ಮೈಸೂರು, ಮೇ 3(ಎಸ್‍ಬಿಡಿ)-ಮೈಸೂರು ನಗರದಲ್ಲಿ ವಾಣಿಜ್ಯ ರಸ್ತೆಗಳನ್ನು ಹೊರತುಪಡಿಸಿ ಉಳಿ ದೆಲ್ಲೆಡೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾ ಗಿದೆ. ಅದೇ ವೇಳೆ ಗ್ರಾಮಾಂತರ ಪ್ರದೇಶದಲ್ಲಿ ಮಾಲ್ ಹೊರತು ಪಡಿಸಿ ಎಲ್ಲಾ ರೀತಿಯ ಅಂಗಡಿಗಳನ್ನೂ ತೆರೆಯಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಲಾಕ್‍ಡೌನ್ 3ನೇ ಅವಧಿಯಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಸಂಚಾರ, ವ್ಯಾಪಾರ-ವಹಿವಾಟು, ಕಟ್ಟಡ ನಿರ್ಮಾಣ, ಕೈಗಾರಿಕೆ ಇನ್ನಿತರ ಆರ್ಥಿಕ ಚಟುವಟಿಕೆ ಗಳ ಕುರಿತು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರಪಾಲಿಕೆ ಆಯುಕ್ತ ಗುರು ದತ್…
ಇಂದಿನಿಂದ ವೈನ್‍ಶಾಪ್, ಎಂಎಸ್‍ಐಎಲ್ ಶಾಪ್‍ನಲ್ಲಿ ಮದ್ಯ ಮಾರಾಟ
May 4, 2020ಮೈಸೂರು, ಮೇ 3(ಎಂಟಿವೈ)- ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಕಳೆದ 42 ದಿನಗಳಿಂದ ಮುಚ್ಚಲ್ಪಟ್ಟಿದ್ದ ವೈನ್ ಶಾಪ್ ಹಾಗೂ ಎಂಎಸ್‍ಐಎಲ್ ಮದ್ಯ ದಂಗಡಿಗಳು ಸೋಮವಾರ (ಮೇ4) ತೆರೆಯಲಿದ್ದು, ಕೊರೊನಾ ಸೋಂಕು ಹರಡು ವುದನ್ನು ತಡೆಗಟ್ಟಲು ಗ್ರಾಹ ಕರು ಕಡ್ಡಾಯವಾಗಿ ಸಾಮಾ ಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳುವಂತೆ ಅಬ ಕಾರಿ ಇಲಾಖೆ ಅಧಿಕಾರಿಗಳು ವೈನ್‍ಸ್ಟೋರ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ನೊವೆಲ್ ಕೊರೊನಾ ಹಿನ್ನೆಲೆಯಲ್ಲಿ ಮಾ.23ರಿಂದ ರಾಜ್ಯ ದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಅದೇ ದಿನ ಮೈಸೂರು ಜಿಲ್ಲೆಯ ಎಲ್ಲಾ…
ಅಂತರ ಜಿಲ್ಲೆ-ರಾಜ್ಯ ಸಂಚಾರ: ಕೆಲ ನಿರ್ಬಂಧ
May 4, 2020ಮೈಸೂರು, ಮೇ 3- ಅಂತರ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಂಚರಿಸುವವರನ್ನು ವೈದ್ಯಕೀಯ ಪರೀಕ್ಷೆ ನಡೆಸಿ, 14 ದಿನಗಳ ಹೋಂ ಕ್ವಾರಂ ಟೈನ್‍ಗೆ ಸೂಚಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ಫೇಸ್‍ಬುಕ್ ಲೈವ್‍ನಲ್ಲಿ ಮಾಹಿತಿ ನೀಡಿದ ಅವರು, ಅಂತರ ಜಿಲ್ಲೆ ಹಾಗೂ ರಾಜ್ಯಕ್ಕೆ ಅಗತ್ಯವಾಗಿ ಹೋಗ ಲೇಬೇಕು ಎನ್ನುವವರಿಗೆ ಪಾಸ್ ವ್ಯವಸ್ಥೆಯಿದೆ. ಈ ಕಡೆಯಿಂದ ಹೋಗಲು ಅವಕಾಶವಿದೆಯೇ ಹೊರತು ವಾಪಸ್ ಬರುವಂತಿಲ್ಲ. ಹೀಗೆ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಗುವವರು ಹಾಗೂ ಬೇರೆ ಕಡೆಯಿಂದ ನಮ್ಮ…
ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಇನ್ನಿಲ್ಲ
May 4, 2020ಬೆಂಗಳೂರು, ಮೇ 3- ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್.ನಿಸಾರ್ ಅಹಮದ್ ಭಾನುವಾರ ವಿಧಿವಶರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಅವರು, ಭಾನುವಾರ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆ.5ರಂದು ಜನಿಸಿದರು. 1959ರಲ್ಲಿ ಭೂವಿಜ್ಞಾನ ಸ್ನಾತಕೋತ್ತರ ಪದವಿ ಪಡೆದರು. ಅವರು, 1994ರವರೆಗೆ ವಿವಿಧ ಸರ್ಕಾರಿ ಕಾಲೇಜು ಗಳಲ್ಲಿ ಅಧ್ಯಾಪಕರಾಗಿ…
ಮೈಸೂರಲ್ಲಿ ಮತ್ತೆ 8 ಮಂದಿ ಡಿಸ್ಚಾರ್ಜ್: 13ಕ್ಕೆ ಕುಸಿದ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ
May 4, 2020ಮೈಸೂರು, ಮೇ 3(ಎಂಟಿವೈ)- ಗ್ರೀನ್ ಜೋóóನ್‍ನತ್ತ ದಾಪುಗಾಲು ಇಡುತ್ತಿರುವ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಭೀತಿ ತೆರೆಮರೆಗೆ ಸರಿಯು ತ್ತಿದ್ದು, ಭಾನುವಾರವೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಆದರೆ 8 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಆ್ಯಕ್ಟೀವ್ ಕೇಸ್ 13ಕ್ಕೆ ಕುಸಿತ ವಾಗಿರುವುದು ಜಿಲ್ಲೆಯ ಜನರಲ್ಲಿ ಸಮಾಧಾನ ತಂದಿತ್ತಿದೆ. ಕಳೆದ 4 ದಿನದಿಂದಲೂ ಮೈಸೂರಲ್ಲಿ ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗದೆ ಇರುವುದು ಕೊರೊನಾ ಆತಂಕ ನಿವಾರಣೆಯಾದಂತೆ ಕಂಡುಬರುತ್ತಿದೆ. ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ಮಂದಿ(ಪಿ-265,…
ಮೈಸೂರಿನ ಈ ರಸ್ತೆಗಳಲ್ಲಿ ವಾಣಿಜ್ಯ ವ್ಯವಹಾರವಿಲ್ಲ
May 4, 2020ಮೈಸೂರು,ಮೇ 3-ಮೈಸೂರು ನಗರದಲ್ಲಿ ಲಾಕ್‍ಡೌನ್ ಸಡಿಲಗೊಳಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದರೂ ಕೂಡ ಪ್ರಮುಖ ವಾಣಿಜ್ಯ ರಸ್ತೆಗಳಾದ ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಕಾಂತರಾಜ ಅರಸ್ ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ ಸೇರಿದಂತೆ ಈ ಕೆಳಕಂಡ 91 ರಸ್ತೆಗಳಲ್ಲಿ ಅತ್ಯಾವಶ್ಯಕ ವಸ್ತುಗಳ ಮಾರಾಟ ಹೊರತುಪಡಿಸಿ ಇನ್ನುಳಿದ ವಾಣಿಜ್ಯ ವ್ಯವಹಾರಗಳು ನಡೆಯುವಂತಿಲ್ಲ. ಡಿ. ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಕೆ.ಟಿ.ಸ್ಟ್ರೀಟ್,…
ಲಾಕ್‍ಡೌನ್: ಇಂದು ಪ್ರಧಾನಿ ಮೋದಿ ಭಾಷಣ
May 4, 2020ನವದೆಹಲಿ,ಮೇ3-ದೇಶಾದ್ಯಂತ 2ನೇ ಹಂತದ ಲಾಕ್‍ಡೌನ್ ಇಂದಿಗೆ ಮುಕ್ತಾಯ ವಾಗಲಿದೆ. 3ನೇ ಹಂತದ ಲಾಕ್‍ಡೌನ್ ನಾಳೆಯಿಂದ ಆರಂಭವಾಗಲಿದ್ದು, ಈ ಕುರಿತು ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭಾಷಣ ಮಾಡಲಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 17ರವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದು ಕೊರೊನಾ ಕುರಿತಾದ…
