ಮೈಸೂರು,ಏ.18(ಎಂಟಿವೈ)- ಲಾಕ್‍ಡೌನ್‍ನಿಂ ದಾಗಿ ಸಂತ್ರಸ್ತರಾದವರಿಗೆ ಆಹಾರ ಒದಗಿಸುತ್ತಿರುವ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಶನಿವಾರ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಮಧ್ಯಾಹ್ನದ ಊಟ ಪೂರೈಸಿದರು. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಮಾಡಿದ ಪರಿಣಾಮ ಮೈಸೂ ರಿನ ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಪೂರೈ ಸುವ ನಿಟ್ಟಿನಲ್ಲಿ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಕಾರ್ಯಕ್ರಮ ರೂಪಿಸಿದ್ದು, ಸೇವಾ ಕಾರ್ಯದ 25ನೇ ದಿನವಾದ ಇಂದು ಜಯನಗರದ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳು ಹಾಗೂ ವಿವಿಧೆಡೆ ಭದ್ರತಾ…
ಮೈಸೂರಲ್ಲಿ ಸಿಲುಕಿಕೊಂಡ ಕುಶಾಲನಗರದ ಹೋಟೆಲ್ ಕ್ಲೀನರ್!
April 19, 2020ಮೈಸೂರು,ಏ.18-ಕೂಲಿಗಾಗಿ ದೂರದ ಊರು ಗಳಿಂದ ಮೈಸೂರಿಗೆ ಬಂದಿದ್ದ ನೂರಾರು ಕಾರ್ಮಿಕರು ಲಾಕ್‍ಡೌನ್‍ನಿಂದಾಗಿ ವಾಪಸ್ ತೆರಳಲಾಗದೆ ಮೈಸೂ ರಿನಲ್ಲೇ ಉಳಿದಿದ್ದಾರೆ. ಕೆಲವರು ನಿರಾಶ್ರಿತರ ಕೇಂದ್ರ ಗಳಲ್ಲಿ ಆಶ್ರಯ ಪಡೆದಿದ್ದರೆ, ಮತ್ತೆ ಕೆಲವರು ರಸ್ತೆಬದಿ, ಮರದ ಕೆಳಗೆ, ಲಾರಿಗಳಲ್ಲಿ ಆಶ್ರಯ ಪಡೆದು ದಾನಿಗಳು ನೀಡುವ ಆಹಾರ ಸೇವಿಸಿ ದಿನ ದೂಡುತ್ತಿದ್ದಾರೆ. ಕುಶಾಲನಗರದ ಹೋಟೆಲೊಂದರಲ್ಲಿ ಕ್ಲೀನರ್ ಆಗಿ ರುವ ಹಾವೇರಿ ಮೂಲದ ವ್ಯಕ್ತಿಯೊಬ್ಬ, ಲಾಕ್‍ಡೌನ್ ನಿಂದ ವಾಹನ ಸೌಕರ್ಯವಿಲ್ಲದೆ, ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಅರಮನೆಗಳ ನಗರಿಯಲ್ಲಿ ಮರದಡಿ ಮಲಗಿ ಮುಂದಿನ ತಿಂಗಳು ನಡೆಯಲಿರುವ…
ದೇಶದ 4291 ಕೊರೊನಾ ಪ್ರಕರಣಗಳಿಗೆ ತಬ್ಲಿಘಿ ಜಮಾತ್ ಸಭೆ ನಂಟು: ಆರೋಗ್ಯ ಸಚಿವಾಲಯ
April 19, 2020ನವದೆಹಲಿ, ಏ.18- ದೇಶದಲ್ಲಿ ದೃಢಪಟ್ಟಿರುವ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಪೈಕಿ 4,291 (ಶೇ.29.8) ದೆಹಲಿಯ ನಿಜಾ ಮುದ್ದೀನ್‍ನ ತಬ್ಲಿಘಿ ಜಮಾತ್ ಸಭೆಯಿಂದ ಹರ ಡಿರುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ಪ್ರಕರಣಗಳು 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ್ದಾಗಿವೆ. ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖ ಲಾಗಿರುವ ತಮಿಳುನಾಡು (ಶೇ.84), ತೆಲಂಗಾಣ (ಶೇ.79), ದೆಹಲಿ (ಶೇ.63), ಉತ್ತರ ಪ್ರದೇಶ (ಶೇ.59) ಮತ್ತು ಆಂಧ್ರಪ್ರದೇಶದಂತಹ (ಶೇ. 61) ರಾಜ್ಯಗಳಲ್ಲೇ…
ಚಾಮುಂಡಿಬೆಟ್ಟದ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ
April 19, 2020ಚಾಮುಂಡಿಬೆಟ್ಟ ಗ್ರಾಪಂ ಅಧ್ಯಕ್ಷೆ ಗೀತಾ ಸ್ಪಷ್ಟನೆ ಮೈಸೂರು, ಏ.18(ಎಸ್‍ಬಿಡಿ)- ಮೈಸೂರಿನ ಚಾಮುಂಡಿಬೆಟ್ಟದ ಪೌರಕಾರ್ಮಿಕರ ಕಾಲೋನಿ ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ಸ್ಪಷ್ಟಪಡಿಸಿದ್ದಾರೆ. ಪೌರಕಾರ್ಮಿಕರ ಕಾಲೋನಿ ಕುಟುಂಬಗಳಿಗೆ ಪಡಿತರ ಚೀಟಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಬಿಪಿಎಲ್ ಹೊಂದಿರುವ 14 ಕುಟುಂಬಗಳಿಗೆ ಶ್ರೀ ಮಹಾಬಲಾದ್ರಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಆಹಾರ ಪದಾರ್ಥ ವಿತರಿಸಲಾಗಿದೆ. ಮಹಿಷಾಸುರ ಪ್ರತಿಮೆ ಬಳಿ ವ್ಯಾಪಾರಿಗಳ ತೆರವು ಮಾಡಿದ ಬಳಿಕ, ಪೌರಕಾರ್ಮಿಕರ ಕಾಲೋನಿಯ ಗೋಪಮ್ಮ, ವಿಜಯಕುಮಾರ್, ಮಹೇಶ್…
ಲಾಕ್‍ಡೌನ್ ನಿಯಮ ಉಲ್ಲಂಘನೆ: ಇಬ್ಬರು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲು
April 19, 2020ಮೈಸೂರು,ಏ.18(ಎಸ್‍ಬಿಡಿ)- ನಿಯಮ ಉಲ್ಲಂಘಿಸಿದ ಇಬ್ಬರು ವ್ಯಾಪಾರಿಗಳ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಲಾಕ್‍ಡೌನ್ ಹಿನ್ನೆಲೆ ಮೈಸೂರು ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸಮಯ ನಿಗದಿಗೊಳಿಸಿ, ಪೊಲೀಸ್ ಆಯುಕ್ತ ಚಂದ್ರ ಗುಪ್ತ ಆದೇಶಿಸಿದ್ದಾರೆ. ದೇವರಾಜ ಮೊಹಲ್ಲಾ ಸೀಬಯ್ಯ ರಸ್ತೆ, 2ನೇ ಕ್ರಾಸ್‍ನಲ್ಲಿರುವ ರಾಮ್‍ದೇವ್ ಇಂಪೆಕ್ಸ್ ಹಾಗೂ ಸಂತೇ ಪೇಟೆಯಲ್ಲಿರುವ ಧನಲಕ್ಷ್ಮೀ ಎಂಟರ್ ಪ್ರೈಸಸ್ ಅಂಗಡಿ ಮಾಲೀಕರು ಏ.16ರಂದು ಮುಂಜಾನೆ 5 ಗಂಟೆಗೆ ವ್ಯಾಪಾರ ಆರಂಭಿ ಸುವ…
ಕೆಎಸ್‍ಆರ್‍ಟಿಸಿ ಸಿಬ್ಬಂದಿ ಕೆಲಸಕ್ಕೆ ಹಾಜರು: ಹಾಟ್‍ಸ್ಪಾಟ್ ಹೊರತು ಇತರೆಡೆ ಬಸ್ ಸಂಚಾರ ಸಾಧ್ಯತೆ?
