ಪ್ಯಾರಿಸ್: ಕೊರೊನಾ ವೈರಸ್ ಮನು ಷ್ಯನ ಸೃಷ್ಟಿ ಎಂಬ ಆರೋಪವನ್ನು ಫ್ರೆಂಚ್ ವೈರಾಲ ಜಿಸ್ಟ್ ಮಾಡಿದ್ದಾರೆ. ಏಡ್ಸ್ ವೈರಸ್‍ಗೆ ಸಂಬಂಧಿಸಿದಂತೆ ನಡೆದ ಸಂಶೋಧನೆಯಲ್ಲಿ ಸಹ-ಸಂಶೋಧಕರಾಗಿದ್ದ ಫ್ರೆಂಚ್ ವೈರಾಲ ಜಿಸ್ಟ್ ಲುಕ್ ಮೊಂಟಾಗ್ನಿಯರ್ ಈ ಆರೋಪ ಮಾಡಿದ್ದಾರೆ. 2008ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರ ವಿಸಲಾಗಿತ್ತು. ಈಗ ಕೊರೊನಾ ವೈರಸ್ ಬಗ್ಗೆ ಮಾತನಾಡಿರುವ ಮೊಂಟಾಗ್ನಿ ಯರ್, ಚೀನಾದ ಪ್ರಯೋಗಾಲಯ ದಲ್ಲಿ ಏಡ್ಸ್ ವೈರಸ್‍ಗೆ ಲಸಿಕೆ ಕಂಡು ಹಿಡಿ ಯುವ ಪ್ರಯತ್ನದಲ್ಲಿ ಈ ವೈರಸ್‍ನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಇದು…
ಇಂದು ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ
April 20, 2020ಮೈಸೂರು,ಏ.19(ಆರ್‍ಕೆಬಿ)-ಲಾಕ್‍ಡೌನ್ ಜಾರಿ ನಂತರ ಕೃಷಿ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಉಂಟಾಗಿದೆ. ಎಲ್ಲಾ ವರ್ಗದ ಜನರು ಸಮಸ್ಯೆಗೆ ಸಿಲುಕಿ ದ್ದಾರೆ. ಆದರೆ, ರೈತರು, ಕೃಷಿ ಕಾರ್ಮಿಕರು ಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಸರಕಾರ ದೊಡ್ಡ ಸುಳ್ಳು ಹೇಳುತ್ತಿದೆ. ರೈತರ ಸಮಸ್ಯೆಗೆ ಯಾರೂ ಸ್ಪಂದಿ ಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾ ಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು. ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಲಾಕ್‍ಡೌನ್ ಪರಿಣಾಮ ರಾಜ್ಯದ ರೈತರಿಗೆ 50,000…
ಕುವೆಂಪುನಗರ ಪೊಲೀಸರಿಂದ ಕೊರೊನಾ ಜಾಗೃತಿ ಅಭಿಯಾನ
April 20, 2020ಮೈಸೂರು,ಏ.19-ಮೈಸೂರು ಕುವೆಂಪು ನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಪ್ರತಿನಿತ್ಯ ವಿವೇಕಾನಂದನಗರ ವೃತ್ತದಲ್ಲಿ ಕೊರೊನಾ ವೈರಾಣುವಿನ ಪರಿಣಾಮ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಧ್ವನಿವರ್ಧಕದ ಮೂಲಕ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಮಧ್ಯಾಹ್ನ 12 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ದ್ವಿಚಕ್ರ ವಾಹನ ದಲ್ಲಿ ಒಬ್ಬರು ಮಾತ್ರ ಓಡಾಡಿ, ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಿ, ದೂರ ಹೋಗದೇ ಮನೆಯ ಸುತ್ತಮುತ್ತ ವಾಕಿಂಗ್ ಮಾಡಿ, ಹಾಲಿನ ಬೂತ್, ಪೆಟ್ರೋಲ್ ಬಂಕ್, ಹಣ್ಣು, ತರಕಾರಿ ಮಾರುಕಟ್ಟೆ,…
