ಆಹಾರ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಸ್ಪಷ್ಟನೆ ಮೈಸೂರು, ಏ.13(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಶೇ.91.58 ರಷ್ಟು ಪಡಿತರ ವಿತರಣೆ ಮಾಡಲಾಗಿದ್ದು, ಪಡಿತರ ಚೀಟಿ ಗಾಗಿ ಅರ್ಜಿ ಸಲ್ಲಿಸಿರುವವರಿಗೂ ಏ.18 ರಿಂದ ಪಡಿತರ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು. ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಂತೆ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೇ…
ಕೊರೊನಾ ಮಾರಿಯಿಂದ ಏಳು ಮಂದಿ ಮುಕ್ತಿ
April 13, 2020ಮೈಸೂರು, ಏ.12(ಎಂಟಿವೈ)- ಲಾಕ್‍ಡೌನ್ ನಿರ್ಬಂಧ ದಿಂದ ಕಂಗೆಟ್ಟಿರುವ ಹಾಗೂ ಪ್ರತಿದಿನ ನೊವೆಲ್ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಆತಂಕ ಗೊಂಡಿರುವ ಮೈಸೂರು ಜನತೆಗೆ ಒಂದು ಸಂತಸದ ಸಂಗತಿ. ಕೊರೊನಾ ವೈರಸ್‍ಗೆ ಚಿಕಿತ್ಸೆ ಪಡೆಯುತ್ತಿರು ವವರಲ್ಲಿ 7 ಮಂದಿ ಸಂಪೂರ್ಣ ಗುಣಮುಖರಾಗಿ ಭಾನು ವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೊರೊನಾ ಸೋಂಕು ಅತ್ಯಂತ ಅಪಾಯಕಾರಿ. ಆ ಮೂಲಕ ಸೋಂಕು ಮಾರಣಾಂತಿಕ ಎಂಬ ಪರಿಭಾವ ದಿಂದ ತತ್ತರಿಸಿ ಹೋಗಿರುವವರು ಇದರಿಂದ ಕೊಂಚ ನೆಮ್ಮದಿಯಾಗಿರಬಹುದು. ದುಬೈನಿಂದ ಬಂದು, ಮೈಸೂರಿ ನಲ್ಲಿ ಸೋಂಕು…
ರಾಜ್ಯದಲ್ಲಿ ಒಂದೇ ದಿನ 17 ಮಂದಿಗೆ ಕೊರೊನಾ ಸೋಂಕು
April 13, 2020ವಿಜಯಪುರಕ್ಕೂ ಕಾಲಿಟ್ಟ ಮಹಾಮಾರಿ ಒಟ್ಟಾರೆ ರಾಜ್ಯದಲ್ಲಿ 232 ಮಂದಿಗೆ ಸೋಂಕು ಬೆಂಗಳೂರು,ಏ.12-ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಒಂದೇ ದಿನ 17 ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದ್ದು (ಈ ಹಿಂದೆ 16 ಪ್ರಕರಣ ದೃಢಪಟ್ಟಿದ್ದು ಗರಿಷ್ಠ ಸಂಖ್ಯೆಯಾಗಿತ್ತು), ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಅದೇ ರೀತಿ ಇಂದು ಮೈಸೂರಿನ 7 ಮಂದಿ ಸೇರಿದಂತೆ ರಾಜ್ಯದಲ್ಲಿ 15 ಸೋಂಕಿ ತರು ಪೂರ್ಣ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಈವ ರೆಗೂ ರಾಜ್ಯದಲ್ಲಿ ಒಟ್ಟು 54 ಸೋಂಕಿ ತರು ಪೂರ್ಣ ಗುಣಮುಖರಾಗಿದ್ದು,…
ಹೋಂ ಕ್ವಾರಂಟೈನ್ ಉಲ್ಲಂಘಿಸಿ ಅಡ್ಡಾಡಿದ ಜುಬಿಲಂಟ್ ಕಾರ್ಮಿಕನ ವಿರುದ್ಧ ಕೇಸ್
April 13, 2020ಮೈಸೂರು, ಏ.12(ಪಿಎಂ)-ಕೊರೊನಾ ವೈರಾಣು ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ (ಗೃಹ ದಿಗ್ಬಂಧನ) ಆಗಿದ್ದ ನಂಜನಗೂಡು ಜುಬಿಲಂಟ್ ಕಾರ್ಖಾನೆ ಕಾರ್ಮಿಕರೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡಿ ಆತಂಕ ಸೃಷ್ಟಿಸಿದ್ದು, ಸದರಿ ಕಾರ್ಮಿಕನ ವಿರುದ್ಧ ನಂಜನಗೂಡು ಗ್ರಾಮಾಂ ತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಂಜನಗೂಡು ವಿಎ ಬಡಾವಣೆ ನಿವಾಸಿ, ಜುಬಿಲಂಟ್ ಕಾರ್ಖಾನೆ ಕಾರ್ಮಿಕನನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಿದ್ದು, ಕೈಗೆ ಸೀಲ್ ಹಾಕಿ, ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಮತ್ತು ವೈದ್ಯರ ಸಲಹೆ ಧಿಕ್ಕರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುತ್ತಿರುವುದು…
