ಮೈಸೂರು, ಮೇ 6 (ಆರ್‍ಕೆಬಿ)- ಮೈಸೂರಿನ ಕೋವಿಡ್-19 ಆಸ್ಪತ್ರೆಯಲ್ಲಿ 10 ದಿನಗಳ ಕರ್ತವ್ಯ ನಿರ್ವಹಿಸಿ, ಬಳಿಕ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ ನಾಲ್ವರು ವೈದ್ಯರು ಮತ್ತು 8 ಸ್ಟಾಫ್‍ನರ್ಸ್‍ಗಳನ್ನು ಒಳಗೊಂಡ ಕೊರೊನಾ ವಾರಿಯರ್ಸ್‍ನ 3ನೇ ತಂಡ ಮಂಗಳವಾರ ಮನೆಗೆ ಮರಳಿದೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯ ರಾಜಲಕ್ಷ್ಮಿ ಕಂಫರ್ಟ್ ನಲ್ಲಿ 14 ದಿನಗಳಿಂದ ಕ್ವಾರಂಟೈನ್‍ನಲ್ಲಿದ್ದ ಈ 12 ಮಂದಿಗೆ ಮೈಸೂರು ನಗರಪಾಲಿಕೆ ಅಧಿಕಾರಿಗಳು, ಲಯನ್ಸ್ ಸಂಸ್ಥೆ ಪದಾಧಿ ಕಾರಿಗಳು ಬುಧವಾರ ಗೌರವದ ಸೆಲ್ಯೂಟ್ ಹೊಡೆದು, ಹಣ್ಣು,…
ಸಾವಿರ ಬಡ ಕುಟುಂಬಗಳಿಗೆ ನೆರವಾದ ಇನ್ಫೋಸಿಸ್
May 7, 2020ಮೈಸೂರು, ಮೇ 6- ಕೋವಿಡ್-19 ನಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ ಇನ್ಫೋಸಿಸ್ ಫೌಂಡೇಶ್‍ನ್ ವತಿಯಿಂದ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ, ವಲಸೆ ಕಾರ್ಮಿಕರು ಮತ್ತು ಅಸಂಘ ಟಿತ ವಲಯ ಕಾರ್ಮಿಕರೊಳಗೊಂಡ ಒಟ್ಟು 1 ಸಾವಿರ ಕುಟುಂಬಗಳಿಗೆ ಅಕ್ಕಿ, ಎಣ್ಣೆ, ಹಿಟ್ಟುಗಳು ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಹೊಂದಿ ರುವ 1000 ಕಿಟ್‍ಗಳನ್ನು ವಿತರಿಸಲಾಯಿತು. ಮೈಸೂರು ಜಿಲ್ಲಾಡಳಿತದ ಪರವಾಗಿ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ನಿರ್ಗತಿಕರಿಗೆ ನೆರವಾಗುವಂತೆ ಕೋವಿಡ್-19 ಸಹಾಯ ಟಾಸ್ಕ್ ಫೋರ್ಸ್‍ನ ಸದಸ್ಯರಾಗಿರುವ ಇನ್ಫೋಸಿಸ್‍ನ ಫಾಥಾಹೀನ್…
ನಿರಾಶ್ರಿತರ ಶಿಬಿರದಲ್ಲಿದ್ದ ರಾಜಾಸ್ತಾನಿಗಳು ಮರಳಿ ಮನೆಗೆ
May 7, 2020ಮೈಸೂರು,ಮೇ 6(ಆರ್‍ಕೆಬಿ)- ಲಾಕ್ ಡೌನ್‍ನಿಂದಾಗಿ ಊರು ಸೇರಲಾಗದೇ ಮೈಸೂರಿನ ನಿರಾಶ್ರಿತ ಕೇಂದ್ರದಲ್ಲಿ ಲಾಕ್ ಆಗಿದ್ದ ರಾಜಸ್ತಾನದ 170 ಮಂದಿಗೆ ಅವರ ವರ ಊರಿಗೆ ತೆರಳುವ ಅವಕಾಶ ಲಭಿಸಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವಿವಿಧೆಡೆ ಮೇವಾಡ್ ಐಸ್‍ಕ್ರೀಂ, ಪಾನಿಪುರಿ, ಬೇಲ್‍ಪುರಿ ವ್ಯಾಪಾರ ಮಾಡಿ ಕೊಂಡಿದ್ದ ರಾಜಸ್ತಾನ ಮೂಲದ 23 ಮಹಿಳೆ ಯರು, 22 ಮಕ್ಕಳು ಸೇರಿದಂತೆ 170 ಮಂದಿ ಕಳೆದ 35 ದಿನಗಳಿಂದ ಸಿದ್ದಾರ್ಥ ನಗರದ ಸಿಐಟಿಬಿ ಛತ್ರದಲ್ಲಿ ಆಶ್ರಯ ಪಡೆದಿದ್ದರು. 2 ಲಾರಿಗಳಲ್ಲಿ ಮಾ.30ರಂದು ರಾಜ…
ಮೈಸೂರಿನಲ್ಲಿ ನಿರ್ಮಾಣ ಕಾಮಗಾರಿ ಪುನಾರಂಭ
May 6, 2020ಬಾಗಿಲು ತೆರೆದ ಹಾರ್ಡ್‍ವೇರ್, ಸಿಮೆಂಟ್ ಮಾರಾಟ ಮಳಿಗೆಗಳು ಮನೆ ಮಾಲೀಕರು, ಮೇಸ್ತ್ರಿಗಳು, ಕಟ್ಟಡ ಕಾರ್ಮಿಕರಲ್ಲಿ ಹರ್ಷ 42 ದಿನಗಳಿಂದ ಜಡ್ಡುಗಟ್ಟಿ ಹೋಗಿದ್ದ ಬದುಕಿಗೆ ಹೊಸ ಹುರುಪು ಮೈಸೂರು, ಮೇ 5(ಬಿವಿಎಂಸಿ)-ದೇಶಾದ್ಯಂತ ಜನಸಾಮಾನ್ಯರ ಬದುಕನ್ನು ಅವರದೇ ಮನೆಯೊಳಗೆ ಕಟ್ಟಿ ಹಾಕಿದ್ದ `ಲಾಕ್‍ಡೌನ್’ ಕೊನೆಗೂ 3ನೇ ಹಂತದಲ್ಲಿ ತುಸು ಸಡಿಲಾಗಿದೆ. ವಾಹನ ಸಂಚಾರಕ್ಕೆ ಸ್ವಲ್ಪ ಪ್ರಮಾಣದಲ್ಲಿ ಅವಕಾಶವಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರ ಮತ್ತೆ ಆರಂಭವಾಗಿದೆ. ಇದರೊಟ್ಟಿಗೇ ಕಟ್ಟಡ ನಿರ್ಮಾಣ ಕಾಮಗಾರಿಯ ಪುನಾ ರಂಭಕ್ಕೂ ಅವಕಾಶ ಮಾಡಿಕೊಡಲಾಗಿದೆ. ಅರ್ಧಕ್ಕೆ ಮನೆ…
ಲಾಕ್‍ಡೌನ್ ಸಡಿಲಿಕೆ ಬೆನ್ನ ಹಿಂದೆಯೇ ಭೂತವಾಗಿ ಕಾಡಲಾರಂಭಿಸಿದ ತ್ಯಾಜ್ಯ ಸಮಸ್ಯೆ
May 6, 2020ಮೈಸೂರು, ಮೇ 5(ಎಸ್‍ಬಿಡಿ)- ಲಾಕ್‍ಡೌನ್ ಸಡಿಲಿಕೆ ಬೆನ್ನಲ್ಲೇ ಮೈಸೂರು ನಗರದಲ್ಲಿ ತ್ಯಾಜ್ಯದ ಸಮಸ್ಯೆ ಶುರುವಾಗಿದೆ. ಮೈಸೂರು ಜಿಲ್ಲೆ ರೆಡ್ ಜೋನ್‍ನಲ್ಲಿದ್ದರೂ ಸರ್ಕಾರಗಳ ಸೂಚನೆಯಂತೆ ಲಾಕ್‍ಡೌನ್ ಅನ್ನು ಭಾಗಶಃ ಸಡಿಲಗೊ ಳಿಸಲಾಗಿದೆ. ಪ್ರಮುಖ ವಾಣಿಜ್ಯ ಕೇಂದ್ರಗಳು ಹಾಗೂ ರಸ್ತೆಗಳ ಹೊರತುಪಡಿಸಿ ಉಳಿದೆಡೆ ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಬಹುತೇಕ ಹೋಟೆಲ್‍ಗಳಲ್ಲಿ ಪಾರ್ಸೆಲ್ ಸೇವೆ ಆರಂಭ ವಾಗಿದೆ. ಮದ್ಯದಂಗಡಿಗಳಲ್ಲೂ ವ್ಯಾಪಾರ ಜೋರಾಗಿ ನಡೆಯುತ್ತಿದೆ. ವ್ಯಾಪಾರಕ್ಕೆ ನಿಗದಿಪಡಿಸಿದ್ದ ಅವಧಿ ಒಂದು ಗಂಟೆ ಅಂದರೆ ಸಂಜೆ 7ರವರೆಗೆ ವಿಸ್ತರಿಸ ಲಾಗಿದೆ….
