ಮೈಸೂರು,ಏ.26(ಎಂಟಿವೈ)- ಮೈಸೂರಿನ ಸಂಘ ಪರಿವಾರದ ಹಿರಿಯ ನಾಯ ಕರು ಹಾಗೂ ಪಾಲಿಕೆ ಮಾಜಿ ಸದಸ್ಯರೂ ಆದ ಎನ್.ಆರ್.ಚಂದ್ರಶೇಖರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ ಕರೆ ಮಾಡಿ ಕುಶಲೋಪರಿ ವಿಚಾರಿಸಿ ದರಲ್ಲದೆ, ಪಕ್ಷ ಸಂಘಟನೆಗೆ ಶ್ರಮಿಸಿದ್ದನ್ನು ಗುಣಗಾನ ಮಾಡಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂ 4ನೇ ಮೇನ್, 9ನೇ ಕ್ರಾಸ್ ನಿವಾಸಿ ಎನ್.ಆರ್.ಚಂದ್ರಶೇಖರ್(77) ಅವರ ಮೊಬೈಲ್‍ಗೆ ಭಾನುವಾರ ಮಧ್ಯಾಹ್ನ ದೆಹಲಿಯ ಪ್ರಧಾನಿ ಕಚೇರಿಯಿಂದ ಕರೆ ಮಾಡಿ, ಮೋದಿಯವರು ನಿಮ್ಮೊಂ ದಿಗೆ ಮಾತನಾಡಬೇಕು ಸಮಯ ನೀಡುವಿರಾ? ಎಂದು ಕೇಳಿದ್ದಾರೆ. ಇದರಿಂದ…
ಬ್ರಿಟನ್ ಕನ್ನಡಿಗರೊಂದಿಗೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ
April 27, 2020ಬೆಂಗಳೂರು,ಏ.26-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಇಂಗ್ಲೆಂಡ್‍ನಲ್ಲಿರುವ ಕನ್ನಡ ಬಳಗದವರೊಂದಿಗೆ ವಿಡಿಯೋ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿದರು. ಯುಕೆ ಕಾನೂನು ಸಚಿವ ರಾಬರ್ಟ್ ಬಕ್ಲಂಡ್, ಬ್ರಿಟನ್‍ನಲ್ಲಿ ಕೊರೊನಾ ಹರಡು ತ್ತಿರುವ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಷ್ಟೇ ಅಲ್ಲದೆ ಕರ್ನಾ ಟಕದಲ್ಲಿ ಕೊರೊನಾ ನಿಗ್ರಹ ಮಾಡುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಕನ್ನಡಿಗ ಶರವಣ ಗುರುಮೂರ್ತಿ ಮಾತನಾಡಿ, ಇಲ್ಲಿ ಅಧ್ಯಯನ ಮಾಡುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಸಾಲ ಮಾಡಿ ಇಲ್ಲಿಗೆ…
ಮೈಸೂರಲ್ಲಿ ಕ್ವಾರಂಟೈನ್ ಸಂಖ್ಯೆ ಇಳಿಮುಖ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್
April 27, 2020ಮೈಸೂರು,ಏ.26(ಆರ್‍ಕೆಬಿ)- ಮೈಸೂರಿನಲ್ಲಿ ಕ್ವಾರಂಟೈನ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 28 ದಿನಗಳ ಅವಧಿಯ ಕ್ವಾರಂಟೈನ್ ಪ್ರಕರಣಗಳಲ್ಲಿ ನಮ್ಮಲ್ಲಿ ಸದ್ಯ ಒಟ್ಟು 830 ಜನ ಇದ್ದಾರೆ. ಶನಿವಾರ ಬಂದಿರುವ ಮಹಿಳೆಯೊಬ್ಬರ ಪಾಸಿಟಿವ್ ಪ್ರಕರಣದಲ್ಲಿ ಮಹಿಳೆ ಸಂಪರ್ಕ ಕೂಡ ಕಡಿಮೆ ಇದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇಂದಿಲ್ಲಿ ತಿಳಿಸಿದರು. ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಜಿಲ್ಲೆಯಲ್ಲಿ 300ಕ್ಕೂ ಅಧಿಕ `ಎಸ್‍ಎ ಆರ್‍ಐ’ (Severe Acute Respiratory Illness) ಪ್ರಕರಣಗಳು ಪತ್ತೆಯಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸ ಲಾಗಿದೆ….