April 19, 2020ಬೆಂಗಳೂರು,ಏ.18- ಸಿಬ್ಬಂದಿಯೊಂ ದಿಗೆ ಸನ್ನದ್ಧರಾಗಿರಿ ಎಂದು ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ಅಧಿ ಕಾರಿಗಳಿಗೆ ಸರ್ಕಾರದಿಂದ ಸ್ಪಷ್ಟ ಸಂದೇಶ ಬಂದ ಹಿನ್ನೆಲೆಯಲ್ಲಿ 4 ವಿಭಾಗಗಳಲ್ಲಿ ಸಿಬ್ಬಂದಿ ಇಂದು ಕಚೇರಿಗೆ ಹಾಜರಾಗಿದ್ದಾರೆ. ರಾಜ್ಯದಲ್ಲಿ ಹಾಟ್‍ಸ್ಪಾಟ್ ಹೊರತು ಪಡಿಸಿ ಸಾರಿಗೆ ಸಂಚಾರ ಆರಂಭ ಸಾಧ್ಯತೆಯ ಹಿನ್ನೆಲೆಯಲ್ಲಿ ನೌಕರರು ಯಾವುದೇ ಸಂದರ್ಭ ದಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ. 2ನೇ ಹಂತದ ಲಾಕ್‍ಡೌನ್ ಏ.20ರಂದು ಅವಲೋಕನೆಗೊಳಪಡಲಿದ್ದು, ನಂತರ ಹಂತಹಂತವಾಗಿ ಸಾರಿಗೆ ಬಸ್‍ಗಳನ್ನು ರೆಡ್ ಝೋನ್ ಹೊರತುಪಡಿಸಿ ಇತರೆ ಝೋನ್ ಗಳಲ್ಲಿ ಅಗತ್ಯಕ್ಕೆ…
ಮೈಸೂರಿನಾದ್ಯಂತ ಸಂಚಾರ ಬಂದ್
April 18, 2020ಮೈಸೂರು, ಏ. 17(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿ ರುವುದರಿಂದ ಇಂದು ಮೈಸೂರಲ್ಲಿ ಹಾಟ್‍ಸ್ಪಾಟ್ ಗಳು ಸೇರಿದಂತೆ ಎಲ್ಲೆಡೆ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾ ಗಿರುವ ಮೈಸೂರಿನ ವಿಜಯನಗರ 1, 2ನೇ ಹಂತ, ನಜರ್‍ಬಾದ್, ಜನತಾನಗರ, ಕುವೆಂಪುನಗರ, ಜೆ.ಪಿ.ನಗರ, ಜಯಲಕ್ಷ್ಮಿಪುರಂ, ಶ್ರೀರಾಂಪುರ 2ನೇ ಹಂತ, ಸರ್ದಾರ್ ವಲ್ಲಭಭಾಯಿ ಪಟೇಲ್‍ನಗರ 2ನೇ ಹಂತಗಳಲ್ಲಿ ಎಲ್ಲಾ ಪ್ರಮುಖ ರಸ್ತೆ ಮತ್ತು ಸಣ್ಣಪುಟ್ಟ ರಸ್ತೆಗಳನ್ನೂ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಪೊಲೀಸರು…
ಲಾಕ್‍ಡೌನ್ ಪರಿಣಾಮ: ಪರ್ಯಾಯ ದಾರಿ ಕಂಡುಕೊಂಡ ಮೂಲ ಕಸುಬುಗಾರಿಕೆ ಕಾರ್ಮಿಕರು
April 18, 2020– ರಾಜಕುಮಾರ್ ಭಾವಸಾರ್ ಮೈಸೂರು, ಏ.16(ಆರ್‍ಕೆಬಿ)- ಲಾಕ್ ಡೌನ್ ನಂತರ ಮೈಸೂರಿನ ಬೀದಿ, ಬೀದಿ ಗಳಲ್ಲಿ ತರಕಾರಿ, ಹಣ್ಣಿನ ವ್ಯಾಪಾರದ ಅಂಗಡಿಗಳು ಹೆಚ್ಚುತ್ತಿವೆ. ಕೆಲವು ಪ್ರಮುಖ ವೃತ್ತ, ರಸ್ತೆಗಳಲ್ಲಿ ಮಾತ್ರ ಅಲ್ಲೊಂದು, ಇಲ್ಲೊಂದು ತರಕಾರಿ, ಹಣ್ಣಿನ ಅಂಗಡಿ ಗಳು ಇದ್ದವು. ಆದರೆ ಕಳೆದ 15 ದಿನಗಳಿಂ ದೀಚೆಗೆ ನಗರದ ಬಹುತೇಕ ರಸ್ತೆಗಳಲ್ಲಿ ತರಕಾರಿ, ಹಣ್ಣಿನ ವ್ಯಾಪಾರ ಜೋರಾಗಿದೆ. ಜನರು ಸಹ ತರಕಾರಿ, ಹಣ್ಣು ಕೊಳ್ಳಲು ಬಹು ದೂರ ಹೋಗದೆ ಸನಿಹದಲ್ಲೇ ಇರುವ ಈ ತರಕಾರಿ ಅಂಗಡಿಗಳಲ್ಲಿಯೇ ಖರೀದಿಯಲ್ಲಿ…
