ಮೈಸೂರು,ಮೇ 3(ಎಂಟಿವೈ)- ಲಾಕ್ ಡೌನ್‍ನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ರುವ ಅನ್ಯ ರಾಜ್ಯದ ನೂರಾರು ವಲಸೆ ಕಾರ್ಮಿಕರು `ನಮ್ಮನ್ನು ಊರಿಗೆ ಕಳುಹಿಸಿ ಕೊಡಿ’ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಭಾನುವಾರ ಪ್ರದರ್ಶನ ನಡೆಸಿದರು. ಎರಡನೇ ಹಂತದ ಲಾಕ್‍ಡೌನ್ ಅವಧಿ ಪೂರ್ಣಗೊಂಡ ಬಳಿಕ ಊರಿಗೆ ವಾಪ ಸಾಗಬಹುದೆಂದು ಭಾವಿಸಿದ್ದ ಮೈಸೂರಿನ ವಿವಿಧೆಡೆ ನೆಲೆಸಿರುವ ಕಟ್ಟಡ ಕಾರ್ಮಿ ಕರು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉತ್ತರ ಪ್ರದೇಶ, ಒಡಿಸ್ಸಾ, ಬಿಹಾರ, ಮಧ್ಯಪ್ರದೇಶ ಮೊದಲಾದÀ ರಾಜ್ಯಗಳ ನೂರಾರು…
ಜಯಂತಿ ಸರಳ ಆಚರಿಸಿ ಬಡ ಕಲಾವಿದರಿಗೆ ನೆರವಾಗಲು ಮನವಿ
May 4, 2020ಮೈಸೂರು,ಮೇ 3-ಕೊರೊನಾದಿಂದ ದೇಶವೇ ತತ್ತರಿಸಿದ್ದು, ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಜಯಂತಿಗಳನ್ನು ಸರಳವಾಗಿ ಆಚರಿಸಿ, ಅದೇ ಹಣದಿಂದ ಕಲಾವಿದರಿಗೆ ಮತ್ತು ಥಿಯೇ ಟರ್ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಡನೌಕರರಿಗೆ ತಲಾ 10 ಸಾವಿರ ರೂ. ನೀಡುವಂತೆ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಒತ್ತಾ ಯಿಸಿದ್ದಾರೆ. 1 ವರ್ಷದಲ್ಲಿ 20 ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಕನಿಷ್ಠ 3.50 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ಸರಳವಾಗಿ ಆಚರಿಸಿ ಹಣ ಉಳಿಸಿದರೆ 150ರಿಂದ 200 ಬಡ ಕಲಾವಿದರಿಗೆ ಹಂಚಬಹುದು. ಜಿಲ್ಲಾಧಿಕಾರಿ…
ನಿತ್ಯೋತ್ಸವ ಕವಿ ನಿಧನಕ್ಕೆ ಶಾರದಾದೇವಿ ಉದ್ಯಾನದಲ್ಲಿ ಸಂತಾಪ
May 4, 2020ಮೈಸೂರು, ಮೇ 3(ಆರ್‍ಕೆಬಿ)- ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹ ಮದ್ ಅವರ ನಿಧನಕ್ಕೆ ಬಿಜೆಪಿ ಚಾಮುಂ ಡೇಶ್ವರಿ ನಗರ ಮಂಡಲ ಹಾಗೂ ಶಾರದಾದೇವಿ ನಗರ ಹಿತರಕ್ಷಣಾ ವೇದಿಕೆ ಯಿಂದ ಶಾರದಾದೇವಿ ವೃತ್ತದಲ್ಲಿರುವ ಶಾರದಾದೇವಿ ಉದ್ಯಾನವನದಲ್ಲಿ ನಿಸಾರ್ ಅಹಮದ್ ಅವರ ಭಾವಚಿತ್ರ ಹಿಡಿದು ಸಂತಾಪ ಸೂಚಿಸಲಾಯಿತು. ನಿತ್ಯೋತ್ಸವ ಮೂಲಕ ಕನ್ನಡಿಗರ ಮನಸೆಳೆದ ಕೆ.