ಲಾಕ್‍ಡೌನ್ ನಂತರ ವೈರಸ್ ಇಮ್ಯುನಿಟಿ ಪಾಸ್ ನೀಡಕೂಡದು
April 27, 2020ಜಿನೀವಾ,ಏ.26-ಲಾಕ್‍ಡೌನ್ ತೆರವು ಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ಜನರಿಗೆ ನೀಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ತಿಳಿಸಿದೆ. ಕೊರೊನಾ ವೈರಸ್‍ನ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಂಶೋಧಕರು ನೀಡಿರುವ ಸಲಹೆಯನ್ನಾಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ಈ ಮಾರ್ಗಸೂಚಿ ಯನ್ನು ಕಳಿಸಿದೆ. ವೈರಾಣುವಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಂತೆಲ್ಲಾ ಈ ಮಾರ್ಗ ಸೂಚಿಗಳು ಬದಲಾವಣೆಯಾಗಲಿವೆ ಎಂದು ವಿಶ್ವ ಸಂಸ್ಥೆ ಹೇಳಿರುವುದನ್ನು ಬಿಬಿಸಿ ವರದಿ ಮಾಡಿದೆ. ಕೊರೊನಾ ವೈರಸ್ ಸೋಂಕು ತಗುಲಿದರೆ ಅದು…
ಜುಬಿಲಂಟ್; ಶೀಘ್ರದಲ್ಲೇ ಕೊರೊನಾ ಸೋಂಕಿನ ಮೂಲ ಪತ್ತೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ವಿಶ್ವಾಸ
April 27, 2020ಮೈಸೂರು, ಏ.26(ಆರ್‍ಕೆಬಿ)- ನಂಜನಗೂಡು ತಾಲೂಕಿನ ಜ್ಯುಬಿಲಂಟ್ ಕಾರ್ಖಾನೆ ಸಿಬ್ಬಂದಿಯಿಂದ ಕೊರೊನಾ ಸೋಂಕು ಹರಡಿದ್ದು, ಸೋಂಕಿನ ಮೂಲ ಯಾವುದು ಎಂಬುದನ್ನು ಶೀಘ್ರದಲ್ಲೇ ಪತ್ತೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರಿನ ವಿದ್ಯಾಪೀಠ ವೃತ್ತದ ಬಳಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತ ನಾಡಿದ ಅವರು, ಸೋಂಕಿನ ಮೂಲ ತಿಳಿಯಲು ತನಿಖೆಗೆ ಸಮರ್ಥ ಅಧಿಕಾರಿಯನ್ನು ನೇಮಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಅಧಿಕಾರಿ ಹರ್ಷಗುಪ್ತ ಅವರಿಗೆ ಮುಖ್ಯಮಂತ್ರಿಗಳು…
ಜುಬಿಲಂಟ್ ಭಾರತೀಯ ಗ್ರೂಪ್‍ನಿಂದ `ಪಿಎಂ ಕೇರ್ಸ್ ಫಂಡ್’ಗೆ 10 ಕೋಟಿ ರೂ. ದೇಣಿಗೆ