ಹಾಪ್‍ಕಾಮ್ಸ್‍ನಲ್ಲಿ 7 ಟನ್‍ನಿಂದ 15 ಟನ್‍ಗೆ ಹೆಚ್ಚಿದ ಹಣ್ಣಿನ ಮಾರಾಟ
April 18, 2020ಮೈಸೂರು, ಏ.17(ಆರ್‍ಕೆಬಿ)- ಲಾಕ್‍ಡೌನ್ ಪರಿಣಾಮ ಮೈಸೂರಿನಲ್ಲಿ ತರಕಾರಿ ಮತ್ತು ಹಣ್ಣಿನ ಮಾರಾಟದಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ. ಹಾಪ್‍ಕಾಮ್ಸ್‍ನಲ್ಲಿ ಪ್ರತಿದಿನ 7 ಟನ್‍ನಷ್ಟು ಮಾರಾಟವಾಗುತ್ತಿದ್ದ ಹಣ್ಣು ಇದೀಗ 15 ಟನ್‍ಗೆ ಹೆಚ್ಚಳವಾಗಿದೆ. ಹಾಗೆಯೇ ತರಕಾರಿ ಮಾರಾಟದಲ್ಲೂ ಎರ ಡರಷ್ಟು ಹೆಚ್ಚಳವಾಗಿದೆ. ಸೇಬು, ಕಿತ್ತಳೆ, ದ್ರಾಕ್ಷಿ, ದಾಳಿಂಬೆ, ಕರಬೂಜ ಇನ್ನಿತರ ಹಣ್ಣುಗಳು ಹೆಚ್ಚಾಗಿ ಖರ್ಚಾಗುತ್ತಿವೆ. ಹಾಪ್‍ಕಾಮ್ಸ್ ವತಿಯಿಂದ ಮನೆ ಮನೆಗೆ ಹಣ್ಣು ತರಕಾರಿ ಮಾರಾಟವೂ ಇದಕ್ಕೆ ಪೂರಕವಾಗಿದೆ. ತೋಟಗಾರಿಕೆ ಉಪ ನಿರ್ದೇಶಕರ ರುದ್ರೇಶ್ ಪ್ರಕಾರ ಲಾಕ್‍ಡೌನ್‍ನಿಂದ ಜನರು ಮನೆಯಲ್ಲೇ…
ಲಾಕ್‍ಡೌನ್ ನಡುವೆಯೂ ಮೈಸೂರಲ್ಲಿ ಖದೀಮರ ಕೈಚಳಕ
April 18, 2020ಮೈಸೂರು,ಏ.17(ಆರ್‍ಕೆ)- ಕೊರೊನಾ ವೈರಸ್ ಅಟ್ಟಹಾಸದಿಂದ ಇಡೀ ದೇಶವೇ ಲಾಕ್‍ಡೌನ್ ಮೂಲಕ ಸ್ತಬ್ಧಗೊಂಡಿದ್ದರೂ ಮೈಸೂರಲ್ಲಿ ಕಳೆದ ರಾತ್ರಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಪೊಲೀಸರು ಲಾಕ್‍ಡೌನ್ ನಿರ್ಬಂಧ ವನ್ನು ಮತ್ತಷ್ಟು ಕಠಿಣಗೊಳಿಸಿರುವ ಕಾರಣ ಇಡೀ ಮೈಸೂರು ಜನತೆ ಮನೆಯಲ್ಲೇ ಉಳಿದಿದ್ದರೂ ಕಳ್ಳರು ಮಾತ್ರ ಎರಡು ಬಡಾ ವಣೆಗಳಲ್ಲಿ ನಂದಿನಿ ಹಾಲಿನ ಬೂತ್ ಹಾಗೂ ದೇವಸ್ಥಾನದ ಬಾಗಿಲು ಮೀಟಿ ಕಾಣಿಕೆ ಹುಂಡಿಯನ್ನು ದೋಚಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ. ಮೈಸೂರಿನ ಹೆಬ್ಬಾಳು 2ನೇ ಹಂತ ಬಡಾವಣೆಯ ಸಿಐಟಿಬಿ ಕಲ್ಯಾಣ ಮಂಟಪದ…