ಎಸ್.ನಿಸಾರ್ ಅಹಮದ್ ಕೋಮು, ಜಾತಿ, ಗಡಿಗಳಾಚೆ ನಿಂತ ಅತ್ಯಂತ ಶ್ರೇಷ್ಠ ಕವಿ. ಕನ್ನಡ ಸಾರಸ್ವತ ಲೋಕದ ದಿಗ್ಗಜ. ಕನ್ನಡ ಸಾಹಿತ್ಯ ಸಮ್ಮೇ ಳನದ ಅಧ್ಯಕ್ಷರಾಗಿ, ಮೈಸೂರು…
ಉದ್ಯಮಿಗಳ ಸಾಲ ಮನ್ನಾ ಮಾಡಿದ ಬಿಜೆಪಿ: ಕೆಪಿಸಿಸಿ ಆರೋಪ
May 4, 2020ಮೈಸೂರು, ಮೇ 3-ನರೇಂದ್ರ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ದೊಡ್ಡ ಉದ್ಯಮಿಗಳ ಸಾಲ ಮಾತ್ರ ಯಾರಿಗೂ ತಿಳಿಯದೇ ಮನ್ನಾ ಮಾಡುತ್ತಿರುವುದು ಈ ದೇಶದ ದೌರ್ಭಾಗ್ಯ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ ಕಿಡಿಕಾರಿದ್ದಾರೆ. ಮೋದಿ ಸರ್ಕಾರ ಒಟ್ಟಾರೆ 5.5 ಲಕ್ಷ ಕೋಟಿ ರೂ. ಸಾಲವನ್ನು ಕಳೆದ ಆರು ವರ್ಷಗಳಲ್ಲಿ ರೈಟ್ ಆಫ್ ಮಾಡಿದೆ. ಈ ಸಾಲವನ್ನು ಬ್ಯಾಲೆನ್ಸ್ ಶೀಟ್‍ನಿಂದ ತೆಗೆದು ಹಾಕ ಲಾಗಿದೆ ಅಷ್ಟೆ ಎಂದು ಬಿಜೆಪಿಯವರು ಹೇಳುತ್ತಿರುವುದು ಜನರ ಕಿವಿಗೆ ಹೂ ಮುಡಿಸಿದಂತಿದೆ. ಬ್ಯಾಂಕ್‍ಗಳಿಗೆ…
ಭಾರತೀಯ ಸೇನೆಯ ತರಬೇತಿ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ಪಿ.ಸಿ.ತಿಮ್ಮಯ್ಯ
May 4, 2020ಶಿಮ್ಲಾ, ಮೇ 3- ಭಾರತೀಯ ಸೇನೆಯ ತರಬೇತಿ ವಿಭಾಗದ (ಎಆರ್‍ಟಿಆರ್‍ಈಸಿ) ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಪಿ.ಸಿ.ತಿಮ್ಮಯ್ಯ ಕಳೆದ ಏಪ್ರಿಲ್ 30ರಂದು ನಿವೃತ್ತಿ ಹೊಂದಿದರು. ಕೊಡಗು ಜಿಲ್ಲೆಯವರಾದ ಪಟ್ಟಚೆರುವಂಡ ಚೆಂಗಪ್ಪ ತಿಮ್ಮಯ್ಯ ನವೆಂಬರ್ 1, 2018ರಂದು ಈ ಹುದ್ದೆಗೇರಿದ್ದು ಕೊಡಗಿನ ಸೈನಿಕ ಪರಂಪರೆಗೆ ಮತ್ತೊಂದು ಗರಿ ಮೂಡಿದಂತಾಗಿತ್ತು. ಏಪ್ರಿಲ್ 4, 1960ರಂದು ಕೊಡಗಿನ ವಿರಾಜಪೇಟೆ ತಾಲೂಕಿನ ಚೆಟ್ಟಳ್ಳಿಯಲ್ಲಿ ಜನಿಸಿದ ಲೆ.ಜ. ತಿಮ್ಮಯ್ಯ ಅವರು ಪಟ್ಟಚೆರುವಂಡ ಪೆÇನ್ನಪ್ಪ ಚೆಂಗಪ್ಪ ಹಾಗೂ ಗೌರು ಚೆಂಗಪ್ಪ ಅವರ ಪುತ್ರ. ಭುವನೇಶ್ವರದ ಸೈನಿಕ ಶಾಲೆ,…
ಮೊಬೈಲ್ ಕ್ಲಿನಿಕ್: 1,738 ಮಂದಿ ಆರೋಗ್ಯ ತಪಾಸಣೆ