April 27, 2020ಮೈಸೂರು, ಏ.26- ಔಷಧ ತಯಾರಿಕೆ ಮತ್ತು ಸಿದ್ಧ ಆಹಾರ ಪದಾರ್ಥಗಳ ಉದ್ಯಮ ಕ್ಷೇತ್ರದ ಕಂಪನಿಗಳ ಸಮೂಹವಾದ `ಜುಬಿಲೆಂಟ್ ಭಾರತೀಯ ಗ್ರೂಪ್’ ಕೋವಿಡ್-19 ವೈರಾಣು ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರಕ್ಕೆ ನೆರವಾಗಲು ಪಿಎಂ ಕೇರ್ಸ್ ಫಂಡ್‍ಗೆ 10 ಕೋಟಿ ರೂ. ದೇಣಿಗೆ ನೀಡಿರುವುದಾಗಿ ಹೇಳಿದೆ. ಭಾರತದಲ್ಲಿ ಅತಿದೊಡ್ಡ ಸಿದ್ಧ ಆಹಾರ ಸೇವೆಗಳ ಹಾಗೂ ಡೊಮಿನೋಸ್ ಪಿಜ್ಜಾ ಮತ್ತು ಡಂಕಿನ್ ಡೋನಟ್ಸ್‍ನ ಮಾಸ್ಟರ್ ಫ್ರಾಂಚೈಸಿ ಆಗಿರುವ ಜುಬಿಲಂಟ್ ಫುಡ್ ವಕ್ರ್ಸ್ ಲಿ., ಫಾರ್ಮಾಸ್ಯುಟಿಕಲ್ಸ್ ಮತ್ತು ಲೈಫ್ ಸೈನ್ಸಸ್ ಕ್ಷೇತ್ರದ ಜುಬಿಲಂಟ್…
ಜಿಲ್ಲಾಡಳಿತದಿಂದ ಸರಳ ಬಸವ ಜಯಂತಿ ಆಚರಣೆ
April 27, 2020ಮೈಸೂರು, ಏ.26(ಆರ್‍ಕೆಬಿ)- ಸಮಾಜ ಸುಧಾರಕ ಬಸ ವಣ್ಣನವರ ಜಯಂತಿ ಅಂಗವಾಗಿ ಮೈಸೂರಿನ ವಿದ್ಯಾ ಪೀಠದ ಬಳಿಯಿರುವ ಶ್ರೀ ಬಸವೇಶ್ವರರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ಭಾನುವಾರ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾಡಳಿತ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಬಸವ ತತ್ವವನ್ನು ಪಾಲಿಸುವ ಮೂಲಕ ಸಮಾಜ ಸುಧಾರಣೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮಾಜಿ ಸಚಿವ ಅಡಗೂರು ವಿಶ್ವನಾಥ್, ಜಿಲ್ಲಾಧಿಕಾರಿ ಅಭಿರಾಂ…
ಕೆ.ಆರ್.ನಗರ ತಾಲೂಕಿನಲ್ಲಿದ್ದ 74 ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಟ್ಟ ಜಿಲ್ಲಾಡಳಿತ
April 27, 2020ಮೈಸೂರು, ಏ.26(ಪಿಎಂ)- ಲಾಕ್‍ಡೌನ್‍ನಿಂದಾಗಿ ತಮ್ಮೂರಿಗೂ ತೆರಳಲಾಗದೇ ಕೆಆರ್ ನಗರ ತಾಲೂಕಿನ ವಿವಿಧೆಡೆ ಅತಂತ್ರ ಸ್ಥಿತಿಯಲ್ಲಿದ್ದ 10 ಮಹಿಳೆಯರೂ ಸೇರಿದಂತೆ 74 ವಲಸೆ ಕೂಲಿ ಕಾರ್ಮಿಕರನ್ನು ಅವರ ಊರು ಗಳಿಗೆ ಜಿಲ್ಲಾಡಳಿತ ಭಾನುವಾರ ಕಳುಹಿಸಿಕೊಟ್ಟಿತು. ಕೇಂದ್ರ ಸರ್ಕಾರ ಲಾಕ್‍ಡೌನ್ ನಿಯಮ ಸಡಿಲಿಸಿದ್ದು, ರಾಜ್ಯದೊಳಗೆ ವಲಸೆ ಕಾರ್ಮಿಕರು ಅವರ ಊರಿಗೆ ತೆರಳಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯ ದರ್ಶಿ ವಿಜಯಭಾಸ್ಕರ್ ಅವರು ಎಲ್ಲಾ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು, ಲಾಕ್‍ಡೌನ್‍ನಿಂದ ನಗರಗಳಲ್ಲಿ ಕಷ್ಟಕ್ಕೆ ಸಿಲುಕಿರುವ ವಲಸೆ ಕೂಲಿ…
