ಮೈಸೂರು, ಏ.18-ಕೋವಿಡ್-19ನಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ ಮೈಸೂರು ವಿಶ್ವ ವಿದ್ಯಾನಿಲಯ ವತಿಯಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ಪ್ರಾರಂಭಿಸಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ತಿಳಿಸಿದ್ದಾರೆ. ಸೆಮಿಸ್ಟರ್, ವಿಷಯ ಹಾಗೂ ವಿಭಾಗಗಳ ಅನುಗುಣವಾಗಿ ವಾಟ್ಸ್‍ಆಪ್ ಗ್ರೂಪ್ ಮಾಡಿ ಪಾಠ, ಪಿ.ಪಿ.ಟಿ, ವಿಡಿಯೋಗಳು ಸೇರಿ ಇತರೆ ಓದಲು ಬೇಕಾಗುವ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗು ತ್ತಿದೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯದ ವೆಬ್ ಸೈಟ್‍ನಲ್ಲಿ ವೆಬ್‍ಲಿಂಕ್ ಮೂಲಕ ಇ-ಸೋರ್ಸಸ್, ಇ-ಬುಕ್, ಇ-ಪ್ರಿಂಟ್‍ಗಳನ್ನು ಪಡೆದುಕೊಳ್ಳಬಹುದು. ಲಾಕ್ ಡೌನ್ ಸಂದರ್ಭದಲ್ಲಿ…
ಹೆಚ್‍ಡಿಕೆ ಅವರದ್ದು ದೊಡ್ಡ ಕುಟುಂಬ, ಆದರೂ ನಿಖಿಲ್ ವಿವಾಹ ಸರಳವಾಗಿ ನಡೆದಿದೆ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ: ಸಿಎಂ
April 19, 2020ಬೆಂಗಳೂರು,ಏ.18-ಹೆಚ್.ಡಿ.ಕುಮಾರಸ್ವಾಮಿ ಅವರದ್ದು ದೊಡ್ಡ ಕುಟುಂಬ.. ಆದರೆ ನಿಖಿಲ್ ಮತ್ತು ರೇವತಿ ವಿವಾಹ ಸರಳವಾಗಿ ನಡೆದಿದೆ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಏ.20ರ ಬಳಿಕ ರಾಜ್ಯದಲ್ಲಿ ಹೇರ ಲಾಗಿರುವ ಲಾಕ್‍ಡೌನ್ ವೇಳೆ ಯಾವೆಲ್ಲಾ ಕ್ಷೇತ್ರದಲ್ಲಿ ವಿನಾಯಿತಿ ನೀಡಬೇಕು ಎಂಬ ವಿಚಾರದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದರು. ಈ ವೇಳೆ ಸುದ್ದಿಗಾರರೊಬ್ಬರು ನಿಖಿಲ್ ಕುಮಾರಸ್ವಾಮಿ-ರೇವತಿ ವಿವಾಹ ವಿಚಾರ ಪ್ರಸ್ತಾಪಿಸಿ ವಿವಾಹದ ವೇಳೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಕುರಿತು…
ನಂಜರಾಜ ಬಹದ್ದೂರ್ ಕೇಂದ್ರದ ನಿರಾಶ್ರಿತರಿಗೆ ಸ್ವ ಉದ್ಯೋಗ