`ವಿಶ್ವ ಭೂಮಿ ದಿನ’ದ ಅಂಗವಾಗಿ ಆನ್‍ಲೈನ್ ಸ್ಪರ್ಧೆ ವಿದ್ಯಾರ್ಥಿಗಳಿಗೆ ಪೋಸ್ಟರ್, ಚಿತ್ರಕಲೆ, ಪದ್ಯ ರಚನೆ, ಕಿರು ವಿಡಿಯೋ ನಿರ್ಮಾಣ ಸ್ಪರ್ಧೆ
April 20, 2020ಮೈಸೂರು,ಏ.19(ಪಿಎಂ)-ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ `ವಿಶ್ವ ಭೂಮಿ ದಿನ-2020’ರ ಅಂಗವಾಗಿ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪೋಸ್ಟರ್ (ಭಿತ್ತಿಪತ್ರ), ಚಿತ್ರಕಲೆ, ಪದ್ಯ ಹಾಗೂ ಕಿರು ವಿಡಿಯೋ ಸ್ಪರ್ಧೆ ಆಯೋಜಿಸಲಾಗಿದೆ. 6ರಿಂದ 8ನೇ ತರಗತಿ ವಿಭಾಗದಲ್ಲಿ ಪೋಸ್ಟರ್ ಹಾಗೂ ಚಿತ್ರಕಲೆ ಸ್ಪರ್ಧೆ ಹಾಗೂ 9ರಿಂದ 12ನೇ ತರಗತಿ ವಿಭಾಗದಲ್ಲಿ ಪದ್ಯ ರಚನೆ ಹಾಗೂ 2 ನಿಮಿಷಗಳ ಕಿರು ವಿಡಿಯೋ ನಿರ್ಮಾಣ ಸ್ಪರ್ಧೆ ನಡೆಯಲಿದೆ. ಎಲ್ಲಾ ವಿಭಾಗಕ್ಕೂ `ಹವಾಮಾನ ಪ್ರಕ್ರಿಯೆ’ ಕುರಿತಂತೆ ಸ್ಪರ್ಧೆ ನಡೆಯಲಿದೆ. ಏ.22ರೊಳಗೆ…
ಲಾಕ್‍ಡೌನ್ ಸಂಕಷ್ಟ: ಸರ್ಕಾರದ ನೆರವಿಗೆ ಬಡ ನೇಕಾರರ ಮನವಿ
April 20, 2020ಮೈಸೂರು, ಏ.19(ಆರ್‍ಕೆಬಿ)- ಲಾಕ್‍ಡೌನ್‍ನಿಂದಾಗಿ ಬಡ ನೇಕಾರನ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬಿದ್ದಿದ್ದು, ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆಯು ಮೈಸೂರು ಜಿಲ್ಲಾ ಧಿಕಾರಿಗೆ ಮನವಿ ಮಾಡಿದೆ. ಕೋವಿಡ್-19 ತಡೆಗಾಗಿ ಜಾರಿ ಗೊಳಿಸಿದ ಲಾಕ್‍ಡೌನ್‍ನಿಂದಾಗಿ ರಾಜ್ಯಾದ್ಯಂತ ವಾಸವಾಗಿರುವ ಬಡ ನೇಕಾರರ ಬದುಕು ಶೋಚನೀಯ ವಾಗಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ. ರೈತ ಸಮಾಜದ ಬೆನ್ನೆಲುಬಾದರೆ, ನೇಕಾರರು ಸಮಾಜದ ಮಾನ ರಕ್ಷಿಸುವವರು. ಕುಲಕಸುಬನ್ನೇ ಅವಲಂಬಿಸಿ, ಅಂದಂದಿನ ದುಡಿಮೆ ಯನ್ನೇ ನಂಬಿ ದಿನದೂಡುವ ಸಾವಿರಾರು ನೇಕಾರ…
ಐಟಿಆರ್ ಫಾರ್ಮ್ ಪರಿಷ್ಕರಿಸಲು ಆದಾಯ ತೆರಿಗೆ ಇಲಾಖೆ ನಿರ್ಧಾರ
