ಮೈಸೂರು,ಏ.17(ಆರ್‍ಕೆ)-ಕೊರೊನಾ ವೈರಸ್ ಹಾವಳಿಯಿಂದಾಗಿ ಲಾಕ್‍ಡೌನ್ ನಿರ್ಬಂಧ ಹೇರಿರುವುದರಿಂದ ಎಲ್ಲಾ ವಹಿವಾಟು ಸ್ಥಗಿತಗೊಂಡಿದ್ದು, ಇದೇ ಸಮಯದಲ್ಲಿ ಕೆಲವು ದುಷ್ಕರ್ಮಿಗಳು ಕಳ್ಳತನವನ್ನೇ ಕಸುಬು ಮಾಡಿಕೊಂಡಂತೆ ಕಂಡುಬರುತ್ತಿದೆ. ಇದಕ್ಕೆ ಗುರುವಾರ ರಾತ್ರಿ ಮೈಸೂರು ನಗರದ ವಿವಿಧೆಡೆ ಹಾಲಿನ ಬೂತ್ ಹಾಗೂ ದೇವಸ್ಥಾನದಲ್ಲಿ ನಡೆದಿರುವ ಕಳ್ಳತನಗಳೇ ನಿದರ್ಶನ. ಲಾಕ್‍ಡೌನ್ ನಿರ್ಬಂಧದಿಂದ ವಾಣಿಜ್ಯ ವಹಿವಾಟು ಸ್ತಬ್ಧಗೊಂಡಿದೆ. ಅಲ್ಲದೆ ಹಗಲಲ್ಲೇ ಜನ ಹಾಗೂ ವಾಹನ ಸಂಚಾರ ವಿರಳಾತಿವಿರಳ. ಇನ್ನು ರಾತ್ರಿ ವೇಳೆ ಯಂತೂ ಒಂದು ನರಪಿಳ್ಳೆಯೂ ರಸ್ತೆಯಲ್ಲಿರಲು ಸಾಧ್ಯವಿಲ್ಲ. ಇದೇ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಖದೀಮರು,…
ಸಣ್ಣಪುಟ್ಟ ವೃತ್ತಿದಾರರಿಗೆ ಕೇಂದ್ರ ಸರ್ಕಾರದಿಂದ ಯಾವುದೇ ನೆರವಿಲ್ಲ: ಸಂಕಷ್ಟದಲ್ಲಿ ಕೂಲಿ ಕಾರ್ಮಿಕರು
April 18, 2020ಮೈಸೂರು, ಏ.17(ಎಂಟಿವೈ)- ಕೇಂದ್ರ ಸರ್ಕಾರ ಜನ್‍ಧನ್ ಯೋಜನೆಯಡಿ 500 ರೂ., ಕಟ್ಟಡ ಕಾರ್ಮಿಕರ ಖಾತೆಗೆ 2000 ರೂ ಹಾಕಿದ್ದಾರೆ ಅಷ್ಟೇ. ಆದರೆ ಚಿಲ್ಲರೆ ಅಂಗಡಿ, ಸವಿತಾ ಸಮಾಜದ ಕ್ಷೌರಿಕರು, ಟೈಲರಿಂಗ್, ಬಟ್ಟೆ ಅಂಗಡಿಯಲ್ಲಿ ಕೆಲಸ ನಿರ್ವಹಿಸು ವವರು, ಮಧ್ಯಮ ವರ್ಗದವರು, ಪ್ರತಿನಿತ್ಯ ಕೂಲಿ ಮಾಡುವವರ ಪಾಡೇನು? ಅವರ ಸ್ಥಿತಿ ಸರ್ಕಾರಕ್ಕೆ ತಿಳಿಯುತ್ತಿಲ್ಲವೇ? ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ವತಿಯಿಂದ…
ರೈತರು, ಸಣ್ಣ ಪುಟ್ಟ ವೃತ್ತಿನಿರತರ ಮೇಲೆ ಖಾಸಗಿ ಹಣಕಾಸು ಸಂಸ್ಥೆಗಳ ಒತ್ತಡ: ಸಚಿವ ಸೋಮಶೇಖರ್ ಬೇಸರ
April 18, 2020ಬೆಂಗಳೂರು, ಏ.17(ಕೆಎಂಶಿ)- ಕರ್ನಾಟಕದಲ್ಲಿ ಹಲವು ಕಡೆ ಜಿಲ್ಲಾ ಪ್ರವಾಸದ ಸಂದ ರ್ಭದಲ್ಲಿ ರೈತಾಪಿ ವರ್ಗದವರು ಹಾಗೂ ಸಾರ್ವ ಜನಿಕರು ಹಲವಾರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮ ಶೇಖರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಖಾಸಗಿ ಹಣಕಾಸು ಬ್ಯಾಂಕು/ಸಂಸ್ಥೆಗಳಾಗಿರುವ ಬಜಾಜ್, ಟಿ.