April 19, 2020ಮೈಸೂರು, ಏ.18(ಎಂಕೆ)- ಕೊರೊನಾ ಹರಡ ದಂತೆ ತಡೆಯಲು ದಿಢೀರ್ ಎಂದು ಲಾಕ್‍ಡೌನ್ ಜಾರಿಗೊಂಡಿದ್ದರಿಂದ ಕೆಲಸ ಮತ್ತು ಆಶ್ರಯ ಕಳೆದುಕೊಂಡಿದ್ದವರು ಈಗ ತಾತ್ಕಾಲಿಕವಾಗಿ ಸ್ವಉದ್ಯೋಗ ಕಂಡುಕೊಂಡಿದ್ದಾರೆ. ಮೈಸೂರು ನಗರಪಾಲಿಕೆ ಆರಂಭಿಸಿದ ನಿರಾಶ್ರಿತರ ಆಶ್ರಯ ಕೇಂದ್ರಗಳಲ್ಲಿ ತಾತ್ಕಾಲಿಕ ನೆಲೆ ಕಂಡುಕೊಂಡಿ ರುವ ನೂರಾರು ನಿರಾಶ್ರಿತರು, ಸ್ವಉದ್ಯೋಗ ಮಾಡು ವುದಕ್ಕೆ ಅಗತ್ಯವಾದ ಕೌಶಲವನ್ನು ಕಲಿಯುತ್ತಿದ್ದಾರೆ. ನಗರದ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪ ದಲ್ಲಿರುವ ನಿರಾಶ್ರಿತರು 4 ದಿನಗಳಿಂದ ಪೇಪರ್ ಕವರ್ ತಯಾರಿಸುತ್ತಿದ್ದಾರೆ. ಈ ಕೇಂದ್ರದಲ್ಲಿ ಸದ್ಯ 93 ನಿರಾ ಶ್ರಿತರಿದ್ದು, ಹಿರಿಯರನ್ನು…
ಶಾಸಕ ರಾಮದಾಸ್‍ರಿಂದ ಛಾಯಾದೇವಿ ಅನಾಥಾಶ್ರಮಕ್ಕೆ ನೆರವು
April 19, 2020ಮೈಸೂರು,ಏ.18(ಎಂಟಿವೈ)-ಮೈಸೂರಿನ ಛಾಯಾದೇವಿ ಅನಾಥಾಶ್ರಮಕ್ಕೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ, ಅಲ್ಲಿನ ಹಿರಿಯ ನಾಗರಿಕರು, ಮಕ್ಕಳೊಂದಿಗೆ ಸಮಾ ಲೋಚಿಸಿ ದಿನಸಿ ಪದಾರ್ಥ ವಿತರಿಸಿದರು. ಮೈಸೂರಿನ ಚಿಕ್ಕಹರದನಹಳ್ಳಿಯಲ್ಲಿರುವ ಛಾಯಾದೇವಿ ಅನಾಥಾಶ್ರಮಕ್ಕೆ `ಮೈಸೂರು ಕೋವಿಡ್ ಕೇರ್ ಟೀಂ’ ಸದಸ್ಯರೊಂದಿಗೆ ಶನಿವಾರ ಆಗಮಿಸಿದ ಶಾಸಕ ಎಸ್.ಎ. ರಾಮದಾಸ್, ಲಾಕ್‍ಡೌನ್‍ನಿಂದ ಆಶ್ರಮ ದಿಂದ ಹೊರಬರದೆ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳು, ವೃದ್ಧರ ಕುಶಲೋಪರಿ ವಿಚಾರಿಸಿ ದರು. ಈ ವೇಳೆ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಗತ್ಯ ಔಷಧ ಹಾಗೂ ಅಕ್ಕಿ, ತರಕಾರಿ, ಕಾಫಿ ಪುಡಿ, ಟೀ…
ಬಿಎಂಶ್ರೀ ನಗರದಲ್ಲಿ 50 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಜೆಪಿ
April 19, 2020ಮೈಸೂರು,ಏ.18(ಎಂಟಿವೈ)- ಲಾಕ್‍ಡೌನ್‍ನಿಂದ ಸಂತ್ರಸ್ತರಾಗಿರುವ ಮೈಸೂರಿನ ಬಿಎಂಶ್ರೀ ನಗರದ 50ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಬಿಜೆಪಿ ಮುಖಂಡ, ಚಿತ್ರನಟ ಎಸ್.ಜಯಪ್ರಕಾಶ್(ಜೆಪಿ) ತಮ್ಮ ಬೆಂಬಲಿಗರೊಂದಿಗೆ ದಿನಸಿ ಕಿಟ್ ವಿತರಿಸಿದರು. ಬಿಎಂಶ್ರೀ ನಗರದ ಬಡಕುಟುಂಬದವರ ಮನೆ ಬಾಗಿಲಿಗೆ ತೆರಳಿ 5 ಕೆಜಿ ಅಕ್ಕಿ, ಒಂದು ಕೆಜಿ ಗೋಧಿ ಹಿಟ್ಟು, ಉಪ್ಪು, ಬೇಳೆಕಾಳು, ಅರ್ಧ ಲೀಟರ್ ಅಡುಗೆ ಎಣ್ಣೆ ಮೊದಲಾದ ದಿನಸಿ ಪದಾರ್ಥಗಳಿದ್ದ ಕಿಟ್ ವಿತರಿಸಲಾಯಿತು. ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಎಸ್.ಜಯಪ್ರಕಾಶ್, ಕೊರೊನಾ ವೈರಾಣು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಮಾಡಲಾಗಿದ್ದು,…