April 20, 2020ನವದೆಹಲಿ: ಕೊರೊನಾ ವೈರಸ್ ಲಾಕ್‍ಡೌನ್ ನಿಂದಾಗಿ ಸರ್ಕಾರವು ನೀಡುವ ಪರಿಹಾರ ಕ್ರಮಗಳ ಪ್ರಯೋಜನಗಳನ್ನು ತೆರಿಗೆದಾರರು ಪಡೆಯು ವುದಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫಾರ್ಮ್‍ಗಳನ್ನು ಪರಿಷ್ಕರಿಸುವುದಾಗಿ ಆದಾಯ ತೆರಿಗೆ ಇಲಾಖೆ ಇಂದು ಪ್ರಕಟಿಸಿದೆ. ಭಾರತ ಸರ್ಕಾರವು ನೀಡಿರುವ ವಿವಿಧ ಟೈಮ್ ಲೈನ್ ವಿಸ್ತರಣೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಆದಾಯ ತೆರಿಗೆದಾರರಿಗೆ ಅನುವು ಮಾಡಿಕೊಡುವ ಸಲುವಾಗಿ, ಸಿಬಿಡಿಟಿ 2019-20ನೇ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2020-21) ರಿಟರ್ನ್ ಫಾರ್ಮ್‍ಗಳನ್ನು ಪರಿಷ್ಕರಿ ಸುತ್ತಿದೆ. ಅದನ್ನು ಈ ತಿಂಗಳ ಅಂತ್ಯದ ವೇಳೆಗೆ…
ಗ್ರಾಮೀಣ ಪ್ರದೇಶಕ್ಕೆ ತೆರಳಿ ಆರೋಗ್ಯ ಜಾಗೃತಿ ಮೂಡಿಸಿದ ಡಿಸಿ
April 20, 2020ಚಾಮರಾಜನಗರ,ಏ.19-ಜಿಲ್ಲೆಯಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾ ಗಿದ್ದು, ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭಾನು ವಾರ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಆರೋಗ್ಯ ಜಾಗೃತಿ ಮೂಡಿಸಿದರು. ತಾಲೂಕಿನ ಹರವೆ ಹಾಗೂ ನಂಜದೇವನಪುರ ದಲ್ಲಿ ನಡೆಸಲಾಗುತ್ತಿರುವ ಆರೋಗ್ಯ ಸಮೀಕ್ಷೆ ಕಾರ್ಯ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಖುದ್ದು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದರು. ಪ್ರಸ್ತುತ ನಿಮಗೆ ಶೀತ, ಜ್ವರ, ಕೆಮ್ಮು ಇನ್ನಿತರ ಅನಾರೋಗ್ಯದಿಂದ ಬಳಲುತ್ತಿರುವಿರಾ? ಮತ್ತೆ ಏನಾದರೂ ಆರೋಗ್ಯದಲ್ಲಿ ಏರುಪೇರಾಗಿ ದೆಯೇ? ಎಂದು ಪ್ರಶ್ನಿಸಿದರು. ಪ್ರತಿ…
ಸಾಂಸ್ಕೃತಿಕ ನಗರಿ ಮೌನ; ಸಭಾಂಗಣ ಭಣಭಣ, ಕಲಾವಿದರಲ್ಲಿ ತಲ್ಲಣ