ಪಾಸ್‍ಗಾಗಿ ಬಂದ ವಲಸೆ ಕಾರ್ಮಿಕರ ಹಸಿವು ನೀಗಿಸಿದ ಪೊಲೀಸರು
May 6, 2020ಮೈಸೂರು, ಮೇ 5(ಆರ್‍ಕೆ)- ಪಾಸ್ ಕೇಳಲು ಬಂದ ವಲಸೆ ಕಾರ್ಮಿಕರಿಗೆ ಊಟದ ಪ್ಯಾಕೆಟ್ ನೀಡಿದ ಪೊಲೀಸರು ಹಸಿವು ನೀಗಿಸಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯ ಡಿಸಿಪಿ ಕಚೇರಿಗೆ ಪ್ರತಿದಿನ ಪಾಸ್ ಪಡೆಯಲು ನೂರಾರು ಮಂದಿ ವಲಸೆ ಕಾರ್ಮಿಕರು ಬಂದು ಕಾಯುತ್ತಿದ್ದು, ಅವರು ಹಸಿವಿನಿಂದಿದ್ದಾರೆ ಎಂಬುದನ್ನು ಅರಿತ ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡರು ಆಹಾರದ ಪ್ಯಾಕೆಟ್ ಗಳನ್ನು ತರಿಸಿ ಕೊಡುತ್ತಿದ್ದಾರೆ. ಅಂತರ ಜಿಲ್ಲೆ ಮತ್ತು ಅಂತರ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಕೋವಿಡ್-19 ಲಾಕ್‍ಡೌನ್‍ನಿಂದ ಕೆಲಸವಿಲ್ಲದೇ, ತಮ್ಮ…
ರಾಜ್ಯಾದ್ಯಂತ 50 ಸಾವಿರ ಕಾರ್ಮಿಕರು ಸ್ವಸ್ಥಳಕ್ಕೆ
May 5, 2020ಬೆಂಗಳೂರು, ಮೇ 4(ಕೆಎಂಶಿ)- ರಾಜ್ಯಾದ್ಯಂತ 50 ಸಾವಿರ ಕಾರ್ಮಿಕರು ತಮ್ಮ ನೆಲೆ ಸೇರಿದ್ದಾರೆ. ಬೆಂಗಳೂರು ಸೇರಿದಂತೆ ನಗರ ಪಟ್ಟಣಗಳಲ್ಲಿ ತಮ್ಮ ಊರುಗಳಿಗೆ ಸೇರಲು ಬಸ್ ನಿಲ್ದಾಣ ಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಕಾರ್ಮಿಕರಷ್ಟೇ ಅಲ್ಲದೆ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದ್ದಾರೆ. ಇದನ್ನರಿತ ಮುಖ್ಯಮಂತ್ರಿಯವರು ಮತ್ತೆ ಎರಡು ದಿನಗಳ ಕಾಲ ಉಚಿತ ಸಾರಿಗೆ ವ್ಯವಸ್ಥೆ ಯನ್ನು ಮುಂದುವರೆಸಿದ್ದಾರೆ. ಸಾಮಾಜಿಕ ಅಂತರ ಮತ್ತು ವೈದ್ಯ ಕೀಯ ಪರೀಕ್ಷೆ ನಡೆಸಿ, ಪ್ರಯಾಣಿಕರನ್ನು ಅವರ ಬಯಸಿದ ಊರುಗಳಿಗೆ ಕಳುಹಿ ಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮಂಗಳವಾರ…
ಸರ್ಕಾರದ ವಿವಿಧ ಇಲಾಖಾ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರು
May 5, 2020ಮೈಸೂರು, ಮೇ 4- ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿ ನಲ್ಲಿ ರಾಜ್ಯ ಸರ್ಕಾರವು ಅತ್ಯಗತ್ಯ ಸೇವೆ ಒದಗಿಸುವ 10 ಪ್ರಮುಖ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆ ನೌಕ ರರು ಕರ್ತವ್ಯಕ್ಕೆ ಹಾಜರಾಗಲು ನೀಡಿದ್ದ ವಿನಾಯಿತಿಯನ್ನು ಹಿಂಪಡೆದ ಪರಿಣಾಮ ವಾಗಿ ಸೋಮವಾರ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಣೆ ಆರಂಭಿಸಿದವು. ಅತ್ಯಗತ್ಯ ಸೇವೆ ಒದಗಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಒಳಾಡಳಿತ, ಕಂದಾಯ, ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ,…
ಬೆಂಗಳೂರಲ್ಲಿ ಬಿಹಾರಿ ವಲಸೆ ಕಾರ್ಮಿಕರ ದಾಂಧಲೆ
May 5, 2020ಬೆಂಗಳೂರು, ಮೇ 4- ಕೂಲಿ ಕೆಲಸ ಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಬಿಹಾ ರದ ವಲಸೆ ಕಾರ್ಮಿಕರು ಸೋಮವಾರ ಸಂಜೆ ತಮ್ಮ ತಮ್ಮ ಊರುಗಳಿಗೆ ಕಳು ಹಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಾವರ ಬಳಿ ಪುಂಡಾಟ ನಡೆಸಿ, ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಬೆಂಗಳೂರಿನ ವಿವಿಧೆಡೆಯಿಂದ ಬಂದು ಇಂದು ಸಂಜೆ ಮಾದಾವರ ಬಳಿ ಜಮಾ ಯಿಸಿದ ಸಾವಿರಾರು ಬಿಹಾರಿ ವಲಸೆ ಕಾರ್ಮಿ ಕರು ತಮ್ಮನ್ನು ವಿಶೇಷ ರೈಲು ಮೂಲಕ ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡ…
ಕೊರೊನಾ ವೈರಸ್ ವುಹಾನ್‍ನಿಂದ ಬಂದಿದೆ ಎನ್ನಲು ನಮ್ಮ ಬಳಿ ಸಾಕ್ಷ್ಯವಿದೆ: ಅಮೆರಿಕಾ
May 5, 2020ವಾಷಿಂಗ್ಟನ್,ಮೇ 4- ಕೊರೊನಾ ವೈರಸ್ ಉಗಮ ಸ್ಥಾನ ವುಹಾನ್ ವನ್ಯ ಜೀವಿ ಮಾಂಸ ಮಾರುಕಟ್ಟೆಯಲ್ಲ, ಅದೇ ವುಹಾನ್‍ನ ವೈರಾಣು ಲ್ಯಾಬ್ ಎಂದು ಹೇಳಲು ನಮ್ಮ ಬಳಿ ಸಾಕ್ಷ್ಯ ವಿದೆ ಎಂದು ಅಮೆರಿಕಾ ಹೇಳಿದೆ. ಈ ಹಿಂದೆ ಇದೇ ಮಾತನ್ನು ಟ್ರಂಪ್ ಅವರು ಹೇಳಿದ್ದು, ಈ ವಾದ ವನ್ನು ಇದೀಗ ಅಮೆರಿಕಾ ಕಾರ್ಯ ದರ್ಶಿ ಮೈಕ್ ಪಾಂಪಿಯೋ ಬೆಂಬ ಲಿಸಿದ್ದಾರೆ. ಅಮೆರಿಕಾದ ಸುದ್ದಿ ವಾಹಿನಿ ನಡೆಸಿದ್ದ ದಿನ್ ವೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಪಾಂಪಿಯೋ ಅವರು, ಕೊರೊನಾ ಚೀನಾದ ವುಹಾನ್…