ವಸತಿ ಪ್ರದೇಶದ ರಸ್ತೆಗಳನ್ನು ಜನರೇ ಅಡ್ಡಗಟ್ಟಿ ಕಾಯುತ್ತಿದ್ದಾರೆ
April 19, 2020ಮೈಸೂರು,ಏ.18(ಆರ್‍ಕೆ)-ಕೋವಿಡ್-19 ಲಾಕ್ ಡೌನ್ ನಿರ್ಬಂಧದಿಂದಾಗಿ ಪೊಲೀಸರು ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡುತ್ತಿದ್ದರೆ, ವಸತಿ ಬಡಾವಣೆಗಳಲ್ಲಿ ಸಣ್ಣಪುಟ್ಟ ರಸ್ತೆಗಳಲ್ಲಿ ಜನರೇ ವಾಹನ ಸವಾರರನ್ನು ನಿಯಂತ್ರಿಸುತ್ತಿದ್ದಾರೆ. ಶುಕ್ರವಾರ ಒಂದೇ ದಿನ 12 ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿರುವುದು ದೃಢಪಟ್ಟ ನಂತರವಂತೂ ಎಚ್ಚೆತ್ತ ವಸತಿ ಬಡಾವಣೆಗಳ ಯುವಕರು, ತಾವೇ ಸ್ವತಃ ಮುಂದೆ ಬಂದು ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಸಣ್ಣಪುಟ್ಟ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಮುಖ್ಯ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್‍ಗಳನ್ನು ಅಳ ವಡಿಸಿ ಪೊಲೀಸರು ಸಂಚಾರ…
ಕಾಡಿಗೆ ಹೋಗದ ಕಾಡಾನೆ: ಕಾರ್ಯಾಚರಣೆ ವಿಫಲ
April 19, 2020ಸಿದ್ದಾಪುರ, ಏ.18- ಕಳೆದ ಕೆಲ ದಿನ ಗಳಿಂದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಅರಣ್ಯ ಇಲಾಖೆ ಕಾರ್ಯಾಚರಣೆ ವಿಫಲ ವಾಗಿದೆ. ವಾಲ್ನೂರು-ತ್ಯಾಗತ್ತೂರು, ಅಭ್ಯಮಂಗಲ, ನೆಲ್ಯಹುದಿಕೇರಿ, ಬೆಟ್ಟದ ಕಾಡು ಹಾಗೂ ಅರೆಕಾಡು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ 20ಕ್ಕೂ ಹೆಚ್ಚು ಕಾಡಾನೆಗಳನ್ನು ಕಾಡಿ ಗಟ್ಟುವ ಕಾರ್ಯಾಚರಣೆ ಮುಂದುವರೆ ದಿದ್ದರೂ, ಕಾಡಾನೆಗಳು ಕಾಫಿ ತೋಟ ಬಿಟ್ಟು ಹೋಗದೇ ಅಲ್ಲೇ ಬೀಡು ಬಿಟ್ಟಿವೆ. ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದ 10ಕ್ಕೂ ಹೆಚ್ಚು ಸಿಬ್ಬಂದಿ ಹರಸಾಹಸ ಪಟ್ಟು…
ಉಚಿತವಾಗಿ ಸಾವಿರಾರು ಮಾಸ್ಕ್ ವಿತರಣೆ