April 20, 2020ಮೈಸೂರು, ಏ.19- ಕೊರೊನಾ ಸೋಂಕು ಹರಡದಂತೆ ತಡೆಯಲು ಮೊದಲಿಗೆ `ಜನತಾ ಕಫ್ರ್ಯೂ’ ವಿಧಿಸಿ, ನಂತರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೆ ಸ್ತಬ್ಧವಾಗಿದೆ. ಒಂದೆಡೆ ಸಭಾಂಗಣಗಳು ಬಣಗುಡುತ್ತಿದ್ದರೆ, ಮತ್ತೊಂದೆಡೆ ಕಲೆಯನ್ನೇ ನಂಬಿದ್ದ ಕಲಾವಿದರನ್ನು ಕಟ್ಟಿಹಾಕಿದಂತಾಗಿದೆ. ಸದಾ ಒಂದಲ್ಲ ಒಂದು ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಂದ ತುಂಬಿರು ತ್ತಿದ್ದ ಸಾಂಸ್ಕೃತಿಕ ನಗರ ಇಂದು ಕೊರೊನಾ ವೈರಸ್‍ನಿಂದಾಗಿ ನಿಶ್ಯಬ್ದವಾಗಿದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಎನ್ನದೇ ಕಲಾಭಿಮಾನಿಗಳಿಂದಲೇ ತುಂಬಿರುತ್ತಿದ್ದ ಸಭಾಂಗಣಗಳು ಖಾಲಿ ಖಾಲಿ ಇವೆ. ಭರತನಾಟ್ಯ, ಸಂಗೀತ, ನಾಟಕ, ಯಕ್ಷಗಾನ,…
ಕೊರೊನಾ ಸೋಂಕಿನ ವಿರುದ್ಧ ಸೆಣಸಾಟದಲ್ಲಿ ಪೊಲೀಸರಿಗೆ ಹೋಂಗಾರ್ಡ್‍ಗಳ ಸಾಥ್
April 19, 2020ಮೈಸೂರು,ಏ.18(ಎಸ್‍ಬಿಡಿ)- ಪೊಲೀಸ್ ಇಲಾಖೆಯ ಹೆಗಲಿಗೆ ಹೆಗಲು ಕೊಟ್ಟು ಸೇವೆ ಸಲ್ಲಿಸುತ್ತಿರುವ ಗೃಹ ರಕ್ಷಕ ದಳವನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು. ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಶ್ರಮಿಸುತ್ತಿರುವ ವಾರಿಯರ್ಸ್ ಪಡೆಯಲ್ಲಿ, ಗೃಹ ರಕ್ಷಕ ಸಿಬ್ಬಂದಿಯೂ ಪ್ರಮುಖರಾಗಿದ್ದಾರೆ. ಲಾಕ್‍ಡೌನ್ ಬಂದೋ ಬಸ್ತ್ ನಿರ್ವಹಣೆ, ಕಂಟೆನ್ಮೆಂಟ್ ಜೋನ್, ಹೋಂ ಕ್ವಾರಂಟೈನ್ ಪ್ರದೇಶ, ಕೋವಿಡ್ ಆಸ್ಪತ್ರೆ ಮೇಲೆ ನಿಗಾ ವಹಿಸಿರುವ ಪೊಲೀಸರಿಗೆ, ಗೃಹ ರಕ್ಷಕರು ಸಾಥ್ ನೀಡಿದ್ದಾರೆ. ಪೊಲೀಸರಂತೆಯೇ ಅಪಾಯಕಾರಿ ಸ್ಥಿತಿ ಯಲ್ಲೂ ನಿಷ್ಠೆ ಹಾಗೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರ ಉಡಾಫೆ,…
ರಾಜ್ಯದ ವಿವಿಧೆಡೆ ಭಾರೀ ಆಲಿಕಲ್ಲು ಮಳೆ
April 19, 2020ಬೆಂಗಳೂರು,ಏ.18- ರಾಜ್ಯದ ಹಲವಾರು ಜಿಲ್ಲೆ ಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆ ಬಿದ್ದಿರುವುದು ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಕೆ.ಹೊಸೂರು ಗ್ರಾಮದ ಮನೆಯ ಮೇಲ್ಛಾವಣಿ ಮೇಲಂತೂ ಸುಮಾರು ಒಂದು ಕೆಜಿ ಗಾತ್ರದ ಆಲಿ ಕಲ್ಲು ಬಿದ್ದು ಗ್ರಾಮಸ್ಥರನ್ನು ಅಚ್ಚರಿಗೀಡು ಮಾಡಿದೆ. ಹುಬ್ಬಳ್ಳಿಯಲ್ಲೂ ಶನಿವಾರ ಸಂಜೆ ಭಾರೀ ಆಲಿಕಲ್ಲು ಮಳೆ ಸುರಿದಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ದಕ್ಷಿಣ…