ಮೈಸೂರಿನ ಮತ್ತೆರಡು ಪ್ರದೇಶ ಕಂಟೇನ್ಮೆಂಟ್ ಮುಕ್ತ
May 4, 2020ಮೈಸೂರು, ಮೇ 3(ಪಿಎಂ)- ಕೊರೊನಾ ಸೋಂಕು ಪತ್ತೆ ಯಾಗಿ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದ್ದ ಮತ್ತೆರಡು ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್‍ನಿಂದ ಮುಕ್ತ ಗೊಳಿಸಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಆದೇಶ ಹೊರಡಿಸಿ ದ್ದಾರೆ. ನಗರದ ಲಷ್ಕರ್ ಮೊಹಲ್ಲಾ ಹಾಗೂ ಗೋಕುಲಂ ಪ್ರದೇಶವನ್ನು ಕಂಟೇನ್ಮೆಂಟ್ ಹಾಗೂ ಬಫರ್ ವಲಯದಿಂದ ಕೈಬಿಟ್ಟು ಜಿಲ್ಲಾಧಿಕಾರಿಗಳು ಭಾನುವಾರ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಲಷ್ಕರ್ ಮೊಹಲ್ಲಾ ಹಾಗೂ ಗೋಕುಲಂನಲ್ಲಿ ಸೋಂಕಿತರ ವಾಸಸ್ಥಳ ಸುತ್ತಳತೆಯ 100 ಮೀ. ವ್ಯಾಪ್ತಿ ಪ್ರದೇಶವನ್ನು ಕಂಟೇನ್ಮೆಂಟ್ ವಲಯವನ್ನಾಗಿ ಹಾಗೂ ಕಂಟೇನ್ಮೆಂಟ್…
ಮೈಸೂರಲ್ಲಿ ಭಾರೀ ಮಳೆ
May 4, 2020ಮೈಸೂರು,ಮೇ 3(ವೈಡಿಎಸ್)- ಮೈಸೂರಲ್ಲಿ ಭಾನುವಾರ ರಾತ್ರಿ ಸುರಿದ ಜೋರು ಮಳೆಗೆ ವಿವಿಧೆಡೆ ಮರಗಳು ಧರೆಗುರುಳಿವೆ. ರಾತ್ರಿ 10.30ರವೇಳೆಗೆ ಗುಡುಗಿನೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು. ಇದರಿಂದ ಕುವೆಂಪುನಗರದ ವಾಟರ್‍ಟ್ಯಾಂಕ್ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಕಾರಿನ ಮೇಲ್ಬಾಗ ನಜ್ಜುಗುಜ್ಜಾಗಿದೆ. ಹಾಗೆಯೇ ಎಸ್‍ಪಿ ಕಚೇರಿ ಬಳಿ, ಕಾಳಿದಾಸ ರಸ್ತೆಯ ಮುತ್ತೂಟ್ ಫೈನಾನ್ಸ್, ಜಯನಗರ, ಉದಯಗಿರಿಯ ಟಿಪ್ಪು ಪಾರ್ಕ್ ಬಳಿ, ಕಲಾಮಂದಿರದ ಮುಂಭಾಗದ ಹುಣಸೂರು ರಸ್ತೆ, ಸರಸ್ವತಿಪುರಂನ…
ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಅಂತರ ಕಾಯ್ದುಕೊಳ್ಳಲು ಚೌಕಾಕೃತಿ ರಚನೆ
May 4, 2020ಮೈಸೂರು, ಮೇ 3(ಪಿಎಂ)- ಸಾರಿಗೆ ಸೇವೆಗೆ ಅನುಮತಿ ಲಭ್ಯವಾದರೆ ಕೊರೊನಾ ಹಿನ್ನೆಲೆಯಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಅಗತ್ಯ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿಯೇ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡು ಪ್ರಯಾಣಿಕರು ಸಾಲಾಗಿ ನಿಂತು ಬಸ್‍ನೊಳಕ್ಕೆ ಪ್ರವೇಶಿಸಲು ಅನುಕೂಲ ವಾಗುವಂತೆ ಹಳದಿ ಬಣ್ಣದಲ್ಲಿ 5 ಅಡಿ ಅಂತರಕ್ಕೊಂದು ಚೌಕಾಕಾರ ರಚಿಸಲಾಗಿದೆ. ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಿಗೆ ಪ್ರಯಾಣಿಸಲು ಇಲ್ಲಿಂದ ಬಸ್…