April 19, 2020ಮೈಸೂರು,ಏ.18-ಮೈಸೂರು ಮಹಾನಗರ ಪಾಲಿಕೆಯ 55ನೇ ವಾರ್ಡ್‍ನ ಪ್ರತಿ ಮನೆಗೂ ಕಾರ್ಪೊರೇಟರ್ ಮಾ.ವಿ.ರಾಮ ಪ್ರಸಾದ್ 20 ಸಾವಿರ ಮಾಸ್ಕ್‍ಗಳನ್ನು ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶನಿವಾರ ಸುಮಾರು 3000 ಮಾಸ್ಕ್‍ಗಳನ್ನು ತಮ್ಮ ವಾರ್ಡಿನ ವ್ಯಾಪ್ತಿಯಲ್ಲಿ ವಿತರಿಸಿದರು. ವಾರ್ಡ್‍ನ ಪ್ರತಿ ಮನೆಯ ಸದಸ್ಯರಿಗೂ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಾಸ್ಕ್ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ವೈರಸ್ ಬರದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ನಮ್ಮೆ ಲ್ಲರ ಕರ್ತವ್ಯ. ಮನೆಯಿಂದ ಯಾರೂ ಹೊರಗಡೆ…
ವಿಜಯ ವಿಠಲ ವಿದ್ಯಾಸಂಸ್ಥೆ ವತಿಯಿಂದ ಕೋವಿಡ್-19 ಪರಿಹಾರ ನಿಧಿಗೆ 20 ಲಕ್ಷ ರೂ. ನೆರವು
April 19, 2020ಮೈಸೂರು,ಏ.18-ಉಡುಪಿಯ ಪೇಜಾವರ ಅಧೋಕ್ಷಜ ಮಠವು ಮೈಸೂರಿನಲ್ಲಿ ನಡೆಸುತ್ತಿ ರುವ ಶ್ರೀ ವಿಜಯ ವಿಠಲ ವಿದ್ಯಾಸಂಸ್ಥೆಗಳ ಅಧ್ಯಕ್ಷ ರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ದಲ್ಲಿ ಕೊರೊನಾ ಪೀಡಿತರ ಚಿಕಿತ್ಸೆ ಗಾಗಿ ಪ್ರಧಾನಮಂತ್ರಿ ಗಳು ಪ್ರಾರಂಭಿಸಿ ರುವ ಪಿ.ಎಂ. ಕೇರ್ ನಿಧಿಗೆ ಮತ್ತು ಮುಖ್ಯ ಮಂತ್ರಿಗಳ ಪರಿ ಹಾರ ನಿಧಿಗೆ ತಲಾ ರೂ. 10,00,000/- (ಹತ್ತು ಲಕ್ಷ)ಗಳ ದೇಣಿಗೆ ಯನ್ನು ವಿಜಯ ವಿಠಲ ವಿದ್ಯಾಸಂಸ್ಥೆಯವರು ನೀಡಿದ್ದಾರೆ. ಇದರಲ್ಲಿ ಅಧ್ಯಾಪಕ/ಅಧ್ಯಾಪಕೇ ತರ ವೃಂದದವರ ಎರಡು ದಿನಗಳ ವೇತನವು ಸೇರಿದೆ. ಎರಡೂ…
ಪೊಲೀಸರಿಂದ ಹಲ್ಲೆ: ಸುದ್ದಿವಾಹಿನಿ ವರದಿಗಾರ ಆರೋಪ
April 19, 2020ಮೈಸೂರು,ಮಾ.18(ವೈಡಿಎಸ್)- ಮೈಸೂರಿನಲ್ಲಿ ಶನಿವಾರ ವರದಿಗೆ ತೆರಳುತ್ತಿದ್ದ ಸ್ಥಳೀಯ ಚಾನಲ್ ವರದಿಗಾರರೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. `ನಾನು ಶನಿವಾರ ಮಧ್ಯಾಹ್ನ ಕರ್ತವ್ಯದ ಮೇಲೆ ಕುವೆಂಪು ನಗರದ ಜ್ಞಾನಗಂಗಾ ಶಾಲೆ ಬಳಿ ಸ್ಕೂಟರ್‍ನಲ್ಲಿ ಹೋಗುತ್ತಿ ದ್ದಾಗ ಪೊಲೀಸ್ ಪೇದೆಯೊಬ್ಬರು ತಡೆದರು. `ನಾನು ಪತ್ರಕರ್ತ’ ಎಂದು ಹೇಳಿದರೂ ಕೇಳಿಸಿಕೊಳ್ಳದ ಪೇದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಠಿ ಯಿಂದ ಹೊಡೆದರು. ಅಲ್ಲದೇ ಠಾಣೆಗೆ ಕರೆದುಕೊಂಡು ಹೋಗಿ 3 ಗಂಟೆಗಳ ಕಾಲ ಕೂರಿಸಿಕೊಂಡಿದ್ದರು’ ಎಂದು ಸುದ್ದಿವಾಹಿನಿಯೊಂದರ ವರದಿಗಾರ…