ಎರಡನೇ ಹಂತದ ಲಾಕ್‍ಡೌನ್‍ನಲ್ಲಿ ಹಲವು ನಿರ್ಬಂಧಗಳ ಸಡಿಲ ಸಂಭವ
April 13, 2020ನವದೆಹಲಿ,ಏ.12- ಲಾಕ್‍ಡೌನ್ ಏ.30ರವರೆಗೆ ವಿಸ್ತರಣೆ ಖಚಿತ ವಾಗುತ್ತಿದ್ದಂತೆ ಸೋಂಕಿನ ತೀವ್ರತೆ ಆಧ ರಿಸಿ ಜಿಲ್ಲೆಗಳನ್ನು ಮೂರು ವಲಯ ಗಳಾಗಿ ವಿಂಗಡಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದೆ. ದೇಶದ ಆರ್ಥಿಕತೆ ಚೇತರಿಕೆಯತ್ತ ಗಮನ ಹರಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಇರುವಂತಹ ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧಗಳ ಸಡಿಲಿಕೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ಜಿಲ್ಲೆಗಳನ್ನು ವಿಂಗಡಿಸಲು ಸರಕಾರ ಸಿದ್ಧತೆ ಆರಂಭಿಸಿದೆ. ಕೊರೊನಾ…
ಎಂಎಸ್‍ಐಎಲ್ ಮಳಿಗೆಯಲ್ಲಿ ಏ.15ರಿಂದ ಮದ್ಯ ಮಾರಾಟಕ್ಕೆ ಚಿಂತನೆ!
April 13, 2020ಮೈಸೂರು, ಏ.12(ಎಸ್‍ಬಿಡಿ)- ಏಪ್ರಿಲ್ 30ರವರೆಗೂ ಲಾಕ್‍ಡೌನ್ ವಿಸ್ತರಿಸಲು ನಿರ್ಧರಿಸಿ, ಕೆಲ ನಿರ್ಬಂಧಗಳಡಿ ಏ.15ರಿಂದ ಮದ್ಯ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ ಎನ್ನು ವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಆರ್ಥಿಕವಾಗಿ ಸದೃಢವಾಗಿರುವ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ರಾಷ್ಟ್ರಗಳೇ ಕೊರೊನಾ ನಿಯಂತ್ರಿಸು ವಲ್ಲಿ ಸೋತಿವೆ. ಅಲ್ಲಿನ ಸರ್ಕಾರಗಳು ದಿಕ್ಕುತೋಚದ ಸ್ಥಿತಿಯಲ್ಲಿ ಕೈಕಟ್ಟಿ ಕುಳಿತಿವೆ. ಭಾರತದಲ್ಲಿ ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತು, ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಕೊರೊನಾ ಸೋಂಕಿನ ವೇಗ ತಗ್ಗಿದೆ. ಮುಖ್ಯವಾಗಿ ಇಡೀ ದೇಶವನ್ನೇ ಲಾಕ್…
ನ್ಯಾಯಬೆಲೆ ಅಂಗಡಿಯಲ್ಲಿ ವಂಚನೆ: ಕ್ರಮಕ್ಕೆ ಸಿದ್ದರಾಮಯ್ಯ ಆಗ್ರಹ
April 13, 2020ಬೆಂಗಳೂರು,ಏ.12-ನ್ಯಾಯಬೆಲೆ ಅಂಗಡಿ ಗಳಲ್ಲಿ ವಂಚನೆ ಪ್ರಕರಣಗಳ ದೂರುಗಳು ಕೇಳಿಬರುತ್ತಿದ್ದು, ಸರ್ಕಾರ ಕ್ರಮಕ್ಕೆ ಮುಂದಾ ಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿ ದ್ದಾರೆ. ರಾಜ್ಯದ ಪಡಿತರ ಅಂಗಡಿಗಳಲ್ಲಿ ಗೋಧಿ ಮತ್ತು ಸೀಮೆಎಣ್ಣೆ ನೀಡದೆ ಇದ್ದರೂ ಅವುಗಳನ್ನು ನೀಡಲಾಗಿದೆ ಎಂದು ಪಾವತಿ ರಶೀದಿಯಲ್ಲಿ ನಮೂದಿಸಿ ಬಳಕೆದಾರರಿಂದ ಸಹಿ ಹಾಕಿಸಿಕೊಳ್ಳುತ್ತಿರುವ ವಂಚನೆ ಪ್ರಕ ರಣಗಳ ಬಗ್ಗೆ ದೂರು ಗಳು ಬರುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿ ತಕ್ಷಣ ಗಮನಹರಿಸಿ ಕ್ರಮಕ್ಕೆ ಮುಂದಾಗ ಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ…