May 4, 2020ಮೈಸೂರು,ಮೇ3(ಪಿಎಂ)- ನಗರ ದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಮೈಸೂರು ಮಹಾನಗರಪಾಲಿಕೆಯು ವಿವಿಧ ಸಂಘ-ಸಂಸ್ಥೆಗಳ ಸಹಯೋಗ ದಲ್ಲಿ ಆರಂಭಿಸಿದÀ 12 ಮೊಬೈಲ್ ಕ್ಲಿನಿಕ್ ಗಳು ಭಾನುವಾರ ವಿವಿಧ ಪ್ರದೇಶಗಳಲ್ಲಿ ಒಟ್ಟು 1,738 ಮಂದಿಯ ಆರೋಗ್ಯ ತಪಾಸಣೆ ನಡೆಸಿವೆ. ದೇವಯ್ಯನಹುಂಡಿ, ಕುವೆಂಪುನಗರ, ಕುವೆಂಪುನಗರ ಎಂ ಬ್ಲಾಕ್, ವಿದ್ಯಾರಣ್ಯಪುರಂ, ರಾಜೀವನಗರ, ಕುರುಬಾರಹಳ್ಳಿ, ಇರ್ವಿನ್ ರಸ್ತೆ, ಪಡುವಾರ ಹಳ್ಳಿ, ವಿಜಯನಗರ, ಆಲನಹಳ್ಳಿ, ಗೌಸಿಯಾನಗರ ಹಾಗೂ ನೆಹರು ನಗರ ದಲ್ಲಿ ತಪಾಸಣಾ ಶಿಬಿರ ನಡೆಸಲಾ ಯಿತು. ವೈದ್ಯಕೀಯ ಪರೀಕ್ಷೆಗಾಗಿ ಬಂದಿದ್ದ ಎಲ್ಲರಿಗೂ ಥರ್ಮಲ್ ಸ್ಕ್ಯಾನಿಂಗ್…
ನಂಜನಗೂಡಿನಲ್ಲಿ ಇಂದಿನಿಂದ 15 ವೈನ್ ಸ್ಟೋರ್ ಆರಂಭ
May 4, 2020ನಂಜನಗೂಡು, ಮೇ 3(ರವಿ)-ರಾಜ್ಯ ಸರ್ಕಾರದ ಆದೇಶದಂತೆ ಹಲವು ಷರ ತ್ತಿನ್ವಯ ನಾಳೆ(ಮೇ 4) ನಂಜನಗೂಡು ನಗರ ಸೇರಿದಂತೆ ತಾಲೂಕಿನಾದ್ಯಂತ ಇರುವ 15 ವೈನ್ಸ್ ಸ್ಟೋರ್‍ಗಳು ಆರಂಭವಾಗ ಲಿವೆ ಎಂದು ತಾಲೂಕು ಅಬಕಾರಿ ನಿರೀಕ್ಷಕಿ ಪದ್ಮಾವತಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಜಾರಿಗೊಂಡು ವೈನ್ಸ್ ಸ್ಟೋರ್‍ಗಳು ಸ್ಥಗಿತಗೊಂಡಿದ್ದವು. ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಷರತ್ತು ಬದ್ಧ ಆದೇಶ ಹೊರಡಿಸಿದ್ದು, ಅದರಂತೆ ಸೋಮವಾರದಿಂದ ನಗರದ 1 ಎಂಎಸ್ ಐಎಲ್ ಹಾಗೂ 6 ವೈನ್ಸ್‍ಸ್ಟೋರ್ಸ್, ಗ್ರಾಮಾಂ…
ಮೈಸೂರು ಮೃಗಾಲಯಕ್ಕೆ 2ನೇ ಹಂತದಲ್ಲಿ 45.30 ಲಕ್ಷ ರೂ. ದೇಣಿಗೆ ಸಂಗ್ರಹಿಸಿಕೊಟ್ಟ ಸಚಿವ ಸೋಮಶೇಖರ್
May 3, 2020ಮೈಸೂರು,ಮೇ2(ಎಂಟಿವೈ)- ಲಾಕ್‍ಡೌನ್ ನಿಂದಾಗಿ ಆದಾಯ ಮೂಲಕ್ಕೆ ಕಡಿವಾಣ ಬಿದ್ದ ಹಿನ್ನೆಲೆ ಯಲ್ಲಿ ಕಷ್ಟಕ್ಕೆ ಸಿಲುಕಿದ ಮೈಸೂರು ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ 2ನೇ ಹಂತದಲ್ಲಿ ಸ್ನೇಹಿತರಿಂದ ಸಂಗ್ರ ಹಿಸಿದ್ದ 45.30 ಲಕ್ಷ ರೂ ದೇಣಿಗೆ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಮೈಸೂರು ಮೃಗಾಲಯದ ಆ್ಯಂಪಿಥಿಯೇಟರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ.ಸೋಮ ಶೇಖರ್ 45.30 ಲಕ್ಷ ರೂ.ಗಳ ಚೆಕ್ ಹಾಗೂ ಡಿಡಿಯನ್ನು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಸೋಮಶೇಖರ್,…
ಕೊರೊನಾ: ರಾಜ್ಯದಲ್ಲಿ ಸತ್ತವರ ಸಂಖ್ಯೆ 25 600ರ ಗಡಿ ದಾಟಿದ ಸೋಂಕಿತರ ಸಂಖ್ಯೆ
May 3, 2020ಬೆಂಗಳೂರು, ಮೇ 2(ಕೆಎಂಶಿ)-ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 600ರ ಗಡಿ ದಾಟಿದ್ದು, ಬೆಂಗಳೂರು, ಬೀದರ್, ದಾವಣಗೆರೆಯಲ್ಲಿ ತಲಾ ಒಂದು ಸಾವಿನ ಮೂಲಕ ಸಾವಿನ ಸಂಖ್ಯೆ 25ಕ್ಕೇರಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ ಮೂರು ಮಂದಿಯ ಸಾವನ್ನು ಸರ್ಕಾರ ಪ್ರಕಟಿಸಿದೆ. ಇಂದು ಬೆಳಿಗ್ಗೆ ಬಿಡುಗಡೆ ಮಾಡಲಾದ ಹೆಲ್ತ್ ಬುಲೆಟಿನ್ ನಲ್ಲಿ ಸರ್ಕಾರ ಕೊರೊನಾದಿಂದ 3 ಮಂದಿ ಸಾವನ್ನಪ್ಪಿರುವುದನ್ನು ಬಹಿರಂಗಪಡಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸಲಾರಂಭಿಸಿದ ದಿನಗಳಿಂದ ಇದೇ ಮೊದಲ ಬಾರಿಗೆ ಮೂರು ಮಂದಿಯ ಸಾವಿನ ವರದಿ ಬಹಿರಂಗಗೊಳ್ಳುತ್ತಿದೆ. ಬೆಂಗಳೂರು…
ಪೌರಕಾರ್ಮಿಕರಿಗೆ 5 ಸಾವಿರ ಮಾಸ್ಕ್, 50 ಲೀ. ಸ್ಯಾನಿಟೈಸರ್ ವಿತರಣೆ
May 3, 2020ಮೈಸೂರು, ಮೇ2 (ಆರ್‍ಕೆಬಿ)- ಕೊರೊನಾ ವಾರಿಯರ್ಸ್ ರೀತಿಯಲ್ಲಿಯೇ ಮೈಸೂರಿನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರಿಗಾಗಿ 5 ಸಾವಿರ ಮಾಸ್ಕ್, 50 ಲೀ. ಸ್ಯಾನಿಟೈಸರ್ ಅನ್ನು ಬಿಜೆಪಿ ರೈತ ಮುಖಂಡ ಮಲ್ಲೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಮೂಲಕ ಮೈಸೂರು ನಗರಪಾಲಿಕೆಗೆ ನೀಡಿದರು. ಸಚಿವ ಎಸ್.ಟಿ.ಸೋಮಶೇಖರ್ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಮೇಯರ್ ತಸ್ನೀಂ ಮತ್ತು ಉಪ ಮೇಯರ್ ಸಿ.ಶ್ರೀಧರ್ ಅವರಿಗೆ ಶನಿವಾರ ಹಸ್ತಾಂತರಿಸಿದರು. ಕೊರೊನಾ ಸೋಂಕಿನ ಭೀತಿ ನಡುವೆಯೂ ಜೀವ ಒತ್ತೆ ಇಟ್ಟು ನಗರದ…










