರಾಮಕೃಷ್ಣ ಆಶ್ರಮದ ವತಿಯಿಂದ ನೀಡಲಾದ ದಿನಸಿ ಕಿಟ್‍ಗಳನ್ನು ಆಶ್ರಮದ ಶ್ರೀ ಮುಕ್ತಿದಾ ನಂದ ಸ್ವಾಮೀಜಿ ವಿತರಿಸಿದರು. ಪಾಲಿಕೆ ಸದಸ್ಯ ರವೀಂದ್ರ ಧವಸ ಧಾನ್ಯ ಹಾಗೂ ತರಕಾರಿ…
ಮಡಿಕೇರಿಯಲ್ಲಿ ನಾಳೆ ‘ಫೋನ್ ಇನ್’
May 1, 2020ಮಡಿಕೇರಿ ಏ.30- ಸಾರ್ವಜನಿಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಕ್ಷಿಪ್ರಗತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ‘ನೇರ ಫೋನ್ ಇನ್’ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಕೃಷಿ/ ತೋಟಗಾರಿಕೆ ಇಲಾಖೆಗೆ ಸಂಬಂ ಧಿಸಿದಂತೆ ಮೇ 2 ರಂದು ಮಧ್ಯಾಹ್ನ 3 ರಿಂದ 4 ಗಂಟೆವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಕೃಷಿ/ತೋಟ ಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಪಾಲ್ಗೊಂಡು ಸಾರ್ವಜನಿಕ ರಿಂದ ಅಹವಾಲು ಆಲಿಸಿ ಸಮಸ್ಯೆಗಳಿಗೆ ಸ್ಪಂದಿ ಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕೊರೊನಾ: ಭಾರತದಲ್ಲಿ ಮತ್ತೆ 1463 ಹೊಸ ಪಾಸಿಟಿವ್ ಪ್ರಕರಣ
April 28, 202028,380ಕ್ಕೇರಿದ ಸೋಂಕಿತರ ಸಂಖ್ಯೆ ಸೋಂಕಿತರ ಸಾವಿನ ಸಂಖ್ಯೆ 886 ನವದೆಹಲಿ,ಏ.27-ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ 1463 ಹೊಸ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,380ಕ್ಕೇರಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1463 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,380ಕ್ಕೇರಿದೆ. ಈ ಪೈಕಿ 6362 ಮಂದಿ ಸೋಂಕಿತರು ಗುಣಮುಖರಾಗಿದ್ದು,…
ಕೋವಿಡ್-19 ಆತಂಕದ ನಡುವೆಯೂ 1.19 ಲಕ್ಷ ಮಕ್ಕಳಿಗೆ ಆಹಾರ ಪದಾರ್ಥ
April 28, 2020ಮೈಸೂರು,ಏ.27- ವಿಶ್ವಮಟ್ಟದಲ್ಲಿ ಪೆಡಂಬೂತವಾಗಿ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್ ಡೌನ್ ಆಗಿದ್ದು, ಸಂಕಷ್ಟದ ಪರಿಸ್ಥಿತಿ ಯಲ್ಲೂ ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿ, ಅಪೌಷ್ಟಿಕ ಮಕ್ಕಳು ಹಾಗೂ ಕಿಶೋರಿಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಆಹಾರ ಪದಾರ್ಥವನ್ನು ಮೈಸೂರು ಜಿಲ್ಲೆ ಯಲ್ಲಿ 1,19,770 ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ತಲುಪಿ ಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಮೈಸೂರು ಜಿಲ್ಲೆಗೆ ಎಂಟ್ರಿಯಾದ ದಿನದಿಂದಲೂ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಜೀವನ, ಕೈಗಾರಿಗೆ, ಶಿಕ್ಷಣ…