ವಿ.ಎಸ್. ಕ್ರೆಡಿಟ್ ಸೇರಿ ಇನ್ನಿತರೆ ಬ್ಯಾಂಕೇತರ ಹಾಗೂ ಲೇವಾದೇವಿ ದಾರರಿಂದ ಪಡೆದಿರುವ ಸಾಲವನ್ನು ಶೀಘ್ರ ಮರು ಪಾವತಿಸುವಂತೆ ತಮ್ಮ ಮೇಲೆ ತೀವ್ರತರ ಒತ್ತಡ ಹೇರುತ್ತಿರುವ ಬಗ್ಗೆ ಅಂಗವಿಕಲರು,…
ಸಂಬಂಧಪಟ್ಟವರ ವಿರುದ್ಧ ಶೀಘ್ರದಲ್ಲೇ ಕ್ರಮ: ಡಿಸಿಎಂ ಡಾ.ಅಶ್ವತ್ಥ ನಾರಾಯಣ
April 18, 2020ಬೆಂಗಳೂರು: ಲಾಕ್‍ಡೌನ್ ನಡುವೆಯೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ರುವುದು ವ್ಯಾಪಕ ಟೀಕೆಗೆ ಕಾರಣವಾದ ಬೆನ್ನಲ್ಲೇ, ಈ ಸಂಬಂಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ವಿವಾಹ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಾಮನಗರ ಪೊಲೀಸ್ ಅಧೀಕ್ಷಕರ ಬಳಿ ಈ ಕುರಿತು ವರದಿ ಕೇಳಲಾಗಿದೆ. ವಿವಾಹಕ್ಕೂ ಮೊದಲೇ ಸಾಕಷ್ಟು ಎಚ್ಚರಿಕೆಗಳನ್ನೂ ನೀಡಲಾಗಿದೆ. ವಿವಾಹ ಸಂದರ್ಭದಲ್ಲಿ…
ನಿಖಿಲ್-ರೇವತಿ ಸರಳ ವಿವಾಹ: ಮಾಜಿ ಸಿಎಂ ಕುಮಾರಸ್ವಾಮಿ ಕೃತಜ್ಞತೆ
April 18, 2020ಬೆಂಗಳೂರು,ಏ.17(ಕೆಎಂಶಿ)- ನನ್ನ ಪುತ್ರ ನಿಖಿಲ್ ಮತ್ತು ರೇವತಿ ಅವರ ವಿವಾಹ ಇಂದು ಅತ್ಯಂತ ಸರಳ ರೀತಿಯಲ್ಲಿ ನಡೆ ಯಲು ಸಹಕರಿಸಿದ ಲಕ್ಷಾಂತರ ಕಾರ್ಯ ಕರ್ತರು ಮತ್ತು ಕುಟುಂಬದ ಹಿತೈಷಿಗಳಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸಿದರು. ಇಡೀ ಜಗತ್ತು ಕೊರೊನಾ ವೈರಸ್‍ನಿಂದ ತತ್ತರಿಸುತ್ತಿರುವ ಇಂತಹ ಬಿಕ್ಕಟ್ಟಿನ ಸಂದರ್ಭ ದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ವ್ಯವಸ್ಥಿತವಾಗಿ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕೆಯ ನಡುವೆ ವಿವಾಹ ಅಚ್ಚುಕಟ್ಟಾಗಿ ನೆರವೇರಿದೆ ಎಂದರು. ಶಾಸಕರು, ಕಾರ್ಯಕರ್ತರು, ಮುಖಂ ಡರು, ಕುಟುಂಬದ ಹಿತೈಷಿಗಳು…
ಏ.20ಕ್ಕೆ ಬಿಬಿಎಂಪಿ ಬಜೆಟ್