ಕೊರೊನಾ ಸೋಂಕಿತರಿಗೆ ಆಹಾರ, ಔಷಧಿ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೊಬೋಟ್ ನಿಯೋಜನೆ
April 27, 2020ಬೆಂಗಳೂರು, ಏ. 26- ರಾಜ್ಯದಲ್ಲಿ ಕೊರೊನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಇತರರಿಗೆ ಸೋಂಕು ಹರಡ ದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಸರ್ಕಾರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಆಹಾರ ಹಾಗೂ ಔಷಧಿಗಳನ್ನು ನೀಡಲು ರೊಬೋಟ್ ನಿಯೋಜಿಸಿದೆ. ನಿಯೋಜನೆಗೊಂಡಿರುವ ಈ ರೊಬೋಟ್ ಸೋಂಕಿತರ ಆಸುಪಾಸಿ ನಲ್ಲೇ ತಿರುಗಾಡಲಿದ್ದು, ಸಮಯಕ್ಕೆ ಸರಿ ಯಾಗಿ ರೋಗಿಗಳಿಗೆ ಔಷಧಿ ಹಾಗೂ ಆಹಾರವನ್ನು ನೀಡಲಿದೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿಗಳಿಗೂ ಸೋಂಕು ತಗುಲುವುದು ನಿಯಂತ್ರಣಗೊಳ್ಳಲಿದೆ.
ಜನರಿಗೆ, ಸರ್ಕಾರಕ್ಕೆ ಬೆಂಬಲ ನೀಡುವ ಮುನ್ನ ಸೇನಾಪಡೆಗಳು ಸುರಕ್ಷಿತವಾಗಿರಬೇಕು ರಕ್ಷಣಾ ಪಡೆಗಳ ಮುಖ್ಯಸ್ಥ ರಾವತ್
April 27, 2020ನವದೆಹಲಿ, ಏ. 26- ಇಡೀ ದೇಶ ಕೊರೊನಾ ವೈರಸ್ ಎಂಬ ಮಹಾ ಮಾರಿ ವಿರುದ್ಧ ಹೋರಾಟ ಮಾಡು ತ್ತಿದ್ದು, ದೇಶ ಹಾಗೂ ಜನರಿಗೆ ಬೆಂಬಲ ನೀಡಬೇಕಾದರೆ ಮೊದಲು ಸೇನಾಪಡೆಗಳು ಸುರಕ್ಷಿತ ವಾಗಿರಬೇಕೆಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಭಾನುವಾರ ಹೇಳಿದ್ದಾರೆ. ಎಎನ್‍ಐ ಜೊತೆಗಿನ ಸಂದರ್ಶನ ದಲ್ಲಿ ಮಾತನಾಡಿರುವ ಅವರು, ಕೊರೊನಾ ವಿರುದ್ಧ ಹೋರಾಡುತ್ತಿರುವ ಜನರಿಗೆ ಹಾಗೂ ಸರ್ಕಾರಕ್ಕೆ ಬೆಂಬಲ ನೀಡಲು ಮೊದಲು ನಾವು ಸುರಕ್ಷಿತವಾಗಿರಬೇ ಕೆಂದು ಸೇನಾಪಡೆಗಳು ಅರಿಯಬೇಕಿದೆ ಎಂದು ಹೇಳಿದ್ದಾರೆ. ರಕ್ಷಣಾ ಸೇವೆ…