ಅನಿರ್ದಿಷ್ಟಾವಧಿಗೆ ಟಿಕೆಟ್ ಬುಕ್ಕಿಂಗ್ ರದ್ದುಗೊಳಿಸಿದ ಕೆಎಸ್‍ಆರ್‍ಟಿಸಿ
April 13, 2020ಬೆಂಗಳೂರು, ಏ.12- ಕೊರೊನಾ ಸೋಂಕು ತಡೆಗಟ್ಟುವಿಕೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಧಿಸಲಾಗಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ಮುಂದೆ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂದು ಅಂದಾಜಿಸಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಟಿಕೆಟ್ ಬುಕ್ಕಿಂಗ್ ಅನ್ನು ಅನಿರ್ದಿಷ್ಟಾವ ಧಿಯವರೆಗೆ ಸ್ಥಗಿತಗೊಳಿಸಿದೆ. ಇದುವರೆಗೆ ಬುಕ್ಕಿಂಗ್ ಮಾಡಿರುವವರ ಟಿಕೆಟ್‍ಗಳನ್ನು ರದ್ದುಗೊಳಿಸಲಾಗಿದ್ದು, ಅವರ ಹಣವನ್ನು ಹಿಂತಿರುಗಿಸಲಾಗುತ್ತದೆ. ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ಟಿಕೆಟ್ ಬುಕ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ ಎಂದು ನಿಗಮದ ಸಾರ್ವಜನಿಕ…
ಭಾರತದಿಂದ ಅಮೆರಿಕ ತಲುಪಿದ ಹೈಡ್ರಾಕ್ಸಿಕ್ಲೋರೋಕ್ವಿನ್
April 13, 2020ವಾಷಿಂಗ್ಟನ್,ಏ.12-ಭಾರತ ಪೂರೈಸಿ ರುವ ಕೊರೊನಾ ವೈರಾಣು ಸೋಂಕಿನ ಚಿಕಿತ್ಸೆಗೆ ಪೂರಕ ಎಂದು ಪರಿಗಣಿಸ ಲ್ಪಟ್ಟಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಭಾನುವಾರ ಅಮೆರಿಕ ತಲುಪಿದೆ. ನೆವಾರ್ಕ್ ವಿಮಾನ ನಿಲ್ದಾಣಕ್ಕೆ ಭಾರತ ನೀಡಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಬಂದಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡು ವಂತೆ ಪದೇ ಪದೆ ಬೇಡಿಕೆ ಇಟ್ಟಿದ್ದು ಭಾರತ ಅಪಾರ ಪ್ರಮಾಣದ ಈ ಔಷಧ ವನ್ನು ನೀಡಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಮಲೇರಿಯಾ ಚಿಕಿತ್ಸೆಗೆ ಬಳಸಲಾಗುತ್ತಿದ್ದು ಇದೀಗ…
ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ನಿರಾಶ್ರಿತರಿಗೆ ಸ್ಯಾನಿಟೈಸರ್ ವಿತರಣೆ
April 13, 2020ಮೈಸೂರು,ಏ.12(ಎಂಟಿವೈ)-ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗಿದ್ದವರಿಗಾಗಿ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಸ್ಥಾಪಿಸಲಾಗಿರುವ ಪುನ ರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ 120 ಮಂದಿಗೆ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದ ವತಿಯಿಂದ ಸ್ಯಾನಿಟೈಸರ್ ವಿತರಿಸಲಾಯಿತು. ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಹಾಗೂ ರಾಜ್ಯ ಬಿಜೆಪಿ ಸಹ ವಕ್ತಾರ ಆರ್.ರಘು ಕೌಟಿಲ್ಯ ನೇತೃತ್ವ ದಲ್ಲಿ ಭಾನುವಾರ ಬೆಳಿಗ್ಗೆ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅಭಿ ಮಾನಿ ಬಳಗದ ಕಾರ್ಯಕರ್ತರು, ಆಶ್ರಯ ಪಡೆ ದಿರುವವರಿಗೆ ಸ್ಯಾನಿಟೈಸರ್ ವಿತರಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ…