April 18, 2020ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಕ್ರಿಯೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸದಸ್ಯರಿಗೆ ಮಾಹಿತಿ ವ್ಯವಸ್ಥೆ ಬೆಂಗಳೂರು, ಏ.17(ಕೆಎಂಶಿ)- ಈ ಬಾರಿಯ ಬಿಬಿಎಂಪಿ ಬಜೆಟ್ ಏ.20 ರಂದು ಮಧ್ಯಾಹ್ನ 12 ಗಂಟೆಗೆ ಮಂಡನೆ ಯಾಗಲಿದ್ದು, ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತದೆ. ಸದಸ್ಯರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ಬಜೆಟ್ ಅನುಮೋದನೆ ಬಹಳ ಮುಖ್ಯವಾದ ವಿಷಯ, ಕೊರೊನಾ…
ಯೋಗಕ್ಷೇಮ ವಿಚಾರಿಸಿದ ಉಸ್ತುವಾರಿ ಅಧಿಕಾರಿ ಹರ್ಷಗುಪ್ತ
April 18, 2020ಮೈಸೂರು, ಏ.17- ಕೋವಿಡ್-19 ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿರುವ ನಂಜನಗೂಡಿಗೆ ಶುಕ್ರವಾರ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಭೇಟಿ ನೀಡಿ, ಸ್ಥಳೀಯರ ಯೋಗಕ್ಷೇಮ ವಿಚಾರಿಸಿದರು. ಔಷಧ ಕಾರ್ಖಾನೆಯ ನೌಕರರು ಹೋಂ ಕ್ವಾರಂಟೈನ್‍ನಲ್ಲಿದ್ದು, ಕೆಲವರ ಮನೆ ಬಳಿಗೆ ತೆರಳಿ, ಹೊರಗೆ ನಿಂತು ಕುಟುಂಬದವರ ಕುಶಲೋಪರಿ ವಿಚಾರಿಸಿಕೊಂಡರು. `ನಿಮ್ಮ ಮನೆಯ ಯಜಮಾನರ ಆರೋಗ್ಯ ಈಗ ಹೇಗಿದೆ? ಹೋಂ ಕ್ವಾರಂಟೈನ್ ಅವಧಿ ಮುಗಿದಿದೆಯಾ? ನಿಮ್ಮ ಮನೆಗೆ ಅಗತ್ಯ ವಸ್ತುಗಳು ಬರುತ್ತಿವೆಯಾ? ತರಕಾರಿಗೆ ಏನು ಮಾಡಿಕೊಂಡಿದ್ದೀರಿ…’ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ, ಆಯಾ…
ಕೊರೊನಾ ವೈರಸ್: 24 ಗಂಟೆಗಳಲ್ಲಿ 23 ಸಾವು, 1007 ಹೊಸ ಪಾಸಿಟಿವ್ ಪ್ರಕರಣಗಳು ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆ
April 18, 2020ನವದೆಹಲಿ, ಏ.17- ಭಾರತದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 23 ಮಂದಿ ಸೋಂಕಿತರು ಸಾವನ್ನ ಪ್ಪಿದ್ದು ಆ ಮೂಲಕ ದೇಶದಲ್ಲಿ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 437ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೊರೊನಾ ಕುರಿತ ಮಾಹಿತಿ ನೀಡಿದರು. ‘ಲಾಕ್‍ಡೌನ್ ಘೋಷಣೆ ಬಳಿಕ ಭಾರತದಲ್ಲಿ ಕೊರೊನಾ ಪ್ರಸರಣ ಪ್ರಮಾಣ ಗಣನೀಯವಾಗಿ ತಗ್ಗಿದೆ. ಲಾಕ್‍ಡೌನ್‍ಗೂ ಮುನ್ನ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು…
ಚಾಮುಂಡಿಬೆಟ್ಟದ ಪೌರ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ
April 18, 2020ಮೈಸೂರು, ಏ.17(ಎಸ್‍ಬಿಡಿ)- ಮೈಸೂರಿನ ಚಾಮುಂಡಿ ಬೆಟ್ಟದ ಅತಿಥಿ ಗೃಹದ ಹಿಂಭಾಗದಲ್ಲಿ ರುವ ಪೌರ ಕಾರ್ಮಿಕರ ಕಾಲೋನಿ ನಿವಾಸಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿಯಲ್ಲಿ ಕೆಲವರು ಪೌರ ಕಾರ್ಮಿಕರಾಗಿದ್ದು, ಉಳಿದ ಬಹು ತೇಕರು ದಿನಗೂಲಿ, ಬೀದಿಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಬಳಿಕ ಇಲ್ಲಿನ 25ಕ್ಕೂ ಹೆಚ್ಚು ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲೀ ಜನಪ್ರತಿ ನಿಧಿಗಳಾಗಲೀ ಕಾಲೋನಿಗೆ ಬಂದು ಸಮಸ್ಯೆ ಕೇಳಿಲ್ಲ. ನಮ್ಮ ಮನವಿಗೂ ಸ್ಪಂದಿಸುತ್ತಿಲ್ಲ. ಕೆಲವು ಕುಟುಂಬಗಳಿಗೆ ಮಾತ್ರ ಬಿಪಿಎಲ್…
ಹಿರಿಯ ಜೀವಗಳ ಅಳಲು ಆಲಿಸಿದ ಶಾಸಕ ರಾಮದಾಸ್
April 18, 2020ಮೈಸೂರು, ಏ.17(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರದಲ್ಲಿ ಹಿರಿಯ ನಾಗರಿಕರ ವಿಶ್ರಾಂತಿಧಾಮ ಪೇಜಾವರ ಶ್ರೀಧಾಮ (ಪೇಜಾವರ ಶ್ರೀಗಳ ಟ್ರಸ್ಟ್) ಕಳೆದ 10 ವರ್ಷಗಳಿಂದ ನಡೆಯುತ್ತಾ ಬಂದಿದೆ. ಈಗ 40 ಜನ ಮಹಿಳಾ ಮತ್ತು ಪುರುಷ ಹಿರಿಯ ನಾಗರಿಕರು ಇಲ್ಲಿ ಆಶ್ರಯ ಪಡೆದಿದ್ದಾರೆ. 65 ವರ್ಷ ಮೇಲ್ಪಟ್ಟವರಿಗೆ ಇಲ್ಲಿ ಆಶ್ರಯ ನೀಡಲಾಗುತ್ತದೆ. ಈಗ 16 ಮಂದಿ ಪುರುಷರು 24 ಮಂದಿ ಮಹಿಳೆ ಯರು ಆಶ್ರಯ ಪಡೆದಿದ್ದಾರೆ. ಮೈಸೂರು, ಬೆಂಗಳೂರು, ಚೆನ್ನೈ ಇನ್ನಿತರ ಕಡೆಗಳ ಹಿರಿಯ ನಾಗರಿಕರಿಗೆ ಇಲ್ಲಿ ಆಶ್ರಯ ನೀಡ ಲಾಗಿದೆ….










